ಮೈಸೂರು

ಸಂಕಷ್ಟದಲ್ಲಿರುವವರಿಗೆ ಆಹಾರ ಪದಾರ್ಥ ವಿತರಿಸುವ ವಿಷಯದಲ್ಲಿ ಎಚ್ಚರಿಕೆ ಗಂಟೆ…!
ಮೈಸೂರು

ಸಂಕಷ್ಟದಲ್ಲಿರುವವರಿಗೆ ಆಹಾರ ಪದಾರ್ಥ ವಿತರಿಸುವ ವಿಷಯದಲ್ಲಿ ಎಚ್ಚರಿಕೆ ಗಂಟೆ…!

April 24, 2020

ಮೈಸೂರು, ಏ.23(ಎಸ್‍ಬಿಡಿ)- ದಾನಿಗಳು ಆಹಾರ ಇನ್ನಿತರ ವಸ್ತುಗಳನ್ನು ವಿತ ರಿಸುವಾಗ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ. ಲಾಕ್‍ಡೌನ್ ಪರಿಸ್ಥಿತಿಯನ್ನು ಸಮರ್ಥ ವಾಗಿ ನಿಬಾಯಿಸುವಲ್ಲಿ ಸರ್ಕಾರಕ್ಕೆ ದಾನಿ ಗಳು ನೆರವಾಗಿದ್ದಾರೆ. ಸಂಕಷ್ಟದಲ್ಲಿರುವ ಎಲ್ಲರಿಗೂ ಸ್ಪಂದಿಸಲು ಸರ್ಕಾರಕ್ಕೆ ತಕ್ಷ ಣಕ್ಕೆ ಸಾಧ್ಯವಿಲ್ಲ. ಹಾಗಾಗಿ ಹಲವಾರು ರಾಜಕೀಯ ನಾಯಕರು, ಮುಖಂಡರು, ಸಂಘ ಸಂಸ್ಥೆಗಳು, ಉದ್ಯಮಿಗಳು ಸೇರಿದಂತೆ ಸಾವಿರಾರು ದಾನಿಗಳು ಸ್ವಯಂ ಪ್ರೇರಿತವಾಗಿ ಸಹಾಯ ಹಸ್ತ ಚಾಚಿದ್ದಾರೆ. ಪಡಿತರ ಚೀಟಿಯಿಲ್ಲದೆ ಸರ್ಕಾರದ ಸೌಲಭ್ಯದಿಂದಲೂ ವಂಚಿತರಾದವರಿಗೆ ದಾನಿಗಳೇ ದೇವರಾಗಿದ್ದಾರೆ….

ರಾಜ್ಯದಲ್ಲಿ ಮತ್ತೆ 9 ಮಂದಿಯಲ್ಲಿ ಸೋಂಕು ಸೋಂಕಿತರ ಸಂಖ್ಯೆ 427ಕ್ಕೆ ಏರಿಕೆ
ಮೈಸೂರು

ರಾಜ್ಯದಲ್ಲಿ ಮತ್ತೆ 9 ಮಂದಿಯಲ್ಲಿ ಸೋಂಕು ಸೋಂಕಿತರ ಸಂಖ್ಯೆ 427ಕ್ಕೆ ಏರಿಕೆ

April 23, 2020

ಬೆಂಗಳೂರು, ಏ.22-ರಾಜ್ಯದಲ್ಲಿ ಬುಧವಾರ ನಾಲ್ಕು ತಿಂಗಳ ಮಗು ಹಾಗೂ ನಾಲ್ವರು ಮಹಿಳೆಯರೂ ಸೇರಿ 9 ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 427ಕ್ಕೇರಿದೆ. ಮೈಸೂರು ಜಿಲ್ಲೆಯಲ್ಲಿ ನಂಜನಗೂಡಿನ ಇಬ್ಬರಿಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 88ಕ್ಕೆ ಏರಿಕೆಯಾಗಿದ್ದರೂ, ಇಂದು ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಮೈಸೂರಿನಲ್ಲಿ ಗುಣಮುಖರಾದವರ ಸಂಖ್ಯೆ 33ಕ್ಕೆ ಏರಿದ್ದರೆ, 55 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಸೋಂಕು ತಕ್ಕ ಮಟ್ಟಿಗೆ ನಿಯಂತ್ರಣದಲ್ಲಿದೆ. ಆದರೆ, ಕಲಬುರಗಿ ಜಿಲ್ಲೆಯಲ್ಲಿ…

