ಮೈಸೂರು: ಮೈಸೂರಿನ ಹಿರಿಯ ಕೈಗಾರಿಕೋದ್ಯಮಿ, ಕಾಮಾಕ್ಷಿ ಆಸ್ಪತ್ರೆಯ ಸಂಸ್ಥಾಪಕ ಟ್ರಸ್ಟಿ ಎಂ.ವಿನೋದ್‍ರಾವ್ (78) ಗುರುವಾರ ಸಂಜೆ ನಿಧನರಾದರು. 1970ರಲ್ಲಿ ಕಾಮಾಕ್ಷಿ ಆಸ್ಪತ್ರೆಯ ಕಟ್ಟಡ ನಿರ್ಮಾಣ ದಿಂದ ಇಂದಿನವರೆಗೂ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಆಸ್ಪತ್ರೆಯ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದರು. ಗಣೇಶ ಬೀಡಿ ಮಾಲೀಕರಾದ ಮಾಧವಶೆಣೈ ಅವರ ಪುತ್ರರಾಗಿ ಗಣೇಶ ಬೀಡಿ ಕಂಪನಿಯ ಅಭಿವೃದ್ಧಿಗೆ ಶ್ರಮಿಸಿದ್ದಲ್ಲದೆ, ಬೃಹಸ್ಪದಾಚಾರ್ಯ ಸ್ಕೂಲ್, ಶುಕ್ರ ಪ್ಯಾಕೇಜಿಂಗ್, ಮಾಧವ ಶೆಣೈ ಕಲ್ಯಾಣ ಮಂಟಪ ಸೇರಿದಂತೆ ಹಲವು ಸಂಸ್ಥೆಗಳನ್ನು ಸ್ಥಾಪಿಸಿ, ಜನಸೇವೆಯ ಮೂಲಕ ಜನಪ್ರಿಯರಾಗಿದ್ದರು. ಮೃತರು ಪತ್ನಿ ಜಯಂತಿಬಾಯಿ,…
ಅ.13, ಶ್ರೀ ಚಾಮುಂಡೇಶ್ವರಿ ರಥೋತ್ಸವ, ಅ.15ರಂದು ತೆಪ್ಪೋತ್ಸವಕ್ಕೂ ಸಕಲ ಸಿದ್ಧತೆ
October 11, 2019ಮೈಸೂರು: ಅಕ್ಟೋಬರ್ 13ರಂದು ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ರಥೋ ತ್ಸವ ನೆರವೇರಲಿದೆ. ಅಂದು (ಭಾನುವಾರ) ಬೆಳಿಗ್ಗೆ 6.48 ರಿಂದ 7.18 ಗಂಟೆಯೊಳಗೆ ಸಲ್ಲುವ ಶುಭ ತುಲಾ ಲಗ್ನ ಅಶ್ವಯುಜ ಶುಕ್ಲ ಪೂರ್ಣಮಿ ಉತ್ತರಾಭಾದ್ರ ನಕ್ಷತ್ರದಲ್ಲಿ ಚಾಮುಂಡೇಶ್ವರಿಯ ದಿವ್ಯ ರಥಾರೋಹಣ ನಡೆಯಲಿದೆ. ಅಂದೇ ಸಂಜೆ ಮಂಟಪೋತ್ಸವ, ಸಿಂಹವಾಹನೋತ್ಸವ ಹಾಗೂ ಹಂಸವಾಹನೋತ್ಸವವೂ ನೆರವೇರಲಿದೆ. ಅಕ್ಟೋಬರ್ 15ರಂದು ಮಂಗಳವಾರ ದೇವಿಕೆರೆಯಲ್ಲಿ ಸಂಜೆ 7 ಗಂಟೆಗೆ ತಾಯಿ ಚಾಮುಂಡೇಶ್ವರಿ ದೇವಿಯ ತೆಪ್ಪೋತ್ಸವ ಹಾಗೂ ಆಂದೋಳಿಕಾರೋಹಣವೂ ನಡೆಯ ಲಿದೆ. ಎರಡೂ…
3 ದಿನ ಕೆಆರ್‍ಎಸ್‍ಗೆ 42 ಸಾವಿರ ಪ್ರವಾಸಿಗರ ಭೇಟಿ
