ಕೆಪಿಸಿಸಿ ಅಧ್ಯಕ್ಷರ ನೇಮಕ ಮುಂದಿನ ವಾರ ನಿರ್ಧಾರ
ಮೈಸೂರು

ಕೆಪಿಸಿಸಿ ಅಧ್ಯಕ್ಷರ ನೇಮಕ ಮುಂದಿನ ವಾರ ನಿರ್ಧಾರ

January 25, 2020

ಮೈಸೂರು: ದೆಹಲಿ ಚುನಾ ವಣೆಯ ಒತ್ತಡದಿಂದಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ನೇಮಕಾತಿ ಮುಂದಕ್ಕೆ ಹೋಗಿದ್ದು, ಮುಂದಿನ ವಾರ ಎಲ್ಲವೂ ತೀರ್ಮಾನವಾಗುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಸುತ್ತೂರು ಮಹಾ ಜಾತ್ರೆಗೆ ತೆರಳುವ ಮುನ್ನ ಮೈಸೂ ರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕ ಆದಷ್ಟು ಬೇಗ ಇತ್ಯರ್ಥವಾಗಬೇಕಿದೆ. ಈ ಕುರಿತು ವರಿಷ್ಠರೊಂದಿಗೆ ಮಾತನಾಡಿದ್ದೇನೆ. ಬಹುಶಃ ಮುಂದಿನ ವಾರದಲ್ಲಿ ನೇಮಕವಾಗುವ ಸಾಧ್ಯತೆಗಳಿವೆ ಎಂದರು.

ಕೆಪಿಸಿಸಿ ಅಧ್ಯಕ್ಷರು ಯಾರಾಗಬೇಕು ಎಂಬುದು ಹೈಕ ಮಾಂಡ್‍ಗೆ ಬಿಟ್ಟ ವಿಚಾರ. ಎಲ್ಲರ ಬಗ್ಗೆಯೂ ಪರ ವಿರೋಧ ಚರ್ಚೆ ಅಭಿಪ್ರಾಯವಿದ್ದೇ ಇರುವುದು ಸಹಜ. ಆದರೆ ಹೈಕಮಾಂಡ್ ತೀರ್ಮಾನವೇ ಅಂತಿಮ. ಹೈಕ ಮಾಂಡ್ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ನಾವೆ ಲ್ಲರೂ ಒಪ್ಪಲು ಸಿದ್ದರಿದ್ದೇವೆ ಎಂದು ಹೇಳಿದರು.

ನಾಲ್ಕು ಮಂದಿ ಕಾರ್ಯಾಧ್ಯಕ್ಷರಾಗುತ್ತಿರುವುದು ಊಹಾ ಪೋಹ. ಯಾರೋ ಹೇಳಿದರು, ಯಾರೋ ಬರೆದರು. ಆದರೆ ಅದನ್ನು ಯಾರೂ ಅಧಿಕೃತವಾಗಿ ಹೇಳಿಲ್ಲ. ಈ ಸುದ್ದಿ ಎಲ್ಲಿಂದ ಬಂತೋ ತಿಳಿದಿಲ್ಲ. ಹಿಂದೆ ಡಿ.ಕೆ. ಶಿವಕುಮಾರ್, ಎಸ್.ಆರ್.ಪಾಟೀಲ್ ಅವರೆಲ್ಲರೂ ಕಾರ್ಯಾಧ್ಯಕ್ಷರಾಗಿದ್ದರು ಎಂದು ತಿಳಿಸಿದರು.