ಆನೆ ಸಾರೋಟು ರಸ್ತೆಯಲ್ಲಿ ಬಿದ್ದಿದ್ದ ನಾಣ್ಯ ಸಂಗ್ರಹಿಸಿದ ಟೀ ಅಂಗಡಿ ಮಾಲೀಕನಿಗೆ ಕೊರೊನಾ ಭೀತಿ!
ಮೈಸೂರು

ಆನೆ ಸಾರೋಟು ರಸ್ತೆಯಲ್ಲಿ ಬಿದ್ದಿದ್ದ ನಾಣ್ಯ ಸಂಗ್ರಹಿಸಿದ ಟೀ ಅಂಗಡಿ ಮಾಲೀಕನಿಗೆ ಕೊರೊನಾ ಭೀತಿ!

April 23, 2020

ಮೈಸೂರು ನಗರ ಪಾಲಿಕೆಯಿಂದ ರಾಸಾಯನಿಕ ದ್ರಾವಣ ಸಿಂಪಡಣೆ, ಪರಿಶೀಲನೆಗೆ ರವಾನೆ ಸಿಸಿಟಿವಿ ಫುಟೇಜ್ ವೀಕ್ಷಿಸಿ ಕಿಡಿಗೇಡಿಗಳ ಪತ್ತೆ: ಪೊಲೀಸರ ಭರವಸೆ ಮೈಸೂರು,ಏ.22(ಎಂಟಿವೈ)- ಕೊರೊನಾ ಸೋಂಕಿನ ಭೀತಿ ಜನರಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿದೆ. ರಸ್ತೆಯಲ್ಲಿ ಹಣ, ಬೆಲೆಬಾಳುವ ವಸ್ತು ಬಿದ್ದಿದ್ದರೂ ತಿರುಗಿ ನೋಡದಂತೆ ಮಾಡಿದೆ! ಆದರೆ ಬುಧವಾರ ಮುಂಜಾನೆ ಮೈಸೂರಿನ ಆನೆ ಸಾರೋಟು ರಸ್ತೆಯಲ್ಲಿ(ಬೋಟಿ ಬಜಾರ್) ಕಿಡಿಗೇಡಿಗಳು ಚೆಲ್ಲಾಡಿದ್ದ 200 ರೂ. ಗಳಷ್ಟು ನಾಣ್ಯಗಳನ್ನು ಆಸೆಯಿಂದ ಆಯ್ದು ಕೊಂಡ ಟೀ ಅಂಗಡಿ ಮಾಲೀಕ, ಬಳಿಕ ಕೊರೊನಾ ಭೀತಿಯಲ್ಲಿ ತೊಳಲಾಡುತ್ತಿದ್ದಾನೆ….

ಮೈಸೂರು ಮೃಗಾಲಯದ `ಚಾಮುಂಡಿ’ ಆನೆ ದತ್ತು ಪಡೆದ ಸಚಿವ ಸೋಮಶೇಖರ್
ಮೈಸೂರು

ಮೈಸೂರು ಮೃಗಾಲಯದ `ಚಾಮುಂಡಿ’ ಆನೆ ದತ್ತು ಪಡೆದ ಸಚಿವ ಸೋಮಶೇಖರ್

April 23, 2020

ಒಟ್ಟು 16 ಹುಲಿಗಳ 1 ದಿನದ ಆಹಾರದ ವೆಚ್ಚಕ್ಕೆ ದೇಣಿಗೆ ಮೃಗಾಲಯದಲ್ಲಿ 1 ಗಂಟೆ ಸುತ್ತಾಟ; ಸ್ವಚ್ಛತೆಗೆ ಮೆಚ್ಚುಗೆ ಮೈಸೂರು,ಏ.22(ಎಂಟಿವೈ)- ನೊವೆಲ್ ಕೊರೊನಾ ಹಾಗೂ ಹಕ್ಕಿಜ್ವರ ಭೀತಿ ಹಿನ್ನೆಲೆ ಯಲ್ಲಿ ಮೈಸೂರಿನ ಮೃಗಾಲಯದಲ್ಲಿ ಕೈ ಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಬುಧವಾರ ಮೃಗಾ ಲಯದಲ್ಲಿ 1 ಗಂಟೆ ಕಾಲ ಸುತ್ತಾಡಿದರು. ಈ ವೇಳೆ 5 ವರ್ಷದ ಹೆಣ್ಣಾನೆ `ಚಾಮುಂಡಿ’ ಯನ್ನು ಸಚಿವರು 1 ವರ್ಷ ಅವಧಿಗೆ ದತ್ತು ಪಡೆದರು. 16 ಹುಲಿಗಳಿಗೆ…