October 11, 2019ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಕೃಷ್ಣರಾಜಸಾಗರ (ಕೆಆರ್‍ಎಸ್)ಕ್ಕೆ ಅ.7ರಿಂದ 9ರವರೆಗೆ ಮೂರು ದಿನದಲ್ಲಿ 42 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅ.7 ಮತ್ತು 8ರಂದು ಆಯುಧ ಪೂಜೆ ಮತ್ತು ವಿಜಯದಶಮಿ ಮೆರವಣಿಗೆಯಂದು 25 ಸಾವಿರ ಮತ್ತು ಅ.9ರಂದು ಒಂದೇ ದಿನ 17 ಸಾವಿರ ಮಂದಿ ಕೆಆರ್‍ಎಸ್‍ಗೆ ಭೇಟಿ ನೀಡಿದ್ದಾರೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕೆಆರ್‍ಎಸ್‍ನ ಹೊರಭಾಗದ ಹೆಲಿಪ್ಯಾಡ್ ಬಳಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿ ಅಲ್ಲಿಂದ ಕೆಎಸ್‍ಆರ್‍ಟಿಸಿ…
ಮೈಸೂರಿನಲ್ಲಿ ಇಂದಿನಿಂದ 13ರವರೆಗೆ ಶಸ್ತ್ರಚಿಕಿತ್ಸಕರ ಸಮ್ಮೇಳನ
October 11, 2019ಮೈಸೂರು: ವೈದ್ಯ ವಿಜ್ಞಾನದ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಸಾಧನೆ ಹಾಗೂ ಸಂಶೋಧನೆಗಳನ್ನು ವಿನಿಮಯ ಮಾಡಿಕೊಳ್ಳುವ ಅಂತಾರಾಷ್ಟ್ರೀಯ ಶಸ್ತ್ರ ಚಿಕಿತ್ಸಕರ ಕಾಲೇಜಿನ (ಜಾಗತಿಕ ಸಂಘಟನೆ) ಭಾರತ ವಿಭಾಗದ 65ನೇ ವಾರ್ಷಿಕ ಸಮ್ಮೇಳನ ಮೈಸೂರಿನಲ್ಲಿ ಅ.11ರಿಂದ 13ರವ ರೆಗೆ 3 ದಿನಗಳು ನಡೆಯಲಿದೆ ಎಂದು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಎಸ್.ಬಿ.ವಸಂತಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಶಸ್ತ್ರಚಿಕಿತ್ಸಕರ ಕಾಲೇಜು (ಇಂಟರ್‍ನ್ಯಾಷನಲ್ ಕಾಲೇಜ್ ಆಫ್ ಸರ್ಜನ್ಸ್) 112 ದೇಶಗಳಲ್ಲಿ ತನ್ನ ಕಾರ್ಯ ವ್ಯಾಪ್ತಿ ಹೊಂದಿದೆ….
ವಿಧಾನಸಭೆ ವಿಪಕ್ಷ ನಾಯಕರಾಗಿಸಿದ್ದರಾಮಯ್ಯ ಆಯ್ಕೆ
October 10, 2019ಬೆಂಗಳೂರು, ಅ. 9- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸಭೆ ವಿಪಕ್ಷ ನಾಯಕರಾಗಿ ಹಾಗೂ ಅವರ ಆಪ್ತರೇ ಆದ ಎಸ್.ಆರ್. ಪಾಟೀಲ್ ಅವರನ್ನು ವಿಧಾನ ಪರಿ ಷತ್ ವಿಪಕ್ಷ ನಾಯಕರಾಗಿ ಕಾಂಗ್ರೆಸ್ ಹೈ ಕಮಾಂಡ್ ಘೋಷಿಸಿದ್ದು, ಇದರಿಂದಾಗಿ ಮೂಲ ಕಾಂಗ್ರೆಸ್ಸಿಗರು ಮತ್ತೆ ಮೂಲೆ ಗುಂಪಾದಂತಾಗಿದೆ. ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ವಿಧಾನ ಸಭೆ ವಿಪಕ್ಷ ನಾಯಕ ಸ್ಥಾನಕ್ಕಾಗಿ ಕಾಂಗ್ರೆಸ್‍ನಲ್ಲಿ ಭಾರೀ ಪೈಪೋಟಿ ನಡೆಯುತ್ತಿತ್ತು. ಸಿದ್ದರಾಮಯ್ಯ ವಿರುದ್ಧ ಮೂಲ ಕಾಂಗ್ರೆಸ್ ನಾಯಕರೆಲ್ಲರೂ…
ಇಂದಿನಿಂದ ವಿಧಾನಮಂಡಲ ಅಧಿವೇಶನ
October 10, 2019ಬೆಂಗಳೂರು, ಅ.9- ರಾಜ್ಯ ರಾಜಕಾರಣ ದಲ್ಲಿ ತೀವ್ರ ಗೊಂದಲದ ಪರಿ ಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲೇ ಗುರುವಾರ ದಿಂದ 3 ದಿನಗಳ ಕಿರು ವಿಧಾನಮಂಡಲ ಅಧಿವೇಶನ ನಡೆ ಯುತ್ತಿದ್ದು, ಮುಂಬೈ, ಹೈದರಾಬಾದ್ ಮತ್ತು ಉತ್ತರ ಕರ್ನಾಟಕ ಭಾಗಗಳಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿ ಸದನದಲ್ಲಿ ಕೋಲಾಹಲ ಎಬ್ಬಿಸಲಿದೆ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಆಂತರಿಕ ಸಂಘರ್ಷ ತೀವ್ರಗೊಂಡಿರುವ ಸಂದರ್ಭದಲ್ಲೇ ಅಧಿವೇಶನ ನಡೆಯುತ್ತಿದ್ದು, ಸದನ ಆರೋಪ, ಪ್ರತ್ಯಾರೋಪಗಳಿಗೆ ವೇದಿಕೆಯಾಗುವ ಸಾಧ್ಯತೆ ಯಿದೆ. ಪ್ರವಾಹ ಪರಿಸ್ಥಿತಿ ನಿಭಾಯಿಸಲು ಕೇಂದ್ರ…
ಖಾಸಗಿ ದೃಶ್ಯ ಮಾಧ್ಯಮಗಳಿಗೆ ನಿರ್ಬಂಧ
October 10, 2019ಬೆಂಗಳೂರು, ಅ.9- ವಿಧಾನಸಭೆ ಅಧಿವೇಶನಕ್ಕೆ ಖಾಸಗಿ ದೃಶ್ಯ ಮಾಧ್ಯಮಗಳಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಿರ್ಬಂಧ ಹೇರಿದ್ದಾರೆ. ವಿಧಾನ ಸೌಧದಲ್ಲಿ ಗುರುವಾರದಿಂದ 3 ದಿನ ಅಧಿವೇಶನ ನಡೆಯಲಿದೆ. ಅಧಿವೇಶನಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗಲೇ ಖಾಸಗಿ ದೃಶ್ಯ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿ ಸ್ಪೀಕರ್ ಕಾಗೇರಿ ಆದೇಶ ಹೊರಡಿಸಿದ್ದಾರೆ. ಸ್ಪೀಕರ್ ಅವರ ಈ ನಿರ್ಧಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿ ಅಧಿವೇಶನ ನಡೆಸುತ್ತಿದೆ. ಬೆಳಗಾವಿಯಲ್ಲಿ…
ಆಯುಧಪೂಜೆ ಆಸೆಯಲ್ಲಿ ಮೈಸೂರಿಗೆ ಬಂದು ಮಾರಾಟವಾಗದೆ ಬೀದಿಪಾಲಾದ ಕುಂಬಳ!
