ಮೈಸೂರು, ಅ.4(ಎಸ್‍ಬಿಡಿ)-ಕನ್ನಡದ ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ, ನವಿರು ಧ್ವನಿಯ ಸಂಚಿತ್ ಹೆಗ್ಡೆ ಗಾಯನ ಮೋಡಿ, ರೂಪದರ್ಶಿಯರ ಮಾರ್ಜಾಲ ನಡಿಗೆಯ ಸೊಬಗು, ಆಕರ್ಷಕ ನೃತ್ಯ ಪ್ರದರ್ಶನದಿಂದ ಇಂದಿನ ಯುವ ದಸರಾ ರಂಗು ಪಡೆದಿತ್ತು. ತಡವಾಗಿ ರಾತ್ರಿ 10.30ಕ್ಕೆ ವೇದಿಕೆಗೆ ಬಂದ ರ್ಯಾಪರ್ ಚಂದನ್ ಶೆಟ್ಟಿ, `ಪವರ್’ ಚಿತ್ರದ `ಧಮ್ ಪವರೇ…’ ಹಾಡುವ ಮೂಲಕ ಕಾದು ಬೇಸರದಲ್ಲಿದ್ದ ಪ್ರೇಕ್ಷಕರ ಉತ್ಸಾಹ ಹೆಚ್ಚಿಸುವಲ್ಲಿ ಸಫಲರಾದರು. ತಮ್ಮದೇ ಆಲ್ಬಂನ ‘ಮೂರೇ ಮೂರು ಪೆಗ್ಗಿಗೆ ತಲೆ ಗಿರಗಿರ ಗಿರ ಅಂತಿದೆ…’ ಜನಪ್ರಿಯ ಗೀತೆಯನ್ನು…
ನೆರೆ ಪರಿಹಾರಕ್ಕಾಗಿ ಪೂರಕ ಬಜೆಟ್
October 4, 2019ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಹೊಸ ದಾಗಿ ಮಂಡಿಸಲು ಉದ್ದೇಶಿಸಿದ್ದ ಬಜೆಟ್ ಕೈಬಿಟ್ಟು ನೆರೆ ಪೀಡಿತ ಪ್ರದೇಶಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಪ್ರತ್ಯೇಕ ಪೂರಕ ಬಜೆಟ್ ಮಂಡಿಸಲು ಇಂದಿಲ್ಲಿ ಸೇರಿದ್ದ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ. ರಾಜ್ಯದಲ್ಲಿ ಉಂಟಾದ ನೆರೆಗೆ ಕೇಂದ್ರ ಸರ್ಕಾರ ಇದು ವರೆಗೂ ಪರಿಹಾರ ನೀಡದಿರುವ ಹಿನ್ನೆಲೆಯಲ್ಲಿ ರಾಜ್ಯ ತನ್ನ ಬಾಬ್ತಿನಿಂದಲೇ ಆರ್ಥಿಕ ಕ್ರೋಢೀಕರಣಕ್ಕಾಗಿ ಈ ವಿಶೇಷ ಬಜೆಟ್ ಮಂಡನೆ ಮಾಡಲಿದೆ. ವಿವಿಧ ಇಲಾಖೆಗಳಿಗೆ ನೀಡಲಾಗಿರುವ ಅನುದಾನ ಕಡಿತಗೊಳಿಸಿ, ಆ ಹಣವನ್ನು…
ಮೊಹಾಲಿ ಠಾಕೂರ್, ಹನುಮಂತನ ಹಾಡಿಗೆ ಕುಣಿದು ಕುಪ್ಪಳಿಸಿದ ಯುವ ಸಮೂಹ
October 4, 2019ಮೈಸೂರು: ನಟಿ, ಗಾಯಕಿ ಮೊಹಾಲಿ ಠಾಕೂರ್ ಸುಮಧುರ ಗಾಯನದ ಮೂಲಕ ಯುವ ದಸರಾದಲ್ಲಿ ನೆರೆದಿದ್ದ ಪ್ರೇಕ್ಷಕರ ಮನರಂಜಿಸಿದರು. `ದಸರಾ ಹಬ್ಬದ ಶುಭಾಶಯಗಳು. ನಮಸ್ಕಾರ ಮೈಸೂರು’ ಎಂದು ಕನ್ನಡದಲ್ಲಿ ಹೇಳುವ ಮೂಲಕ ಪ್ರೇಕ್ಷಕರ ಮನಸ್ಸು ತಟ್ಟಿದ ಮೊಹಾಲಿ, ತಮಗೆ ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟ `ದಮ್ ಲಗಾ ಕೆ ಹೈಶಾ’ ಚಿತ್ರದ `ಮೋಹ್ ಮೋಹ್‍ಕೆ ಧಾಗೆ…’ `ರೇಸ್ ಹೈ ಸಾಸೋಂ ಕಿ…’, `ಸವಾರ್ ಲೂನ್…’, `ಖ್ವಾಬ್ ದೇಖೆ ಝೂಟೆ ಮೋಟೆ…’, `ದಮಾ ಧಂ ಮಸ್ತ್ ಖಲಂದರ್…’, `ತುಜುಕೋ ಜೋ ಪಾಯಾ…’,…
ದಸರಾ ಗೋಲ್ಡ್ ಕಾರ್ಡ್‍ಗೆ ಭಾರೀ ಬೇಡಿಕೆ…
October 4, 2019ಮೈಸೂರು: ದಸರಾ ಗೋಲ್ಡ್‍ಕಾರ್ಡ್, ಟಿಕೆಟ್ ಖರೀದಿಸಲು ಮೈಸೂರಿನ ಡಿಸಿ ಕಚೇರಿ ಬಳಿ ಸಾರ್ವ ಜನಿಕರು ಮುಗಿಬಿದ್ದ ಕಾರಣ ಗುರುವಾರ ಭಾರೀ ನೂಕು-ನುಗ್ಗಲು ಉಂಟಾಯಿತು. ಈ ವೇಳೆ ಕೊಠಡಿಗೆ ನುಗ್ಗಲು ಯತ್ನಿ ಸಿದ ಜನರನ್ನು ನಿಯಂತ್ರಿಸಿ, ಸಾಲುಗಟ್ಟಿ ನಿಲ್ಲಿಸಲು ಲಕ್ಷ್ಮೀಪುರಂ ಠಾಣೆ ಇನ್‍ಸ್ಪೆಕ್ಟರ್ ಹಾಗೂ ಸಿಬ್ಬಂದಿ ಹರಸಾಹಸಪಡಬೇಕಾ ಯಿತು. ಆದರೂ ಕಡೆಗೆ ಟಿಕೆಟ್ ಸಿಕ್ಕಿದ್ದು ಕೇವಲ 125 ಮಂದಿಗೆ ಮಾತ್ರ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3.30ರವರೆಗೆ ಕಾದು ನಿಂತಿದ್ದ ಜನರು ಇತ್ತ ಟಿಕೆಟ್ ಸಿಗದಿ ದ್ದಕ್ಕೆ ಆಕ್ರೋಶಗೊಂಡು…
ಮೈಸೂರು-ಬೆಂಗಳೂರು ರೈಲು ಸಂಚಾರ 1 ಗಂಟೆ ವ್ಯತ್ಯಯ
October 4, 2019ಮೈಸೂರು: ವಿದ್ಯುತ್ ಲೈನ್ ನಲ್ಲಿ ತಾಂತ್ರಿಕ ದೋಷ ಉಂಟಾದ ಪರಿಣಾಮ ಇಂದು ಬೆಳಿಗ್ಗೆ ಮೈಸೂರು-ಬೆಂಗಳೂರು ನಡುವೆ ಕೆಲ ರೈಲುಗಳ ಸಂಚಾರ ಒಂದು ಗಂಟೆ ಕಾಲ ಸ್ಥಗಿತ ಗೊಂಡು ಪ್ರಯಾಣಿಕರು ಪರಿತಪಿಸಬೇಕಾಗಿ ಬಂತು. ಪರಿಣಾಮ ಮೈಲಾಡುತುರೈ, ಟುಟಿಕೊರಿನ್, ಹಂಪಿ ಹಾಗೂ ಮಾಲ್ಗುಡಿ ಎಕ್ಸ್‍ಪ್ರೆಸ್ ರೈಲುಗಳು ತಡವಾಗಿ ಸಂಚರಿಸಿದವು. ಮೈಸೂರು ರೈಲು ನಿಲ್ದಾ ಣದ ಎಲೆಕ್ಟ್ರಿಕಲ್ ಇಂಜಿನಿಯರ್‍ಗಳು, ಮೆಕ್ಯಾನಿಕಲ್ ವಿಭಾಗದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ತಾಂತ್ರಿಕ ದೋಷ ಸರಿಪಡಿಸಿ ವಿದ್ಯುತ್ ಸಂಪರ್ಕ ಪುನಃ ಕಲ್ಪಿಸಿದ ಬಳಿಕ ರೈಲುಗಳು ಚಲಿಸತೊಡಗಿದವು….