ಅಭಿವೃದ್ಧಿ ಕುಂಠಿತ: ರಾಜ್ಯದ ಅಭಿವೃದ್ಧಿ, ಜನರ ಸಮಸ್ಯೆ ಗಳಿಗೆ ಸ್ಪಂದಿಸುವ ಒಳ್ಳೆಯ ಮಂತ್ರಿ ಮಂಡಲ ರಚನೆಯಾಗ ಬೇಕು. ಇಷ್ಟು ದಿನ ಖಾಲಿ ಬಿಟ್ಟು ಒಬ್ಬೊಬ್ಬರೇ 3-4 ಖಾತೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸರಿಯಾದ ಆಡಳಿತ ಇಲ್ಲ. ಮಂತ್ರಿಗಳೂ ಇಲ್ಲ, ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳಿಂದಾಗಿ ಯಾವ ಅಭಿವೃದ್ಧಿ ಕೆಲಸಗಳೂ ನಡೆಯುತ್ತಿಲ್ಲ ಎಂದು ದಿನೇಶ್ ಗುಂಡೂರಾವ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಾಯಿಗೆ ಬಂದಂತೆ ಮಾತನಾಡುವ ಡಿಸಿಎಂ ಅಶ್ವಥ್ ನಾರಾಯಣ್: ಹಿಂದಿನ ಸರ್ಕಾರ ಸಮಾಜಘಾತಕ ಶಕ್ತಿಗಳಿಗೆ ಕಡಿವಾಣ ಹಾಕದೆ ಅವರಿಗೆ ಪ್ರೋತ್ಸಾಹ ನೀಡಿದ್ದರಿಂದಲೇ ಇಂದಿನ ಬಾಂಬ್‍ನಂತಹ ಆತಂಕ ಪರಿಸ್ಥಿತಿಗೆ ಕಾರಣ ವಾಗಿದೆ ಎಂಬ ಡಿಸಿಎಂ ಡಾ.ಅಶ್ವಥ್‍ನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ಡಿಸಿಎಂ ಆದ ನಂತರ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಪ್ರಚೋದನಕಾರಿ ಯಾಗಿ ಮಾತನಾಡಿ ಗಲಭೆ ಸೃಷ್ಟಿಸಿ ಇನ್ನೊಬ್ಬರನ್ನು ದೂಷಿಸುವುದಕ್ಕೆ ಮುಂದಾಗುತ್ತಾರೆ ಎಂದು ಟೀಕಿಸಿದರು.

ಬಿಜೆಪಿ ನಡವಳಿಕೆಗೆ ಆಕ್ರೋಶ: ಮಂಗಳೂರು ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಬಿಜೆಪಿಯವರು ಹೇಗೆಂದರೆ, ಘಟನೆಯ ಹಿಂದೆ ಮುಸ್ಲಿಂ ಯಾರಾದರೂ ಇದ್ದರೆ ಎಲ್ಲರೂ ಬೀದಿಗೆ ಬಂದು ಬಿಡುತ್ತಾರೆ. ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಟ್ವೀಟ್ ಮೇಲೆ ಟ್ವೀಟ್ ಮಾಡೋದು, ಅದು ಇದು ಎಂದು ಹೇಳುತ್ತಾರೆ. ಈಗ ಆದಿತ್ಯರಾವ್ ಹೆಸರು ಬಂತಲ್ಲ. ಅವನು ಮಾನಸಿಕ ಅಸ್ವಸ್ಥ ಇರಬೇಕು. ಅವನಿಗೆ ಬೇರೇನೋ ಆಗಿರಬೇಕು ಎಂದೆಲ್ಲಾ ಹೇಳಿಕೊಂಡು ತಿರುಗು ತ್ತಾರೆ. ತನಿಖೆ ಇನ್ನೂ ಮುಗಿದೇ ಇಲ್ಲ. ಎಷ್ಟಿದೆ ನೋಡಿ ವ್ಯತ್ಯಾಸ. ಅವರ ನಡವಳಿಕೇನೇ ಬೇರೆ. ತಪ್ಪು ಯಾರೇ ಮಾಡಿರಲಿ, ಯಾರನ್ನೂ ರಕ್ಷಿಸಿಕೊಳ್ಳಬಾರದು. ಇಂತಹ ಕೃತ್ಯಗಳಿಗೆ ಅವರು ಯಾರೇ ಆಗಿರಲಿ ಕ್ರಮ ವಹಿಸಬೇಕು. ರಾಜಕೀಯ ಬಣ್ಣ ಕಟ್ಟುವುದು ಒಳ್ಳೆಯದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Translate »