ಮೈಸೂರು

ಕೋವಿಡ್-19   ಅರಿವು ಮೂಡಿಸಲು ಧಾರ್ಮಿಕ, ರಾಜಕೀಯ ಮುಖಂಡರ ಮೊರೆಗೆ ಕೇಂದ್ರ ಸೂಚನೆ
ಮೈಸೂರು

ಕೋವಿಡ್-19  ಅರಿವು ಮೂಡಿಸಲು ಧಾರ್ಮಿಕ, ರಾಜಕೀಯ ಮುಖಂಡರ ಮೊರೆಗೆ ಕೇಂದ್ರ ಸೂಚನೆ

May 18, 2020

ನವದೆಹಲಿ, ಮೇ 17- ನಗರಸಭೆ, ಮಹಾನಗರಪಾಲಿಕೆ ಸೇರಿದಂತೆ ದೇಶದ 30 ಪ್ರದೇಶಗಳಲ್ಲಿ ವಾಸಿಸುತ್ತಿ ರುವ ಬಡತನ ರೇಖೆಗಿಂತ ಕೆಳಗಿರು ವವರಲ್ಲಿ ಕೋವಿಡ್-19 ಕುರಿತಂತೆ ಅರಿವು ಮೂಡಿಸಲು ಧಾರ್ಮಿಕ ಮತ್ತು ರಾಜಕೀಯ ಮುಖಂಡರ ನೆರವು ಪಡೆ ಯುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಈ ಸಂಬಂಧ ಆರೋಗ್ಯ ಸಚಿವಾ ಲಯ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ. ಸ್ಥಳೀಯ ರಾಜ ಕೀಯ ಹಾಗೂ ಧಾರ್ಮಿಕ ಮುಖಂ ಡರ ಮಾತುಗಳ ಮೇಲೆ ಈ ಜನರಲ್ಲಿ ವಿಶ್ವಾಸ ಹೆಚ್ಚು. ಕೊರೊನಾ ವೈರಸ್…

ಮೈಸೂರಿಂದ ಇತರ ರಾಜ್ಯಗಳಿಗೆ ಹೋಗಲು 18 ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ
ಮೈಸೂರು

ಮೈಸೂರಿಂದ ಇತರ ರಾಜ್ಯಗಳಿಗೆ ಹೋಗಲು 18 ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ

May 18, 2020

ಮೈಸೂರು, ಮೇ 17- ಮೈಸೂರಿನಲ್ಲಿ ವಿವಿಧ ವೃತ್ತಿ ಹಾಗೂ ಕಟ್ಟಡ ಕಾರ್ಮಿಕ ಕಾಯಕದಲ್ಲಿ ತೊಡಗಿದ್ದ ವಿವಿಧ ರಾಜ್ಯ ಗಳ ಸುಮಾರು 18 ಸಾವಿರಕ್ಕೂ ಹೆಚ್ಚು ಮಂದಿ ಸೇವಾ ಸಿಂಧು ವೆಬ್‍ಸೈಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಬಿಹಾರ ಮತ್ತು ಉತ್ತರಪ್ರದೇಶದ ಕಾರ್ಮಿಕರೇ ಹೆಚ್ಚಾಗಿರುವುದು ಗಮನಾರ್ಹವಾಗಿದೆ. ಕರ್ನಾಟಕದ ಸಾಂಸ್ಕøತಿಕ ರಾಜಧಾನಿ ಎಂದೇ ಹೆಸರು ಗಳಿಸಿರುವ ಹಾಗೂ ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯದ ಎರಡನೇ ನಗರವಾಗಿರುವ ಮೈಸೂ ರಿನಲ್ಲಿ ಜೀವನ ರೂಪಿಸಿಕೊಳ್ಳಲು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಮಂದಿ…

ಆರು ತಿಂಗಳ ಅವಧಿಗೆ ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಸಮಿತಿ ನೇಮಿಸಲು ನಿರ್ಧಾರ
ಮೈಸೂರು

ಆರು ತಿಂಗಳ ಅವಧಿಗೆ ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಸಮಿತಿ ನೇಮಿಸಲು ನಿರ್ಧಾರ

May 18, 2020

ಬೆಂಗಳೂರು, ಮೇ 17- ಕೊರೊನಾದಿಂದಾಗಿ ಚುನಾವಣೆ ನಡೆಸಲು ಸಾಧ್ಯವಾಗದ ಕಾರಣ ಗ್ರಾಮ ಪಂಚಾಯಿತಿಗಳಿಗೆ ಮುಂದಿನ ಆರು ತಿಂಗಳ ಅವಧಿಗೆ ಆಡಳಿತ ಸಮಿತಿ ನೇಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸುದ್ದಿಗಾರರ ಜೊತೆ ಮಾತ ನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, `ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿದ್ದೇವೆ’ ಎಂದರು. `ಹಾಲಿ ಇರುವ ಸಮಿತಿಯನ್ನೇ ಮುಂದುವರಿಸಬೇಕೇ, ಆಡಳಿತಾಧಿಕಾರಿ ನೇಮಕ ಸೂಕ್ತವೇ ಅಥವಾ ಆಡಳಿತ ಸಮಿತಿ ನೇಮಿಸುವುದೇ ಎಂಬ ಮೂರು…