ಕೆ.ಆರ್.ಕ್ಷೇತ್ರದ ಕೊರೊನಾ ವಾರಿಯರ್ಸ್ ಜತೆ ಶಾಸಕ ರಾಮದಾಸ್ ಸಭೆ
ಮೈಸೂರು

ಕೆ.ಆರ್.ಕ್ಷೇತ್ರದ ಕೊರೊನಾ ವಾರಿಯರ್ಸ್ ಜತೆ ಶಾಸಕ ರಾಮದಾಸ್ ಸಭೆ

April 23, 2020

ಮೈಸೂರು,ಏ.22(ಎಂಟಿವೈ)- ಲಾಕ್ ಡೌನ್ ಶುರುವಾದಾಗಿನಿಂದ ದಿನವೂ ಕೆ.ಆರ್.ಕ್ಷೇತ್ರದ ಎಲ್ಲ ವಾರ್ಡ್ ಹಾಗೂ ಬೂತ್ ಮಟ್ಟದಲ್ಲಿ ಕಷ್ಟದಲ್ಲಿರುವವರಿಗೆ ಸಿದ್ಧ ಆಹಾರದ ಪೊಟ್ಟಣ ತಲುಪಿಸಲು ಸ್ವಯಂಸೇವಕರು ಶ್ರಮಿಸುತ್ತಿದ್ದಾರೆ. ಈ ಸೇವೆ 28 ದಿನಗಳಿಂದಲೂ ನಿರಂತರ ವಾಗಿ ನಡೆಯುತ್ತಿದೆ ಎಂದು ಶಾಸಕ ಎಸ್.ಎ. ರಾಮದಾಸ್ ಮೆಚ್ಚುಗೆ ವ್ಯಕ್ತಪಡಿಸಿದರು. ಕೆ.ಆರ್.ವಿಧಾನಸಭಾ ಕ್ಷೇತ್ರದಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿರುವ ಬಿಜೆಪಿ ಕಾರ್ಯಕರ್ತರ ಜತೆ ಮೈಸೂರಿನ ಕಾಡಾ ಕಚೇರಿ ಹಿಂಭಾಗದ ಮೈದಾನದಲ್ಲಿ ಬುಧವಾರ ಸಭೆ ನಡೆಸಿದ ರಾಮದಾಸ್, ಕ್ಷೇತ್ರದ ಪ್ರತಿ ವಾರ್ಡ್‍ಗೂ ತಲಾ 25 ಸ್ವಯಂಸೇವಕರನ್ನು ನೇಮಿಸಲಾಗಿದೆ….

ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಪಾರಂಪರಿಕ ಕಟ್ಟಡಗಳಿಗೆ ಸದ್ಯಕ್ಕಿಲ್ಲ ಕಾಯಕಲ
ಮೈಸೂರು

ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಪಾರಂಪರಿಕ ಕಟ್ಟಡಗಳಿಗೆ ಸದ್ಯಕ್ಕಿಲ್ಲ ಕಾಯಕಲ

April 23, 2020

ಮೈಸೂರು,ಏ.22- ದೇಶದ ಜನಜೀವನ, ಆರ್ಥಿ ಕತೆಯನ್ನೇ ಬುಡಮೇಲು ಮಾಡಿರುವ ಕೋವಿಡ್-19 ಲಾಕ್‍ಡೌನ್ ನಿರ್ಬಂಧ ಎಂಬ ಕರಿನೆರಳು ರಾಜ್ಯದ ಹಲವು ಅಭಿವೃದ್ಧಿ ಯೋಜನೆಗಳ ಮೇಲೆ ಪರಿಣಾಮ ಬೀರಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೊರೊನಾ ವೈರಸ್ ಮಾರಣಾಂತಿಕ ಸೋಂಕು ಹರಡದಂತೆ ನಿಯಂತ್ರಿಸುವುದು ಹಾಗೂ ಸೋಂಕಿತ ರಿಗೆ ಚಿಕಿತ್ಸೆ ನೀಡಿ ಸಾವಿನ ದವಡೆಯಿಂದ ತಪ್ಪಿಸಲು ಸರ್ಕಾರ ಅತೀ ಹೆಚ್ಚು ಅನುದಾನವನ್ನು ಖರ್ಚು ಮಾಡಬೇಕಾಗಿದೆ. ವ್ಯಾಪಾರ, ವಹಿವಾಟು, ಉತ್ಪನ್ನ ಗಳು ಸಂಪೂರ್ಣ ಬಂದ್ ಆಗಿರುವುದರಿಂದ ಸರ್ಕಾ ರಕ್ಕೆ ಬರುತ್ತಿದ್ದ ಎಲ್ಲಾ ಮೂಲಗಳ…

