ಮೈಸೂರು

ಕೆಪಿಸಿಸಿ ಅಧ್ಯಕ್ಷರ ನೇಮಕ ಮುಂದಿನ ವಾರ ನಿರ್ಧಾರ
ಮೈಸೂರು

ಕೆಪಿಸಿಸಿ ಅಧ್ಯಕ್ಷರ ನೇಮಕ ಮುಂದಿನ ವಾರ ನಿರ್ಧಾರ

January 25, 2020

ಮೈಸೂರು: ದೆಹಲಿ ಚುನಾ ವಣೆಯ ಒತ್ತಡದಿಂದಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ನೇಮಕಾತಿ ಮುಂದಕ್ಕೆ ಹೋಗಿದ್ದು, ಮುಂದಿನ ವಾರ ಎಲ್ಲವೂ ತೀರ್ಮಾನವಾಗುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಸುತ್ತೂರು ಮಹಾ ಜಾತ್ರೆಗೆ ತೆರಳುವ ಮುನ್ನ ಮೈಸೂ ರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕ ಆದಷ್ಟು ಬೇಗ ಇತ್ಯರ್ಥವಾಗಬೇಕಿದೆ. ಈ ಕುರಿತು ವರಿಷ್ಠರೊಂದಿಗೆ ಮಾತನಾಡಿದ್ದೇನೆ. ಬಹುಶಃ ಮುಂದಿನ ವಾರದಲ್ಲಿ ನೇಮಕವಾಗುವ ಸಾಧ್ಯತೆಗಳಿವೆ ಎಂದರು. ಕೆಪಿಸಿಸಿ ಅಧ್ಯಕ್ಷರು ಯಾರಾಗಬೇಕು ಎಂಬುದು ಹೈಕ…

ಮಾನಸಗಂಗೋತ್ರಿಯಲ್ಲಿ ‘ಫ್ರೀ ಕಾಶ್ಮೀರ್’ ಫಲಕ ಪ್ರದರ್ಶನ ಪ್ರಕರಣ: ಜ.27ಕ್ಕೆ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಕೋರ್ಟ್
ಮೈಸೂರು

ಮಾನಸಗಂಗೋತ್ರಿಯಲ್ಲಿ ‘ಫ್ರೀ ಕಾಶ್ಮೀರ್’ ಫಲಕ ಪ್ರದರ್ಶನ ಪ್ರಕರಣ: ಜ.27ಕ್ಕೆ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಕೋರ್ಟ್

January 25, 2020

ಮೈಸೂರು: ಮಾನಸಗಂಗೋತ್ರಿಯಲ್ಲಿ ‘ಫ್ರೀ ಕಾಶ್ಮೀರ್’ ಫಲಕ ಪ್ರದರ್ಶಿಸಿದ ಪ್ರಕರಣ ಸಂಬಂಧ ಸಲ್ಲಿಸಿದ್ದ ಜಾಮೀನು ಅರ್ಜಿ ತೀರ್ಪನ್ನು ನ್ಯಾಯಾ ಲಯವು ಜನವರಿ 27ಕ್ಕೆ ಕಾಯ್ದಿರಿಸಿದೆ. ಈಗಾಗಲೇ ಮಧ್ಯಂತರ ಜಾಮೀನು ಮಂಜೂರಾಗಿರುವ ಪ್ರಕರಣದ ಆರೋಪಿ ನಳಿನಿ ಬಾಲಕುಮಾರ್‍ಗೆ ರೆಗ್ಯುಲರ್ ಬೇಲ್ ನೀಡುವಂತೆ ಆಕೆ ಪರ ಬೆಂಗಳೂರಿನ ಹಿರಿಯ ವಕೀಲ ದ್ವಾರಕಾನಾಥ್ ಹಾಗೂ ತಂಡ, ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಧೀಶ ಜೆರಾಲ್ಡ್ ರುಡಾಲ್ಫ್ ಮಂಡೊನ್ಯಾ ಅವರು,…