ಶಾಲೆ ತೆರೆವ ವಿಚಾರದಲ್ಲಿ ಅವಸರ ಸಲ್ಲ, ಜುಲೈವರೆಗೂ ಕಾದು ನೋಡಿ
ಮೈಸೂರು

ಶಾಲೆ ತೆರೆವ ವಿಚಾರದಲ್ಲಿ ಅವಸರ ಸಲ್ಲ, ಜುಲೈವರೆಗೂ ಕಾದು ನೋಡಿ

May 18, 2020

ಮೈಸೂರು, ಮೇ 17(ಪಿಎಂ)- ಕೊರೊನಾ ಪೂರ್ಣ ನಿವಾರಣೆಯಾಗದಿರುವುದರಿಂದ ಶಾಲೆ ಪುನಾರಂಭ ವಿಚಾರದಲ್ಲಿ ಸರ್ಕಾರ ಅವಸರ ಮಾಡಬಾರದು. ಜುಲೈವರೆಗೂ ಕಾದು ನೋಡುವುದು ಸೂಕ್ತ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಎ.ಹೆಚ್.ವಿಶ್ವನಾಥ್ ಸಲಹೆ ನೀಡಿದರು. ಮೈಸೂರಿನ ಜಲದರ್ಶಿನಿ ಅತಿಥಿಗೃಹ ದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ನಂತರದಲ್ಲಿ ಶಿಕ್ಷಣದ ವಿಚಾರ ಪರಿಗಣಿಸ ಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ. ಹೀಗಾಗಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಸದ್ಯ…

ಜುಬಿಲಂಟ್ ವಿಚಾರದಲ್ಲಿ ಹೀರೋ ಆಗದಿದ್ದರೂ ವಿಲನ್ ಆಗಲು ಸಿದ್ಧವಿಲ್ಲ: ಶಾಸಕ ಹರ್ಷವರ್ಧನ್
ಮೈಸೂರು

ಜುಬಿಲಂಟ್ ವಿಚಾರದಲ್ಲಿ ಹೀರೋ ಆಗದಿದ್ದರೂ ವಿಲನ್ ಆಗಲು ಸಿದ್ಧವಿಲ್ಲ: ಶಾಸಕ ಹರ್ಷವರ್ಧನ್

May 18, 2020

ಮೈಸೂರು, ಮೇ 17(ಎಂಟಿವೈ)- `ನಂಜನಗೂಡಿನ ಜುಬಿಲಂಟ್ ಔಷಧ ಕಾರ್ಖಾನೆ ವಿಷಯದಲ್ಲಿ ನಾನು ಹೀರೋ ಆಗದಿ ದ್ದರೂ ಸರಿ, ವಿಲನ್ ಆಗಲು ಸಿದ್ಧ ವಿಲ್ಲ’ ಎಂದು ಶಾಸಕ ಹರ್ಷವರ್ಧನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಮೈಸೂರಲ್ಲಿ ಭಾನುವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಅಮೆರಿಕ ಮೂಲದ ಕಂಪನಿಯೊಂದಿಗೆ ಜುಬಿಲಂಟ್ ಕಾರ್ಖಾನೆ ಒಪ್ಪಂದ ಮಾಡಿಕೊಂಡಿದೆ. ಅದರ ಪ್ರಕಾರ ಈ ಕಾರ್ಖಾನೆಯಲ್ಲಿ ಕೊರೊನಾ ಔಷಧ ಉತ್ಪಾದನೆ ಆಗಬೇಕಾಗಿದೆ. ಇದೊಂದೇ ಕಾರಣಕ್ಕೆ ನಾನು ಯೂ ಟರ್ನ್ ತೆಗೆದುಕೊಳ್ಳುವ ಅನಿವಾರ್ಯ ಸೃಷ್ಟಿಯಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ,…

