ಮೈಸೂರು

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‍ಗೌಡರಿಗೆ ಹುಟ್ಟುಹಬ್ಬದ ಸಂಭ್ರಮ
ಮೈಸೂರು

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‍ಗೌಡರಿಗೆ ಹುಟ್ಟುಹಬ್ಬದ ಸಂಭ್ರಮ

February 1, 2020

ಮೈಸೂರು, ಜ.31- ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಅವರು ಧಾರ್ಮಿಕ ಹಾಗೂ ಸಾಮಾಜಿಕ ಕೈಂಕರ್ಯ ಗಳ ಮೂಲಕ ತಮ್ಮ 33ನೇ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ ಕೊಂಡರು. ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ತೆರಳಿ, ತಾಯಿ ಚಾಮುಂಡೇಶ್ವರಿಗೆ ವಿಶೇಷ ಸಲ್ಲಿಸಿದ ಬಳಿಕ ಬೆಟ್ಟದಲ್ಲೇ ಸ್ಥಳೀ ಯರು ಆಯೋ ಜಿಸಿದ್ದ ಸಂಭ್ರಮಾಚರಣೆ ಯಲ್ಲಿ ಭಾಗಿಯಾದರು. ಬಳಿಕ ಸಮೀಪದ ಸರ್ಕಾರಿ ಉತ್ತನಹಳ್ಳಿ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿಯ ದರ್ಶನ ಪಡೆದರು. ಎಂಸಿಡಿಸಿಸಿ ಬ್ಯಾಂಕ್‍ನಲ್ಲಿ ಸಿಬ್ಬಂದಿ ವತಿಯಿಂದ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡರ…

ಗಾಂಧೀಜಿಯನ್ನು ಎಷ್ಟರ  ಮಟ್ಟಿಗೆ ಸ್ಮರಿಸಿಕೊಳ್ಳುತ್ತಿದ್ದೇವೆ?
ಮೈಸೂರು

ಗಾಂಧೀಜಿಯನ್ನು ಎಷ್ಟರ ಮಟ್ಟಿಗೆ ಸ್ಮರಿಸಿಕೊಳ್ಳುತ್ತಿದ್ದೇವೆ?

January 31, 2020

ಮೈಸೂರು: ದೇಶದಲ್ಲಿ ಗಾಂಧೀಜಿಯವರನ್ನು ನಾವು ಎಷ್ಟರಮಟ್ಟಿಗೆ ಸ್ಮರಿಸಿ ಕೊಳ್ಳುತ್ತಿದ್ದೇವೆ ಎಂಬುದನ್ನು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವ ಅಗತ್ಯವಿದೆ ಎಂದು ಮಾಜಿ ವಿಧಾನ ಸಭಾಧ್ಯಕ್ಷ ಕೃಷ್ಣ ಅಭಿಪ್ರಾಯಪಟ್ಟರು. ಮೈಸೂರಿನ ಮಾನಸಗಂಗೋತ್ರಿ ಗಾಂಧಿ ಭವನ ದಲ್ಲಿ ಗಾಂಧಿ ಅಧ್ಯಯನ ಕೇಂದ್ರ ಮತ್ತು ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗ ಜಂಟಿಯಾಗಿ ಆಯೋಜಿ ಸಿದ್ದ 72ನೇ ಸರ್ವೋದÀಯ ದಿನಾಚರಣೆ ಕಾರ್ಯ ಕ್ರಮದಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರ ವೇರಿಸಿ ಮಾತನಾಡಿದರು. ಇತ್ತೀಚಿನ ಯುವಕರಿಗೆ ಗಾಂಧಿ ಬಗ್ಗೆಯಾಗಲೀ, ದೇಶದ ಬಗ್ಗೆಯಾಗಲೀ ಸದಭಿಪ್ರಾಯವಿಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿ…

