ಅ.13ರಂದು ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನ ಸ್ಪರ್ಧೆ
ಮೈಸೂರು

ಅ.13ರಂದು ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನ ಸ್ಪರ್ಧೆ

October 11, 2019

ಮೈಸೂರು: ಕೆನೈನ್ ಕ್ಲಬ್ ಆಫ್ ಮೈಸೂರು ವತಿಯಿಂದ ಅ.13 ರಂದು ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ 6ನೇ ರಾಷ್ಟ್ರ ಮಟ್ಟದ ಶ್ವಾನ ಪ್ರದರ್ಶನ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕ್ಲಬ್‍ನ ಅಧ್ಯಕ್ಷ ಬಿ.ಪಿ.ಮಂಜುನಾಥ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅಂದು ಬೆಳಿಗ್ಗೆ 9.30ಕ್ಕೆ ಶ್ವಾನ ಸ್ಪರ್ಧೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಚಾಲನೆ ನೀಡಲಿದ್ದು, ಮಾಜಿ ಶಾಸಕ ವಾಸು ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಸಂಸದ ವಿ.ಶ್ರೀನಿವಾಸ ಪ್ರಸಾದ್, ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಸಾ.ರಾ.ಮಹೇಶ್ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊ ಳ್ಳಲಿದ್ದಾರೆ ಎಂದು ಹೇಳಿದರು.

ಇತ್ತೀಚೆಗೆ ಲಿಂಗೈಕ್ಯರಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಈ ಕಾರ್ಯಕ್ರಮ ಸಮರ್ಪಿಸಲಾಗುತ್ತಿದೆ. ದೇಶಿ ಹಾಗೂ ವಿದೇಶಿ ತಳಿಗಳು ಒಳಗೊಂಡಂತೆ 35 ತಳಿಗಳ ಸುಮಾರು 350 ಶ್ವಾನಗಳು ದೇಶದ ವಿವಿಧ ಭಾಗಗಳಿಂದ ಸ್ಪರ್ಧೆಗೆ ಆಗಮಿಸುತ್ತಿವೆ. ಸ್ಪರ್ಧೆ ವೀಕ್ಷಿಸಲು 50 ರೂ. ಪ್ರವೇಶ ಶುಲ್ಕ ನಿಗದಿ ಮಾಡಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಶ್ವಾನಗಳ ನೋಂದಣಿಗೆ 1,500 ರೂ. ನಿಗದಿ ಮಾಡಲಾಗಿದೆ ಎಂದರು.

ಕೆನೈನ್ ಕ್ಲಬ್ ಆಫ್ ಇಂಡಿಯಾದ ಮೈಕ್ರೋ ಚಿಪ್ ಹಾಗೂ ವಂಶಾವಳಿ ದಾಖಲೆ ಹೊಂದಿರುವ ಶ್ವಾನಗಳಿಗೆ ಮಾತ್ರ ಸ್ಪರ್ಧೆ ಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. 6 ತಿಂಗಳ ಪಪ್ಪಿ, ಗಂಡು ಹಾಗೂ ಹೆಣ್ಣು ಸೇರಿ ದಂತೆ 7 ವಿಭಾಗದಲ್ಲಿ ಸ್ಪರ್ಧೆಗಳು ನಡೆಯ ಲಿವೆ. ಬೆಸ್ಟ್ ಇನ್ ಶೋ ಲೈನ್‍ಆಫ್ ವಿಭಾ ಗಕ್ಕೆ 8 ಶ್ವಾನಗಳನ್ನು ಆಯ್ಕೆ ಮಾಡಲಾಗು ವುದು. ಅಲ್ಲದೆ, ವಿವಿಧ ವಿಭಾಗದಲ್ಲಿ ಕ್ರಮ ವಾಗಿ 3 ಸ್ಥಾನಗಳನ್ನು ನೀಡಲಾಗುವುದು. ಈ ಸ್ಥಾನಗಳಿಗೆ ಆಯ್ಕೆಗೊಂಡ ಶ್ವಾನಗಳಿಗೆ ಪ್ರಮಾಣ ಪತ್ರ ಹಾಗೂ ಟ್ರೋಫಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ರಾತ್ರಿ 8ಕ್ಕೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಮುಡಾ ಆಯುಕ್ತ ಕಾಂತ ರಾಜು, ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಪಾಲ್ಗೊಳ್ಳಲಿದ್ದಾರೆ. ತೀರ್ಪುಗಾರರಾಗಿ ಬೆಂಗ ಳೂರಿನ ಟಿ.ಪ್ರೀತಮ್, ಲಕ್ನೋದ ಕೆ.ಕೆ. ತ್ರಿವೇದಿ ಆಗಮಿಸುತ್ತಿದ್ದಾರೆ. ಅಂದು 1 ಕೋಟಿ ರೂ. ಬೆಲೆಬಾಳುವ ಕೋರಿಯನ್ ದೋಸಾ ಮ್ಯಾಸ್ರಿಫ್ ಶ್ವಾನ ಪ್ರದರ್ಶನ ಇರಲಿದೆ. 3 ಕೆಜಿಯ ಮಿನಿ ಎಚ್ಚರ್‍ಪಿಂಚರ್ ಶ್ವಾನದಿಂದ ಹಿಡಿದು 100 ಕೆಜಿಯ ಸೆಂಟ್ ಬನ್ರಾಡ್, ಗ್ರೇಟ್ ಡೆನ್, ಡಾಬರ್‍ಮ್ಯಾನ್ ಸೇರಿದಂತೆ ವಿವಿಧ ತಳಿಗಳ ಶ್ವಾನಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ. ವಿವರಗಳಿಗೆ ಮೊ.ಸಂ. 9844079165 ಅನ್ನು ಸಂಪರ್ಕಿಬಹುದು ಎಂದರು. ದೇಶಿ ಶ್ವಾನ ತಳಿ ಸಂಘದ ಅಧ್ಯಕ್ಷ ಡಾ.ಡಿ.ಟಿ.ಜಯರಾಮಯ್ಯ ಮಾತನಾಡಿ, ಸುಮಾರು 25 ದೇಶಿ ಶ್ವಾನ ತಳಿಗಳ ಪೈಕಿ ಈಗ ಕೇವಲ 8 ತಳಿಗಳು ಉಳಿದಿವೆ. ಸ್ಪರ್ಧೆ ಯಲ್ಲಿ ಬಹುತೇಕ ಎಲ್ಲಾ ವಿದೇಶಿ ತಳಿಗಳೇ ಹೆಚ್ಚಿರಲಿದ್ದು, ಈ ಪೈಕಿ ದೇಶಿ ತಳಿಗಳಾದ ಮುಧೋಳ್, ಪಶ್ಮಿ, ರಾಜಪಾಳ್ಯಂ ತಳಿಗಳು ಪಾಲ್ಗೊಳ್ಳುತ್ತಿವೆ. ಕರ್ನಾಟಕ ಮೂಲದ ಮುಧೋಳ್ ಎಲ್ಲ ರೀತಿಯ ವಾತಾವರಣ ಗಳಿಗೂ ಹೊಂದಿಕೊಳ್ಳುವ ಹಾಗೂ ರೋಗ -ರುಜಿನಗಳಿಗೆ ಬಹುಬೇಗ ತುತ್ತಾಗದ ವಿಶೇಷ ಗುಣಲಕ್ಷಣಗಳನ್ನು ಹೊಂದಿದೆ. ಜೊತೆಗೆ ಈ ಇದರ ಪಾಲನೆಯೂ ದುಬಾರಿಯಲ್ಲ ಎಂದರು. ಇದೇ ವೇಳೆ ಶ್ವಾನ ಪ್ರದರ್ಶನ ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಮಾಡಲಾ ಯಿತು. ಕ್ಲಬ್‍ನ ಕಾರ್ಯದರ್ಶಿ ಡಾ.ಸಂಜೀವ ಮೂರ್ತಿ, ಖಜಾಂಚಿ ಎಂ.ಸಿ.ವಿನೋದ್ ಕುಮಾರ್, ಪಶುವೈದ್ಯ ಡಾ.ಅರುಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

Translate »