21 ದಿನಗಳ ಬಳಿಕ ಮನೆಗೆ ಮರಳಿದ 50 ವೈದ್ಯರು, ದಾದಿಯರು
ಮೈಸೂರು

21 ದಿನಗಳ ಬಳಿಕ ಮನೆಗೆ ಮರಳಿದ 50 ವೈದ್ಯರು, ದಾದಿಯರು

May 18, 2020

ಮೈಸೂರು, ಮೇ 17(ಆರ್‍ಕೆಬಿ)- ಕೋವಿಡ್ ಆಸ್ಪತ್ರೆಯಲ್ಲಿ 1 ವಾರ ರೋಗಿ ಗಳ ಚಿಕಿತ್ಸೆ ಬಳಿಕ 14 ದಿನಗಳ ಕ್ವಾರಂಟೈನ್ ಯಶಸ್ವಿಯಾಗಿ ಮುಗಿಸಿ ಮನೆಗೆ ಮರಳು ತ್ತಿರುವ ಕೊರೊನಾ ವಾರಿಯರ್ಸ್ ತಂಡದ 22 ವೈದ್ಯರು, 28 ದಾದಿಯರನ್ನು ವಿಜನ್ ಟೀಂನಿಂದ ಭಾನುವಾರ ಆತ್ಮೀಯವಾಗಿ ಗೌರವಿಸಿ ಬೀಳ್ಕೊಡಲಾಯಿತು. ಮೈಸೂರಿನ ಎಂಜಿ ರಸ್ತೆಯಲ್ಲಿನ ಜೆಎಸ್‍ಎಸ್ ಆಸ್ಪತ್ರೆ ಎದುರಿನ ಹೆರಿಟೇಜ್ ಇನ್ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 50 ಕೊರೊನಾ ವಾರಿ ಯರ್ಸ್‍ಗಳಿಗೆ ಆರತಿ ಎತ್ತಿ, ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ,…

ಗೃಹಿಣಿ ಮೇಲೆ ಅತ್ಯಾಚಾರ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಅಪ್‍ಲೋಡ್: ಇಬ್ಬರು ಕಾಮುಕರ ಬಂಧನ
ಮೈಸೂರು

ಗೃಹಿಣಿ ಮೇಲೆ ಅತ್ಯಾಚಾರ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಅಪ್‍ಲೋಡ್: ಇಬ್ಬರು ಕಾಮುಕರ ಬಂಧನ

May 18, 2020

ಮಡಿಕೇರಿ, ಮೇ 17- ವಿವಾಹಿತ ಮಹಿಳೆಯೋರ್ವರ ಮೇಲೆ ಅತ್ಯಾಚಾರವೆಸಗಿ ಅದನ್ನು ಮೊಬೈಲ್‍ನಲ್ಲಿ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆÉ. ಭಾಗಮಂಡಲ ಸಮೀಪದ ತಾವೂರು ಗ್ರಾಮದಲ್ಲಿ ಸೌದೆ ಕೆಲಸಕ್ಕೆಂದು ತೆರಳಿ ಹಿಂತಿರುಗುತ್ತಿದ್ದ ಮಹಿಳೆಯೊಬ್ಬರನ್ನು ಅಡ್ಡಗಟ್ಟಿದ ಅದೇ ಗ್ರಾಮದ ಚಿದಾನಂದ ಹಾಗೂ ಚೇತನ್ ಎಂಬುವರು ಆಕೆಯನ್ನು ಬೆದರಿಸಿ, ನಂತರ ಚಿದಾನಂದ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ. ಇದನ್ನು ಚೇತನ್ ಮೊಬೈಲ್‍ನಲ್ಲಿ ವೀಡಿಯೊ ಮಾಡಿದ್ದಾನೆ. ಬಳಿಕ ಅದನ್ನು ಆಕೆಗೆ…

ಕೂಡನಹಳ್ಳಿ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆ
ಮೈಸೂರು

ಕೂಡನಹಳ್ಳಿ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆ

May 18, 2020

ಮರಿಗಳನ್ನು ರಕ್ಷಿಸಿದ ಅರಣ್ಯ ಇಲಾಖೆ ಮರಿಗಳನ್ನು ತಾಯಿ ಚಿರತೆ ಕರೆದೊಯ್ಯಲೆಂದು ಕಾಯುತ್ತಿರುವ ಸಿಬ್ಬಂದಿ ಮೈಸೂರು, ಮೇ17(ಎಸ್‍ಬಿಡಿ)- ಮೈಸೂರು ತಾಲೂಕಿನ ಗ್ರಾಮವೊಂದರ ಜಮೀನಿ ನಲ್ಲಿ 3 ಚಿರತೆ ಮರಿಗಳು ಭಾನುವಾರ ಪತ್ತೆಯಾಗಿವೆ. ತಾಲೂಕಿನ ಕೂಡನಹಳ್ಳಿಯ ಹೊನ್ನಪ್ಪ ಅವರ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಇದ್ದುದನ್ನು ಭಾನು ವಾರ ಮಧ್ಯಾಹ್ನ ಗಮನಿಸಿದ ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿ ದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ತಂಡ, ಚಿರತೆ ಮರಿಗಳನ್ನು ರಕ್ಷಿಸಿದೆ. ಈ ಸಂಬಂಧ `ಮೈಸೂರು ಮಿತ್ರ’ನಿಗೆ…