ಸರ್ವೋದಯ ದಿನ: ಸ್ವಾತಂತ್ರ್ಯ ಹೋರಾಟಗಾರರಿಂದ ಗಾಂಧಿ ಸ್ಮರಣೆ
ಮೈಸೂರು

ಸರ್ವೋದಯ ದಿನ: ಸ್ವಾತಂತ್ರ್ಯ ಹೋರಾಟಗಾರರಿಂದ ಗಾಂಧಿ ಸ್ಮರಣೆ

January 31, 2020

ಮೈಸೂರು: ಸರ್ವೋದಯ ದಿನದ ಅಂಗವಾಗಿ ಮೈಸೂರು ಜಿಲ್ಲೆ ಮತ್ತು ನಗರ ಸ್ವಾತಂತ್ರ್ಯ ಹೋರಾಟಗಾರರ ಸಂಘದ ವತಿಯಿಂದ ಗುರುವಾರ ಮೈಸೂರಿನ ಸುಬ್ಬರಾಯನಕೆರೆ ಸ್ವಾತಂತ್ರ್ಯ ಹೋರಾಟ ಗಾರರ ಉದ್ಯಾನವನದಲ್ಲಿ ಗಾಂಧಿ ಪುತ್ಥಳಿಗೆ ಪುಷ್ಪಾ ರ್ಚನೆ, ಮೌನಾಚರಣೆ ಮೂಲಕ ಗೌರವ ಸಲ್ಲಿಸಿದರು. ಸಂಘದ ಅಧ್ಯಕ್ಷ ಡಾ.ಎಂ.ಜಿ.ಕೃಷ್ಣಮೂರ್ತಿ, ಮೈಸೂರು ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಅವರು ಗಾಂಧಿ ಪುತ್ಥಳಿಗೆ ಪುಷ್ಪಾರ್ಚನೆ ನೆರವೇರಿಸಿದರು. ಬಳಿಕ ಎರಡು ನಿಮಿಷ ಮೌನಾಚರಣೆ ಮೂಲಕ ಗಾಂಧೀಜಿಯವರಿಗೆ ಗೌರವ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಡಾ. ಎಂ.ಜಿ.ಕೃಷ್ಣಮೂರ್ತಿ,…

ರಾಜಕೀಯ, ಆಧ್ಯಾತ್ಮಿಕವಾಗಿ ಭಾರತದ ಸರ್ವೋತ್ಕೃಷ್ಟ ನಾಯಕರಾಗಿದ್ದ ಗಾಂಧಿ
ಮೈಸೂರು

ರಾಜಕೀಯ, ಆಧ್ಯಾತ್ಮಿಕವಾಗಿ ಭಾರತದ ಸರ್ವೋತ್ಕೃಷ್ಟ ನಾಯಕರಾಗಿದ್ದ ಗಾಂಧಿ

January 31, 2020

ಮೈಸೂರು: ಅಸಹಕಾರ, ಅಹಿಂಸೆ ಮತ್ತು ಶಾಂತಿ ಯುತ ಪ್ರತಿರೋಧವನ್ನು ತಮ್ಮ ಶಸ್ತ್ರ ವನ್ನಾಗಿ ಬಳಸಿದ್ದ ಗಾಂಧಿ, ಭಾರತೀಯ ಸ್ವಾತಂತ್ರ್ಯ ಚಳವಳಿ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಮತ್ತು ಆಧ್ಯಾತ್ಮಿಕ ನಾಯಕರಾಗಿದ್ದರು ಎಂದು ಹಿರಿಯ ಗಾಂಧಿವಾದಿ ಪ್ರೊ.ಕರೀ ಮುದ್ದೀನ್ ಇಂದಿಲ್ಲಿ ಅಭಿಪ್ರಾಯಪಟ್ಟರು. ಸರ್ವೋದಯ ದಿನಾಚರಣೆ ಅಂಗವಾಗಿ ಸಿದ್ದಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎನ್‍ಎಸ್‍ಎಸ್ ಘಟಕ ಜಂಟಿಯಾಗಿ ಕಾಲೇಜಿನಲ್ಲಿ ಆಯೋಜಿ ಸಿದ್ದ ಗಾಂಧಿ ಸ್ಮರಣೆ ಕಾರ್ಯಕ್ರಮದಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಾತನಾಡಿದರು. ಭಾರತದಲ್ಲಿ ಗಾಂಧೀಜಿ ಯವರನ್ನು ಬಾಪೂಜಿ…

