ಚಂದ್ರಯಾನ ಬಳಿಕ ಗಗನಯಾನಕ್ಕೆ ಸಿದ್ಧತೆ: ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಟೀಂ ರೆಡಿ
ಮೈಸೂರು

ಚಂದ್ರಯಾನ ಬಳಿಕ ಗಗನಯಾನಕ್ಕೆ ಸಿದ್ಧತೆ: ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಟೀಂ ರೆಡಿ

September 8, 2019

ಬೆಂಗಳೂರು,ಸೆ.7-ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಕಾರ್ಯಾ ಚರಣೆ ನಿರಾಶೆಗೊಂಡ ಬಳಿಕ ಇಸ್ರೋದಿಂದ ಮಾನವ ಸಹಿತ ಗಗನಯಾನ ಕೈಗೊಳ್ಳಲು ಸಿದ್ಧತೆ ಈಗಾಗಲೇ ಆರಂಭಗೊಂಡಿದೆ. ಭಾರತದ ಚೊಚ್ಚಲ ಗಗನಯಾನ ಯೋಜನೆಗೆ ಗಗನಯಾನಿಗಳನ್ನು ಆಯ್ಕೆ ಮಾಡಲು ಮೊದಲ ಸುತ್ತಿನ ಆಯ್ಕೆ ಪ್ರಕ್ರಿಯೆಯನ್ನು ಬೆಂಗ ಳೂರಿನ ಏರೋಸ್ಪೇಟ್ ಮೆಡಿಸಿನ್ ಇನ್ಸ್ಟಿಟ್ಯೂಟ್‍ನಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಭಾರತೀಯ ವಾಯುಪಡೆ ಸಾಮಾಜಿಕ ಜಾಲತಾಣ ಟ್ವಿಟರ್ ತಿಳಿಸಿದೆ. 2022ರ ವೇಳೆಗೆ ಇಸ್ರೋ ಗಗನಯಾನ ನೌಕೆಯ ಮೂಲಕ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಉದ್ದೇಶವನ್ನು ಹೊಂದಿದೆ. ಮೂವರು ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ 7 ದಿನಗಳನ್ನು ಕಳೆಯಲಿದ್ದಾರೆ. ಅಭ್ಯರ್ಥಿಗಳಿಗೆ ಈಗಾಗಲೇ ದೈಹಿಕ ವ್ಯಾಯಾಮ ಪರೀಕ್ಷೆ, ವಿಕಿರಣ ಶಾಸ್ತ್ರದ ಪರೀಕ್ಷೆ, ಲ್ಯಾಪ್ ತಪಾಸಣೆ, ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ಮೊದಲ ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ 25 ಟೆಸ್ಟ್ ಪೈಲಟ್‍ಗಳು ಭಾಗಿಯಾಗಿದ್ದು, ಅಂತಿಮ ಹಂತದಲ್ಲಿ 2-3 ಟೆಸ್ಟ್ ಪೈಲಟ್‍ಗಳು ಮಾತ್ರ ಆಯ್ಕೆ ಆಗಲಿದ್ದಾರೆಂದು ತಿಳಿದುಬಂದಿದೆ. 2018ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ರೂ. 10 ಸಾವಿರ ಕೋಟಿ ವೆಚ್ಚದ ಗಗನಯಾನ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು.

Translate »