ಕೋವಿಡ್-19: ಇಂದಿನಿಂದ ಮನುಷ್ಯರ ಮೇಲೆ ಆಕ್ಸ್‍ಫರ್ಡ್ ಲಸಿಕೆ ಪ್ರಯೋಗ
ಮೈಸೂರು

ಕೋವಿಡ್-19: ಇಂದಿನಿಂದ ಮನುಷ್ಯರ ಮೇಲೆ ಆಕ್ಸ್‍ಫರ್ಡ್ ಲಸಿಕೆ ಪ್ರಯೋಗ

April 23, 2020

ಲಂಡನ್: ಕೊರೊನಾ ವೈರಸ್ ಸೋಂಕಿಗೆ ಸೂಕ್ತ ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಆಕ್ಸ್‍ಫರ್ಡ್ ಯೂನಿವರ್ಸಿಟಿ ಕಾರ್ಯಾಚರಿಸುತ್ತಿದ್ದು, ಯುನೈಟೆಡ್ ಕಿಂಗ್‍ಡಮ್ ಸರ್ಕಾರವು 2 ಕೋಟಿ ಪೌಂಡ್‍ಗಳ (ಸುಮಾರು 189 ಕೋಟಿ) ಸಹಕಾರ ನೀಡುವುದಾಗಿ ಮಂಗಳವಾರ ಘೋಷಿಸಿದೆ. ಆಕ್ಸ್‍ಫರ್ಡ್ ಯೂನಿವರ್ಸಿಟಿಯ ಸಂಶೋ ಧಕರು ಕೋವಿಡ್-19ಗೆ ಚಿಕಿತ್ಸೆ ನೀಡಲು ಲಸಿಕೆ ಕಂಡು ಕೊಂಡಿದ್ದಾರೆ. ಸಾರ್ಸ್‍ಕೋವ್-2 ವೈರಸ್ ಸೋಂಕಿ ನಿಂದ ಉಂಟಾಗುವ ರೋಗಕ್ಕೆ ಲಸಿಕೆ ಅಭಿವೃದ್ಧಿಪಡಿಸಿ ರುವುದಾಗಿ ಪೆÇ್ರಫೆಸರ್ ಸರಾಹ್ ಗಿಲ್ಬರ್ಟ್ ಹೇಳಿದ್ದಾರೆ. ಸೆಪ್ಟೆಂಬರ್‍ನಲ್ಲಿ ಲಸಿಕೆ ಮಾರುಕಟ್ಟೆಗೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗುರುವಾರದಿಂದ (ಏಪ್ರಿಲ್…

ಏ.26ರವರೆಗೆ ಮೋಡ ಕವಿದ ವಾತಾವರಣ, ಸಾಧಾರಣ ಮಳೆ
ಮೈಸೂರು

ಏ.26ರವರೆಗೆ ಮೋಡ ಕವಿದ ವಾತಾವರಣ, ಸಾಧಾರಣ ಮಳೆ

April 23, 2020

ಮೈಸೂರು, ಏ.22(ಆರ್‍ಕೆಬಿ)- ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ ಜಿಲ್ಲೆಗಳಲ್ಲಿ ಏ.26ರವರೆಗೂ ಮೋಡ ಕವಿದ ವಾತಾವರಣವಿದ್ದು, ತುಂತುರು ಅಥವಾ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಅವಧಿಯಲ್ಲಿ ಮೈಸೂರಿನಲ್ಲಿ ಗರಿಷ್ಠ ಉಷ್ಣಾಂಶ 34ರಿಂದ 36 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 24-25 ಡಿಗ್ರಿ ಸೆಲ್ಸಿಯಸ್, ಚಾಮರಾಜನಗರ ಜಿಲ್ಲೆಯಲ್ಲಿ ಗರಿಷ್ಠ 36, ಕನಿಷ್ಠ 24-25, ಕೊಡಗು ಜಿಲ್ಲೆಯಲ್ಲಿ ಗರಿಷ್ಠ 29-31, ಕನಿಷ್ಠ 19, ಮಂಡ್ಯ ಜಿಲ್ಲೆಯಲ್ಲಿ ಗರಿಷ್ಠ 35-36, ಕನಿಷ್ಠ…

