ಮೈಸೂರು

ಇಸ್ರೋ ಅಸಾಧಾರಣ ಕಾರ್ಯತತ್ವ, ಧೈರ್ಯ ಕೊಂಡಾಡಿದ ರಾಷ್ಟ್ರಪತಿ ಕೋವಿಂದ್
ಮೈಸೂರು

ಇಸ್ರೋ ಅಸಾಧಾರಣ ಕಾರ್ಯತತ್ವ, ಧೈರ್ಯ ಕೊಂಡಾಡಿದ ರಾಷ್ಟ್ರಪತಿ ಕೋವಿಂದ್

September 8, 2019

ನವದೆಹಲಿ: ಚಂದ್ರಯಾನ-2 ಮೂಲಕ ಭಾರತದ ಜಾಣ್ಮೆ ಮತ್ತು ದೃಢತೆಯನ್ನು ಇಡೀ ವಿಶ್ವದ ಮುಂದಿಟ್ಟಿರುವ ಇಸ್ರೋವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೊಂಡಾಡಿದ್ದಾರೆ. ಇಸ್ರೋ ಅವಿರತ ಪರಿಶ್ರಮ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಾಷ್ಟ್ರಪತಿಗಳು, ಚಂದ್ರಯಾನ-2 ಮೂಲಕ ಇಸ್ರೋದ ಇಡೀ ತಂಡ ತಮ್ಮ ಅಸಾಧಾರಣ ಕಾರ್ಯತತ್ಪರತೆ ಮತ್ತು ಧೈರ್ಯವನ್ನು ತೋರಿಸಿದೆ. ಈ ದೇಶ ಇಸ್ರೋ ಸಾಧನೆಗೆ ಹೆಮ್ಮೆ ಪಡುತ್ತದೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ. ಚಂದ್ರನ ಅಂಗಳದ ಮೇಲೆ ಲ್ಯಾಂಡರ್‍ನ್ನು ಇಳಿಸುವ ಕೊನೆಯ 15 ನಿಮಿಷ…

ಚಂದ್ರಯಾನ ಬಳಿಕ ಗಗನಯಾನಕ್ಕೆ ಸಿದ್ಧತೆ: ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಟೀಂ ರೆಡಿ
ಮೈಸೂರು

ಚಂದ್ರಯಾನ ಬಳಿಕ ಗಗನಯಾನಕ್ಕೆ ಸಿದ್ಧತೆ: ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಟೀಂ ರೆಡಿ

September 8, 2019

ಬೆಂಗಳೂರು,ಸೆ.7-ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಕಾರ್ಯಾ ಚರಣೆ ನಿರಾಶೆಗೊಂಡ ಬಳಿಕ ಇಸ್ರೋದಿಂದ ಮಾನವ ಸಹಿತ ಗಗನಯಾನ ಕೈಗೊಳ್ಳಲು ಸಿದ್ಧತೆ ಈಗಾಗಲೇ ಆರಂಭಗೊಂಡಿದೆ. ಭಾರತದ ಚೊಚ್ಚಲ ಗಗನಯಾನ ಯೋಜನೆಗೆ ಗಗನಯಾನಿಗಳನ್ನು ಆಯ್ಕೆ ಮಾಡಲು ಮೊದಲ ಸುತ್ತಿನ ಆಯ್ಕೆ ಪ್ರಕ್ರಿಯೆಯನ್ನು ಬೆಂಗ ಳೂರಿನ ಏರೋಸ್ಪೇಟ್ ಮೆಡಿಸಿನ್ ಇನ್ಸ್ಟಿಟ್ಯೂಟ್‍ನಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಭಾರತೀಯ ವಾಯುಪಡೆ ಸಾಮಾಜಿಕ ಜಾಲತಾಣ ಟ್ವಿಟರ್ ತಿಳಿಸಿದೆ. 2022ರ ವೇಳೆಗೆ ಇಸ್ರೋ ಗಗನಯಾನ ನೌಕೆಯ ಮೂಲಕ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಉದ್ದೇಶವನ್ನು ಹೊಂದಿದೆ. ಮೂವರು ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ 7 ದಿನಗಳನ್ನು…

