ಮೈಸೂರು, ಅ.2(ಆರ್‍ಕೆಬಿ)-ಮಹಾತ್ಮ ಗಾಂಧಿಯವರ 150ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮೈಸೂರು ರೈಲ್ವೆ ವಿಭಾ ಗವು 3 ಎಕರೆ ಪ್ರದೇಶ ಹೊಂದಿರುವ ಪರಿಸರ ಉದ್ಯಾನವನ ವನ್ನು ನಿರ್ಮಿಸಿದ್ದು, ಅದಕ್ಕೆ `ಗಾಂಧಿ ವನ’ ಎಂದು ಹೆಸರಿಸಿದೆ. ಅದರ ಉದ್ಘಾಟನೆಯನ್ನು ಸಂಸದ ಪ್ರತಾಪಸಿಂಹ ಬುಧವಾರ ನೆರವೇರಿಸಿದರು. ರೈಲ್ವೆ ಆಟದ ಮೈದಾನ ಮತ್ತು ವಾಣಿ ವಿಲಾಸ ನೀರು ಸರಬರಾಜು ಮಂಡಳಿ ನಡುವೆ ಬಳಕೆಯಾಗದೆ ಕಸದ ತೊಟ್ಟಿಯಂತೆ ಬಿದ್ದಿದ್ದ ನಿವೇಶನವನ್ನು ಹಸಿರು ಪ್ರದೇಶವಾಗಿ ಪರಿವರ್ತಿಸಲು ನಿರ್ಧರಿಸಿದ್ದ ರೈಲ್ವೆ ಅಧಿಕಾರಿಗಳು, ಇಲ್ಲಿದ್ದ ಸಾವಿರ ಕೆ.ಜಿ.ಯಷ್ಟು ಪ್ಲಾಸ್ಟಿಕ್…
ಕಾಂಗ್ರೆಸ್‍ನಿಂದ `ಸದ್ಭಾವನಾ ನಡಿಗೆ’
October 3, 2019ಗಾಂಧಿ ಜಯಂತಿ ಅಂಗವಾಗಿ ಮೈಸೂರಿನ ಇಂದಿರಾಗಾಂಧಿ ಕಾಂಗ್ರೆಸ್ ಭವನದಿಂದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದವರೆಗೆ ಕಾಂಗ್ರೆಸ್ ಕಾರ್ಯಕರ್ತರಿಂದ `ಸದ್ಭಾವನಾ ನಡಿಗೆ’ ನಡೆಸಲಾಯಿತು. ಇದಕ್ಕೂ ಮೊದಲು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರದೆದುರು ದೀಪ ಬೆಳಗಿಸಿ ಸದ್ಭಾವನಾ ನಡಿಗೆಗೆ ಚಾಲನೆ ನೀಡಲಾಯಿತು. ಕ್ರೈಸ್ತ, ಮುಸ್ಲಿಂ, ಹಿಂದೂ ಧರ್ಮಗುರುಗಳ ಸಮ್ಮುಖದಲ್ಲಿ ಕಾಂಗ್ರೆಸ್ ಕಚೇರಿಯಿಂದ ಹೊರಟ ಸದ್ಭಾವನಾ ನಡಿಗೆ ನಾರಾಯಣಶಾಸ್ತ್ರಿ ರಸ್ತೆ ಮೂಲಕ ಸ್ವಾತಂತ್ರ್ಯ ಹೋರಾಟ ಗಾರರ ಉದ್ಯಾನವನ ತಲುಪಿತು. ಅಲ್ಲಿ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ…
ಯುವ ದಸರಾಗೆ ಚಾಲನೆ
