ಕಾಮಾಕ್ಷಿ ಆಸ್ಪತ್ರೆ ಸಂಸ್ಥಾಪಕ ಟ್ರಸ್ಟಿ ವಿನೋದ್ ರಾವ್ ನಿಧನ
ಮೈಸೂರು

ಕಾಮಾಕ್ಷಿ ಆಸ್ಪತ್ರೆ ಸಂಸ್ಥಾಪಕ ಟ್ರಸ್ಟಿ ವಿನೋದ್ ರಾವ್ ನಿಧನ

October 11, 2019

ಮೈಸೂರು: ಮೈಸೂರಿನ ಹಿರಿಯ ಕೈಗಾರಿಕೋದ್ಯಮಿ, ಕಾಮಾಕ್ಷಿ ಆಸ್ಪತ್ರೆಯ ಸಂಸ್ಥಾಪಕ ಟ್ರಸ್ಟಿ ಎಂ.ವಿನೋದ್‍ರಾವ್ (78) ಗುರುವಾರ ಸಂಜೆ ನಿಧನರಾದರು.

1970ರಲ್ಲಿ ಕಾಮಾಕ್ಷಿ ಆಸ್ಪತ್ರೆಯ ಕಟ್ಟಡ ನಿರ್ಮಾಣ ದಿಂದ ಇಂದಿನವರೆಗೂ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಆಸ್ಪತ್ರೆಯ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದರು. ಗಣೇಶ ಬೀಡಿ ಮಾಲೀಕರಾದ ಮಾಧವಶೆಣೈ ಅವರ ಪುತ್ರರಾಗಿ ಗಣೇಶ ಬೀಡಿ ಕಂಪನಿಯ ಅಭಿವೃದ್ಧಿಗೆ ಶ್ರಮಿಸಿದ್ದಲ್ಲದೆ, ಬೃಹಸ್ಪದಾಚಾರ್ಯ ಸ್ಕೂಲ್, ಶುಕ್ರ ಪ್ಯಾಕೇಜಿಂಗ್, ಮಾಧವ ಶೆಣೈ ಕಲ್ಯಾಣ ಮಂಟಪ ಸೇರಿದಂತೆ ಹಲವು ಸಂಸ್ಥೆಗಳನ್ನು ಸ್ಥಾಪಿಸಿ, ಜನಸೇವೆಯ ಮೂಲಕ ಜನಪ್ರಿಯರಾಗಿದ್ದರು.

ಮೃತರು ಪತ್ನಿ ಜಯಂತಿಬಾಯಿ, ಪುತ್ರರಾದ ಕಾಮಾಕ್ಷಿ ಆಸ್ಪತ್ರೆಯ ಹಾಲಿ ಮ್ಯಾನೇಜಿಂಗ್ ಟ್ರಸ್ಟಿ ಡಾ.ಎಂ.ಮಹೇಶ್ ಶೆಣೈ, ಕೈಗಾರಿಕೋದ್ಯಮಿ ಮನೋಜ್ ಶೆಣೈ, ಪುತ್ರಿಯರಾದ ಮಮತಾಶೆಣೈ, ಡಾ.ಮಾಯಾ ಶೆಣೈ, ಮಂಜುಳಾ ಹಾಗೂ ಮೂವರು ವೈದ್ಯ ಅಳಿಯಂದಿರಲ್ಲದೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಮೈಸೂರಿನ ಮಾಧವ ಶೆಣೈ ಕಲ್ಯಾಣಮಂಟಪದ ಬಳಿಯ ಅವರ ಪುತ್ರ ಮನೋಜ್ ಶೆಣೈ ಅವರ ನಿವಾಸದಲ್ಲಿ ಇರಿಸಲಾಗಿದೆ. ಅವರ ಅಂತ್ಯಸಂಸ್ಕಾರ ಶುಕ್ರವಾರ ಬೆಳಿಗ್ಗೆ 11 ಗಂಟೆ ವೇಳೆಗೆ ಚಾಮುಂಡಿಬೆಟ್ಟದ ತಪ್ಪಲಿನ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Translate »