ಸರ್ಕಾರ ಇರುವುದು ಯಾರನ್ನೋ ಮಂತ್ರಿ ಮಾಡುವುದಕ್ಕಲ್ಲ… ರಾಮಲಿಂಗಾ ರೆಡ್ಡಿಗೆ ದಿನೇಶ್ ಗುಂಡೂರಾವ್ ಟಾಂಗ್
ಮೈಸೂರು

ಸರ್ಕಾರ ಇರುವುದು ಯಾರನ್ನೋ ಮಂತ್ರಿ ಮಾಡುವುದಕ್ಕಲ್ಲ… ರಾಮಲಿಂಗಾ ರೆಡ್ಡಿಗೆ ದಿನೇಶ್ ಗುಂಡೂರಾವ್ ಟಾಂಗ್

December 24, 2018

ಜಮಖಂಡಿ: ಸರ್ಕಾರ ಇರುವುದು ಪಕ್ಷದ ಕಾರ್ಯ ಕ್ರಮಗಳನ್ನು ಅನುಷ್ಠಾನ ತರುವುದಕ್ಕೇ ಹೊರತು, ಯಾರನ್ನೋ ಮಂತ್ರಿ ಮಾಡುವುದಕ್ಕಲ್ಲ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಟಾಂಗ್ ನೀಡಿದ್ದಾರೆ.

ಜಮಖಂಡಿಯಲ್ಲಿ ಸುದ್ದಿಗಾರರ ಜೊತೆ ಮಾತ ನಾಡಿದ ಅವರು, ನಮಗೆ ಪಕ್ಷ ಮುಖ್ಯವೇ ಹೊರತು, ವ್ಯಕ್ತಿ ಮುಖ್ಯವಲ್ಲ. ನಮ್ಮ ಸರ್ಕಾರ ಇರುವುದು ಯಾರನ್ನೋ ಮಂತ್ರಿ ಮಾಡುವುದಕ್ಕಲ್ಲ. ನಾನೂ ಸಹ ಸಚಿವ ಸ್ಥಾನವನ್ನು ಬಿಟ್ಟುಕೊಟ್ಟಿದ್ದೇನೆ ಎಂದು ಹೇಳಿದರು.

ಪಕ್ಷದ ಪರವಾಗಿರುವವರಿಗೆ ಗೌರವ ಹೆಚ್ಚುತ್ತದೆ. ಎಲ್ಲಾ ಸಂದರ್ಭದಲ್ಲೂ ಸ್ಥಾನಮಾನ ಸಿಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ರಾಮಲಿಂಗಾ ರೆಡ್ಡಿ ಹಿರಿಯರಿದ್ದಾರೆ. ಅವರಿಗೆ ಅಗೌರವ ತೋರುವುದಿಲ್ಲ. ಮುಂದಿನ ಚುನಾವಣೆಗೆ ಅವರನ್ನು ಬಳಸಿಕೊಳ್ಳುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Translate »