ಮಹಾಜನ ಕಾಲೇಜಿನಲ್ಲಿ ಅಪೂರ್ವ ನೋಟು, ನಾಣ್ಯಗಳ ಪ್ರದರ್ಶನ
ಮೈಸೂರು

ಮಹಾಜನ ಕಾಲೇಜಿನಲ್ಲಿ ಅಪೂರ್ವ ನೋಟು, ನಾಣ್ಯಗಳ ಪ್ರದರ್ಶನ

January 25, 2020

ಮೈಸೂರು: 71ನೇ ಗಣರಾಜ್ಯೋತ್ಸವದ ಅಂಗವಾಗಿ ಮೈಸೂರಿನ ಜಯ ಲಕ್ಷ್ಮೀಪುರಂನ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಅಪರೂಪದ ನೋಟು ಮತ್ತು ನಾಣ್ಯಗಳ ಪ್ರದರ್ಶನ ಆಯೋಜಿಸಲಾಗಿದೆ. ಕೊಟಕ್ ಮಹೀಂದ್ರ ಬ್ಯಾಂಕ್‍ನ ನಿವೃತ್ತ ಹಿರಿಯ ವ್ಯವಸ್ಥಾಪಕ ಎಂ.ಎನ್. ಮುರಳೀಕೃಷ್ಣ ಅವರು ಈ ಪ್ರದರ್ಶನವನ್ನು ನಡೆಸಿಕೊಡುತ್ತಿದ್ದಾರೆ. ಕಾಲೇಜಿನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಉಚಿತ ಪ್ರವೇಶದೊಂದಿಗೆ ಆಯೋ ಜಿಸಲಾಗಿದೆ. ರಂಗಾಯಣ ನಿರ್ದೇಶಕ ಅಡ್ಡಂಡ ಸಿ….

ಪ್ರಾದೇಶಿಕ ಉದ್ಯೋಗ ಮೇಳ ಪೂರ್ವಭಾವಿ ಸಭೆ
ಮೈಸೂರು

ಪ್ರಾದೇಶಿಕ ಉದ್ಯೋಗ ಮೇಳ ಪೂರ್ವಭಾವಿ ಸಭೆ

January 25, 2020

ಮೈಸೂರು: ಮಂಡ್ಯ, ಮಡಿ ಕೇರಿ ಸೇರಿದಂತೆ ಮೈಸೂರಿನಲ್ಲಿ ಆಯೋ ಜಿಸಿರುವ ಪ್ರಾದೇಶಿಕ ಮಟ್ಟದಉದ್ಯೋಗ ಮೇಳ ಸಂಬಂಧ ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮ ಅವರ ಅಧ್ಯಕ್ಷತೆ ಯಲ್ಲಿ ಶುಕ್ರವಾರ ಡಿಸಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಈವೇಳೆ ಎಡಿಸಿ ಪೂರ್ಣಿಮ ಮಾತ ನಾಡಿ, ಮಂಡ್ಯ, ಮಡಿಕೇರಿ ಒಳಗೊಂಡಂತೆ ಮೈಸೂರನ್ನು ಕೇಂದ್ರಿಕರಿಸಿ ಪ್ರಾದೇಶಿಕ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಉದ್ಯೋಗ ಮೇಳಕ್ಕೆ ಬರುವ ಅಭ್ಯರ್ಥಿ ಗಳಿಗೆ ಸಾರಿಗೆ ಸೌಲಭ್ಯ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಅಲ್ಲದೆ ಅಭ್ಯರ್ಥಿಗಳು ಹಾಗೂ ಉದ್ಯೋಗ ದಾತರಿಗೆ ಆಹಾರ…

ಮಾಜಿ ಸಿಎಂ ಕುಮಾರಸ್ವಾಮಿ, ನಿಜಗುಣಾನಂದ ಶ್ರೀ ಸೇರಿ 15 ಮಂದಿಗೆ ಜೀವ ಬೆದರಿಕೆ
ಮೈಸೂರು

ಮಾಜಿ ಸಿಎಂ ಕುಮಾರಸ್ವಾಮಿ, ನಿಜಗುಣಾನಂದ ಶ್ರೀ ಸೇರಿ 15 ಮಂದಿಗೆ ಜೀವ ಬೆದರಿಕೆ

January 25, 2020

ಬೆಂಗಳೂರು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಬೆಳಗಾವಿ ಬೈಲೂರು ಮಠದ ನಿಜಗುಣಾನಂದ ಶ್ರೀಗಳು ಸೇರಿದಂತೆ ಹದಿನೈದು ಮಂದಿಗೆ ಅಪರಿಚಿತರಿಂದ ಜೀವ ಬೆದರಿಕೆ ಪತ್ರ ಬಂದಿದೆ ಎಂದು ವರದಿಯಾಗಿದೆ. ಕುಮಾರಸ್ವಾಮಿ, ನಿಜಗುಣಾನಂದ ಶ್ರೀ, ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ದಿನೇಶ್ ಅಮೀನ್ ಮಟ್ಟು, ಪ್ರಕಾಶ್ ರೈ, ಬಿಟಿ ಲಲಿತಾ ನಾಯಕ್, ಬೃಂದಾ ಕಾರಟ್, ಇನ್ನೂ ಅನೇಕರಿಗೆ ಇದೇ ಜನವರಿ 29ರಂದು “ಸಂಹಾರ” ಮಾಡುವೆನೆಂದು ದಾವಣಗೆರೆಯಿಂದ ಅಪರಿಚಿತನೊಬ್ಬ ಪತ್ರ ರವಾನಿಸಿದ್ದಾನೆ. ನಿಜಗುಣಾನಂದ ಶ್ರೀಗಳಿಗೆ ಬಂದ ಪತ್ರದಲ್ಲಿ “ಶ್ರೀಗಳೇ ನಿಮ್ಮನ್ನೂ, ನಿಮ್ಮೊಡನಿರುವ ಧರ್ಮದ್ರೋಹಿಗಳನ್ನು,…

