ಕಾಮಾಕ್ಷಿ ಆಸ್ಪತ್ರೆ ಸಂಸ್ಥಾಪಕರ ದಿನಾಚರಣೆ
ಮೈಸೂರು

ಕಾಮಾಕ್ಷಿ ಆಸ್ಪತ್ರೆ ಸಂಸ್ಥಾಪಕರ ದಿನಾಚರಣೆ

June 30, 2018
  • ಸಾರ್ಥಕ ಸೇವೆ ಸಲ್ಲಿಸಿದ ಸಿಬ್ಬಂದಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಮೈಸೂರು:  ಕಾಮಾಕ್ಷಿ ಆಸ್ಪತ್ರೆ ಸಂಸ್ಥಾಪನಾ ದಿನ ಮತ್ತು 45ನೇ ವಾರ್ಷಿಕೋತ್ಸವ ಅಂಗವಾಗಿ ಎಸ್‍ಎಸ್‍ಎಲ್‍ಸಿ-ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಿಬ್ಬಂದಿ ಮಕ್ಕಳಿಗೆ ನಗದು ಬಹುಮಾನ ಮತ್ತು 25 ವರ್ಷದಿಂದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿಗಳನ್ನು ಗೌರವಿಸಲಾಯಿತು.

ಕುವೆಂಪುನಗರದ ಕಾಮಾಕ್ಷಿ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಸ್ಪತ್ರೆಯಲ್ಲಿ 25 ವರ್ಷದಿಂದ ಸೇವೆ ಸಲ್ಲಿಸಿದ ವೈದ್ಯರಾದ ಡಾ.ಪ್ರಕಾಶ್ ಕೆ.ಪ್ರಭು, ಡಾ.ಆರ್.ಜಿ.ಶ್ರೀನಿವಾಸ್, ಸಿಬ್ಬಂದಿಗಳಾದ ರೂಪ, ಈರಭದ್ರ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಲಕ್ಕಿ ಡಿಪ್‍ನಲ್ಲಿ ವಿಜೇತರಾದ ಕಲಾವತಿ, ಜ್ಯೋತಿ, ಮಹಾಲಕ್ಷ್ಮಿ, ಡಾ.ಪ್ರವೀಣ್, ಪ್ರಭುಕುಮಾರ್, ಪುಟ್ಟರಾಜು, ಕೆ.ಎಂ.ಪ್ರಭಾ, ಡಿ.ಎನ್.ಲಿಲ್ಲಿ, ಅಂಬಿಕಾ, ರಾಜು ಹಾಗೂ ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಿಬ್ಬಂದಿ ಮಕ್ಕಳಿಗೆ ನಗದು ಬಹುಮಾನ ವಿತರಿಸಲಾಯಿತು.

ನಂತರ ಸೀನಿಯರ್ ಸರ್ಜನ್ ಡಾ.ಪಿ.ಜಿ.ನರಸಿಂಹನ್ ಮಾತನಾಡಿ, ಕಾಮಾಕ್ಷಿ ಆಸ್ಪತ್ರೆ ಆರಂಭವಾಗಿ 45 ವರ್ಷಗಳಾಗಿದ್ದು, ಅಂದಿನಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಅಂದಿನಿಂದ ಇಂದಿನವರೆಗೆ ಆಸ್ಪತ್ರೆಯು ಸಾಕಷ್ಟು ಅಭಿವೃದ್ಧಿಯಾಗಿದ್ದು, ಉತ್ತಮ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ ಎಂದರು.

ಈ ಹಿಂದೆ ಮ್ಯಾನೇಜಿಂಗ್ ಟ್ರಸ್ಟಿಗಳಾಗಿದ್ದ ವಿನೋದ್‍ರಾವ್, ವಿಶ್ವನಾಥ್‍ರಾವ್‍ರವರು ಆಸ್ಪತ್ರೆ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದು, ಅಭಿವೃದ್ಧಿಯಲ್ಲಿ ಅವರುಗಳ ಕೊಡುಗೆ ಅಪಾರ. ಇಂದು ಮಹೇಶ್ ಶೆಣೈ ಅವರು ಯುವ ಚೈತನ್ಯದಂತೆ ಆಸ್ಪತ್ರೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವತ್ತ ಹೆಚ್ಚು ಶ್ರಮಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಜತೆಗೆ 25 ವರ್ಷದಿಂದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮ್ಯಾನೇಜಿಂಗ್ ಟ್ರಸ್ಟಿ ಮಹೇಶ್ ಶೆಣೈ, ಮೆಡಿಕಲ್ ಸೂಪರಿಟೆಂಟ್ ಡಾ.ಉಮೇಶ್ ಕಾಮತ್, ಜಂಟಿ ಮ್ಯಾನೇಜಿಂಗ್ ಟ್ರಸ್ಟಿ ಅಶೋಕ್ ಶೆಣೈ, ಆಡಳಿತಾಧಿಕಾರಿ ಡಾ.ಕೆ.ಆರ್.ಕಾಮತ್, ಖಜಾಂಚಿ ವಿಶ್ವನಾಥ್ ರಾವ್, ಉದ್ಯಮಿ ಶ್ಯಾಮ್ ಚೆರಿಯನ್ ಮತ್ತಿತರರು ಉಪಸ್ಥಿತರಿದ್ದರು.

ಮೈಸೂರು ಕುವೆಂಪುನಗರದ ಕಾಮಾಕ್ಷಿ ಆಸ್ಪತ್ರೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 25 ವರ್ಷದಿಂದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ವೈದ್ಯರಾದ ಡಾ.ಪ್ರಕಾಶ್ ಕೆ.ಪ್ರಭು, ಡಾ.ಆರ್.ಜಿ.ಶ್ರೀನಿವಾಸ್ ಅವರನ್ನು ಗೌರವಿಸಲಾಯಿತು. ಮ್ಯಾನೇಜಿಂಗ್ ಟ್ರಸ್ಟಿ ಮಹೇಶ್ ಶೆಣೈ, ಮೆಡಿಕಲ್ ಸೂಪರಿಟೆಂಟ್ ಡಾ.ಉಮೇಶ್ ಕಾಮತ್, ಜಂಟಿ ಮ್ಯಾನೇಜಿಂಗ್ ಟ್ರಸ್ಟಿ ಅಶೋಕ್ ಶೆಣೈ, ಸೀನಿಯರ್ ಸರ್ಜನ್ ಡಾ.ಪಿ.ಜಿ.ನರಸಿಂಹನ್, ಆಡಳಿತಾಧಿಕಾರಿ ಡಾ.ಕೆ.ಆರ್.ಕಾಮತ್, ಖಜಾಂಚಿ ವಿಶ್ವನಾಥ್ ರಾವ್, ಉದ್ಯಮಿ ಶ್ಯಾಮ್ ಚೆರಿಯನ್ ಮತ್ತಿತರರು ಉಪಸ್ಥಿತರಿದ್ದರು.

Translate »