October 10, 2019ಮೈಸೂರು,ಅ.9(ಆರ್‍ಕೆ)- ವಿಜಯ ದಶಮಿ ಮೆರವಣಿಗೆ ಮಾರನೇ ದಿನ ಸ್ವಚ್ಛತೆ ಪೌರಕಾರ್ಮಿಕರಿಗೆ ಒಂದು ಸವಾಲಾಗಿ ಪರಿಣಮಿಸಿದೆ. ನಿನ್ನೆ ಲಕ್ಷಾಂತರ ಮಂದಿ ಮೈಸೂರಲ್ಲಿ ಜಂಬೂಸವಾರಿ ವೀಕ್ಷಣೆಗೆ ಜಮಾಯಿಸಿದ್ದರು. ಸಹಜವಾಗಿಯೇ ಮಾಮೂಲಿಗಿಂತ ನೂರು ಪಟ್ಟು ಕಸ ಸಂಗ್ರಹ ವಾಗಿದ್ದು, ಹಾಗಾಗಿ ಸ್ವಚ್ಛತಾ ಕಾರ್ಯ ಇಂದು ಬೆಳಿಗ್ಗೆಯಿಂದ ಸಂಜೆವರೆಗೂ ಸಮರೋಪಾದಿಯಲ್ಲಿ ನಡೆಯಿತು. ಅರಮನೆ ಆವರಣ, ಮುಂಭಾಗ, ಬಲ ರಾಮ ದ್ವಾರ, ಕೆ.ಆರ್.ಸರ್ಕಲ್‍ನಿಂದ ಬನ್ನಿ ಮಂಟಪದವರೆಗೂ ಜಂಬೂ ಸವಾರಿ ಸಾಗಿದ ಮಾರ್ಗದಲ್ಲಿ ಎಲ್ಲಿ ನೋಡಿದರಲ್ಲಿ ನೀರಿನ ಬಾಟಲಿ, ಫ್ರೂಟ್ ಜ್ಯೂಸ್ ಸ್ಯಾಚೆಟ್, ಕಾಫಿ-ಟೀ ಕುಡಿದ…
ಎರಡು ದಿನಗಳ ಕಾರ್ಯಕ್ರಮಕ್ಕೆ ಇಂದು ಮೈಸೂರಿಗೆ ರಾಷ್ಟ್ರಪತಿ
October 10, 2019ಮೈಸೂರು, ಅ. 9(ಆರ್‍ಕೆ)- ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಎರಡು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾಳೆ (ಅ. 10) ಮೈಸೂರಿಗೆ ಆಗಮಿಸುವರು. ಗುರುವಾರ ಸಂಜೆ 5.25ಕ್ಕೆ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸುವ ರಾಷ್ಟ್ರಪತಿಗಳನ್ನು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡು, ಕಾರಿನಲ್ಲಿ ನಜರ್‍ಬಾದಿನ ಸರ್ಕಾರಿ ಅತಿಥಿ ಗೃಹಕ್ಕೆ ಕರೆತರಲಾಗುವುದು. ಎರಡು ಗಂಟೆ ವಿಶ್ರಾಂತಿ ಬಳಿಕ ರಾತ್ರಿ 7.30 ಗಂಟೆಗೆ ಮೈಸೂರು ಅರಮನೆಯಲ್ಲಿ ನಡೆಯಲಿರುವ ಜಯ ಚಾಮರಾಜ ಒಡೆಯರ್ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವರು. ನಂತರ ಸರ್ಕಾರಿ ಅತಿಥಿಗೃಹದಲ್ಲಿ…
ಈ ಬಾರಿ ಮೈಸೂರು ಮೃಗಾಲಯಕ್ಕೆ ಅತೀ ಹೆಚ್ಚು ಪ್ರವಾಸಿಗರ ಭೇಟಿ
October 10, 2019ಮೈಸೂರು, ಅ.9(ಪಿಎಂ)- ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ದಸರಾ ಮಹೋತ್ಸವದ 10 ದಿನಗಳ ಅವಧಿಯಲ್ಲಿ ಅತೀ ಹೆಚ್ಚು ಪ್ರವಾಸಿಗರು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದು, ಆ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ಪ್ರಸಕ್ತ ವರ್ಷದ ದಸರಾ ಅವಧಿಯಲ್ಲಿ 1.65 ಲಕ್ಷ ವೀಕ್ಷಕರು ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. ಇದರಿಂದ 1.59 ಕೋಟಿ ರೂ. (159.76 ಲಕ್ಷ ರೂ.) ಆದಾಯ ಸಂಗ್ರಹ ಗೊಂಡಿದೆ. 2016ರ ಇದೇ ಅವಧಿಯಲ್ಲಿ 1.24 ಲಕ್ಷ ವೀಕ್ಷಕರು ಭೇಟಿ ನೀಡಿ, 70.53 ಲಕ್ಷ…