ವೃದ್ಧೆಯಿಂದ ಚಿನ್ನದ ಸರ ಕಳವು: ಆರೋಪಿ ಸೆರೆ
ಮೈಸೂರು

ವೃದ್ಧೆಯಿಂದ ಚಿನ್ನದ ಸರ ಕಳವು: ಆರೋಪಿ ಸೆರೆ

January 25, 2020

ಮೈಸೂರು: ವೃದ್ಧೆಯೊಬ್ಬರಿಂದ ಚಿನ್ನದ ಸರ ಕಿತ್ತುಕೊಂಡು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಗೌಸಿಯಾನಗರ ನಿವಾಸಿ ಫಯಾಜ್ ಪಾಷಾ ಬಂಧಿತ ಆರೋಪಿ, ಜ.23 ರಂದು ಗೌಸಿಯಾನಗರದ ಅರಳೀಮರದ ಬಳಿ ಸರಸ್ವತಿ ಬ್ಯಾಂಕರ್ಸ್ ಗಿರವಿ ಅಂಗಡಿ ಬಳಿ ಚಿನ್ನದ ಸರ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದಾಗ ಗಸ್ತಿನಲ್ಲಿದ್ದ ಉದಯ ಗಿರಿ ಠಾಣೆ ಸಬ್ ಇನ್ಸ್‍ಪೆಕ್ಟರ್ ಜಯಕೀರ್ತಿ ಹಾಗೂ ಸಿಬ್ಬಂದಿಯನ್ನು ಕಂಡು ಪರಾರಿ ಯಾಗಲೆತ್ನಿಸಿದ ಆಸಾಮಿಯನ್ನು ಬಂಧಿಸಿದರು. ಠಾಣೆಗೆ ಕರೆತಂದು ವಿಚಾರಿಸಿದಾಗ ಜನವರಿ 22ರಂದು ಕ್ಯಾತಮಾರನಹಳ್ಳಿ ಸಮುದಾಯ ಭವನದ…

ಸಾರಿಗೆ ಬಸ್ ಹರಿದು ಸ್ಕೂಟರ್ ಸವಾರ ಸಾವು
ಮೈಸೂರು

ಸಾರಿಗೆ ಬಸ್ ಹರಿದು ಸ್ಕೂಟರ್ ಸವಾರ ಸಾವು

January 25, 2020

ಮೈಸೂರು: ನಗರ ಸಾರಿಗೆ ಬಸ್ಸೊಂದು ಹರಿದ ಪರಿಣಾಮ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ಮೈಸೂರಿನ ಎನ್.ಆರ್. ಮೊಹಲ್ಲಾ ಶಿವಾಜಿ ರಸ್ತೆಯಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಮೈಸೂರಿನ ಎನ್.ಆರ್. ಮೊಹಲ್ಲಾ ನಿವಾಸಿ ಶಬ್ಬೀರ್ ಅಹಮದ್ ಖಾನ್(54) ಎಂಬುವರೇ ಸಾವನ್ನಪ್ಪಿದವರು. ಗುರುವಾರ ಸಂಜೆ 4.30 ಗಂಟೆ ವೇಳೆಗೆ ಶಬ್ಬೀರ್ ಅವರು ಹೋಂಡಾ ಆಕ್ಟೀವಾ ದಲ್ಲಿ ಎನ್.ಆರ್.ಮೊಹಲ್ಲಾದ ಶಿವಾಜಿ ರಸ್ತೆ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ನಗರ ಸಾರಿಗೆ ಬಸ್ ಸ್ಮಶಾನ ಬಳಿ ಡಿಕ್ಕಿ ಹೊಡೆಯಿತು. ಪರಿಣಾಮ ಆಯತಪ್ಪಿ ಬಲಗಡೆಗೆ ಬಿದ್ದ…

ಮನುಕುಲದ ಒಳಿತಿಗಾಗಿ ವೈದ್ಯಕೀಯ-ಇಂಜಿನಿಯರಿಂಗ್ ಕ್ಷೇತ್ರ ಕೈಜೋಡಿಸಲಿ: ಕರಾಮುವಿ ಕುಲಪತಿ ವಿದ್ಯಾಶಂಕರ್ ಅಭಿಪ್ರಾಯ
ಮೈಸೂರು

ಮನುಕುಲದ ಒಳಿತಿಗಾಗಿ ವೈದ್ಯಕೀಯ-ಇಂಜಿನಿಯರಿಂಗ್ ಕ್ಷೇತ್ರ ಕೈಜೋಡಿಸಲಿ: ಕರಾಮುವಿ ಕುಲಪತಿ ವಿದ್ಯಾಶಂಕರ್ ಅಭಿಪ್ರಾಯ

