ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಮಾಜಿ ಅಂಗರಕ್ಷಕ ನಂಜನಗೂಡಿನ ಮೇಜರ್ ಸುಧೀರ್ ನಿಧನ
ಮೈಸೂರು

ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಮಾಜಿ ಅಂಗರಕ್ಷಕ ನಂಜನಗೂಡಿನ ಮೇಜರ್ ಸುಧೀರ್ ನಿಧನ

July 31, 2018

ನಂಜನಗೂಡು:  ದೇಶದ ಪ್ರದಾನ ಮಂತ್ರಿ ನರೇಂದ್ರಮೋದಿಯವರ ಅಂಗರಕ್ಷಕರಾಗಿ 2015ರಲ್ಲಿ ಕಾರ್ಯ ನಿರ್ವ ಹಿಸುತ್ತಿದ್ದ ಮೇಜರ್ ಸುಧೀರ್ ಅನಾರೋಗ್ಯದ ಕಾರಣ ಇಂದು ಮುಂಜಾನೆ 8-30 ಗಂಟೆಗೆ ಸೇಲಂನ ವಿನಾಯಕ ಆಸ್ಪತ್ರೆ ಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೂಲತಃ ನಂಜನಗೂಡಿನವರಾದ ಇವರು ನೀಲಕಂಠನಗರದ ನಿವಾಸಿ ವಿಶ್ವನಾಥ ನಾಯರ್ ಅವರ ಪುತ್ರರಾಗಿ ದ್ದಾರೆ. 1980ರಿಂದ 87ರವರೆಗೂ ನಂಜನಗೂಡಿನ ಕಾರ್ಮೆಲ್ ಶಾಲೆ ಹಾಗೂ 88 ರಿಂದ 92ರವರೆಗೂ ನಂಜನ ಗೂಡಿನ ಸರ್ಕಾರಿ ಜೂನಿಯರ್ ಕಾಲೇಜಿ ನಲ್ಲಿ ವಿದ್ಯಾಭ್ಯಾಸ ಮಾಡಿದ್ದರು.

ಉತ್ತಮ ಕ್ರೀಡಾಪಟುವಾಗಿದ್ದ ಇವರು ಕ್ರೀಡಾ ಕೋಟಾದಡಿಯಲ್ಲಿ 99ರಲ್ಲಿ ಸೇನೆ ಸೇರಿದ್ದರು. ಮೃತರಿಗೆ ಪತ್ನಿ, ಇಬ್ಬರು ಮಕ್ಕಳು ಮತ್ತು ಅಪಾರ ಬಂಧು ಬಳಗವÀನ್ನು ಅಗಲಿದ್ದಾರೆ. ಇವರ ಅಂತ್ಯ ಸಂಸ್ಕಾರ ಊಟಿಯ ಸೇನೆಯ ಬ್ಯರಾಕ್‍ನಲ್ಲಿ ಸಕಲ ಗೌರವ ಗಳೊಂದಿಗೆ ನೆರ ವೇರಿತು. ಮೇಜರ್ ಸುಧೀರ್ ನಿಧನಕ್ಕೆ ಶಾಸಕ ಹರ್ಷವರ್ಧನ್, ಬಿಜೆಪಿ ನಗರಾಧ್ಯಕ್ಷ ಬಾಲ ಚಂದ್ರು, ಕಪಿಲೇಶ್, ಸಂಜಯ್ ಶರ್ಮಾ, ಬಸವರಾಜು, ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Translate »