ಮೈಸೂರು

ಜಂಬೂಸವಾರಿ ವೇಳೆ ಮೊಬೈಲ್ ಕಳವು, ಪಿಕ್ ಪಾಕೆಟ್ವಿವಿಧ ಪೊಲೀಸ್ ಠಾಣೆಗಳಲ್ಲಿ 48 ಪ್ರಕರಣ ದಾಖಲು
ಮೈಸೂರು

ಜಂಬೂಸವಾರಿ ವೇಳೆ ಮೊಬೈಲ್ ಕಳವು, ಪಿಕ್ ಪಾಕೆಟ್ವಿವಿಧ ಪೊಲೀಸ್ ಠಾಣೆಗಳಲ್ಲಿ 48 ಪ್ರಕರಣ ದಾಖಲು

October 10, 2019

ಮೈಸೂರು, ಅ.9(ಆರ್‍ಕೆ)- ಲಕ್ಷಾಂತರ ಮಂದಿ ಸೇರಿದ್ದ ಜಂಬೂಸವಾರಿ ವೇಳೆ ಮೊಬೈಲ್ ಕಳವು ಹಾಗೂ ಪಿಕ್‍ಪಾಕೆಟ್‍ನಂತಹ ಪ್ರಕರಣಗಳು ನಡೆದಿವೆ. ಠಾಣೆಗಳಿಗೆ ಹೋಗಿ ಖುದ್ದಾಗಿ ದೂರು ನೀಡಲು ಸಾಧ್ಯವಾಗದ ಹೊರಗಿನವರು ಮಂಗಳವಾರ ರಾತ್ರಿ ಹಾಗೂ ಇಂದು ಆನ್‍ಲೈನ್ ಮೂಲಕ ದೂರು ದಾಖಲಿಸಿದ್ದಾರೆ. ದೇವರಾಜ ಠಾಣೆಗೆ 25, ಲಷ್ಕರ್ ಠಾಣೆ ವ್ಯಾಪ್ತಿಯಲ್ಲಿ 15, ಮಂಡಿ ಹಾಗೂ ಕೆ.ಆರ್ ಠಾಣೆಗಳಲ್ಲಿ ತಲಾ 8 ಪ್ರಕರಣಗಳು ದಾಖಲಾಗಿವೆ. ನೂಕು ನುಗ್ಗಲಿನಲ್ಲಿ ಕೆಲವರ ಮೊಬೈಲ್ ಫೋನು ಗಳು ನಾಪತ್ತೆಯಾಗಿದ್ದರೆ ಖದೀಮರು ಕೆಲವರ ಜೇಬಿಗೆ ಕತ್ತರಿ ಹಾಕಿ…

ಯಶಸ್ವಿ ದಸರಾ ಆಚರಣೆ: ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ ದಿಲ್‍ಖುಷ್
ಮೈಸೂರು

ಯಶಸ್ವಿ ದಸರಾ ಆಚರಣೆ: ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ ದಿಲ್‍ಖುಷ್

October 10, 2019

ಮೈಸೂರು,ಅ.9(ಆರ್‍ಕೆ)- ಈ ಬಾರಿ ದಸರಾ ಉತ್ಸವ ಯಶಸ್ವಿಯಾಗಿ ನೆರವೇರಿದ್ದರಿಂದ ನಿಟ್ಟುಸಿರು ಬಿಟ್ಟಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ನಿರೀಕ್ಷೆಗೂ ಮೀರಿ ಯಶಸ್ವಿ ಉತ್ಸವ ಆಚರಣೆಗೆ ಸಹಕರಿಸಿದ ಸರ್ವರಿಗೂ ಧನ್ಯವಾದ ಅರ್ಪಿಸಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಸಭಾಂ ಗಣದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ನಿಗದಿತ ವೇಳೆಗೆ ಎಲ್ಲಾ ಕಾರ್ಯಕ್ರಮಗಳೂ ನಡೆದು, ಯಾವುದೇ ಸಣ್ಣಪುಟ್ಟ ಅಹಿತಕರ ಘಟನೆಗಳೂ ಸಂಭವಿಸದೆ ವಿಶ್ವ ಖ್ಯಾತಿಯ ವಿಜಯದಶಮಿ ಮೆರವಣಿಗೆ ಯಶಸ್ವಿಯಾಗಿ ನಡೆದಿದೆ ಎಂದರು. ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾರ್ಪೊರೇಟರ್‍ಗಳು…

ಮೈಸೂರಿನಲ್ಲಿ ನಾಳೆಯಿಂದ 13ರವರೆಗೆ ಶಸ್ತ್ರಚಿಕಿತ್ಸಕರ ಸಮ್ಮೇಳನ
ಮೈಸೂರು

ಮೈಸೂರಿನಲ್ಲಿ ನಾಳೆಯಿಂದ 13ರವರೆಗೆ ಶಸ್ತ್ರಚಿಕಿತ್ಸಕರ ಸಮ್ಮೇಳನ

October 10, 2019

ಮೈಸೂರು, ಅ.9(ಪಿಎಂ)- ವೈದ್ಯ ವಿಜ್ಞಾನದ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಸಾಧನೆ ಹಾಗೂ ಸಂಶೋಧನೆಗಳನ್ನು ವಿನಿಮಯ ಮಾಡಿಕೊಳ್ಳುವ ಅಂತಾರಾಷ್ಟ್ರೀಯ ಶಸ್ತ್ರ ಚಿಕಿತ್ಸಕರ ಕಾಲೇಜಿನ (ಜಾಗತಿಕ ಸಂಘಟನೆ) ಭಾರತ ವಿಭಾಗದ 65ನೇ ವಾರ್ಷಿಕ ಸಮ್ಮೇಳನ ಮೈಸೂರಿನಲ್ಲಿ ಅ.11ರಿಂದ 13ರವ ರೆಗೆ 3 ದಿನಗಳು ನಡೆಯಲಿದೆ ಎಂದು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಎಸ್.ಬಿ.ವಸಂತಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಶಸ್ತ್ರಚಿಕಿತ್ಸಕರ ಕಾಲೇಜು (ಇಂಟರ್‍ನ್ಯಾಷನಲ್ ಕಾಲೇಜ್ ಆಫ್ ಸರ್ಜನ್ಸ್) 112 ದೇಶಗಳಲ್ಲಿ ತನ್ನ ಕಾರ್ಯ ವ್ಯಾಪ್ತಿ…

ಅದ್ಧೂರಿ ಜಂಬೂಸವಾರಿ
ಮೈಸೂರು

ಅದ್ಧೂರಿ ಜಂಬೂಸವಾರಿ

October 9, 2019

ಮೈಸೂರು, ಅ. 8(ಆರ್‍ಕೆ)- ನವರಾತ್ರಿ ಉತ್ಸವದ ಅಂತಿಮ ಘಟ್ಟವೂ ಆದ ವಿಶ್ವ ಪ್ರಸಿದ್ಧ ವಿಜಯದಶಮಿ ಮೆರವಣಿಗೆ ಇಂದು ವಿಜೃಂಭಣೆ ಹಾಗೂ ಯಶಸ್ವಿಯಾಗಿ ನೆರವೇರಿತು. ಮಳೆಯ ಚಿಂತೆ ಇಲ್ಲ, ಬಿಸಿಲು ಹೆಚ್ಚಿರದೇ ಹಿತಕರ ವಾತಾವರಣದಲ್ಲಿ ಜಗದ್ವಿಖ್ಯಾತ ದಸರಾ ಜಂಬೂ ಸವಾರಿ ಮೆರ ವಣಿಗೆಯನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡರು. 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಯನ್ನು ಹೊತ್ತ ಅರ್ಜುನನ ರಾಜಗಾಂಭೀರ್ಯ ನಡಿಗೆಯಿಂದ ಸಾಗುತ್ತಿದ್ದರೆ ಪುಳಕಿತರಾದ ಜನಸ್ತೋಮ ಭಕ್ತಿಪರವಶರಾಗಿ ರಾಜಮಾರ್ಗ ದುದ್ದಕ್ಕೂ ಕೈಮುಗಿದು…

ಸಾಹಸ ಪ್ರದರ್ಶನ, ಬೆಳಕಿನ ವೈಭವದೊಂದಿಗೆ ದಸರಾಗೆ ತೆರೆ
ಮೈಸೂರು

ಸಾಹಸ ಪ್ರದರ್ಶನ, ಬೆಳಕಿನ ವೈಭವದೊಂದಿಗೆ ದಸರಾಗೆ ತೆರೆ

October 9, 2019

ಮೈಸೂರು, ಅ.8(ಎಸ್‍ಬಿಡಿ)- ಬೆಳಕಿನ ವೈಭವದೊಂದಿಗೆ 2019ರ ಯಶಸ್ವಿ ಮೈಸೂರು ದಸರಾ ಮಹೋತ್ಸವಕ್ಕೆ ವರ್ಣರಂಜಿತ ತೆರೆ ಬಿದ್ದಿತು. ಮೈನವಿರೇಳಿಸುವ ಸೈನಿಕರ ಸಾಹಸ, ಪೊಲೀಸ್ ಪ್ರಶಿಕ್ಷಣಾರ್ಥಿಗಳ ರೋಚಕ ಪಂಜಿನ ಕವಾಯತು, ಮನಸೂರೆಗೊಂಡ ಅಶ್ವಾರೋಹಿ ದಳದ ಉರಿ ಗೂಟ ಕೀಳುವ ಕಸರತ್ತು, ಲೇಸರ್ ಶೋ, ಗಮನ ಸೆಳೆದ ವಿವಿಧ ತುಕಡಿಗಳ ಪಥ ಸಂಚಲನ, ಮುದ ನೀಡಿದ ನೃತ್ಯ ಪ್ರದರ್ಶನ, ಸಿಡಿ ಮದ್ದಿನ ಚಿತ್ತಾರದೊಂದಿಗೆ ಬನ್ನಿಮಂಟಪ ಪಂಜಿನ ಕವಾಯತು ಮೈದಾ ನದಲ್ಲಿ ಈ ಬಾರಿಯ ದಸರೆಗೆ ತೆರೆ ಬೀಳುವುದರ ಜೊತೆಗೆ 2020ರ ದಸರಾ…