ಭಾರತದಲ್ಲಿ ಮೊದಲ ಕೊರೋನಾ ವೈರಸ್ ಸೋಂಕು ಕೇರಳದಲ್ಲಿ ಪತ್ತೆ: ಚೀನಾದಿಂದ  ಬಂದ ವಿದ್ಯಾರ್ಥಿಯಲ್ಲಿ ದೃಢ
ಮೈಸೂರು

ಭಾರತದಲ್ಲಿ ಮೊದಲ ಕೊರೋನಾ ವೈರಸ್ ಸೋಂಕು ಕೇರಳದಲ್ಲಿ ಪತ್ತೆ: ಚೀನಾದಿಂದ ಬಂದ ವಿದ್ಯಾರ್ಥಿಯಲ್ಲಿ ದೃಢ

January 31, 2020

ತಿರುವನಂತಪುರ: ಭಾರತದಲ್ಲಿ ಮೊದಲ ಕೊರೋನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಚೀನಾದ ವುಹಾನ್‍ನಿಂದ ಕೇರಳಕ್ಕೆ ಹಿಂತಿರುಗಿರುವ ವಿದ್ಯಾರ್ಥಿಯಲ್ಲಿ ಕೊರೋನಾ ವೈರಸ್ ಇಂದು ಪರೀಕ್ಷೆ ವೇಳೆ ದೃಢವಾಗಿದೆ. ಆಸ್ಪತ್ರೆಯಲ್ಲಿ ವಿದ್ಯಾರ್ಥಿಯನ್ನು ಪ್ರತ್ಯೇಕ ವಾರ್ಡ್‍ನಲ್ಲಿ ಇರಿಸಲಾಗಿದೆ. ಆತನ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಚೀನಾದಿಂದ ಕರ್ನಾಟಕ ಮತ್ತು ಕೇರಳದ ಹಲವು ವಿದ್ಯಾರ್ಥಿಗಳು ಹಿಂತಿರು ಗುತ್ತಿದ್ದಾರೆ ಎಂದು ವರದಿಗಳು ಬರುತ್ತಿರುವ ಮಧ್ಯೆಯೇ ವೈರಸ್ ಸೋಂಕು ಪತ್ತೆಯಾಗಿದ್ದು ಜನರಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ.

ಪರಮೇಶ್ವರ್, ಎಚ್.ಡಿ.ರೇವಣ್ಣ, ಡಿಕೆಶಿ, ಜಾರ್ಜ್, ಎಂ.ಬಿ.ಪಾಟೀಲ್ ಭದ್ರತೆ ಕಡಿತಕ್ಕೆ ತುರ್ತು ಆದೇಶ
ಮೈಸೂರು

ಪರಮೇಶ್ವರ್, ಎಚ್.ಡಿ.ರೇವಣ್ಣ, ಡಿಕೆಶಿ, ಜಾರ್ಜ್, ಎಂ.ಬಿ.ಪಾಟೀಲ್ ಭದ್ರತೆ ಕಡಿತಕ್ಕೆ ತುರ್ತು ಆದೇಶ

January 31, 2020

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರದ ಅವಧಿ ಯಲ್ಲಿ 27 ಮಂದಿ ಸಚಿವರಿಗೆ ನೀಡಲಾಗಿದ್ದ ಅಂಗರಕ್ಷಕ ಭದ್ರತೆ ಹಾಗೂ ನಿವಾಸದ ಗಾರ್ಡ್ ಭದ್ರತೆ ಹಿಂಪಡೆಯುವಂತೆ ಆದೇಶ ಹೊರಡಿಸಲಾಗಿದೆ. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್ ಸೇರಿದಂತೆ ಹಲವರ ಭಧ್ರತೆ ಕಡಿತಕ್ಕೆ ನಗರ ಪೆÇಲೀಸ್ ಆಯುಕ್ತ ಎನ್.ಭಾಸ್ಕರ್ ರಾವ್ ತುರ್ತು ಆದೇಶ ಹೊರಡಿಸಿದ್ದಾರೆ. ಇನ್ನು ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಬಂಡೆಪ್ಪ ಕಾಶಪ್ಪನವರ್, ಜಿ.ಟಿ.ದೇವೇಗೌಡ, ಡಿ.ಸಿ. ತಮ್ಮಣ್ಣ, ಕೃಷ್ಣ ಭೈರೇಗೌಡ, ಎಂ.ಸಿ.ಮನಗೂಳಿ, ಎನ್.ಎಚ್.ಶಿವಶಂಕರ ರೆಡ್ಡಿ,…

ಕುವೆಂಪು ಮನೆಯಲ್ಲಿ ಕಳ್ಳತನ: ಅಪರಾಧಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ
ಮೈಸೂರು

ಕುವೆಂಪು ಮನೆಯಲ್ಲಿ ಕಳ್ಳತನ: ಅಪರಾಧಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ

January 31, 2020

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳ್ಳಿಯ ಕವಿ ಮನೆ ಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳಿಗೆ ತೀರ್ಥಹಳ್ಳಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಪದ್ಮವಿಭೂಷಣ ಪದಕ ಸೇರಿದಂತೆ ಇತರೆ ಅಮೂಲ್ಯ ವಸ್ತುಗಳನ್ನು ಖದೀಮರು ಕಳ್ಳತನ ಮಾಡಿದ್ದರು. ಈ ಪ್ರಕರಣದ ಅಪರಾಧಿ ಗಳಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಪ್ರಕರಣದ ಮೊದಲ ಅಪರಾಧಿ ದಾವಣಗೆರೆ ಜಿಲ್ಲೆಯ ತುರಚಘಟ್ಟದ ಬೆಳಂದೂರಿನ ರೇವಣಸಿದ್ದಪ್ಪ ಈಗಾಗಲೇ ವಿಚಾರಣಾ ಹಂತದಲ್ಲೇ ಮೃತಪಟ್ಟಿದ್ದಾನೆ. ಇನ್ನು ಮೊದಲ ಅಪರಾಧಿ…

ನಮ್ಮನ್ನೂ ಸರ್ಕಾರಿ ನೌಕರರೆಂದೇ ಪರಿಗಣಿಸಿ… ಮೈಸೂರಲ್ಲಿ ಕೆಎಸ್‍ಆರ್‍ಟಿಸಿ ನೌಕರರ ಜಾಥಾ
ಮೈಸೂರು

ನಮ್ಮನ್ನೂ ಸರ್ಕಾರಿ ನೌಕರರೆಂದೇ ಪರಿಗಣಿಸಿ… ಮೈಸೂರಲ್ಲಿ ಕೆಎಸ್‍ಆರ್‍ಟಿಸಿ ನೌಕರರ ಜಾಥಾ

January 31, 2020

ಮೈಸೂರು: ತಮ್ಮನ್ನು ಸಹ ಸರ್ಕಾರಿ ನೌಕರರೆಂದು ಪರಿಗಣಿಸಿ ಸರಿಸಮಾನ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರು ಮೈಸೂರಿನಲ್ಲಿ ಪ್ರತಿಭಟನಾ ಜಾಥಾ ನಡೆಸಿದರು. ಮೈಸೂರಿನ ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಸದಸ್ಯರು, ದೊಡ್ಡ ಗಡಿಯಾರ, ಗಾಂಧಿ ಚೌಕ, ಓಲ್ಡ್ ಬ್ಯಾಂಕ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್, ಜೆ.ಕೆ.ಮೈದಾನ, ಮೆಟ್ರೋಪೋಲ್ ಸರ್ಕಲ್ ಮೂಲಕ ಡಿಸಿ ಕಚೇರಿ ತಲುಪಿದರು….

