ಪ್ರಸ್ತುತ ಎಲ್ಲಾ ದೇಶಗಳಿಗೆ ಸತ್ಯ, ಅಹಿಂಸೆ ಪಾಲನೆ ಅಗತ್ಯ
ಮೈಸೂರು

ಪ್ರಸ್ತುತ ಎಲ್ಲಾ ದೇಶಗಳಿಗೆ ಸತ್ಯ, ಅಹಿಂಸೆ ಪಾಲನೆ ಅಗತ್ಯ

October 3, 2019

ಇಂದು ವಿಶ್ವದಲ್ಲಿ ಅಶಾಂತಿಯ ವಾತಾ ವರಣ ನಿರ್ಮಾಣವಾಗುತ್ತಿದ್ದು, ಇಂದಿನ ಕಾಲಘಟ್ಟದಲ್ಲಿ ಎಲ್ಲಾ ದೇಶಗಳಿಗೂ ಸತ್ಯ, ಅಹಿಂಸೆಯ ಸಂದೇಶ ಸಾರುವುದು ಅಗತ್ಯ ವಿದೆ. ಗಾಂಧೀಜಿಯವರ ಅಹಿಂಸಾ ಮಾರ್ಗ ಪ್ರಸ್ತುತ ಬಹಳ ಮುಖ್ಯವಾಗಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸಿ.ಆರ್.ರಂಗಸ್ವಾಮಿ ಅಭಿಪ್ರಾಯಪಟ್ಟರು.

ಮೈಸೂರು ವಿವಿ ಮಾನಸಗಂಗೋ ತ್ರಿಯ ಗಾಂಧಿ ಭವನದಲ್ಲಿ ಗಾಂಧಿ ಅಧ್ಯ ಯನ ಕೇಂದ್ರ, ಜ್ಞಾನದೀಪ ಶಿಕ್ಷಣ ಸಂಸ್ಥೆ ಗಳ ಜಂಟಿ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ `ವಿಶ್ವ ಅಹಿಂಸಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮೊದ ಲಿಗೆ ಗಾಂಧಿ ಭವನ ಆವರಣದಲ್ಲಿರುವ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಬಳಿಕ ಸಭಾಂಗಣದಲ್ಲಿ ಗಾಂಧಿ ಭಾವಚಿತ್ರ ದೆದುರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಎಲ್ಲಾ ಕ್ಷೇತ್ರಗಳಲ್ಲೂ ಕಾಣಬೇಕಿದೆ. ಅಸಮಾ ನತೆ ಹೋಗಲಾಡಿಸಬೇಕಿದೆ. ಗಾಂಧಿ ಬದುಕು, ಉದಾತ್ತ ಚಿಂತನೆಗಳು ಎಲ್ಲರಲ್ಲೂ ಅನು ಷ್ಠಾನ ಆಗಬೇಕು. ಮನುಷ್ಯ, ಮನುಷ್ಯರ ನಡುವೆ ಪ್ರೀತಿ ಇರಬೇಕು ಎಂದು ಅಭಿ ಪ್ರಾಯಪಟ್ಟರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಸರ್ಗದತ್ತ ಜೀವನ ನಡೆಸಿದ ಗಾಂಧೀಜಿ ಅವರ ಸರಳತೆ, ಸತ್ಯ, ಅಹಿಂಸೆ ನಮ್ಮ ಕರ್ತವ್ಯವಾಗಬೇಕು. ನೈತಿಕತೆ, ಮಾನವೀಯ ಮೌಲ್ಯಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ ಗಾಂಧಿ ಬದುಕು ಅಗತ್ಯ ಮಾರ್ಗದರ್ಶನ ಎಂದರು.

ಶ್ರೀರಂಗಪಟ್ಟಣದ ಗಾಂಧಿ ಮಾರ್ಗಿ ಡಾ.ಬಿ.ಸುಜಯ್‍ಕುಮಾರ್ ಮಾತನಾಡಿ, ಗಾಂಧೀ ಬಗ್ಗೆ ಮಾತನಾಡುವುದೆಂದರೆ ಹೆಮ್ಮೆ. ಗಾಂಧೀಜಿಯವರ ಬಗ್ಗೆ ಇಷ್ಟೊಂದು ಚರ್ಚಿತವಾಗಿ ಹೊಸ ಹೊಸ ಪುಸ್ತಕ ಗಳೂ ಬರುತ್ತಲೇ ಇವೆ. ಪ್ರೀತಿಯ ಮೂಲ ಕವೇ ಜನರನ್ನು ಪರಿವರ್ತಿಸುತ್ತಿದ್ದವರು. ಧ್ಯಾನದ ಮೂಲಕವೇ ಉತ್ತರ ದೊರಕಿಸಿ ಕೊಳ್ಳುತ್ತಿದ್ದರು. ಅದಕ್ಕೆ ಅವರು ಕಂಡು ಕೊಂಡ ಮಾರ್ಗವೆಂದರೆ ಸತ್ಯಾಗ್ರಹ ಎಂದರು. ಜ್ಞಾನದೀಪ ಶಿಕ್ಷಣ ಸಂಸ್ಥೆಯ ಎನ್. ಸಂತೋಷ್‍ಕುಮಾರ್, ಗಾಂಧಿ ಭವನ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್, ಡಾ. ಉಮೇಶ್ ಇನ್ನಿತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ರೇಖಾ ವೆಂಕಟೇಶ್ ತಂಡ ದಿಂದ ಗಾಂಧಿ ಭಜನೆಗಳ ಗಾಯನ ನಡೆಯಿತು.

Translate »