ಗಿಡನೆಟ್ಟು ವಿಶ್ವಭೂಮಿ ದಿನ ಆಚರಿಸಿದ ವಿಜಯೇಂದ್ರ ಬಳಗ
ಮೈಸೂರು

ಗಿಡನೆಟ್ಟು ವಿಶ್ವಭೂಮಿ ದಿನ ಆಚರಿಸಿದ ವಿಜಯೇಂದ್ರ ಬಳಗ

April 23, 2020

ಮೈಸೂರು,ಏ.22(ಪಿಎಂ) ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯ ದರ್ಶಿ ಬಿ.ವೈ. ವಿಜಯೇಂದ್ರ ಅಭಿಮಾನಿ ಬಳಗ ದಿಂದ ಬುಧವಾರ `ವಿಶ್ವಭೂಮಿ ದಿನ’ ಅಂಗ ವಾಗಿ ವಿವಿಧ ಜಾತಿ ಗಿಡಗಳನ್ನು ಮೈಸೂರಿ ನಲ್ಲಿ ರಸ್ತೆಬದಿ ನೆಡಲಾಯಿತು. ಜಯನಗರದ (ಮಳಲವಾಡಿ) ನ್ಯಾಯಾ ಲಯ ಸಂಕೀರ್ಣದ ಬಳಿ ಗಿಡ ನೆಡುವ ವೇಳೆ ಮಾತನಾಡಿದ ಮೈಸೂರು ತಾಪಂ ಮಾಜಿ ಅಧ್ಯಕ್ಷ, ಬಳಗದ ಸಂಚಾಲಕ ಎಲ್. ಆರ್.ಮಹದೇವಸ್ವಾಮಿ, ವಿಶ್ವಭೂಮಿ ದಿನ ದಂಗವಾಗಿ ಬಳಗ ದಿಂದ ರಸ್ತೆಬದಿಯಲ್ಲಿ ಸಾಂಕೇತಿಕವಾಗಿ ಗಿಡ ನೆಡುತ್ತಿದ್ದೇವೆ. ವಿವಿಧ ಜಾತಿಯ 500ಕ್ಕೂ…

ರಾಮಕೃಷ್ಣ ಆಶ್ರಮದಿಂದ ಪ್ರತಿನಿತ್ಯ ಸಾವಿರಾರು ಬಡವರಿಗೆ ಊಟ, ಅಗತ್ಯ ಸೇವೆಗಳ ಪೂರೈಕೆ
ಮೈಸೂರು

ರಾಮಕೃಷ್ಣ ಆಶ್ರಮದಿಂದ ಪ್ರತಿನಿತ್ಯ ಸಾವಿರಾರು ಬಡವರಿಗೆ ಊಟ, ಅಗತ್ಯ ಸೇವೆಗಳ ಪೂರೈಕೆ

April 23, 2020

ಮೈಸೂರು, ಏ.22(ಎಂಕೆ)- ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮ ಪ್ರತಿನಿತ್ಯ ಸಾವಿರಾರು ಬಡ ಕುಟುಂಬ, ನಿರಾಶ್ರಿತರು, ದತ್ತು ಗ್ರಾಮ, ಕರ್ತವ್ಯ ನಿರತ ಪೊಲೀಸ್ ಮತ್ತು ವೈದ್ಯಕೀಯ ಸಿಬ್ಬಂದಿಗೆ ಊಟ, ಅಗತ್ಯ ವಸ್ತುಗಳ ಮತ್ತು ಕೊರೊನಾ ರಕ್ಷಣಾ ಕಿಟ್‍ಗಳನ್ನು ವಿತರಣೆ ಮಾಡುವ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿದೆ. ಕೊರೊನಾ ಸೋಂಕು ನಿಯಂತ್ರಿಸಲು ಲಾಕ್ ಡೌನ್ ಜಾರಿಯಾದಾಗಿನಿಂದ ರಾಮಕೃಷ್ಣ ಆಶ್ರಮ ನಿರಂತರ ಸೇವಾ ಕಾರ್ಯದಲ್ಲಿ ತೊಡಗಿದ್ದು, ದಿನ ನಿತ್ಯ ಜನರ ಕಷ್ಟಕ್ಕೆ ನೆರವಾಗುತ್ತಿದೆ. ಸರ್ಕಾರದ ಸೂಚನೆ ಯಂತೆ ಸಾಮಾಜಿಕ ಅಂತರ ಕಾಯ್ದುಕೊಂಡು…

1 598 599 600 601 602 1,611
Translate »