ರವೀಂದ್ರನಾಥ್ ಠಾಗೋರರ `ಗೀತಾಂಜಲಿ’ ಬಿಟ್ಟರೆ ಡಾ. ಭೈರಪ್ಪರ `ಪರ್ವ’ವೇ ಮೇರು
ಮೈಸೂರು

ರವೀಂದ್ರನಾಥ್ ಠಾಗೋರರ `ಗೀತಾಂಜಲಿ’ ಬಿಟ್ಟರೆ ಡಾ. ಭೈರಪ್ಪರ `ಪರ್ವ’ವೇ ಮೇರು

January 31, 2020

ಮೈಸೂರು: ರವೀಂದ್ರನಾಥ್ ಠಾಗೋರರ ಗೀತಾಂ ಜಲಿ ಕೃತಿಯನ್ನು ಹೊರತುಪಡಿಸಿದರೆ, ಎಸ್.ಎಲ್.ಭೈರಪ್ಪ ಅವರ ಪರ್ವ ಕಾದಂ ಬರಿ 40ನೇ ವರ್ಷಾಚರಣೆ ಆಚರಿಸಿಕೊಳ್ಳು ತ್ತಿದೆ. ಇದರಿಂದ ಸಾಹಿತ್ಯ ಲೋಕಕ್ಕೆ ಭೈರಪ್ಪ ನವರ ಕೊಡುಗೆ ಏನೆಂಬುದು ತಿಳಿಯು ತ್ತದೆ ಎಂದು ಹೆಸರಾಂತ ವಿದ್ವಾಂಸ ಡಾ. ಪ್ರಧಾನ ಗುರುದತ್ ಅಭಿಪ್ರಾಯಪಟ್ಟರು. ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್, ಕನ್ನಡ ಸಾಹಿತ್ಯ ಕಲಾಕೂಟ ಸಂಯು ಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಸಾಹಿತ್ಯ ಸಂಜೆ ಸರಸ್ವತಿ ಸಮ್ಮಾನ್ ಪುರ ಸ್ಕøತ…

ವಿವಿಧ ಸಂಘಟನೆಗಳಿಂದ ಮೈಸೂರಲ್ಲಿ ಮಹಾತ್ಮ ಗಾಂಧಿ ಹುತಾತ್ಮ ದಿನ ಆಚರಣೆ
ಮೈಸೂರು

ವಿವಿಧ ಸಂಘಟನೆಗಳಿಂದ ಮೈಸೂರಲ್ಲಿ ಮಹಾತ್ಮ ಗಾಂಧಿ ಹುತಾತ್ಮ ದಿನ ಆಚರಣೆ

January 31, 2020

ಮೈಸೂರು: ಮೈಸೂರಿನ ಗಾಂಧಿ ವೃತ್ತದಲ್ಲಿ ಸಂವಿಧಾನ ರಕ್ಷಣಾ ಸಮಿತಿ, ದಲಿತ ಸಂಘರ್ಷ ಸಮಿತಿ ಸೇರಿ ದಂತೆ ವಿವಿಧ ಸಂಘಟನೆಗಳಿಂದ ಮಹಾತ್ಮ ಗಾಂಧೀಜಿ ಹುತಾತ್ಮ ದಿನ ಆಚರಿಸಲಾಯಿತು. ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಗಳನ್ನು ಹಿಡಿದ ನೂರಾರು ಸಂಘಟನಾಕಾ ರರು ಮೌನಾಚರಣೆ ಮೂಲಕ ರಾಷ್ಟ್ರಪಿತ ನಿಗೆ ನಮನ ಸಲ್ಲಿಸಿದರು. ಈ ವೇಳೆ ಹಿರಿಯ ರಂಗಕರ್ಮಿ ಪ್ರಸನ್ನ ಮಾತನಾಡಿ, ಸ್ವಾತಂತ್ರ್ಯ ನಂತರ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಒಂದಾದ ದೇಶವನ್ನು ನಾವಿಂದು ಕಾಣು ತ್ತಿದ್ದೇವೆ. ಎಷ್ಟೇ ಗುಂಡುಗಳನ್ನು ಹೊಡೆದು, ಹೆದರಿಸಿದರೂ ನಗೆಮುಖದಿಂದ ಒಂದು…

1 689 690 691 692 693 1,611
Translate »