ಡಿಕೆಶಿ ಬಂಧನ ಖಂಡಿಸಿ ಅಭಿಮಾನಿಗಳು, ಕಾಂಗ್ರೆಸಿಗರ ಪ್ರತಿಭಟನೆ
ಮೈಸೂರು

ಡಿಕೆಶಿ ಬಂಧನ ಖಂಡಿಸಿ ಅಭಿಮಾನಿಗಳು, ಕಾಂಗ್ರೆಸಿಗರ ಪ್ರತಿಭಟನೆ

September 8, 2019

ಮೈಸೂರು,ಸೆ.7(ಪಿಎಂ)-ಜಾರಿ ನಿರ್ದೇ ಶನಾಲಯದ ವಿಚಾರಣೆಗೆ ಸ್ಪಂದಿಸಿದರೂ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿ ಕೇಂದ್ರ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಡಿ.ಕೆ.ಶಿವ ಕುಮಾರ್ ಸ್ವಾಭಿಮಾನಿ ಬಳಗದ ವತಿ ಯಿಂದ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಅಗ್ರಹಾರ ವೃತ್ತದಲ್ಲಿ ಜಮಾ ಯಿಸಿದ ಪ್ರತಿಭಟನಾಕಾರರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿ…

ಪರಿಸರ ಸಂರಕ್ಷಣೆ ನಿರ್ಲಕ್ಷ್ಯ: ಸದ್ಗುರು ವಿಷಾದ
ಮೈಸೂರು

ಪರಿಸರ ಸಂರಕ್ಷಣೆ ನಿರ್ಲಕ್ಷ್ಯ: ಸದ್ಗುರು ವಿಷಾದ

September 8, 2019

ಮೈಸೂರು,ಸೆ.7(ಎಂಕೆ)-ಎಲ್ಲರೂ ದೇಶದ ಆರ್ಥಿಕತೆ ಬಗ್ಗೆ ಮಾತ್ರ ಮಾತ ನಾಡುತ್ತಾರೆಯೇ ಹೊರತು ಪರಿಸರ ಸಂರ ಕ್ಷಣೆ, ನೈಸರ್ಗಿಕ ಸಂಪನ್ಮೂಲ ಕುರಿತು ಯಾರೂ ಚಿಂತಿಸುವುದಿಲ್ಲ ಎಂದು ಈಶಾ ಫೌಂಡೇಷನ್ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ ವಿಷಾದಿಸಿದರು. ಮೈಸೂರಿನ ವಿಜಯನಗರ 3ನೇ ಹಂತ ದಲ್ಲಿರುವ ಆಶಾ ಪ್ರಕಾಶ್ ಶೆಟ್ಟಿ ಬಂಟ್ಸ್ ಸಮುದಾಯ ಭವನದಲ್ಲಿ ಅಸೋಸಿ ಯೇಷನ್ ಇನ್ನರ್‍ವ್ಹೀಲ್ ಕ್ಲಬ್ ಆಫ್ ಇಂಡಿಯಾ ಹಾಗೂ ಇನ್ನರ್‍ವ್ಹೀಲ್ ಡಿಸ್ಟ್ರಿಕ್ಟ್ 318 ಮೈಸೂರು ವತಿಯಿಂದ ಆಯೋಜಿ ಸಿದ್ದ ‘ಮೈಲಿಗಲ್ಲು’ ಎರಡು ದಿನಗಳ ದಕ್ಷಿಣ ವಲಯ ಸಭೆ-2019…

ಚಾ.ಬೆಟ್ಟ ವ್ಯಾಪಾರಿಗಳೊಂದಿಗೆ ಅಧಿಕಾರಿಗಳ ಸಭೆ
ಮೈಸೂರು

ಚಾ.ಬೆಟ್ಟ ವ್ಯಾಪಾರಿಗಳೊಂದಿಗೆ ಅಧಿಕಾರಿಗಳ ಸಭೆ

September 8, 2019

ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ಅಂಗಡಿಗಳ ತೆರವುಗೊಳಿಸದಂತೆ ಮನವಿ ಮೈಸೂರು,ಸೆ.7(ಎಸ್‍ಬಿಡಿ)- ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ನಮ್ಮನ್ನು ತೆರವು ಗೊಳಿಸಬೇಡಿ ಎಂದು ಚಾಮುಂಡಿ ಬೆಟ್ಟದ ವ್ಯಾಪಾರಿಗಳು ಮನವಿ ಮಾಡಿಕೊಂಡಿದ್ದಾರೆ. ಚಾಮುಂಡಿ ಬೆಟ್ಟದ ದಾಸೋಹ ಭವನ ದಲ್ಲಿ ಶನಿವಾರ ಅಪರ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ಹಾಗೂ ಜಿ.ಪಂ. ಸಿಇಓ ಕೆ.ಜ್ಯೋತಿ ನೇತೃತ್ವದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ವ್ಯಾಪಾರಿಗಳು, ಸ್ಥಳೀಯ ಜನಪ್ರತಿ ನಿಧಿಗಳಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದಶಕ ಗಳಿಂದ ವ್ಯಾಪಾರ ಮಾಡಿಕೊಂಡಿರುವ ನಮ್ಮನ್ನು ಏಕಾಏಕಿ ತೆರವುಗೊಳಿಸಬೇಡಿ. ಜೀವನ ನಿರ್ವಹಣೆಗೆ ವ್ಯಾಪಾರವನ್ನೇ…

ದಸರಾ ಗಜಪಡೆ 2ನೇ ತಂಡ ಸೆ.9ರಂದು ಅರಮನೆ ಆವರಣ ಪ್ರವೇಶ
ಮೈಸೂರು

ದಸರಾ ಗಜಪಡೆ 2ನೇ ತಂಡ ಸೆ.9ರಂದು ಅರಮನೆ ಆವರಣ ಪ್ರವೇಶ

September 8, 2019

ಮೈಸೂರು,ಸೆ.7(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಗಜಪಡೆಯ ಎರಡನೇ ತಂಡದ 8 ಆನೆ ಸೆ.9ರಂದು ಸಂಜೆ ವಿವಿಧ ಕ್ಯಾಂಪ್ ಗಳಿಂದ ಮೈಸೂರು ಅರಮನೆ ಆವರಣಕ್ಕೆ ಆಗಮಿಸಲಿವೆ. ಈ ಸಾಲಿನ ದಸರಾ ಮಹೋತ್ಸವದಲ್ಲಿ 14 ಆನೆಗಳು ಪಾಲ್ಗೊಳ್ಳುತ್ತಿದ್ದು, ಆ.22 ರಂದು ಮೊದಲ ತಂಡದಲ್ಲಿ ಅಂಬಾರಿ ಆನೆ ಅರ್ಜುನ ನೇತೃತ್ವದಲ್ಲಿ ಅಭಿಮನ್ಯು, ಧನಂಜಯ, ಈಶ್ವರ, ವರಲಕ್ಷ್ಮೀ ಮತ್ತು ವಿಜಯ ಮೈಸೂರು ಅಶೋಕಪುರಂ ಅರಣ್ಯ ಭವನಕ್ಕೆ ಆಗಮಿಸಿ, ಆ.26ರಂದು ಅರಮನೆ ಅಂಗಳ ಪ್ರವೇಶಿಸಿದ್ದವು. ಜಂಬೂಸವಾರಿ 30 ದಿನ ಇರುವಂತೆ ಎರಡನೇ ತಂಡದ…

ಪಾರಂಪರಿಕ ಆಟಗಳ ಸ್ಪರ್ಧೆ
ಮೈಸೂರು

ಪಾರಂಪರಿಕ ಆಟಗಳ ಸ್ಪರ್ಧೆ

September 8, 2019

ಮೈಸೂರು,ಸೆ.7-ಮೈಸೂರು ದಸರಾ ಮಹೋತ್ಸವ-2019ರ ಅಂಗವಾಗಿ ಪುರಾ ತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ಅಕ್ಟೋಬರ್ 3ರಂದು ಬೆಳಿಗ್ಗೆ 10 ಗಂಟೆಗೆ ಪಾರಂಪರಿಕ ಆಟಗಳ ಸ್ಪರ್ಧೆಯನ್ನು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಎಲ್ಲಾ ವಯೋಮಾನದವರಿಗೂ ಪಾರಂಪರಿಕ ಆಟಗಳ ಸ್ಪರ್ಧೆ ಯನ್ನು ಆಯೋಜಿಸಿದ್ದು, 10-16 ವರ್ಷದೊಳಗಿನ ಮಕ್ಕಳಿಗೆ ಕಣ್ಣಾ ಮುಚ್ಚಾಲೆ, ಕುಂಟಾಬಿಲ್ಲೆ, ಹಾವು-ಏಣಿ, ಗೋಲಿ, ಚೌಕಾಬಾರ ಮೂರು ಕಾಲಿನ ಓಟ ಆಟಗಳನ್ನು, 17-25 ವರ್ಷದೊಳಗಿನ ಯುವಕ-ಯುವತಿಯರಿಗೆ ಅಳಿಗುಳಿ ಮನೆ, ಹಗ್ಗ ಜಗ್ಗಾಟ, ಹಾವು-ಏಣಿ, ಗೋಲಿ, ಬಿಲ್ಲು…

ಸೆ.29ರಿಂದ ಆಹಾರ ಮೇಳ ಆರಂಭ
ಮೈಸೂರು

ಸೆ.29ರಿಂದ ಆಹಾರ ಮೇಳ ಆರಂಭ

September 8, 2019

ಮೈಸೂರುಸೆ.7-ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ನಿಮಿತ್ತ ದಸರಾ ಆಹಾರ ಮೇಳ ಉಪ ಸಮಿತಿಯ ವತಿಯಿಂದ ಆಹಾರ ಮೇಳವು ಸೆ.29 ರಿಂದ ಅ.10ರವರೆಗೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ ಹಾಗೂ ಲಲಿತ್ ಮಹಲ್ ಪ್ಯಾಲೆಸ್ ಹೋಟೆಲ್ ಪಕ್ಕದ ಮುಡಾ ಮೈದಾನದಲ್ಲಿ ನಡೆಯಲಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮತೋಲನ ಆಹಾರ ಸೇವನೆಯಿಂದ ಆರೋಗ್ಯ ರಕ್ಷಣೆ
ಮೈಸೂರು

ಸಮತೋಲನ ಆಹಾರ ಸೇವನೆಯಿಂದ ಆರೋಗ್ಯ ರಕ್ಷಣೆ

September 8, 2019

ಮೈಸೂರು, ಸೆ.7(ಎಂಟಿವೈ)- ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾದ ಸಮ ತೋಲನ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಂತೆ ಮೈಸೂರು ವಿಶ್ವವಿದ್ಯಾ ನಿಲಯದ ಆಹಾರ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಅಸ್ನಾ ಉರೂಜ್ó ಸಲಹೆ ನೀಡಿದ್ದಾರೆ. ಮೈಸೂರಿನ ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ ರುವ ಅರಿವು-ನೆರವು ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ `ಪೋಷಣ್ ಅಭಿಯಾನ್’ ದಿನಾಚರಣೆ ಹಾಗೂ `ರಾಷ್ಟ್ರೀಯ ಪೋಷಣ್ ಸಪ್ತಾಹ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚುತ್ತಿರುವ ಜನಸಂಖ್ಯೆ ದೇಶದ…

ಇಸ್ರೋ ಕಾರ್ಯ ಅತ್ಯದ್ಭುತ: ವಿಜ್ಞಾನಿಗಳಿಗೆ ರಾಹುಲ್ ಗಾಂಧಿ ಅಭಿನಂದನೆ
ಮೈಸೂರು

ಇಸ್ರೋ ಕಾರ್ಯ ಅತ್ಯದ್ಭುತ: ವಿಜ್ಞಾನಿಗಳಿಗೆ ರಾಹುಲ್ ಗಾಂಧಿ ಅಭಿನಂದನೆ

September 8, 2019

ನವದೆಹಲಿ,ಸೆ.7- ಚಂದ್ರಯಾನ-2 ಕಾರ್ಯಾಚರಣೆ ಭಾಗ ವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ವಿಜ್ಞಾನಿಗಳ ಅದ್ಭುತ ಕಾರ್ಯಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಜ್ಞಾನಿಗಳನ್ನು ಶ್ಲಾಘಿಸಿದ್ದಾರೆ. ಚಂದ್ರಯಾನ-2 ಪ್ರಮುಖ ಹಂತವಾಗಿ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುವ ಪ್ರಕ್ರಿಯೆಯ ಕೊನೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡ ಬಳಿಕ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಇಸ್ರೋ ತಂಡದ ಮಹತ್ವದ ಕಾರ್ಯಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ನಿಮ್ಮ ಉತ್ಸಾಹ ಮತ್ತು ಸಮರ್ಪಣೆಯು ಪ್ರತಿ ಭಾರತ

1 834 835 836 837 838 1,611
Translate »