ಮೈಸೂರು

ಸಂಪುಟ ರಚನೆ: ಸಚಿವ ಸ್ಥಾನ ಸಿಗದವರ ಅಸಮಾಧಾನ ಶಮನಗೊಳಿಸಿ ಇಲ್ಲವೇ ಮಧ್ಯಂತರ ಚುನಾವಣೆಗೆ ಸಿದ್ಧರಾಗಿ
ಮೈಸೂರು

ಸಂಪುಟ ರಚನೆ: ಸಚಿವ ಸ್ಥಾನ ಸಿಗದವರ ಅಸಮಾಧಾನ ಶಮನಗೊಳಿಸಿ ಇಲ್ಲವೇ ಮಧ್ಯಂತರ ಚುನಾವಣೆಗೆ ಸಿದ್ಧರಾಗಿ

August 22, 2019

ಬೆಂಗಳೂರು, ಆ. 21 (ಕೆಎಂಶಿ)- ಸಂಪುಟ ವಿಸ್ತರಣೆ ಬೆನ್ನಲ್ಲೇ ಎದ್ದಿರುವ ಶಾಸಕ ರಲ್ಲಿನ ಅಸಮಾಧಾನ, ಭಿನ್ನಮತ ಬಗೆಹರಿಸದಿದ್ದರೆ ವಿಧಾನಸಭೆಯ ಮಧ್ಯಂತರ ಚುನಾವಣೆಗೆ ಸಿದ್ಧರಾಗಿ ಎಂದು ಕೇಂದ್ರ ಬಿಜೆಪಿ ವರಿಷ್ಠರು ಪಕ್ಷದ ರಾಜ್ಯ ನಾಯಕರಿಗೆ ಖಡಕ್ಕಾಗಿ ಎಚ್ಚರಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಆಗುವು ದನ್ನು ಸಹಿಸುವುದಿಲ್ಲ, ಇದನ್ನು ಸರಿಪಡಿಸು ವುದು ನಿಮ್ಮ ಹೊಣೆ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷ ಯಾರ ಹಂಗಿನಲ್ಲೂ ಇಲ್ಲ, ಅಧಿಕಾರ ಲಾಲಸೆಗೆ ಸರ್ಕಾರವನ್ನು ಬೀದಿಗೆ ತರು ವುದು ಬೇಡ, ಅತೃಪ್ತರು…

ಇಂದು ಮೈಸೂರಿಗೆ ದಸರಾ ‘ಗಜಪಡೆ’
ಮೈಸೂರು

ಇಂದು ಮೈಸೂರಿಗೆ ದಸರಾ ‘ಗಜಪಡೆ’

August 22, 2019

ಮೈಸೂರು, ಆ.21(ಎಂಟಿವೈ, ಹನಗೋಡು ಮಹೇಶ್)- ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಗಜಪಡೆ. ಅಂಬಾರಿ ಆನೆ ಅರ್ಜುನ ನೇತೃತ್ವದ ಆರು ಆನೆಗಳುಳ್ಳ ಮೊದಲ ತಂಡ ನಾಳೆ(ಆ.22) ಬೆಳಿಗ್ಗೆ 11ಕ್ಕೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗೇಟ್‍ನಿಂದ ಮೈಸೂರಿಗೆ ಆಗಮಿಸಲಿವೆ. ನಾಗರಹೊಳೆ ಅಭಯಾರಣ್ಯದ ಕಾಡಂಚಿನ ಹಾಡಿ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗೇಟ್ ಬಳಿ ನಾಳೆ ಬೆಳಿಗ್ಗೆ 11ಕ್ಕೆ ದಸರಾ ಗಜಪಡೆಗೆ ಮೈಸೂರು ಜಿಲ್ಲೆ ನೆರೆ ಪರಿಹಾರ ಉಸ್ತುವಾರಿಯಾಗಿ ನಿಯೋಜನೆಗೊಂಡಿರುವ ಸಚಿವ ಆರ್.ಅಶೋಕ್ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ವಿಧ್ಯುಕ್ತ…

