ಅ.13ರಂದು ಮೈಸೂರಿನಲ್ಲಿ ಕಾರ್ ರೇಸಿಂಗ್
ಮೈಸೂರು

ಅ.13ರಂದು ಮೈಸೂರಿನಲ್ಲಿ ಕಾರ್ ರೇಸಿಂಗ್

October 11, 2019

ಮೈಸೂರು: ಮೈಸೂರು ದಸರಾ ಮಹೋತ್ಸವ ಅಂಗವಾಗಿ ಆಟೋ ಮೋಟಿವ್ ಸ್ಪೋಟ್ರ್ಸ್ ಕ್ಲಬ್ ಆಫ್ ಮೈಸೂರ್ (ಅಸ್ಕಾಮ್) ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿ ಆಶ್ರಯದಲ್ಲಿ ಅ.13ರಂದು ಮೈಸೂರಿ ನಲ್ಲಿ ಗ್ರಾವೆಲ್ ಫೆಸ್ಟ್ ಆಟೋಕ್ರಾಸ್ (ಕಾರ್ ರೇಸಿಂಗ್) ರೇಸ್ ಆಯೋ ಜಿಸಲಾಗಿದೆ ಎಂದು ಅಸ್ಕಾಮ್‍ನ ನಿರ್ದೇಶಕ ಅರುಣ್ ಅರಸ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಲಲಿತ ಮಹಲ್ ಅರಮನೆ ಹೆಲಿಪ್ಯಾಡ್ ಮೈದಾನದಲ್ಲಿ ರೇಸಿಂಗ್ ಆಯೋಜಿಸಿದ್ದು, ಅಂದು ಬೆಳಿಗ್ಗೆ 8.30ಕ್ಕೆ ಆರಂಭಗೊಳ್ಳುವ ರೇಸ್, ಸಂಜೆ 5ರೊಳಗೆ ಮುಕ್ತಾಯಗೊಳ್ಳಲಿದೆ. ದೇಶದ ವಿವಿಧ ಭಾಗಗಳಿಂದ 101 ಚಾಲಕರು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ದೆಹಲಿ, ಮಹಾರಾಷ್ಟ್ರ, ಗೋವಾ, ತೆಲಂಗಾಣ, ತಮಿಳುನಾಡು, ಕೇರಳ ಮೂಲದ ಅಗ್ರಮಾನ್ಯ ಚಾಲಕರು ಪಾಲ್ಗೊಳ್ಳುತ್ತಿದ್ದು, ಖ್ಯಾತ ರೇಸಿಂಗ್ ಚಾಲಕರಾದ ಡೆನ್ ತಿಮ್ಮಯ್ಯ, ಕೆ.ಎಂ.ಬೋಪಯ್ಯ, ಧ್ರುವಚಂದ್ರಶೇಖರ್, ಸುಹೇಮ್ ಕರೀಮ್ ಮೊದಲಾದವರು ಭಾಗವಹಿಸಲಿದ್ದಾರೆ. ಮೈಸೂರು ನಗರದ 16 ಯುವಕರು ಹಾಗೂ ಮಹಿಳಾ ವಿಭಾಗದಲ್ಲಿ 10 ಮಹಿಳೆಯರು ರೇಸಿಂಗ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಇಂಜಿನ್ ಸಾಮಥ್ರ್ಯದ ಆಧಾರದಲ್ಲಿ 9 ವಿಭಾಗಗಳಲ್ಲಿ ರೇಸಿಂಗ್ ಜರುಗಲಿದೆ. ಇದನ್ನು ಕಣ್ತುಂಬಿಕೊಳ್ಳಲು 8 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದ್ದು, ಉಚಿತ ಪ್ರವೇಶವಿರು ತ್ತದೆ. ಗಣ್ಯರಿಗಾಗಿ ಪಾಸ್ ವ್ಯವಸ್ಥೆ ಮಾಡಲಾಗಿದೆ. ಒಟ್ಟು 4 ಲಕ್ಷದ 40 ಸಾವಿರ ಮೊತ್ತದ ಬಹುಮಾನಗಳನ್ನು ನೀಡಲಾಗುತ್ತಿದೆ. ಈ ಪೈಕಿ `ಗ್ರಾವೆಲ್‍ಕಿಂಗ್’ ಟೈಟಲ್‍ಗೆ ಆಯ್ಕೆಗೊಳ್ಳುವ ಚಾಲಕರಿಗೆ 2 ಲಕ್ಷ ರೂ. ನಗದು ಹಾಗೂ ಬೆಳ್ಳಿ ಟ್ರೋಫಿ ಪ್ರದಾನ ಮಾಡಲಾಗುವುದು. ರೇಸಿಂಗ್‍ನಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು. ಅಸ್ಕಾಮ್‍ನ ನಿರ್ದೇಶಕರಾದ ಚರಣ್‍ರಾಜ್, ಎನ್.ಲೋಕೇಶ್ ಗೋಷ್ಠಿಯಲ್ಲಿದ್ದರು.

Translate »