January 25, 2020

ಮೈಸೂರು: ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಮತ್ತು ಶಸ್ತ್ರಚಿಕಿತ್ಸಾ ತಜ್ಞರಿಗಾಗಿ ಮೈಸೂರಿನ ಕಾವೇರಿ ಹಾರ್ಟ್ ಅಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಗುದನಾಳದ ಕ್ಯಾನ್ಸರ್ ಮತ್ತು ಜಿಐ ಸ್ಟೇಪ್ಲರ್ ಚಿಕಿತ್ಸಾ ವಿಧಾನದ ಬಗೆಗೆ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಲಾಯಿತು. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಯ ವೈದ್ಯಕೀಯ ಪಿಜಿ ವಿದ್ಯಾರ್ಥಿಗಳು ಮತ್ತು ಶಸ್ತ್ರಚಿಕಿತ್ಸಕರಿಗಾಗಿ ವೈದ್ಯ ಶಿಕ್ಷಣದ ಮುಂದುವರಿದ ಭಾಗವಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ರ್ಯಾಡಿಸನ್ ಬ್ಲ್ಯೂ ಹೋಟೆಲ್‍ನಲ್ಲಿ ನಡೆದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿ ಯಾಗಿದ್ದ ಕರ್ನಾಟಕ ರಾಜ್ಯ ಮುಕ್ತ…

`ವಿ.ಶ್ರೀನಿವಾಸಪ್ರಸಾದ್-ನಾವು ಕಂಡಂತೆ’
ಮೈಸೂರು

`ವಿ.ಶ್ರೀನಿವಾಸಪ್ರಸಾದ್-ನಾವು ಕಂಡಂತೆ’

January 25, 2020

ಮೈಸೂರು: ಸಂಸದ ವಿ.ಶ್ರೀನಿ ವಾಸಪ್ರಸಾದ್ ಅವರನ್ನು ಕುರಿತು ಧಾರ್ಮಿಕ, ಸಾಹಿತ್ಯ, ಸಾಂಸ್ಕøತಿಕ ಹಾಗೂ ಚಿಂತಕರ ಬರಹಗಳನ್ನು ಒಳಗೊಂಡ `ವಿ.ಶ್ರೀನಿವಾಸಪ್ರಸಾದ್- ನಾವು ಕಂಡಂತೆ’ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಜ.26ರಂದು ಬೆಳಿಗ್ಗೆ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ನಡೆಯಲಿದೆ ಎಂದು ಸಮಾನತೆ-ಸ್ವಾಭಿಮಾನ-ಸ್ವಾವಲಂಬನೆ ಪ್ರತಿಷ್ಠಾನ ತಿಳಿಸಿದೆ. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಮುಳ್ಳೂರು ನಂಜುಂಡ ಸ್ವಾಮಿ ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿರಿಯ ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ ಕೃತಿ ಬಿಡುಗಡೆ ಮಾಡಲಿದ್ದು, ಹಿರಿಯ ಸಾಹಿತಿ ಡಾ. ರಂಜಾನ್ ದರ್ಗಾ ಕೃತಿ…

ಫೆ.1ರ ರಥಸಪ್ತಮಿಯಂದು ಸಾಮೂಹಿಕ ಸೂರ್ಯ ನಮಸ್ಕಾರ
ಮೈಸೂರು

ಫೆ.1ರ ರಥಸಪ್ತಮಿಯಂದು ಸಾಮೂಹಿಕ ಸೂರ್ಯ ನಮಸ್ಕಾರ

January 25, 2020

ಮೈಸೂರು: ರಥಸಪ್ತಮಿ ಅಂಗವಾಗಿ ಫೆ.1ರಂದು ಮುಂಜಾನೆ 5.30 ಗಂಟೆಗೆ ಮೈಸೂರು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ 108 ಸಾಮೂ ಹಿಕ ಸೂರ್ಯ ನಮಸ್ಕಾರ ಕಾರ್ಯ ಕ್ರಮ ನಡೆಯಲಿದೆ. ಮೈಸೂರು ಯೋಗ ಒಕ್ಕೂಟ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸುಮಾರು 800 ಮಂದಿ ಯೋಗಪಟುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಯೋಗ ಒಕ್ಕೂಟದ ಅಧ್ಯಕ್ಷ ಡಾ. ಬಿ.ಪಿ.ಮೂರ್ತಿ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದೇ ವೇಳೆ ಸೂರ್ಯ ಯಜ್ಞ ಸಹ ನಡೆಯಲಿದ್ದು, ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಳ್ಳಲಿ…

1 695 696 697 698 699 1,611
Translate »