ನಾಳೆ ವಿಜಯದಶಮಿ ಮೆರವಣಿಗೆ
ಮೈಸೂರು

ನಾಳೆ ವಿಜಯದಶಮಿ ಮೆರವಣಿಗೆ

October 7, 2019

ಮೈಸೂರು, ಅ. 6(ಆರ್‍ಕೆ)- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯು ಅಕ್ಟೋಬರ್ 8ರಂದು ಮಂಗಳವಾರ ನಡೆಯಲಿದೆ. ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಮೈಸೂರಿಗೆ ಆಗಮಿಸಿ ಪ್ರಸಿದ್ಧ ಜಂಬೂ ಸವಾರಿ ವೈಭವವನ್ನು ಕಣ್ತುಂಬಿಕೊಳ್ಳಲಿದ್ದು, ಈ ಐತಿಹಾಸಿಕ ಸಂಭ್ರಮಕ್ಕೆ ಸಾಂಸ್ಕøತಿಕ ನಗರಿ ಮೈಸೂರು ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಅಕ್ಟೋಬರ್ 8ರಂದು ಮಧ್ಯಾಹ್ನ 2.15 ರಿಂದ 2.58 ಗಂಟೆಯೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅರಮನೆ ಬಲ ರಾಮ ದ್ವಾರದ ಶ್ರೀ ಕೋಟೆ…

ಅರಮನೆಯಲ್ಲಿ ಇಂದು ಆಯುಧ ಪೂಜೆ
ಮೈಸೂರು

ಅರಮನೆಯಲ್ಲಿ ಇಂದು ಆಯುಧ ಪೂಜೆ

October 7, 2019

ಮೈಸೂರು, ಅ.6(ಎಂಟಿವೈ) – ಅರಮನೆಯಲ್ಲಿ ನಾಳೆ (ಅ.7) ಬೆಳಿಗ್ಗೆ 6.15ರಿಂದ 9ರವರೆಗೆ ಚಂಡಿ ಹೋಮ, ಆಯುಧ ಪೂಜೆ, ಪೂರ್ಣಾಹುತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯ ಜರುಗಲಿದ್ದು, ರಾಜವಂಶಸ್ಥ ಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟದ ಕತ್ತಿ ಸೇರಿದಂತೆ ಆಯುಧಗಳಿಗೆ ಪೂಜೆ ಸಲ್ಲಿಸಲಿದ್ದಾರೆ. ನವರಾತ್ರಿ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಕಳೆದ ಎಂಟು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯ ಜರುಗುತ್ತಿದೆ. ಅದರ ಅಂಗವಾಗಿ ನಾಳೆ ಬೆಳಿಗ್ಗೆ 6.15ಕ್ಕೆ ಅರಮನೆಯ ಒಳಾವರಣದಲ್ಲಿ ಚಂಡಿ ಹೋಮ ಆರಂಭವಾಗಲಿದೆ. 6.45ಕ್ಕೆ ಆನೆ ಸವಾರಿ ಬಾಗಿಲಿಗೆ…