ಸಾರಿಗೆ ಸಂಸ್ಥೆ ನೌಕರರನ್ನು ಕೊರೊನಾ ವಾರಿಯರ್ಸ್ ಆರೋಗ್ಯ ವಿಮೆ ವ್ಯಾಪ್ತಿಗೆ ಸೇರಿಸಲು ಒತ್ತಾಯ
ಮೈಸೂರು

ಸಾರಿಗೆ ಸಂಸ್ಥೆ ನೌಕರರನ್ನು ಕೊರೊನಾ ವಾರಿಯರ್ಸ್ ಆರೋಗ್ಯ ವಿಮೆ ವ್ಯಾಪ್ತಿಗೆ ಸೇರಿಸಲು ಒತ್ತಾಯ

May 18, 2020

ಮೈಸೂರು, ಮೇ 17(ಎಸ್‍ಪಿಎನ್)- ಕರ್ತವ್ಯನಿರತ ಕೆಎಸ್‍ಆರ್‍ಟಿಸಿ ನೌಕರರನ್ನು ಕೊರೊನಾ ವಾರಿಯರ್ಸ್ ತಂಡದ ಆರೋಗ್ಯ ವಿಮಾ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಕರ್ನಾ ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರÀ ಸಂಘದ ಮೈಸೂರು ಗ್ರಾಮಾಂತರ ವಿಭಾಗದ ಪದಾಧಿಕಾರಿ ಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕರ್ತವ್ಯದ ವೇಳೆ ಸೋಂಕು ತಗುಲಿದರೆ ಚಿಕಿತ್ಸೆ ಪಡೆಯಲು ಅಥವಾ ಮೃತಪಟ್ಟರೆ 30 ಲಕ್ಷ ರೂ. ಪರಿಹಾರ ಪಡೆಯಲು ಅವಕಾಶ ವಾಗುವಂತೆ ಕೊರೊನಾ ವಾರಿಯರ್ಸ್‍ಗಳ ವಿಮಾ ವ್ಯಾಪ್ತಿಗೆ ಸಾರಿಗೆ ನೌಕರರನ್ನೂ ಸೇರಿಸಬೇಕು ಎಂದು ಮನವಿ…

ರೋಗ ನಿರೋಧಕ ಶಕ್ತಿ ವೃದ್ಧಿಸುವ ಚವನಪ್ರಾಶ, ಕಷಾಯದ `ಆರೋಗ್ಯ ಕಿಟ್’ ಹಂಚಿಕೆಗೆ ಸಿದ್ಧತೆ
ಮೈಸೂರು

ರೋಗ ನಿರೋಧಕ ಶಕ್ತಿ ವೃದ್ಧಿಸುವ ಚವನಪ್ರಾಶ, ಕಷಾಯದ `ಆರೋಗ್ಯ ಕಿಟ್’ ಹಂಚಿಕೆಗೆ ಸಿದ್ಧತೆ

May 18, 2020

ಮೈಸೂರು, ಮೇ17(ಆರ್‍ಕೆಬಿ)- ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಚವನಪ್ರಾಶ, ಕಷಾಯ ಪೌಡರ್, ಪ್ರಾಣಾಯಾಮ ಪುಸ್ತಕ, ಅರೋಗ್ಯ ಸೇತು ಮಾಹಿತಿ ಇರುವ `ರೋಗ ಮಕ್ತ ಭಾರತ-ಆರೋಗ್ಯ ಕಿಟ್’ಗಳನ್ನು ಕೃಷ್ಣರಾಜ ಕ್ಷೇತ್ರದ ಎಲ್ಲಾ 80 ಸಾವಿರ ಮನೆ ಗಳಿಗೂ ವಿತರಿಸಲು ಶಾಸಕ ಎಸ್.ಎ. ರಾಮದಾಸ್ ಸಿದ್ಧತೆ ಮಾಡಿಕೊಂಡಿದ್ದಾರೆ. ಕೊರೊನಾ ಅಥವಾ ಯಾವುದೇ ವೈರಸ್ ಮಾನವ ದೇಹದೊಳಗೆ ಸೇರದಂತೆ ತಡೆ ಯಲು ರೋಗ ನಿರೋಧಕ ಶಕ್ತಿ ಅಗತ್ಯ. ಆ ನಿಟ್ಟಿನಲ್ಲಿ ಜನರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಚವನಪ್ರಾಶ, ಕಷಾಯ ಪೌಡರ್…

1 570 571 572 573 574 1,611
Translate »