ಮೈಸೂರು

RCEP ಒಪ್ಪಂದ ಮುಂದೂಡಿಕೆ?
ಮೈಸೂರು

RCEP ಒಪ್ಪಂದ ಮುಂದೂಡಿಕೆ?

November 4, 2019

ಬ್ಯಾಂಕಾಕ್‌, ನ.೩-ದೇಶಾದ್ಯಂತ ಉದ್ದಿಮೆ ಹಾಗೂ ಕೃಷಿ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ಆರ್‌ಸಿಇಪಿ (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ) ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆ ಮುಂದೂಡುವ ಸಾಧ್ಯತೆಗಳು ಕಂಡು ಬಂದಿವೆ. ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಆಸಿಯನ್ ದೇಶಗಳ ಸಮ್ಮೇ ಳನದಲ್ಲಿ ಆರ್‌ಸಿಇಪಿ ಒಪ್ಪಂದಕ್ಕೆ ಭಾರತವೂ ಸೇರಿ ಹತ್ತು ದೇಶಗಳು ಸಹಿ ಹಾಕಲಿವೆ ಎಂದು ಹೇಳಲಾಗಿತ್ತು. ಆದರೆ ಭಾರತವು ಕೊನೇ ಕ್ಷಣದಲ್ಲಿ ಕೆಲವು ಬೇಡಿಕೆಗಳನ್ನು ಹಾಗೂ ಪ್ರಶ್ನೆಗಳನ್ನು ಮುಂದಿಟ್ಟಿ ರುವ ಕಾರಣ ಒಪ್ಪಂದ ಮುಂದೂಡುವ ಸಾಧ್ಯತೆಗಳು ದಟ್ಟವಾಗಿವೆ. ಒಪ್ಪಂದದ ಎಲ್ಲಾ…

ಸುಲಭವಾಗಿ ಉದ್ಯಮ ನಡೆಸಲು ಭಾರತಕ್ಕೆ ಬನ್ನಿ
ಮೈಸೂರು

ಸುಲಭವಾಗಿ ಉದ್ಯಮ ನಡೆಸಲು ಭಾರತಕ್ಕೆ ಬನ್ನಿ

November 4, 2019

ಬ್ಯಾಂಕಾಕ್,ನ.೩-ಭಾರತದಲ್ಲಿ ಸುಲಭವಾಗಿ ಉದ್ಯಮ ನಡೆಸಲು ಇದು ಸೂಕ್ತ ಸಮಯ. ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ಹೂಡಿಕೆದಾರರಿಗೆ ಕರೆ ನೀಡಿದರು. ಆದಿತ್ಯ ಬಿರ್ಲಾ ಗ್ರೂಪ್‌ನ ಸುವರ್ಣ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರಿಯಾತ್ಮಕ ವಾಗಿ ಉದ್ಯಮ ಆರಂಭಿಸಲು ಭಾರತಕ್ಕೆ ಬನ್ನಿ. ಉತ್ತಮ ಪ್ರವಾಸಿ ಸ್ಥಳಗಳು ಹಾಗೂ ಉತ್ತಮ ಆತಿಥ್ಯ ಭಾರತದಲ್ಲಿ ಸಿಗುತ್ತದೆ. ಭಾರತವು ನಿಮ್ಮನ್ನು ಮುಕ್ತ ಬಾಹುಗಳಿಂದ ಅಪ್ಪಿಕೊಳ್ಳಲು ಕಾಯುತ್ತಿದೆ ಎಂದು ಮೋದಿ ವಿದೇಶಿ ಹೂಡಿಕೆದಾರರನ್ನು ಆಹ್ವಾನಿಸಿದರು. ಭಾರತ ಸರ್ಕಾರದ…

ಕಾರಂಜಿಕೆರೆ ಅಂಗಳದಲ್ಲಿ ಮತ್ತೆ `ಚಿಟ್ಟೆ ಪಾರ್ಕ್’
ಮೈಸೂರು

ಕಾರಂಜಿಕೆರೆ ಅಂಗಳದಲ್ಲಿ ಮತ್ತೆ `ಚಿಟ್ಟೆ ಪಾರ್ಕ್’

November 4, 2019

ಮೈಸೂರು,ನ.೩- ಶುದ್ಧ ನೀರಿನಿಂದ ತುಂಬಿ ತುಳು ಕುತ್ತಾ ಸೊಬಗನ್ನು ಹೆಚ್ಚಿಸಿಕೊಂಡಿರುವ ಮೈಸೂರಿನ ಕಾರಂಜಿಕೆರೆ ಅಂಗಳದಲ್ಲಿ ಇದೀಗ ಮತ್ತೇ `ಚಿಟ್ಟೆಗಳ ಉದ್ಯಾನ’ ತಲೆ ಎತ್ತಿದ್ದು, ೨೫ಕ್ಕೂ ಹೆಚ್ಚಿನ ಬಗೆಯ ಚಿಟ್ಟೆಗಳ ಕಲರವ ಆರಂಭವಾಗಿ ಪ್ರವಾಸಿಗರ ಮನಸೂರೆಗೊಳ್ಳುತ್ತಿವೆ. ಚಿಣ್ಣರೂ ಸೇರಿದಂತೆ ಎಲ್ಲಾ ವಯೋಮಾನದವರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ `ಚಿಟ್ಟೆಗಳ ಉದ್ಯಾ ನವನ’ ಮತ್ತೊಮ್ಮೆ ತಲೆಎತ್ತಿದೆ. ೨ ಲಕ್ಷ ರೂ. ವೆಚ್ಚದಲ್ಲಿ ರೂಪುಗೊಂಡಿರುವ ಚಿಟ್ಟೆ ಉದ್ಯಾನದಲ್ಲಿ ಸೆಲ್ಫಿ ಪಾಯಿಂಟ್, ಚಿಟ್ಟೆಯ ಮೈಯುಳ್ಳ ಅಡವಿ ದೇವಿಯ ಮುಖ ಇರುವ ಪ್ರತಿಮೆ, ಸಣ್ಣ ಜಲಪಾತದ…

ಕೊಡಗಿನ ಹೋಂ ಸ್ಟೇನಲ್ಲಿ ರೇವ್ ಪಾರ್ಟಿ
ಮೈಸೂರು

ಕೊಡಗಿನ ಹೋಂ ಸ್ಟೇನಲ್ಲಿ ರೇವ್ ಪಾರ್ಟಿ

November 4, 2019

ಗೋಣಿಕೊಪ್ಪ, ನ.೩-ಕೊಡಗಿನಲ್ಲಿ ವಿವಿಧ ರಾಜ್ಯಗಳ ಯುವಕ-ಯುವತಿಯರ ರೇವ್ ಪಾರ್ಟಿ ನಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ವಿರಾಜ ಪೇಟೆ ತಾಲೂಕು ಪೊನ್ನಂಪೇಟೆ ಸಮೀಪದ ನಲ್ಲೂರು ಗ್ರಾಮದ ಹೋಂ ಸ್ಟೇನಲ್ಲಿ ರೇವ್ ಪಾರ್ಟಿ ಆಯೋಜಿಸಿದ್ದ ಹೈದರಾಬಾದ್‌ನ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವ ರನ್ನು ಪೊಲೀಸರು ಬಂಧಿಸಿದ್ದಾರೆ. ಪಾರ್ಟಿಯಲ್ಲಿ ಬಳಸುತ್ತಿದ್ದ ಗಾಂಜಾ ಮತ್ತು ಮದ್ಯವನ್ನು ವಶಪಡಿಸಿಕೊಂಡಿ ರುವ ಪೊಲೀಸರು, ಪಾರ್ಟಿ ನಡೆಯುತ್ತಿದ್ದ ವೈಲ್ಡ್ ಹೆವನ್ ಹೋಂ ಸ್ಟೇ ಮಾಲೀಕ ಪುಲ್ಲಂಗಡ ಕೆ.ಮುತ್ತಪ್ಪ ಅಲಿಯಾಸ್ ವಿವೇಕ್ (೨೫), ಹೈದರಾಬಾದ್‌ನ ವಿಜ್ಞಾನ ಭಾರತಿ ಇನ್ಸ್ಟಿಟ್ಯೂಟ್ ಆಫ್…

ಸಿದ್ದರಾಮಯ್ಯಗೆ ಕಾಮನ್‌ಸೆನ್ಸ್ ಇಲ್ಲ
ಮೈಸೂರು

ಸಿದ್ದರಾಮಯ್ಯಗೆ ಕಾಮನ್‌ಸೆನ್ಸ್ ಇಲ್ಲ

November 4, 2019

ಬೆಂಗಳೂರು, ನ.೩-ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾ ಯಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಕಾಮನ್‌ಸೆನ್ಸ್ ಇಲ್ಲ. ಓರ್ವ ವಕೀಲರಾಗಿ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ. ಅವರು ವಾಸ್ತವಿಕ ಪ್ರಜ್ಞೆ ಇಲ್ಲದೇ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅವರು ಮಾತನಾಡಿದ ವೀಡಿಯೊ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ಶಾಸಕರು ಅವರದೇ ಆದ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದೆ ಏನು ಮಾಡಬೇಕು ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ…

ಗುಂಪು ಮನೆ ಯೋಜನೆಗಿಲ್ಲ ಸರ್ಕಾರದ ಗ್ರೀನ್ ಸಿಗ್ನಲ್
ಮೈಸೂರು

ಗುಂಪು ಮನೆ ಯೋಜನೆಗಿಲ್ಲ ಸರ್ಕಾರದ ಗ್ರೀನ್ ಸಿಗ್ನಲ್

November 4, 2019

ಮೈಸೂರು, ನ. ೩- ಸೂರಿಲ್ಲದ ಸಾಮಾನ್ಯ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಮನೆ ನಿರ್ಮಿಸಿಕೊಡುವ ವಸತಿ ಯೋಜನೆಗೆ ಸರ್ಕಾರ ಅನುಮೋದನೆ ನೀಡದ ಕಾರಣ ವಿಳಂಬವಾಗುತ್ತಿದೆ. ಮೈಸೂರಿನ ವಿಜಯನಗರ ೨ನೇ ಹಂತ ಬಡಾವಣೆಯಲ್ಲಿ ರಿಂಗ್ ರೋಡ್‌ಗೆ ಹೊಂದಿಕೊಂಡಂತಿರುವ ಮುಡಾದ ಸುಮಾರು ೧೮ ಎಕರೆ ಜಾಗದಲ್ಲಿ ೧೪ ಅಂತ ಸ್ತಿನ ಕಟ್ಟಡವನ್ನು ನಿರ್ಮಿಸಿ ೧,೩೪೮ ಮನೆಗಳನ್ನು ಅರ್ಹ ಫಲಾ ನುಭವಿಗಳಿಗೆ ನಿಯಮಾನುಸಾರ ಹಂಚಿಕೆ ಮಾಡುವ ಮಹತ್ವಾಕಾಂಕ್ಷೆ ಯೋಜನೆಯನ್ನು ೨೦೧೭ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಿದ್ಧಗೊಳಿಸಿತ್ತು. ಹೈಟೆನ್ಷನ್ ರಸ್ತೆ, ರಿಂಗ್ ರಸ್ತೆ, ಶೇಷಾದ್ರಿಪುರಂ…

ಯಡಿಯೂರಪ್ಪ ವೀಡಿಯೊ ರಿಲೀಸ್ ಮಾಡಿದ್ದು ಸಿದ್ದರಾಮಯ್ಯ
ಮೈಸೂರು

ಯಡಿಯೂರಪ್ಪ ವೀಡಿಯೊ ರಿಲೀಸ್ ಮಾಡಿದ್ದು ಸಿದ್ದರಾಮಯ್ಯ

November 4, 2019

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬೆಂಗಳೂರು, ನ.೩-ಅನರ್ಹ ಶಾಸಕರ ಕುರಿತು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿದ ವೀಡಿಯೋ ವನ್ನು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ರಿಲೀಸ್ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ಸುದ್ದಿಗಾರರ ಜೊತೆ ಮಾತ ನಾಡಿದ ಅವರು, ಈ ಹಿಂದೆ ದಿವಂಗತ ಅನಂತಕುಮಾರ್ ಹಾಗೂ ಯಡಿಯೂರಪ್ಪ ಮಾತನಾಡಿದ್ದ ವೀಡಿಯೊ ಬಿಡು ಗಡೆಗೊಂಡಿತ್ತು. ಅದರ ಹಿಂದೆ ಸಿದ್ದರಾಮಯ್ಯ ಕೈವಾಡವಿತ್ತು. ಈಗ ಯಡಿ ಯೂರಪ್ಪ ಅವರು ಮಾತನಾಡಿರುವ…

ಬಹುತೇಕ ರಾಜಕಾರಣಿಗಳಿಗೆ ಕನ್ನಡದ ಬಗ್ಗೆ ಅಭಿಮಾನವಿಲ್ಲ
ಮೈಸೂರು

ಬಹುತೇಕ ರಾಜಕಾರಣಿಗಳಿಗೆ ಕನ್ನಡದ ಬಗ್ಗೆ ಅಭಿಮಾನವಿಲ್ಲ

November 4, 2019

ಮೈಸೂರು, ನ.೩(ಆರ್‌ಕೆ)- ನಮ್ಮಲ್ಲಿ ಬಹುತೇಕ ರಾಜಕಾರಣಿಗಳಿಗೆ ಕನ್ನಡ ಭಾಷೆ ಬಗ್ಗೆ ಅಭಿ ಮಾನವೇ ಇಲ್ಲ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗ ವಾನ್ ಅವರು ಇಂದಿಲ್ಲಿ ವಿಷಾದ ವ್ಯಕ್ತಪಡಿಸಿದರು. ಮೈಸೂರಿನ ಕೆ.ಜಿ.ಕೊಪ್ಪಲು ಬಳಿ ಕೋರ್ಟ್ ಮುಂಭಾ ಗದ ನೇಗಿಲಯೋಗಿ ಮರಳೇಶ್ವರ ಸೇವಾ ಭವನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾ ಘಟಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ವೇದಿಕೆ ಮೇಲೆ ಕನ್ನಡದ ಬಗ್ಗೆ ಉದ್ದುದ್ದ ಭಾಷಣ ಮಾಡುವ ಬಹುತೇಕ ರಾಜಕಾರಣಿಗಳಿಗೆ ಮಾತೃಭಾಷೆ ಮೇಲೆ ಪ್ರೀತಿ, ಅಭಿ ಮಾನವೇ ಇಲ್ಲದಿರುವುದು ವಿಷಾದನೀಯ ಎಂದರು….

ಕೈಗಾರಿಕೆಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಅವಶ್ಯ
ಮೈಸೂರು

ಕೈಗಾರಿಕೆಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಅವಶ್ಯ

November 4, 2019

ಮೈಸೂರು, ನ.೩(ಎಂಕೆ)- ಕಾರ್ಖಾನೆಗಳ ಸುರಕ್ಷತೆ ಮತ್ತು ಅಭಿವೃದ್ದಿಗೆ ಕೇಂದ್ರ ಶಾಸನ ಕಾಯಿದೆ ಅಳವಡಿಕೆ ಅಗತ್ಯವಾಗಿದೆ ಎಂದು ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಆರೋಗ್ಯ ಮತ್ತು ಸುರಕ್ಷತೆಯ ನಿವೃತ್ತ ನಿರ್ದೇಶಕ ಡಿ.ಸಿ.ಜಗದೀಶ್ ಹೇಳಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ)ದ ವತಿಯಿಂದ ಆಯೋ ಜಿಸಿದ್ದ ‘ಕೈಗಾರಿಕಾ ಆರೋಗ್ಯ, ಸುರಕ್ಷತೆಗೆ ಶಿಫಾರಸ್ಸು ಮಾಡಲಾದ ಅಭ್ಯಾಸಗಳು ಮತ್ತು ಕಾರ್ಮಿಕ ವೇತನ ಸಂಹಿತೆ-೨೦೧೯’ರ ಕುರಿತ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೈಗಾರಿಕೆಗಳಲ್ಲಿ ಸುರಕ್ಷತೆ ಬಹಳ ಗಂಭೀರವಾದ ವಿಚಾರ ವಾಗಿದೆ. ಕಾರ್ಖಾನೆಗಳಲ್ಲಿ ಉಪಯೋಗಿಸುವ…

ವ್ಯಕ್ತಿತ್ವ ವಿಕಾಸಗೊಳಿಸುವುದೇ ನಿಜವಾದ ವಿದ್ಯೆ
ಮೈಸೂರು

ವ್ಯಕ್ತಿತ್ವ ವಿಕಾಸಗೊಳಿಸುವುದೇ ನಿಜವಾದ ವಿದ್ಯೆ

November 4, 2019

ಮೈಸೂರು,ನ.೩(ವೈಡಿಎಸ್)-ಯಾವುದು ಮನುಷ್ಯನ ವ್ಯಕ್ತಿತ್ವವನ್ನು ವಿಕಾಸ ಮಾಡುತ್ತದೋ ಅದೇ ನಿಜವಾದ ವಿದ್ಯೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮೈಸೂರು ವಿವಿ ಸಮಾಜಕಾರ್ಯ ಅಧ್ಯಯನ ವಿಭಾಗವು ಪ್ರೊ.ವೈ.ಎಸ್.ಸಿದ್ದೇಗೌಡ ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣದ ಸಮಾರೋಪದಲ್ಲಿ ಮಾತನಾಡಿದ ಅವರು, ಯಾವ ದೇಶದಲ್ಲಿ ಶಿಕ್ಷಣ ಹಾಗೂ ಶಿಕ್ಷಕರು ಆಂತರಿಕವಾಗಿ ಅತ್ಯುನ್ನತ ಜ್ಞಾನ ಹೊಂದಿರುತ್ತಾರೋ ಆ ದೇಶ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು….

1 785 786 787 788 789 1,611
Translate »