ಆಗಸದಲ್ಲಿ ಹಕ್ಕಿಗಳಾಗಿ ರೋಚಕ ಪ್ರದರ್ಶನ ನೀಡಿದ ವಾಯುಪಡೆ ಯೋಧರು…
October 3, 2019ಮೈಸೂರು,ಅ.2(ಎಂಟಿವೈ)- ಮೈಸೂರಿನ ಬನ್ನಿಮಂಟಪ ಪಂಜಿನ ಕವಾಯತು ಮೈದಾನ ಬುಧವಾರ ಭಾರೀ ಜನಸ್ತೋಮಕ್ಕೆ ಸಾಕ್ಷಿಯಾಯಿತು. ಉರಿ ಬಿಸಿಲನ್ನು ಲೆಕ್ಕಿಸದೇ ಜನ ಕಿಕ್ಕಿರಿದು ತುಂಬಿದ್ದ ಮೈದಾನದಲ್ಲಿ ಮುಗಿಲು ಮುಟ್ಟಿದ ಹರ್ಷೋದ್ಘಾರ. ಬಾನಂಗಳದಲ್ಲಿ ಜಿಗಿದು ಸಾಹಸ ಪ್ರದರ್ಶಿಸಿದ ಭಾರತೀಯ ಯೋಧರ ಧೈರ್ಯ – ಧೀರತನಕ್ಕೆ ನೆರೆದಿದ್ದ ವರು ಭಾವಪೂರ್ವಕವಾಗಿ ನಮಿಸಿದರು. ದಸರಾ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ `ಏರ್ ಶೋ’ಗೆ ಬೆಳಿಗ್ಗೆ 9 ಗಂಟೆಯಿಂದಲೇ ತಂಡೋಪತಂಡವಾಗಿ ಆಗಮಿಸಿ, ಶೋ ಆರಂಭ ವಾಗುವಷ್ಟರಲ್ಲಿ ಮೈದಾನ ಕಿಕ್ಕಿರಿದು…
ದಸರಾ ಏರ್ ಶೋ ಹೆಲಿಕಾಪ್ಟರ್ ಶ್ರೀರಂಗಪಟ್ಟಣ ಬಳಿ ತುರ್ತು ಭೂ ಸ್ಪರ್ಶ
October 3, 2019ಶ್ರೀರಂಗಪಟ್ಟಣ, ಅ.2(ವಿನಯ್ ಕಾರೇಕುರ)-ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ಇಂದು ನಡೆದ ಏರ್ ಶೋನಲ್ಲಿ ಭಾಗವಹಿಸಬೇಕಿದ್ದ ವಾಯುಪಡೆ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ತಾಲೂಕಿನ ಮಹದೇವಪುರ ಚನ್ನಹಳ್ಳಿ ಬೋರೆ ಬಳಿ ತುರ್ತು ಭೂಸ್ಪರ್ಶ ಮಾಡಿತು. ಅದೃಷ್ಟವಶಾತ್ ಅದರಲ್ಲಿದ್ದ ಯೋಧರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಏರ್ ಶೋಗಾಗಿ ಇಂದು ಬೆಳಿಗ್ಗೆ ಬೆಂಗಳೂರು ಯಲಹಂಕ ವಾಯುನೆಲೆಯಿಂದ ಮೈಸೂರಿನತ್ತ ಹೊರಟಿದ್ದ ಹೆಲಿ ಕಾಪ್ಟರ್‍ನಲ್ಲಿ ಇಂಧನ ಸೋರಿಕೆ ಅಪಾಯವರಿತ ಪೈಲಟ್ ಹೆಲಿಕಾಪ್ಟರ್ ಅನ್ನು ಮೊದಲಿಗೆ ಅರೆಕೆರೆ ಬಳಿ ಲ್ಯಾಂಡ್ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಹೆಲಿ…
195 ಕೋಟಿ ಖರ್ಚು ಮಾಡಿ ಸಿದ್ಧಪಡಿಸಿದಜಾತಿಗಣತಿ ಕಸದ ಬುಟ್ಟಿಗೆ