October 2, 2019ಮೈಸೂರು: ಮೈಸೂರು ದಸರಾ ಮಹೋತ್ಸವದ ಮೆಗಾ ಇವೆಂಟ್ `ಯುವ ದಸರಾ’ಗೆ ಮಂಗಳವಾರ ಅದ್ಧೂರಿ ಚಾಲನೆ ದೊರಕಿತು. ಯುವ ಸಮೂಹದ ಅಚ್ಚುಮೆಚ್ಚಿನ ಯುವ ದಸರಾಗೆ ಯೂತ್ ಐಕಾನ್ ಕ್ರೀಡಾಪಟುವಿನಿಂದ ಚಾಲನೆ ಪಡೆದಿದ್ದು ಈ ಬಾರಿಯ ವಿಶೇಷ. ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪನವರ ಸಮ್ಮುಖದಲ್ಲಿ ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧೂ ದೀಪ ಬೆಳಗುವ ಮೂಲಕ 6 ದಿನಗಳ ಯುವ ದಸರಾ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ ಯಿಂದ 5 ಹಾಗೂ ದಸರಾ ಸಮಿತಿ ವತಿಯಿಂದ 5…
ಖ್ಯಾತ ಬಾಲಿವುಡ್ ಗಾಯಕ ಗುರು ರಾಂಧವ ಗಾಯನ ಮೋಡಿ
October 2, 2019ಮೈಸೂರು: ಯುವ ದಸರಾದ ಮೊದಲ ದಿನ ಬಾಲಿ ವುಡ್‍ನ ಗುರು ರಾಂಧವ ಗಾಯನಕ್ಕೆ ಯುವ ಸಮೂಹ ಕುಣಿದು ಕುಪ್ಪಳಿಸಿತು. ಗೀತೆ ರಚನೆಕಾರ, ಗಾಯಕ, ಸಂಗೀತ ನಿರ್ದೇಶಕನಾಗಿರುವ ಯುವ ಪ್ರತಿಭೆ ಗುರು ರಾಂಧವ ತಮ್ಮ ತಂಡದೊಂದಿಗೆ ಗಂಟೆಗೂ ಹೆಚ್ಚು ಕಾಲ ಕಾರ್ಯಕ್ರಮ ನಡೆಸಿಕೊಟ್ಟು, ರಸದೌತಣ ನೀಡಿದರು. ಕಾತುರದಿಂದ ಕಾದು ಕುಳಿತಿದ್ದ ಯುವ ಸಮೂಹ, ಗುರು ರಾಂಧವ ಗಾಯನ ವನ್ನು ಆಸ್ವಾದಿಸಿ, ಸಂಭ್ರಮಿಸಿದರು. ಇದಕ್ಕೂ ಮೊದಲು ಕನ್ನಡ ಚಿತ್ರ ರಂಗದ ನಿರ್ದೇಶಕ ನಾಗಶೇಖರ್ ನೇತೃತ್ವದಲ್ಲಿ `ಕೇಳದೆ ನಿಮಗೀಗ’ ವಿಶೇಷ ಕಾರ್ಯಕ್ರಮ…
ಡಿಕೆಶಿ ನ್ಯಾಯಾಂಗ ಬಂಧನ ಅ.15ರವರೆಗೆ ವಿಸ್ತರಣೆ
October 2, 2019ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ದೆಹಲಿ ನ್ಯಾಯಾಲಯವು ಅಕ್ಟೋಬರ್ 15 ರವರೆಗೆ ವಿಸ್ತರಿಸಿದೆ. ಅಲ್ಲದೆ ಅಕ್ಟೋಬರ್ 4 ಮತ್ತು 5 ರಂದು ತಿಹಾರ್ ಜೈಲಿನಲ್ಲಿರುವ ಶಿವ ಕುಮಾರ್ ಅವರನ್ನು ವಿಚಾರಣೆಗೆ ಒಳ ಪಡಿಸಲು ನ್ಯಾಯಾಲಯ ಜಾರಿ ನಿರ್ದೇ ಶನಾಲಯಕ್ಕೆ ಅನುಮತಿ ನೀಡಿದೆ. ಶಿವಕುಮಾರ್ ಅವರ ನ್ಯಾಯಾಂಗ ಬಂಧನ ಅವಧಿ ಮಂಗಳವಾರ ಕೊನೆಗೊಂಡ ನಂತರ ಅವರನ್ನು ದೆಹಲಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಈ ವೇಳೆ…
ಎಲ್ಲವನ್ನೂ ಗೆದ್ದು ಬರ್ತೀನಿ, ಬಿಜೆಪಿ ನಾಯಕರ ಬಂಡವಾಳ ಬಿಚ್ಚಿಡುತ್ತೇನೆ…
October 2, 2019ನವದೆಹಲಿ: ನೋಡುತ್ತಾ ಇರಿ, ಎಲ್ಲ ವನ್ನೂ ಗೆದ್ದು ಬರು ತ್ತೇನೆ. ಬಿಜೆಪಿ ನಾಯ ಕರ ಒಬ್ಬೊಬ್ಬರ ಬಂಡ ವಾಳವನ್ನೂ ಬಿಚ್ಚಿಡು ತ್ತೇನೆ ಎಂದು ಇಡಿ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಖಡಕ್ಕಾಗಿ ನುಡಿ ದಿದ್ದಾರೆ. ಇಂದು ದೆಹಲಿ ಕೋರ್ಟಿನಲ್ಲಿ ವಿಚಾರಣೆಗೆ ಹಾಜರಾದ ವೇಳೆ ಡಿಕೆಶಿ ಅವರು ತಮ್ಮ ಆಪ್ತರ ಜೊತೆ ಈ ರೀತಿ ಹೇಳಿದ್ದಾರೆ. ಯಡಿಯೂರಪ್ಪ ರಾಚೇನಹಳ್ಳಿ ಆಸ್ತಿ ಕೊಂಡಿದ್ದು ಎಷ್ಟಕ್ಕೆ ಹಾಗೂ ಅದನ್ನು ಮಾರಿದ್ದು ಎಷ್ಟಕ್ಕೆ ಎಂದು ಎಲ್ಲವೂ ನನಗೆ ಗೊತ್ತಿದೆ. ಅಂದು…
ಕೊಡಗಿನ ನಾಲ್ವರ ದಾರುಣ ಸಾವು
October 2, 2019ಮಡಿಕೇರಿ: ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ವಿಫ್ಟ್ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸದಸ್ಯರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸುಳ್ಯ ಸಮೀಪ ಮಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಜಾಲ್ಸೂರು ಗ್ರಾಮದ ಅಡ್ಕಾರು ಮಾವಿನಕಟ್ಟೆ ಬಳಿ ಮಂಗಳ ವಾರ ಮಧ್ಯಾಹ್ನ ನಡೆದಿದೆ. ಕೊಡಗಿನ ನಾಪೋಕ್ಲು ಸಮೀಪದ ಕೊಟ್ಟ ಮುಡಿ ನಿವಾಸಿಗಳಾದ ಹಚ್ಚಯಾ ಹಾಜಿ (80), ಮಕ್ಕಳಾದ ಇಬ್ರಾಹಿಂ(45), ಉಮ್ಮರ್ (50), ಹ್ಯಾರಿಸ್(45) ಮೃತಪಟ್ಟ ವರು. ಮತ್ತೋರ್ವ ವ್ಯಕ್ತಿ ಉಮ್ಮರ್ ಫಾರುಕ್ ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ….
ಮೈಸೂರು ನಗರದಲ್ಲಿ ಗ್ರಾಮೀಣ ಸೊಗಡು ಬಿಂಬಿಸಿದ: ರೈತ ದಸರಾ ಮೆರವಣಿಗೆ
October 2, 2019ಮೈಸೂರು: ಆಕರ್ಷಕ ಮೆರವಣಿಗೆಯೊಂದಿಗೆ ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಮೂರು ದಿನಗಳ ರೈತದಸರಾ ಕಾರ್ಯ ಕ್ರಮಗಳಿಗೆ ಚಾಲನೆ ದೊರೆಯಿತು. ಮೆರ ವಣಿಗೆಯಲ್ಲಿ ತಳಿರು ತೋರಣಗಳಿಂದ, ಹಸಿರಿನಿಂದ ಕೂಡಿದ ಅಲಂಕೃತ ಎತ್ತಿನ ಗಾಡಿಗಳು ಭಾಗವಹಿಸಿದ್ದವು. ಹಸಿರು ರುಮಾಲು ಧರಿಸಿದ್ದ ರೈತರು, ರೈತ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಮೆರವಣಿಗೆಗೆ ಗ್ರಾಮೀಣ ಮೆರಗು ನೀಡಿದರು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮೀನುಗಾರಿಕೆ, ಮುಜ ರಾಯಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮೆರವಣಿಗೆಗೆ ಚಾಲನೆ…
ಜೆ.ಕೆ.ಮೈದಾನದಲ್ಲಿ ರೈತ ದಸರಾ ವಸ್ತು ಪ್ರದರ್ಶನಕ್ಕೆ ಚಾಲನೆ
October 2, 2019ಮೈಸೂರು: ರೈತರಿಗೆ ಕೃಷಿಗೆ ಅಗತ್ಯವಾದ ಭರಪೂರ ಮಾಹಿತಿ ನೀಡುವ ಮಳಿಗೆಗಳು ಈ ಬಾರಿಯ ರೈತ ದಸರಾದ ವಿಶೇಷವಾಗಿದೆ. ಜೆ.ಕೆ.ಮೈದಾನದಲ್ಲಿ ಆಯೋಜಿಸಿರುವ ವಸ್ತು ಪ್ರದರ್ಶನ ಮಳಿಗೆಗಳಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ ಮತ್ತು ಪಶುಸಂಗೋಪನೆಗೆ ಸಂಬಂಧಿಸಿದ ಮಾಹಿತಿ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ರೈತ ದಸರಾ ಉಪಸಮಿತಿ ವತಿಯಿಂದ ಆಯೋಜಿಸಿರುವ ವಸ್ತು ಪ್ರದರ್ಶನದಲ್ಲಿ 30ಕ್ಕೂ ಹೆಚ್ಚು ಮಳಿಗೆ ಗಳಿದ್ದು, ಅವುಗಳ ಪೈಕಿ ಹೆಚ್ಚು ಆಕರ್ಷಣೆ ಎಂದರೆ ಬಂಡೂರು ಕುರಿ ತಳಿಗಳು. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಂಡೂರು ಕುರಿಗಳ ಹಿಂಡು…
ಇಂದಿನಿಂದ ಯುವ ದಸರಾ ಆರಂಭ
October 1, 2019ಮೈಸೂರು,ಸೆ.30(ಎಂಟಿವೈ)-ದಸರಾ ಮಹೋತ್ಸವದ ಯುವ ಜನರ ಆಕರ್ಷಣೀಯ ಕೇಂದ್ರ ಬಿಂದು `ಯುವ ದಸರಾ-2019’ ನಾಳೆ(ಅ.1)ಯಿಂದ ಅ.6ರವರೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಹೆಸ ರಾಂತ ಕಲಾವಿದರಿಂದ ನಡೆಯಲಿರುವ ಸಂಗೀತ ಸಂಜೆ ಕಾರ್ಯಕ್ರಮ ಹುಚ್ಚೆದ್ದು ಕುಣಿಸಲಿದೆ. ಸ್ಥಳೀಯ, ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದ ಕಲಾವಿದರಿಗೂ ಯುವ ದಸರಾ ಕಾರ್ಯಕ್ರಮದಲ್ಲಿ ವೇದಿಕೆ ನೀಡಲಾಗಿದ್ದು, ಬಾಲಿವುಡ್ ಹಾಗೂ ಸ್ಯಾಂಡಲ್‍ವುಡ್ ಜನಪ್ರಿಯ ಗೀತೆಗಳ ಗಾಯನ ನಡೆಯಲಿದೆ. ಮಹಾರಾಜ ಕಾಲೇಜು ಮೈದಾನದಲ್ಲಿ ವರ್ಣರಂಜಿತ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಪಡಿಸಲಾಗಿದ್ದು, ಮನಮೋಹಕ ಲೈಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. 15 ಸಾವಿರ…










