ಯಡಿಯೂರಪ್ಪ ವೀಡಿಯೊ ರಿಲೀಸ್ ಮಾಡಿದ್ದು ಸಿದ್ದರಾಮಯ್ಯ
ಮೈಸೂರು

ಯಡಿಯೂರಪ್ಪ ವೀಡಿಯೊ ರಿಲೀಸ್ ಮಾಡಿದ್ದು ಸಿದ್ದರಾಮಯ್ಯ

November 4, 2019

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಬೆಂಗಳೂರು, ನ.೩-ಅನರ್ಹ ಶಾಸಕರ ಕುರಿತು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿದ ವೀಡಿಯೋ ವನ್ನು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ರಿಲೀಸ್ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ಸುದ್ದಿಗಾರರ ಜೊತೆ ಮಾತ ನಾಡಿದ ಅವರು, ಈ ಹಿಂದೆ ದಿವಂಗತ ಅನಂತಕುಮಾರ್ ಹಾಗೂ ಯಡಿಯೂರಪ್ಪ ಮಾತನಾಡಿದ್ದ ವೀಡಿಯೊ ಬಿಡು ಗಡೆಗೊಂಡಿತ್ತು. ಅದರ ಹಿಂದೆ ಸಿದ್ದರಾಮಯ್ಯ ಕೈವಾಡವಿತ್ತು. ಈಗ ಯಡಿ ಯೂರಪ್ಪ ಅವರು ಮಾತನಾಡಿರುವ ವೀಡಿಯೊ ರಿಲೀಸ್ ಆಗಿರುವ ಹಿಂದೆಯೂ ಸಿದ್ದರಾಮಯ್ಯ ಇದ್ದಾರೆ. ಮತ್ತೆ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆಯಿಂದ ರಾಜಕಾರಣ ಮಾಡಲು ಅವರು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕೋರ್ ಕಮಿಟಿ ಸಭೆಯ ವೀಡಿಯೊ ರಿಲೀಸ್ ಪ್ರಕರಣದ ಕುರಿತಾಗಿ ಬಿಜೆಪಿ ಆಂತರಿಕ ತನಿಖೆ ನಡೆಸುತ್ತಿದೆ. ಸಭೆಯಲ್ಲಿ ರೆಕಾರ್ಡ್ ಮಾಡಿದವರು ಯಾರು? ಅದನ್ನು ಮಾಧ್ಯಮಗಳಿಗೆ ನೀಡಿದವರು ಯಾರು? ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ನಳೀನ್‌ಕುಮಾರ್ ಕಟೀಲ್ ಹೇಳಿದರು.

Translate »