ಮೈಸೂರು,ಸೆ.7(ಎಂಕೆ)-ಎಲ್ಲರೂ ದೇಶದ ಆರ್ಥಿಕತೆ ಬಗ್ಗೆ ಮಾತ್ರ ಮಾತ ನಾಡುತ್ತಾರೆಯೇ ಹೊರತು ಪರಿಸರ ಸಂರ ಕ್ಷಣೆ, ನೈಸರ್ಗಿಕ ಸಂಪನ್ಮೂಲ ಕುರಿತು ಯಾರೂ ಚಿಂತಿಸುವುದಿಲ್ಲ ಎಂದು ಈಶಾ ಫೌಂಡೇಷನ್ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ ವಿಷಾದಿಸಿದರು.
ಮೈಸೂರಿನ ವಿಜಯನಗರ 3ನೇ ಹಂತ ದಲ್ಲಿರುವ ಆಶಾ ಪ್ರಕಾಶ್ ಶೆಟ್ಟಿ ಬಂಟ್ಸ್ ಸಮುದಾಯ ಭವನದಲ್ಲಿ ಅಸೋಸಿ ಯೇಷನ್ ಇನ್ನರ್‍ವ್ಹೀಲ್ ಕ್ಲಬ್ ಆಫ್ ಇಂಡಿಯಾ ಹಾಗೂ ಇನ್ನರ್‍ವ್ಹೀಲ್ ಡಿಸ್ಟ್ರಿಕ್ಟ್ 318 ಮೈಸೂರು ವತಿಯಿಂದ ಆಯೋಜಿ ಸಿದ್ದ ‘ಮೈಲಿಗಲ್ಲು’ ಎರಡು ದಿನಗಳ ದಕ್ಷಿಣ ವಲಯ ಸಭೆ-2019 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಕಡಿಮೆ ಕೊಟ್ಟು ಹೆಚ್ಚನ್ನು ಪಡೆಯುವ ಹಂಬಲದಲ್ಲಿರುತ್ತೇವೆ. ಪಡೆದುಕೊಳ್ಳುವ ದಾರಿಯಲ್ಲಿ ಕೆಲವನ್ನು ಮತ್ತು ಕೆಲವರನ್ನು ಸಾಯಿಸುತ್ತೇವೆ. ಎಲ್ಲರನ್ನೂ ಅಥವಾ ಎಲ್ಲ ವನ್ನೂ ಸಾಯಿಸುತ್ತಾ ಬಂದರೆ ಪಡೆದುಕೊಳ್ಳು ವುದಾದರೂ ಎಲ್ಲಿಂದ ಎಂದು ಪ್ರಶ್ನಿಸಿದರು.
‘ಕಾವೇರಿ ಕೂಗು’ ಜನರನ್ನು ಜಾಗೃತ ಗೊಳಿಸುವ ಒಂದು ಮಹತ್ತರ ಅಭಿಯಾನ. ವರ್ಷದಿಂದ ವರ್ಷಕ್ಕೆ ಪ್ರವಾಹ ಹೆಚ್ಚಾಗು ತ್ತಲೇ ಇದೆ. ಅದಾದ ಬಳಿಕ ಬರಗಾಲ ಆವರಿಸುತ್ತದೆ. ಇದಕ್ಕೆ ಕಾರಣ ಸುರಿದ ಮಳೆ ನೀರು ಭೂಮಿಯಲ್ಲಿ ಇಂಗದೆ ಹರಿದು ವ್ಯರ್ಥವಾಗುತ್ತಿರುವುದು. ಕಾವೇರಿ ನದಿ ಪ್ರದೇಶದಲ್ಲಿ ಶೇ.82 ರಷ್ಟು ಅರಣ್ಯ ನಾಶ ವಾಗಿದೆ. ಶೇ.80 ರಷ್ಟು ರೈತರು ಕಾವೇರಿ ನದಿ ನೀರನ್ನೇ ಅವಲಂಬಿಸಿದ್ದಾರೆ. ಆದರೆ, ಮಳೆಗಾಲ ಮುಗಿದ ಕೆಲವೇ ತಿಂಗಳಲ್ಲಿ ಕಾವೇರಿ ಬರಿದಾಗುತ್ತದೆ. ಇದೆಲ್ಲಾ ನಿಲ್ಲಬೇಕಾ ದರೆ ನದಿ ಬಯಲಿನಲ್ಲಿ ಅರಣ್ಯ ಸಂಪತ್ತು ವೃದ್ಧಿಯಾಗಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ, ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರವು ಕಾವೇರಿ ಕೂಗು ಅಭಿಯಾನಕ್ಕೆ ಸ್ಪಂದಿಸಿವೆ. ಸರ್ಕಾ ರದ ಮನವೊಲಿಸಿ ರೈತರಿಗೆ ಒಳಿತಾಗು ವಂತೆ ಕಾವೇರಿ ನದಿ ಬಯಲಿನಲ್ಲಿ ಹಸಿರನ್ನು ಹೆಚ್ಚಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಪ್ರತಿಯೊಂದು ಬೆಳೆ ಬೆಳೆಯಲೂ ರಾಸಾಯನಿಕ ಗೊಬ್ಬರ ಗಳನ್ನು ಹೆಚ್ಚಾಗಿ ಅವಲಂಬಿಸಿದ್ದೇವೆ. ಮುಂದಿನ 50 ವರ್ಷಗಳ ನಂತರ ಬೆಳೆಗಳನ್ನು ಬೆಳೆಯುವುದೇ ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು.
ನಮ್ಮಿಂದ ಮಾಡಲು ಸಾಧ್ಯವಾಗದಿರು ವುದನ್ನು ಬೇರೆಯವರಿಗೆ ನೀಡಿ, ಅವರು ಹೇಗೆ ಮಾಡುತ್ತಾರೆ ಎಂದು ನೋಡು ವುದು ಬೇಡ. ಸಾಧ್ಯವಾದರೆ ಮಾಡಬೇಕೇ ಹೊರತು ಇತರರನ್ನು ಪರೀಕ್ಷೆ ಮಾಡ ಬಾರದು. ತಂದೆ-ತಾಯಂದಿರು ತಮ್ಮ ಮಕ್ಕಳನ್ನು ನಿರ್ಬಂಧಿಸಬಾರದು. ಅವರ ಮೇಲೆ ಒತ್ತಡ ಹಾಕಬಾರದು. ಅವರನ್ನು ಸ್ವತಂತ್ರವಾಗಿ ಬೆಳೆಸಬೇಕು. ಹೊಸತನ, ಹೊಸ ವಿಚಾರಗಳು ಮೂಡುವಂತಹ ವಾತಾವರಣ ಕಲ್ಪಿಸಬೇಕು. ನಮ್ಮ ಸಾಧನೆ, ಪ್ರಗತಿಯನ್ನು ನೋಡಿ ಮಕ್ಕಳು ಕಲಿಯಬೇಕು. ಉತ್ತಮ ವಿಚಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮೃದ್ಧ ಜೀವನ ಸಾಗಿಸಬೇಕು. ಬೇರೆ ಯಾರೂ ನಿಮ್ಮ ಜೀವನವನ್ನು ಉನ್ನತ ಮಟ್ಟಕ್ಕೆ ಬೆಳೆಸುವುದಿಲ್ಲ. ನಿಮ್ಮ ಜೀವನದ ನಿರ್ಮಾತೃ ನೀವೇ ಆಗಿರಬೇಕು. ಸ್ತ್ರೀ-ಪುರುಷ ಎಂಬುದರಲ್ಲಿ ಯಾವುದೇ ಭಿನ್ನವಿಲ್ಲ, ಎಲ್ಲರೂ ಸಮಾನರು ಎಂದರು
ಸಾಂಸ್ಕøತಿಕ ಸಂಭ್ರಮ: ಮೈಸೂರು, ದಕ್ಷಿಣ ಕನ್ನಡ, ಹಾಸನ ಸೇರಿದಂತೆ ಇನ್ನಿ ತರೆ ಇನ್ನರ್‍ವ್ಹೀಲ್ ಕ್ಲಬ್‍ಗಳ ವತಿಯಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಬಣ್ಣ ಬಣ್ಣದ ಉಡುಗೆ-ತೊಡುಗೆ ಯೊಂದಿಗೆ ಕಂಗೊಳಿಸುತ್ತಿದ್ದ ಕ್ಲಬ್‍ಗಳ ಸದಸ್ಯರು, ನೃತ್ಯ, ನಾಟಕ, ಭರತನಾಟ್ಯ ಪ್ರದರ್ಶನ ನೀಡಿ ಸಂಭ್ರಮಿಸಿದರು.
ರಾಜಮನೆತನ ಕಲೆ ಮತ್ತು ಸಾಹಿತ್ಯಕ್ಕೆ ನೀಡಿದ ಕೊಡುಗೆ ಕುರಿತಾದ ನಾಟಕ ಅಭಿನಯಿಸಿದರು. ಕನ್ನಡ, ಹಿಂದಿ, ತಮಿಳು ಚಿತ್ರಗೀತೆಗಳನ್ನು ಹಾಡಿ ಕುಣಿದು ಕುಪ್ಪಳಿಸಿದರು. ಇದೇ ವೇಳೆ ಹಿರಿಯ ಸಮಾಜ ಸೇವಕಿಯೂ ಆದ ಕ್ಲಬ್‍ನ ಸದಸ್ಯೆ ಸೆಲಿನಾ ವಾಗ್ ಅವರನ್ನು ಸನ್ಮಾನಿ ಸಲಾಯಿತು.
ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಇನ್ನರ್‍ವ್ಹೀಲ್ ಕ್ಲಬ್‍ನ ಮಾಜಿ ಅಧ್ಯಕ್ಷೆ ಡಾ.ಪಲ್ಲವಿ ಷಾ, ಉಪಾಧ್ಯಕ್ಷೆ ಮಮತ ಗುಪ್ತಾ, ಇನ್ನರ್‍ವ್ಹೀಲ್ ಡಿಸ್ಟ್ರಿಕ್ಟ್ 318ರ ಅಧ್ಯಕ್ಷೆ ಅನುರಾಧ ನಂದಕುಮಾರ್, ನೈನಾ ಅಚಪ್ಪ, ರಚನಾ ನಾಗೇಶ್, ಮದು ನಾಗಪಾಲ್, ಲಕ್ಷ್ಮಿ, ಸುಜಾತ ಸೆಂಥಿಲ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.