ಜಂಬೂ ಸವಾರಿಗೆ 10 ಸಾವಿರ ಪೊಲೀಸರ ನಿಯೋಜನೆ
ಮೈಸೂರು

ಜಂಬೂ ಸವಾರಿಗೆ 10 ಸಾವಿರ ಪೊಲೀಸರ ನಿಯೋಜನೆ

October 7, 2019

ಮೈಸೂರು, ಅ.6(ಆರ್‍ಕೆ)-ಮಂಗಳವಾರ ನಡೆ ಯಲಿರುವ ವಿಜಯದಶಮಿ ಮೆರವಣಿಗೆಗೆ 10,000 ಪೊಲೀಸರನ್ನು ನಿಯೋಜಿಸಿ ಭಾರೀ ಭದ್ರತೆ ಮಾಡ ಲಾಗಿದೆ. ಆ ಐತಿಹಾಸಿಕ ಮೆರವಣಿಗೆ ನೋಡಲು ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಅಹಿತ ಕರ ಘಟನೆ ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಇನ್ನಿಲ್ಲದ ಭದ್ರತೆ ಒದಗಿಸಿ ಮೈಸೂರಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ ಎಂದು ಕಾನೂನು-ಸುವ್ಯವಸ್ಥೆ ಡಿಸಿಪಿ ಎಂ.ಮುತ್ತುರಾಜ್ `ಮೈಸೂರು ಮಿತ್ರ’ನಿಗೆ ತಿಳಿಸಿ ದ್ದಾರೆ. 14 ಮಂದಿ ಎಸ್ಪಿಗಳು, 54 ಡಿವೈಎಸ್ಪಿ, 153 ಇನ್ಸ್‍ಪೆಕ್ಟರ್, 336 ಸಬ್‍ಇನ್ಸ್‍ಪೆಕ್ಟರ್ ಮಟ್ಟದ ಅಧಿಕಾರಿ ಗಳೂ…

ಯುವ ದಸರಾಗೆ ವರ್ಣರಂಜಿತ ತೆರೆ
ಮೈಸೂರು

ಯುವ ದಸರಾಗೆ ವರ್ಣರಂಜಿತ ತೆರೆ

October 7, 2019

ಮೈಸೂರು, ಅ.6(ಎಸ್‍ಬಿಡಿ)- ಆರು ದಿನಗಳಿಂದ ಯುವ ಜನತೆ ಯನ್ನು ಸೂಜಿಗಲ್ಲಿನಂತೆ ಸೆಳೆದು ಮನರಂಜಿಸಿದ ಯುವ ದಸರಾಗೆ ಯಶಸ್ವಿ ತೆರೆ ಬಿದ್ದಿತು. ಮೈಸೂರು ದಸರಾ ಅಂಗವಾಗಿ ಮಹಾ ರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಯುವ ದಸರಾದ ಕಡೆಯ ದಿನವಾದ ಇಂದು ಬಾಲಿವುಡ್‍ನ ಖ್ಯಾತ ಸಂಗೀತ ನಿರ್ದೇಶಕ ಪ್ರೀತಮ್ ಚಕ್ರವರ್ತಿ, ಹಲವು ಜನಪ್ರಿಯ ಗೀತೆ ಗಳನ್ನು ಪ್ರಸ್ತುತಪಡಿಸಿ, ಪ್ರೇಕ್ಷಕರ ರಂಜಿಸಿದರು. ಕಿಕ್ಕಿರಿದಿದ್ದ ಯುವ ಜನತೆ ಕೇಕೆ, ಶಿಳ್ಳೆಯೊಂದಿಗೆ ಕಾರ್ಯಕ್ರಮವನ್ನು ಆಸ್ವಾದಿಸಿದರು. ಮೈಸೂರಿನ ಯುವ ಡ್ಯಾನ್ಸ್ ಅಕಾಡೆಮಿ ಕಲಾವಿದರು ಕ್ರೇಜಿ ಸ್ಟಾರ್…

ಇಂದು ಮೈಸೂರಿಗೆ ಸಿಎಂ ಯಡಿಯೂರಪ್ಪ
ಮೈಸೂರು

ಇಂದು ಮೈಸೂರಿಗೆ ಸಿಎಂ ಯಡಿಯೂರಪ್ಪ

October 7, 2019

ಮೈಸೂರು,ಅ.6-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅ.7 ರಿಂದ 9ರವರೆಗೆ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅ.7ರಂದು ಸಂಜೆ 6.30 ಗಂಟೆಗೆ ರಸ್ತೆ ಮೂಲಕ ಆಗಮಿಸಿ ಮೈಸೂರಿನಲ್ಲಿ ವಾಸ್ತವ್ಯ ಹೂಡುವರು. ಅ.8ರಂದು ಬೆಳಿಗ್ಗೆ 9 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನ ಸುತ್ತೂರು ಮಠಕ್ಕೆ ಭೇಟಿ ನೀಡುವರು. ಮಧ್ಯಾಹ್ನ 1 ಗಂಟೆಗೆ ದಸರಾ ಪ್ರಯುಕ್ತ ಗಣ್ಯರ ಗೌರವಾರ್ಥ ಲಲಿತ ಮಹಲ್ ಹೋಟೆಲ್‍ನಲ್ಲಿ ಆಯೋ ಜಿಸಿರುವ ಭೋಜನಾಕೂಟದಲ್ಲಿ ಭಾಗವಹಿಸುವರು. ಮಧ್ಯಾಹ್ನ 2.15ಕ್ಕೆ ಅರಮನೆ ಆವರಣದ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ಪೂಜೆ ನೆರವೇರಿಸುವರು….

1 805 806 807 808 809 1,611
Translate »