ಬಿಜೆಪಿ ಸಾಧನೆ ಕಿರುಹೊತ್ತಿಗೆ ವಿವಿಧ ಕ್ಷೇತ್ರದ ಗಣ್ಯರಿಗೆ ವಿತರಣೆ
ಮೈಸೂರು

ಬಿಜೆಪಿ ಸಾಧನೆ ಕಿರುಹೊತ್ತಿಗೆ ವಿವಿಧ ಕ್ಷೇತ್ರದ ಗಣ್ಯರಿಗೆ ವಿತರಣೆ

July 31, 2018

ಹೆಚ್.ಡಿ.ಕೋಟೆ:  ಕೇಂದ್ರ ಸರ್ಕಾರದ ಸಾಧನೆಗಳ ಕಿರು ಹೊತ್ತಿಗೆ ಯನ್ನು ತಾಲೂಕು ಬಿಜೆಪಿ ಘಟಕದಿಂದ ವಿವಿಧ ಕ್ಷೇತ್ರದ ಗಣ್ಯರಿಗೆ ನೀಡಲಾಯಿತು.

ತಾಲೂಕು ಬಿಜೆಪಿ ಘಟಕದಿಂದ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 4 ವರ್ಷಗಳ ಸಾಧನೆ ವುಳ್ಳ ಪುಸ್ತಕವನ್ನು ಪಡುವಲ ವಿರಕ್ತ ಮಠದ ಸ್ವಾಮೀಜಿ ಮಹದೇವಸ್ವಾಮಿಗಳಿಗೆ ನೀಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಇದೇ ಸಂದರ್ಭ ದಲ್ಲಿ ದಡದಹಳ್ಳಿ ಚನ್ನಬಸವಸ್ವಾಮಿಗಳು, ಷಡಕ್ಷರಸ್ವಾಮಿ, ಪ್ರಗತಿಪರ ರೈತ ಮಲಾರ ಪುಟ್ಟಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕನ್ನಡಪ್ರಮೋದ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಣಿ, ಉಪಾಧ್ಯಕ್ಷ ದಾಸನಾಯಕ, ರೈತ ಸಂಘದ ಪಳನಿಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ್ ವರ್ತಕರ ಸಂಘದ ಅಧ್ಯಕ್ಷ ಜಿ.ರವಿ ಸೇರಿದಂತೆ ವಿವಿಧ ಕ್ಷೇತ್ರ ಗಣ್ಯರಿಗೆ ಸಾಧನೆ ಕಿರು ಹೊತ್ತಿಗೆಯನ್ನು ನೀಡಲಾಯಿತು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಸಿದ್ದರಾಜು ಮಾತನಾಡಿ ನರೇಂದ್ರ ಮೋದಿ ಯವರು ನೋಟಿನ ಅಮಾನ್ಯೀಕರಣ ಮಾಡುವ ಮೂಲಕ ದೇಶದಲ್ಲಿ ಆರ್ಥಿಕ ಸುಸ್ಥಿರತೆ ತಂದರು. ಇದರಿಂದ ಸರ್ಕಾರಕ್ಕೆ ತೆರಿಗೆ ಕಟ್ಟುವವರ ಸಂಖ್ಯೆ ಹೆಚ್ಚಾಗಿದ್ದು, ದೇಶದ ಅಭಿವೃದ್ದಿಗೆ ಕೈಗೊಂಡ ಯೋಜನೆ ಗಳಿಗೆ ಆರ್ಥಿಕ ಕ್ರೂಢೀಕರಣವಾಗಿದೆ. ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ದೇಶದ ಜನರೇ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರೇರೇಪಣೆ ಮಾಡಿದ್ದಾರೆ. ನರೇಂದ್ರಮೋದಿಯವರು ಭಾರತ ದೇಶವನ್ನು ವಿಶ್ವಮಟ್ಟದಲ್ಲಿ ನೋಡುವಂತೆ ಮಾಡಿದ್ದಾರೆ. ಹಾಗಾಗಿ 2019ರಲ್ಲಿ ನಡೆ ಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದು ಮತ್ತೆ ನರೇಂದ್ರಮೋದಿಯವರನ್ನು ಪ್ರಧಾನ ಮಂತ್ರಿ ಮಾಡಲು ಈ ಕಾರ್ಯಕ್ರಮವನ್ನು ದೇಶದೆಲ್ಲೆಡೆ ಹಮ್ಮಿಕೊಳ್ಳ ಲಾಗಿದೆ. ಪಕ್ಷದ ಕಾರ್ಯಕರ್ತರು ಕೂಡ ಕೇಂದ್ರ ಸರ್ಕಾರ ಸಾಧನೆಗಳನ್ನು ಪ್ರತಿಯೊಂದು ಹಳ್ಳಿಗೂ ತಲುಪಿಸಬೇಕು ಎಂದರು.

ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಸಿ.ಕೆ.ಗಿರೀಶ್, ಜಿಲ್ಲಾ ಪಂಚಾಯಿತಿ ಸದಸ್ಯ ವೆಂಕಟಸ್ವಾಮಿ, ಕಾರ್ಯದರ್ಶಿ ರಾಜು, ಮಹದೇವ್. ಟೌನ್ ಅಧ್ಯಕ್ಷ ವಿವೇಕ್, ಯುವ ಘಟಕ ಅಧ್ಯಕ್ಷ ಸತೀಶ್, ಮುಖಂಡ ರಾದ ಪರಿಕ್ಷೀತರಾಜೇಅರಸ್, ಸಿದ್ದನಾಯಕ, ಸೋಮಾಚಾರ್, ಭಾಗ್ಯಲಕ್ಷ್ಮಿ, ಪುಟ್ಟೇ ಗೌಡ, ನಂದೀಶ್, ಹೆಚ್.ಕೆ.ಸುರೇಶ್, ಬಿ.ಕೆ. ಮಹೇಶ್, ನಾಗೇಶ್, ಸಿದ್ದು, ಉಡನಾಗ ರಾಜು, ತಿಮ್ಮರಾಜೇಗೌಡ, ಶಿವಸ್ವಾಮಿ ಇದ್ದರು

Translate »