ಅ.13, ಶ್ರೀ ಚಾಮುಂಡೇಶ್ವರಿ ರಥೋತ್ಸವ, ಅ.15ರಂದು ತೆಪ್ಪೋತ್ಸವಕ್ಕೂ ಸಕಲ ಸಿದ್ಧತೆ
ಮೈಸೂರು

ಅ.13, ಶ್ರೀ ಚಾಮುಂಡೇಶ್ವರಿ ರಥೋತ್ಸವ, ಅ.15ರಂದು ತೆಪ್ಪೋತ್ಸವಕ್ಕೂ ಸಕಲ ಸಿದ್ಧತೆ

October 11, 2019

ಮೈಸೂರು: ಅಕ್ಟೋಬರ್ 13ರಂದು ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ರಥೋ ತ್ಸವ ನೆರವೇರಲಿದೆ. ಅಂದು (ಭಾನುವಾರ) ಬೆಳಿಗ್ಗೆ 6.48 ರಿಂದ 7.18 ಗಂಟೆಯೊಳಗೆ ಸಲ್ಲುವ ಶುಭ ತುಲಾ ಲಗ್ನ ಅಶ್ವಯುಜ ಶುಕ್ಲ ಪೂರ್ಣಮಿ ಉತ್ತರಾಭಾದ್ರ ನಕ್ಷತ್ರದಲ್ಲಿ ಚಾಮುಂಡೇಶ್ವರಿಯ ದಿವ್ಯ ರಥಾರೋಹಣ ನಡೆಯಲಿದೆ. ಅಂದೇ ಸಂಜೆ ಮಂಟಪೋತ್ಸವ, ಸಿಂಹವಾಹನೋತ್ಸವ ಹಾಗೂ ಹಂಸವಾಹನೋತ್ಸವವೂ ನೆರವೇರಲಿದೆ.

ಅಕ್ಟೋಬರ್ 15ರಂದು ಮಂಗಳವಾರ ದೇವಿಕೆರೆಯಲ್ಲಿ ಸಂಜೆ 7 ಗಂಟೆಗೆ ತಾಯಿ ಚಾಮುಂಡೇಶ್ವರಿ ದೇವಿಯ ತೆಪ್ಪೋತ್ಸವ ಹಾಗೂ ಆಂದೋಳಿಕಾರೋಹಣವೂ ನಡೆಯ ಲಿದೆ. ಎರಡೂ ಧಾರ್ಮಿಕ ಕಾರ್ಯಕ್ರಮಗಳಿಗೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವ ಸ್ಥಾನವು ಸಿದ್ಧತೆ ಮಾಡಿಕೊಂಡಿದೆ. ಅಲ್ಲದೆ ನಾಳೆ (ಅ.11) ವೃಷಭವಾಹನ, ಶನಿವಾರ ಗಜಾರೋಹಣ, ಸೋಮವಾರ ಅಶ್ವಾರೋಹಣ, ಬುಧವಾರ ಪಂಚೋಪಚಾರ ಪೂಜೆ, ಶಯನೋತ್ಸವ, ಗುರುವಾರ ಮಹಾಭಿಷೇಕ, ಸಿಂಹವಾಹನ ಹಾಗೂ ಶುಕ್ರವಾರ ಮುಡಿ ಉತ್ಸವ ಕೈಂಕರ್ಯಗಳು ನಡೆಯಲಿವೆ ಎಂದು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎನ್.ಯತಿರಾಜ್ ಸಂಪತ್ ಕುಮಾರನ್ ತಿಳಿಸಿದ್ದಾರೆ.

Translate »