ಡಿಕೆಶಿ ಬಂಧನ ಖಂಡಿಸಿ ಅಭಿಮಾನಿಗಳು, ಕಾಂಗ್ರೆಸಿಗರ ಪ್ರತಿಭಟನೆ
ಮೈಸೂರು

ಡಿಕೆಶಿ ಬಂಧನ ಖಂಡಿಸಿ ಅಭಿಮಾನಿಗಳು, ಕಾಂಗ್ರೆಸಿಗರ ಪ್ರತಿಭಟನೆ

September 8, 2019

ಮೈಸೂರು,ಸೆ.7(ಪಿಎಂ)-ಜಾರಿ ನಿರ್ದೇ ಶನಾಲಯದ ವಿಚಾರಣೆಗೆ ಸ್ಪಂದಿಸಿದರೂ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿ ಕೇಂದ್ರ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಡಿ.ಕೆ.ಶಿವ ಕುಮಾರ್ ಸ್ವಾಭಿಮಾನಿ ಬಳಗದ ವತಿ ಯಿಂದ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಅಗ್ರಹಾರ ವೃತ್ತದಲ್ಲಿ ಜಮಾ ಯಿಸಿದ ಪ್ರತಿಭಟನಾಕಾರರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿ ಕೇಂದ್ರ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಈ ವೇಳೆ ಮಾತನಾಡಿದ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರ ನಾಥ್, ಬಿಜೆಪಿಯ ಪಿತೂರಿಯಿಂದ ಡಿ.ಕೆ. ಶಿವಕುಮಾರ್ ಇಂದು ಬಂಧನಕ್ಕೀಡಾಗಿ ದ್ದಾರೆ. ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕರು. ಅವರನ್ನು ಕುಗ್ಗಿಸುವ ಮೂಲಕ ಕಾಂಗ್ರೆಸ್ ಸಂಘಟನೆ ದುರ್ಬಲ ಗೊಳಿಸಬೇಕೆಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದ್ದು, ಸಿಎಂ ಯಡಿಯೂರಪ್ಪ 15ಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪ ಎದುರಿಸುತ್ತಿ ದ್ದಾರೆ. ಇವರ ವಿರುದ್ಧ ಇಡಿ ಏಕೆ ತನಿಖೆ ನಡೆಸುವುದಿಲ್ಲ ಎಂದು ಪ್ರಶ್ನಿಸಿದರು.

ಡಿ.ಕೆ.ಶಿವಕುಮಾರ್ ಅವರಿಂದ ಯಾವುದೇ ಅಕ್ರಮ ನಡೆದಿಲ್ಲ. ಅಪರೇ ಷನ್ ಕಮಲಕ್ಕಾಗಿ ಸಾವಿರ ಕೋಟಿ ರೂ. ಹಣದ ವಹಿವಾಟು ನಡೆದಿದೆ ಎಂಬೆಲ್ಲಾ ಆರೋಪಗಳು ಇದ್ದರೂ ಈ ಸಂಬಂಧ ಯಾವುದೇ ತನಿಖೆ ನಡೆಯುವುದಿಲ್ಲ. ವಿಚಾರಣೆ ಶೀಘ್ರ ಪೂರ್ಣಗೊಳಿಸಿ ಡಿ.ಕೆ. ಶಿವಕುಮಾರ್ ಅವರನ್ನು ಬಿಡುಗಡೆ ಗೊಳಿಸಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ಆರ್.ಧರ್ಮ ಸೇನ, ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್, ಮೇಯರ್ ಪುಷ್ಪಲತಾ ಜಗ ನ್ನಾಥ್, ಮಾಜಿ ಮೇಯರ್ ಮೋದಾ ಮಣಿ, ಬಳಗದ ಸಂಚಾಲಕರಾದ ಹೆಡತಲೆ ಮಂಜುನಾಥ್, ಎನ್.ಭಾಸ್ಕರ್, ಪ್ರಶಾಂತ್‍ಗೌಡ, ಶ್ರೀನಾಥ್‍ಬಾಬು, ಎಸ್.ಶಿವ ನಾಗಪ್ಪ, ಕಾಂಗ್ರೆಸ್ ಮುಖಂಡ ಎಸ್.ಎನ್.ರಾಜೇಶ್, ಪಿ.ರಾಜು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »