ಸಮತೋಲನ ಆಹಾರ ಸೇವನೆಯಿಂದ ಆರೋಗ್ಯ ರಕ್ಷಣೆ
ಮೈಸೂರು

ಸಮತೋಲನ ಆಹಾರ ಸೇವನೆಯಿಂದ ಆರೋಗ್ಯ ರಕ್ಷಣೆ

September 8, 2019

ಮೈಸೂರು, ಸೆ.7(ಎಂಟಿವೈ)- ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾದ ಸಮ ತೋಲನ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಂತೆ ಮೈಸೂರು ವಿಶ್ವವಿದ್ಯಾ ನಿಲಯದ ಆಹಾರ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಅಸ್ನಾ ಉರೂಜ್ó ಸಲಹೆ ನೀಡಿದ್ದಾರೆ.

ಮೈಸೂರಿನ ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ ರುವ ಅರಿವು-ನೆರವು ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ `ಪೋಷಣ್ ಅಭಿಯಾನ್’ ದಿನಾಚರಣೆ ಹಾಗೂ `ರಾಷ್ಟ್ರೀಯ ಪೋಷಣ್ ಸಪ್ತಾಹ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚುತ್ತಿರುವ ಜನಸಂಖ್ಯೆ ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಸಮಾಜದ ಬೆಳವಣಿಗೆÀ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಯಾವ ಕುಟುಂ ಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತೋ, ಅಂತಹ ಕುಟುಂಬಗಳು ಆರೋಗ್ಯವಂತವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಪೌಷ್ಟಿಕ ಆಹಾರ ಸೇವನೆ ಕುರಿತಂತೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಮೊದಲ ವಾರವನ್ನು ರಾಷ್ಟ್ರೀಯ ಪೋಷಣ್ ಸಪ್ತಾಹ ವಾಗಿ ಆಚರಿಸಲಾಗುತ್ತದೆ. ಮೈಸೂರು ವಿವಿಯ ಆಹಾರ ವಿಜ್ಞಾನ ವಿಭಾಗದ ವತಿಯಿಂದಲೂ ಜಾಗೃತಿ ಮೂಡಿ ಸುವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ಸಂಪರ್ಕ ಸಾಧಿಸಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದರು.

ವಿವಿಧ ಬಗೆಯ ವಿಟಮಿನ್, ಪ್ರೊಟೀನ್, ಜಿಡ್ಡು, ನಾರು ಸೇರಿದಂತೆ ವಿವಿಧ ಅಂಶವುಳ್ಳ 7 ಗುಂಪು ಗಳಲ್ಲಿ ಆಹಾರ ಪದಾರ್ಥವನ್ನು ವಿಂಗಡಿಸಲಾಗಿದೆ. ಈ 7 ಗುಂಪುಗಳಲ್ಲಿ 2 ಅಥವಾ 3 ಗುಂಪಿನ ಆಹಾರ ಪದಾರ್ಥವನ್ನು ಅಗತ್ಯವಾಗಿ ಸೇವಿಸಲೇಬೇಕು. ಪ್ರತಿ ದಿನ ಒಂದೇ ಬಗೆಯ ದವಸ ಧಾನ್ಯ, ಬೇಳೆ-ಕಾಳು ಗಳನ್ನು ಸೇವಿಸಬಾರದು. ಅಕ್ಕಿ, ಗೋಧಿ, ರಾಗಿ, ಜೋಳ, ಸಿರಿಧಾನ್ಯ ಬಳಸಬೇಕು. ಅಲ್ಲದೆ ಬೇರೆ ಬೇರೆ ಕಾಳು ಗಳನ್ನು ತಿನ್ನಬೇಕು. ಇದರಿಂದ ದೈಹಿಕ ಹಾಗೂ ಮಾನ ಸಿಕ ಬೆಳವಣಿಗೆಗೆ ಬೇಕಾಗುವ ಪೌಷ್ಟಿಕಾಂಶ ದೇಹಕ್ಕೆ ಸೇರುತ್ತದೆ. ಇದರಿಂದ ಆರೋಗ್ಯವಂತ ಜೀವನ ನಡೆ ಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮಕ್ಕಳ ಬೆಳವಣಿಗೆಗೆ ಪ್ರೋಟೀನ್‍ಯಕ್ತ ಆಹಾರ: ಜನನದ 6 ತಿಂಗಳ ನಂತರ ಮಕ್ಕಳಿಗೆ ತಾಯಿ ಎದೆ ಹಾಲಿನೊಂದಿಗೆ ಪ್ರೊಟೀನ್ ಅಂಶವುಳ್ಳ ಆಹಾರ ನೀಡ ಬೇಕು. ರಾಗಿ ಹಾಗೂ ಸಿರಿಧಾನ್ಯದಿಂದ ಮಾಡಿರುವ ಗಂಜಿ, ತರಕಾರಿ ಬೇಯಿಸಿದ ನೀರನ್ನು ಕುಡಿಸಬೇಕು. ಚಿಕ್ಕಂದಿನಿಂದಲೇ ವಿಟಮಿನ್‍ಯುಕ್ತ ಆಹಾರ ನೀಡದಿ ದ್ದರೆ ಬಾಲ್ಯಾವಸ್ಥೆಯಲ್ಲಿ ರಾತ್ರಿ ಕುರುಡುತನ ಸಮಸ್ಯೆ ಕಾಡುತ್ತವೆ. ಕಲಿಕೆ ಸಾಮಥ್ರ್ಯವೂ ಕುಂಠಿತವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕವಾದ ಆಹಾರ ಪದಾರ್ಥ ನೀಡಬೇಕು ಎಂದರು.

