ಪಾರಂಪರಿಕ ಆಟಗಳ ಸ್ಪರ್ಧೆ
ಮೈಸೂರು

ಪಾರಂಪರಿಕ ಆಟಗಳ ಸ್ಪರ್ಧೆ

September 8, 2019

ಮೈಸೂರು,ಸೆ.7-ಮೈಸೂರು ದಸರಾ ಮಹೋತ್ಸವ-2019ರ ಅಂಗವಾಗಿ ಪುರಾ ತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ಅಕ್ಟೋಬರ್ 3ರಂದು ಬೆಳಿಗ್ಗೆ 10 ಗಂಟೆಗೆ ಪಾರಂಪರಿಕ ಆಟಗಳ ಸ್ಪರ್ಧೆಯನ್ನು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆಯೋಜಿಸಲಾಗಿದೆ.

ಸ್ಪರ್ಧೆಯಲ್ಲಿ ಎಲ್ಲಾ ವಯೋಮಾನದವರಿಗೂ ಪಾರಂಪರಿಕ ಆಟಗಳ ಸ್ಪರ್ಧೆ ಯನ್ನು ಆಯೋಜಿಸಿದ್ದು, 10-16 ವರ್ಷದೊಳಗಿನ ಮಕ್ಕಳಿಗೆ ಕಣ್ಣಾ ಮುಚ್ಚಾಲೆ, ಕುಂಟಾಬಿಲ್ಲೆ, ಹಾವು-ಏಣಿ, ಗೋಲಿ, ಚೌಕಾಬಾರ ಮೂರು ಕಾಲಿನ ಓಟ ಆಟಗಳನ್ನು, 17-25 ವರ್ಷದೊಳಗಿನ ಯುವಕ-ಯುವತಿಯರಿಗೆ ಅಳಿಗುಳಿ ಮನೆ, ಹಗ್ಗ ಜಗ್ಗಾಟ, ಹಾವು-ಏಣಿ, ಗೋಲಿ, ಬಿಲ್ಲು ಬಾಣ, ಚಿನ್ನಿದಾಂಡು, ಬುಗುರಿ, ಗೋಣಿಚೀಲ ಓಟ, ಮೂರು ಕಾಲಿನ ಓಟ, ಹುಲಿ-ಕುರಿ ಹಾಗೂ 25 ವರ್ಷ ಮೇಲ್ಪಟ್ಟ ವರಿಗೆ ಪಗಡೆ, ಹಗ್ಗಜಗ್ಗಾಟ, ಅಳಿಗುಳಿ ಮನೆ, ಬಿಲ್ಲು ಬಾಣ, ಚೌಕಾಬಾರ ಮುಂತಾದ ಆಟಗಳನ್ನು ಏರ್ಪ ಡಿಸಲಾಗಿದೆ. ಒಬ್ಬರು ಮೂರು ಆಟಗಳಲ್ಲಿ ಮಾತ್ರ ಭಾಗವಹಿಸಬಹುದಾಗಿದ್ದು, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲಾಗುವುದು. ಪ್ರತಿ ಆಟದಲ್ಲಿ ಗರಿಷ್ಠ 25 ಜನರಿಗೆ ಮಾತ್ರ ಅವಕಾಶವಿದ್ದು, ಮೊದಲು ಹೆಸರು ನೋಂದಾಯಿಸಿ ಕೊಂಡವರಿಗೆ ಮೊದಲ ಆದ್ಯತೆ ನೀಡಲಾಗುವುದು. ಸ್ಪರ್ಧೆಯ ವಿಜೇತÀರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನದ ಜೊತೆಗೆ ಎಲ್ಲಾ ಸ್ಪರ್ಧಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ.

ಆಸಕ್ತರು ಸ್ವವಿವರವುಳ್ಳ ಅರ್ಜಿ ಭರ್ತಿ ಮಾಡಿ, ವಯಸ್ಸಿನ ಪ್ರಮಾಣ ಪತ್ರ ದೊಂದಿಗೆ ಸೆಪ್ಟೆಂಬರ್ 25ರ ಸಂಜೆ 5 ಗಂಟೆಯೊಳಗಾಗಿ ಉಪ ನಿರ್ದೇಶಕರು (ಪರಂಪರೆ), ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣ, ದೊಡ್ಡಕೆರೆ ಮೈದಾನ, ಮೈಸೂರು ಇಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು. (ಜನನ ಪ್ರಮಾಣ ಪತ್ರ/ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ/ ಆಧಾರ್ ಕಾರ್ಡ್ ಪ್ರತಿಗಳ ಪೈಕಿ ಯಾವುದಾ ದರೂ ಒಂದನ್ನು ಕಡ್ಡಾಯವಾಗಿ ಕಚೇರಿಗೆ ಸಲ್ಲಿಸುವುದು). ಸ್ಪರ್ಧಾರ್ಥಿಗಳು ಅಕ್ಟೋಬರ್ 3 ರಂದು ಬೆಳಗ್ಗೆ 9 ಗಂಟೆಯೊಳಗೆ ಉಪ ನಿರ್ದೇಶಕರು (ಪರಂಪರೆ), ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣ, ದೊಡ್ಡಕೆರೆ ಮೈದಾನ, ಮೈಸೂರು ಈ ವಿಳಾಸಕ್ಕೆ ಬಂದು ವರದಿ ಮಾಡಿಕೊಳ್ಳುವುದು. ಹೆಚ್ಚಿನ ಮಾಹಿತಿಗೆ ದೂ.ಸಂ. 0821-2424671 ಸಂಪರ್ಕಿಸುವುದು ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »