RCEP ಒಪ್ಪಂದ ಮುಂದೂಡಿಕೆ?
ಮೈಸೂರು

RCEP ಒಪ್ಪಂದ ಮುಂದೂಡಿಕೆ?

November 4, 2019

ಬ್ಯಾಂಕಾಕ್‌, ನ.೩-ದೇಶಾದ್ಯಂತ ಉದ್ದಿಮೆ ಹಾಗೂ ಕೃಷಿ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ಆರ್‌ಸಿಇಪಿ (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ) ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆ ಮುಂದೂಡುವ ಸಾಧ್ಯತೆಗಳು ಕಂಡು ಬಂದಿವೆ.

ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಆಸಿಯನ್ ದೇಶಗಳ ಸಮ್ಮೇ ಳನದಲ್ಲಿ ಆರ್‌ಸಿಇಪಿ ಒಪ್ಪಂದಕ್ಕೆ ಭಾರತವೂ ಸೇರಿ ಹತ್ತು ದೇಶಗಳು ಸಹಿ ಹಾಕಲಿವೆ ಎಂದು ಹೇಳಲಾಗಿತ್ತು. ಆದರೆ ಭಾರತವು ಕೊನೇ ಕ್ಷಣದಲ್ಲಿ ಕೆಲವು ಬೇಡಿಕೆಗಳನ್ನು ಹಾಗೂ ಪ್ರಶ್ನೆಗಳನ್ನು ಮುಂದಿಟ್ಟಿ ರುವ ಕಾರಣ ಒಪ್ಪಂದ ಮುಂದೂಡುವ ಸಾಧ್ಯತೆಗಳು ದಟ್ಟವಾಗಿವೆ.

ಒಪ್ಪಂದದ ಎಲ್ಲಾ ೨೦ ಅಧ್ಯಾಯಗಳು ಪೂರ್ಣಗೊಂಡಿವೆ. ಆದರೆ ಭಾರತ ಮಾತ್ರ ಅಂತಿಮ ನಿರ್ಧಾರಕ್ಕೆ ಬರಬೇಕಾಗಿದೆ ಎಂದು ಒಪ್ಪಂದದ ಬಗ್ಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದಕ್ಕೆ ಪೂರಕ ವೆಂಬAತೆ ಆಸಿಯನ್ ರಾಷ್ಟçಗಳ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಆರ್‌ಸಿಇಪಿ ಒಪ್ಪಂದದ ಬಗ್ಗೆ ಪ್ರಸ್ತಾ ಪಿಸದಿದ್ದರೂ ಎಲ್ಲಾ ದೇಶಗಳ ಮಾರುಕಟ್ಟೆಗಳ ಸಂಪರ್ಕ ಅರ್ಥ ವತ್ತಾಗಿ ಸಮಾನಾಂತರವಾಗಿರಬೇಕು ಎಂಬ ಅರ್ಥದಲ್ಲಿ ಮಾತ ನಾಡಿದ್ದರು. ಅದೇ ವೇಳೆ ಒಪ್ಪಂದದ ವಿಚಾರಗಳ ಬಗ್ಗೆ ಈ ವರ್ಷದೊಳಗೆ ಅಂತಿಮ ನಿರ್ಧಾರಕ್ಕೆ ಬರಲಿದ್ದೇವೆ ಎಂದು ಥೈಲ್ಯಾಂಡ್ ಪ್ರಧಾನಿ ಹೇಳಿಕೆ ನೀಡಿದ್ದು, ಇದು ಒಪ್ಪಂದ ಮುಂದೂ ಡುವ ಸಾಧ್ಯತೆಗಳನ್ನು ಎತ್ತಿ ತೋರಿಸುತ್ತಿದೆ.

ಈ ಒಪ್ಪಂದದಿAದಾಗಿ ಚೀನಾ ಸರಕುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾರತದ ಮಾರುಕಟ್ಟೆಗೆ ಬರುವುದರಿಂದ ಸಣ್ಣ ಕೈಗಾರಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಭಾರತವು ಕೆಲವೊಂದು ಹೊಸ ಬೇಡಿಕೆಗಳನ್ನು ಮುಂದಿಟ್ಟಿದೆ ಎಂದು ಹೇಳ ಲಾಗಿದೆ. ಭಾರತದಿಂದ ನ್ಯೂಜಿಲೆಂಡ್‌ವರೆಗೆ ೧೬ ದೇಶಗಳು ಆರ್‌ಸಿ ಇಪಿ ಒಪ್ಪಂದದಲ್ಲಿವೆ. ಪಾಶ್ಚಿಮಾತ್ಯ ರಾಷ್ಟçಗಳ ಹೊರತಾದ ಮಾರಾಟ ಒಪ್ಪಂದ ಇದಾಗಿದ್ದು, ಚೀನಾ-ಅಮೇರಿಕಾ ವ್ಯಾಪಾರ ಯುದ್ಧದಿಂದ ಹೆಚ್ಚಿನ ಸಮಸ್ಯೆಗಳಾಗುವುದನ್ನು ತಪ್ಪಿಸಲು ಈ ಒಪ್ಪಂದ ಪೂರಕವಾಗಲಿದೆ ಎಂದು ಹೇಳಲಾಗಿತ್ತು. ಈ ಒಪ್ಪಂದದಲ್ಲಿ ಚೀನಾ ನಿರ್ಣಾಯಕ ಸ್ಥಾನವನ್ನು ಹೊಂದಿದೆ. ಒಪ್ಪಂದದ ಅನ್ವಯ ದೇಶಗಳ ನಡುವೆ ಶೇ.೯೦ರಷ್ಟು ತೆರಿಗೆ ವಿನಾಯಿತಿಯಲ್ಲಿ ಸರಕುಗಳು ಮಾರಾಟವಾಗಲಿವೆ. ಸದ್ಯ ಚೀನಾ ಸರಕುಗಳ ಮೇಲೆ ಶೇ.೭೦-೮೦ರಷ್ಟು ತೆರಿಗೆಯಿದೆ. ಈ ಒಪ್ಪಂದಕ್ಕೆ ಚೀನಾ ಹೆಚ್ಚು ಪ್ರಯತ್ನ ಪಡುತ್ತಿದ್ದು, ಒಪ್ಪಂದಕ್ಕೆ ಸಹಿ ಹಾಕುವ ದೇಶಗಳಿಗೆ ತನ್ನ ಸರಕುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುವ ಉತ್ಸಾಹದಲ್ಲಿದೆ. ಇದರಿಂದಾಗಿ ತನ್ನ ದೇಶದ ಆರ್ಥಿಕತೆ ಇನ್ನಷ್ಟು ಬಲಿಷ್ಠವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಚೀನಾ ಇದೆ.

ಆರ್‌ಸಿಇಪಿ ಒಪ್ಪಂದದಿAದ ಹೈನುಗಾರಿಕೆ ಮತ್ತು ಕೃಷಿ ಉತ್ಪನ್ನಗಳಿಗೆ ಭಾರೀ ಹೊಡೆತ ಬೀಳಲಿದೆ ಎಂಬ ಕಾರಣವನ್ನು ಮುಂದಿಟ್ಟು ದೇಶಾದ್ಯಂತ ರೈತರು ಒಪ್ಪಂದಕ್ಕೆ ಸಹಿ ಹಾಕದಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು ಎಂಬುದನ್ನು ಸ್ಮರಿಸಬಹುದು.

Translate »