ಮಹಿಳೆಯರಲ್ಲಿ ಅನಿಮಿಯಾ: ಮಹಿಳೆಯರಲ್ಲಿ ಅನಿ ಮಿಯಾ (ರಕ್ತಹೀನತೆ) ಸಮಸ್ಯೆ ಹೆಚ್ಚಾಗಿ ಕಂಡು ಬರು ತ್ತದೆ. ಮೇಲ್ನೋಟಕ್ಕೆ ಸದೃಢರಂತೆ ಕಂಡು ಬಂದರೂ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಿರುತ್ತದೆ. ಎಲ್ಲಾ ಮಹಿಳೆಯರು ಹಿಮೋಗ್ಲೋಬಿನ್ ಪರೀಕ್ಷೆ ಮಾಡಿಸಿ ಕೊಂಡರೆ ಶೇ.50ಕ್ಕಿಂತ ಹೆಚ್ಚು ಮಹಿಳೆಯರಲ್ಲಿ ಅನಿ ಮಿಯಾ ಸಮಸ್ಯೆ ಇರುವುದು ಕಂಡು ಬರುತ್ತದೆ. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಅನಿಮಿಯಾ ಸಮಸ್ಯೆ ನಿವಾರಿಸಲು ಸಾಧ್ಯವಾಗಿಲ್ಲ. ಆದರೆ ಇದರ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಪೌಷ್ಟಿಕ ಆಹಾರ ಸೇವಿಸಿ: ಚೆಲುವಾಂಬ ಆಸ್ಪತ್ರೆ ಅಧೀಕ್ಷಕಿ ಡಾ.ಪ್ರಮೀಳಾ ಮಾತನಾಡಿ, `ರಾಷ್ಟ್ರೀಯ ಪೋಷಣ್’ ಒಂದೇ ವಾರಕ್ಕೆ ಸೀಮಿತಗೊಳಿಸಬಾರದು. ಆರ್ಥಿಕ ಪರಿಸ್ಥಿತಿಗೆ ಅನು ಗುಣವಾಗಿಯಾದರೂ ಪೌಷ್ಟಿಕ ಆಹಾರ ಪದಾರ್ಥ ಸೇವಿಸಬೇಕು. ನಮ್ಮಲ್ಲಿ ಸಸ್ಯಾಹಾರಿ ಹಾಗೂ ಮಾಂಸಾ ಹಾರಿಗಳಿದ್ದಾರೆ. ಅವರವರ ಆಹಾರ ಪದ್ಧತಿಗೆ ಅನುಗುಣ ವಾಗಿ ವಿಟಮಿನ್‍ಯುಕ್ತ ಆಹಾರ ಪದಾರ್ಥ ಸೇವಿಸ ಬೇಕು. ಸೀಬೆಹಣ್ಣು, ಗೆಣಸು, ಮೂಲಂಗಿ, ಬೀಟ್ರೂಟ್, ವಿವಿಧ ಬಗೆಯ ಸೊಪ್ಪು, ಸಿರಿಧಾನ್ಯ ಸೇವಿಸಬೇಕು. ಪರಂಗಿ ಹಣ್ಣನ್ನು ಸೇವಿಸುವುದರಿಂದ ಕಬ್ಬಿಣಾಂಶ ಸಿಗು ತ್ತದೆ. ರಾಗಿ, ಸೌತೆಕಾಯಿ ಸೇವಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಗೋಡಂಬಿ, ಬಾದಾಮಿ ಸೇವನೆಯಿಂದಲೂ ಪೌಷ್ಟಿಕಾಂಶ ದೊರೆಯುತ್ತದೆ. ಬಡ ವರ ಬಾದಾಮಿ ಎನ್ನುವ ಕಡಲೆಕಾಯಿ ತಿನ್ನುವುದ ರಿಂದಲೂ ಪೌಷ್ಟಿಕತೆ ಲಭ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಆಹಾರ, ಸ್ವಚ್ಛತೆ, ಆಹಾರ ತಯಾರಿಕಾ ವಿಧಾನ ಹಾಗೂ ಜೀವನ ಕ್ರಮದ ಮೇಲೆ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಅವಲಂಬಿತವಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ಪದ್ಮ ಅಧ್ಯಕ್ಷ ವಹಿಸಿದ್ದ ಕಾರ್ಯಕ್ರಮ ದಲ್ಲಿ ಚೆಲುವಾಂಬ ಆಸ್ಪತ್ರೆ ಆರ್‍ಎಂಒ ಡಾ.ಗಂಗಮ್ಮ, ಡಾ.ಸಂಪತ್ತಮ್ಮ, ಡಾ.ಸರಿತ, ಡಾ.ರಶ್ಮಿ, ಇಂಡಿಯನ್ ಡಯಾಟೆಟಿಕ್ ಅಸೋಸಿಯೇಷನ್ ಅಧ್ಯಕ್ಷೆ ಸುಶ್ಮಾ ಅಪ್ಪಯ್ಯ, ಸಿಡಿಪಿಒ ಮಂಜುಳ, ಗೀತಾ, ಕೃಷ್ಣಕುಮಾರಿ, ತಿ.ನರಸೀಪುರದ ಪ್ರೊಟೆಕ್ಷನ್ ಅಧಿಕಾರಿ ಪೂರ್ಣಿಮಾ ಹಾಗೂ ಅಂಗನವಾಡಿ ಕಾರ್ಯಕತೆರ್Àಯರು ಪಾಲ್ಗೊಂಡಿದ್ದರು.

Translate »