October 3, 2019ಬೆಂಗಳೂರು, ಅ.2(ಕೆಎಂಶಿ)- ಹಿಂದುಳಿದ ವರ್ಗಗಳ ಆಯೋಗದಿಂದ ಸಿದ್ಧಪಡಿಸಲಾದ ಜಾತಿ ಜನಗಣತಿ ವರದಿಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕಳೆದ ಐದಾರು ವರ್ಷಗಳಿಂದ ಗೊಂದಲದ ಗೂಡಾಗಿರುವ ಜಾತಿ ಜನಗಣತಿಯ ವರದಿಯನ್ನು ಅಂಗೀಕಾರ ಅಥವಾ ತಿರಸ್ಕಾರ ಮಾಡಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲು ಇಷ್ಟಪಡದೆ ಈವರೆಗಿನ ಎಲ್ಲಾ ಸರ್ಕಾರಗಳು ನಯವಾಗಿ ಜಾರಿಕೊಂಡಿದ್ದವು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ವರದಿಯನ್ನು ಸಂಪುಟ ಸಭೆ ಯಲ್ಲಿಟ್ಟು ತಿರಸ್ಕರಿಸುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ 195 ಕೋಟಿ ರೂ. ಖರ್ಚು ಮಾಡಿ, ಮನೆ…
ಮೈಸೂರು ಜಿಲ್ಲಾಡಳಿತದ ವತಿಯಿಂದ ಪ್ರಾರ್ಥನಾ ಸಭೆ
October 3, 2019ಮೈಸೂರು: ರಾಷ್ಟ್ರ ಪಿತ ಮಹಾತ್ಮ ಗಾಂಧಿ ಜಯಂತಿ ದಿನ ವಾದ ಬುಧವಾರ ಮೈಸೂರಿನ ವಿವಿಧೆಡೆ ನಡೆದ ಕಾರ್ಯಕ್ರಮಗಳಲ್ಲಿ ಗಾಂಧೀಜಿ ಯವರನ್ನು ಸ್ಮರಿಸಲಾಯಿತು. ಪುರಭವನದಲ್ಲಿ ಜಿಲ್ಲಾಡಳಿತ, ಮೈಸೂರು ಮಹಾನಗರಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮೈಸೂರಿನ ಪುರಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿಂದೂ, ಮುಸ್ಲಿಂ, ಬೌದ್ಧ ಧರ್ಮಗುರು ಗಳ ಸಮ್ಮುಖದಲ್ಲಿ ಪ್ರಾರ್ಥನಾ ಸಭೆ ನಡೆಸಲಾಯಿತು. ಭಗವದ್ಗೀತೆ, ಕುರಾನ್, ಬುದ್ಧ ದಮ್ಮ, ಜೈನ ಪ್ರಾರ್ಥನೆಗಳ ತತ್ವಗಳ…
ಪ್ರಸ್ತುತ ಎಲ್ಲಾ ದೇಶಗಳಿಗೆ ಸತ್ಯ, ಅಹಿಂಸೆ ಪಾಲನೆ ಅಗತ್ಯ
October 3, 2019ಇಂದು ವಿಶ್ವದಲ್ಲಿ ಅಶಾಂತಿಯ ವಾತಾ ವರಣ ನಿರ್ಮಾಣವಾಗುತ್ತಿದ್ದು, ಇಂದಿನ ಕಾಲಘಟ್ಟದಲ್ಲಿ ಎಲ್ಲಾ ದೇಶಗಳಿಗೂ ಸತ್ಯ, ಅಹಿಂಸೆಯ ಸಂದೇಶ ಸಾರುವುದು ಅಗತ್ಯ ವಿದೆ. ಗಾಂಧೀಜಿಯವರ ಅಹಿಂಸಾ ಮಾರ್ಗ ಪ್ರಸ್ತುತ ಬಹಳ ಮುಖ್ಯವಾಗಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸಿ.ಆರ್.ರಂಗಸ್ವಾಮಿ ಅಭಿಪ್ರಾಯಪಟ್ಟರು. ಮೈಸೂರು ವಿವಿ ಮಾನಸಗಂಗೋ ತ್ರಿಯ ಗಾಂಧಿ ಭವನದಲ್ಲಿ ಗಾಂಧಿ ಅಧ್ಯ ಯನ ಕೇಂದ್ರ, ಜ್ಞಾನದೀಪ ಶಿಕ್ಷಣ ಸಂಸ್ಥೆ ಗಳ ಜಂಟಿ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ `ವಿಶ್ವ ಅಹಿಂಸಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮೊದ ಲಿಗೆ ಗಾಂಧಿ…