ವೃದ್ಧೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಖದೀಮನ ಸೆರೆ
ಮೈಸೂರು

ವೃದ್ಧೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಖದೀಮನ ಸೆರೆ

August 22, 2019

ಮೈಸೂರು, ಆ.21(ಆರ್‍ಕೆ)- ಮನೆ ಮಳಿಗೆಯ ಬಾಡಿಗೆದಾರನೂ ಆದ ಹಣ್ಣಿನ ವ್ಯಾಪಾರಿ, ಹಾಡಹಗಲೇ ತನ್ನ ಮಳಿಗೆ ಮಾಲೀಕರ ಮನೆಗೆ ನುಗ್ಗಿ, ಮನೆಯಲ್ಲಿದ್ದ ವೃದ್ಧೆಯ ಬಾಯಿಗೆ ಬಟ್ಟೆ ತುರುಕಿ ಅವರ ಕೈಗಳಲ್ಲಿದ್ದ 7 ಚಿನ್ನದ ಬಳೆಗಳನ್ನು ದೋಚಿ ಪರಾರಿಯಾಗಿದ್ದು, ಕೇವಲ ಅರ್ಧಗಂಟೆ ಯಲ್ಲಿ ಲಕ್ಷ್ಮೀಪುರಂ ಠಾಣೆ ಪೊಲೀಸರು ಆತನ ಹೆಡೆಮುರಿ ಕಟ್ಟಿದ್ದಾರೆ. ಈ ಆಘಾತ ಕಾರಿ ಘಟನೆ ಮೈಸೂರಿನ ಜಿಲ್ಲಾ ನ್ಯಾಯಾ ಲಯದೆದುರು, ಚಾಮರಾಜಪುರಂನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಮೈಸೂರಿನ ಬನ್ನಿಮಂಟಪದ ಅಲೀಂ ನಗರ ನಿವಾಸಿ ಗೌಸ್ ಷರೀಫ್ ಮಗ…

ಭಾರತದ ಕನಿಷ್ಠ ಇತಿಹಾಸ ಅರಿಯದೇ ನಮ್ಮ ಸಂವಿಧಾನ ಅರ್ಥೈಸಿಕೊಳ್ಳಲಾಗದು
ಮೈಸೂರು

ಭಾರತದ ಕನಿಷ್ಠ ಇತಿಹಾಸ ಅರಿಯದೇ ನಮ್ಮ ಸಂವಿಧಾನ ಅರ್ಥೈಸಿಕೊಳ್ಳಲಾಗದು

August 22, 2019

ಮೈಸೂರು, ಆ.21(ಪಿಎಂ)- ಭೌಗೋಳಿಕವಾಗಿ ಮಾತ್ರವಲ್ಲದೆ, ಜನಸಮುದಾಯಗಳೂ ಒಳಗೊಂ ಡಂತೆ ಭಾರತದ ಕನಿಷ್ಠ ಇತಿಹಾಸ ಅರಿಯದೇ ಭಾರತ ಸಂವಿಧಾನ ಅರ್ಥೈಸಿಕೊಳ್ಳಲಾಗದು ಎಂದು ಕರ್ನಾಟಕ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‍ದಾಸ್ ತಿಳಿಸಿದರು. ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಶಿಕ್ಷಣ ಇಲಾಖೆ ಹಾಗೂ ಮೈಸೂರು ವಿವಿ ಕಾನೂನು ವಿಭಾಗದ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ `ಸಂವಿಧಾನ ಓದು’ ಕಾನೂನು ಅರಿವು ಕಾರ್ಯಕ್ರಮ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಭಾರತದ ಸಂವಿಧಾನ ಪ್ರಪಂಚದಲ್ಲೇ ಶ್ರೇಷ್ಠ ಲಿಖಿತ ಸಂವಿಧಾನವಾಗಿದ್ದು,…

ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಅನರ್ಹ ಶಾಸಕ ಹೆಚ್.ವಿಶ್ವನಾಥ್ ದೆಹಲಿಗೆ ಪ್ರಯಾಣ
ಮೈಸೂರು

ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಅನರ್ಹ ಶಾಸಕ ಹೆಚ್.ವಿಶ್ವನಾಥ್ ದೆಹಲಿಗೆ ಪ್ರಯಾಣ

August 22, 2019

ಮೈಸೂರು,ಆ.21(ಆರ್‍ಕೆಬಿ)- ಅನರ್ಹ ಶಾಸಕ ಅಡಗೂರು ಹೆಚ್.ವಿಶ್ವನಾಥ್ ಅವರು ಬುಧವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಬಳಿಕ ದೆಹಲಿ ಯತ್ತ ಪ್ರಯಾಣ ಬೆಳೆಸಿದರು. ಮಾಜಿ ