ದಸರಾ ಗಜಪಡೆ 2ನೇ ತಂಡ ಸೆ.9ರಂದು ಅರಮನೆ ಆವರಣ ಪ್ರವೇಶ
ಮೈಸೂರು

ದಸರಾ ಗಜಪಡೆ 2ನೇ ತಂಡ ಸೆ.9ರಂದು ಅರಮನೆ ಆವರಣ ಪ್ರವೇಶ

September 8, 2019

ಮೈಸೂರು,ಸೆ.7(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಗಜಪಡೆಯ ಎರಡನೇ ತಂಡದ 8 ಆನೆ ಸೆ.9ರಂದು ಸಂಜೆ ವಿವಿಧ ಕ್ಯಾಂಪ್ ಗಳಿಂದ ಮೈಸೂರು ಅರಮನೆ ಆವರಣಕ್ಕೆ ಆಗಮಿಸಲಿವೆ.

ಈ ಸಾಲಿನ ದಸರಾ ಮಹೋತ್ಸವದಲ್ಲಿ 14 ಆನೆಗಳು ಪಾಲ್ಗೊಳ್ಳುತ್ತಿದ್ದು, ಆ.22 ರಂದು ಮೊದಲ ತಂಡದಲ್ಲಿ ಅಂಬಾರಿ ಆನೆ ಅರ್ಜುನ ನೇತೃತ್ವದಲ್ಲಿ ಅಭಿಮನ್ಯು, ಧನಂಜಯ, ಈಶ್ವರ, ವರಲಕ್ಷ್ಮೀ ಮತ್ತು ವಿಜಯ ಮೈಸೂರು ಅಶೋಕಪುರಂ ಅರಣ್ಯ ಭವನಕ್ಕೆ ಆಗಮಿಸಿ, ಆ.26ರಂದು ಅರಮನೆ ಅಂಗಳ ಪ್ರವೇಶಿಸಿದ್ದವು. ಜಂಬೂಸವಾರಿ 30 ದಿನ ಇರುವಂತೆ ಎರಡನೇ ತಂಡದ ಆನೆಗಳನ್ನು ಅರಮನೆ ಆವರಣಕ್ಕೆ ಕರೆತರುವ ಪದ್ಧತಿ ಇದೆ. ಈ ಹಿನ್ನೆಲೆಯಲ್ಲಿ ಎರಡನೇ ತಂಡದ 8 ಆನೆ ಗಳನ್ನು ಸೆ.9ಂದು ಬೆಳಿಗ್ಗೆ ವಿವಿಧ ಶಿಬಿರ ಗಳಿಂದ ಮೈಸೂರಿಗೆ ಕರೆತಂದು ಸಂಜೆ ಜಯಮಾರ್ತಾಂಡ ದ್ವಾರದ ಮೂಲಕ ಅರ ಮನೆ ಆವರಣಕ್ಕೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಗುತ್ತದೆ.

ಎರಡನೇ ತಂಡದಲ್ಲಿ ಮತ್ತಿಗೋಡು ಕ್ಯಾಂಪ್‍ನಿಂದ ಬಲರಾಮ(61), ದುಬಾರೆ ಯಿಂದ ಕಾವೇರಿ(41), ವಿಕ್ರಮ(46), ಗೋಪಿ(37), ಕೆ.ಗುಡಿ ಕ್ಯಾಂಪ್‍ನಿಂದ ದುರ್ಗಾ ಪರಮೇಶ್ವರಿ(52), ಬಂಡೀ ಪುರದ ರಾಂಪುರ ಕ್ಯಾಂಪ್‍ನಿಂದ ಜಯ ಪ್ರಕಾಶ(57), ಲಕ್ಷ್ಮೀ(17 ಹಾಗೂ ರೋಹಿತ್(19) ಆನೆಗಳು ಮೈಸೂರಿಗೆ ಬರಲಿವೆ. ಎರಡನೇ ತಂಡದಲ್ಲಿ ಬರುವ ಜಯಪ್ರಕಾಶ, ಲಕ್ಷ್ಮೀ ಹಾಗೂ ರೋಹಿತ್ ದಸರಾ ಮಹೋತ್ಸವಕ್ಕೆ ಹೊಸ ಆನೆಯಾಗಿ ದ್ದರೆ, ಮೊದಲ ತಂಡದಲ್ಲಿ ಬಂದಿರುವ ಈಶ್ವರ ಆನೆಯೂ ಹೊಸ ಆನೆಯಾಗಿದೆ. ಈ ಬಾರಿ ಒಟ್ಟು 4 ಹೊಸ ಆನೆಗಳನ್ನು ಕರೆತರಲಾಗುತ್ತಿದ್ದು, ಅದರಲ್ಲಿ ರೋಹಿತ್ ಮತ್ತು ಲಕ್ಷ್ಮೀ ಹೆಚ್ಚುವರಿ ಆನೆಯಾಗಿ ರುತ್ತವೆ. ಈ ಎರಡು ಆನೆಗಳಿಗೆ ತಾಲೀಮು ನಡೆಸಲಾಗುತ್ತದೆ. ಆದರೆ ಜಂಬೂಸವಾರಿ ಮೆರವಣಿಗೆಯಲ್ಲಿ ಕರೆದೊಯ್ಯಬೇಕೋ ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ.

Translate »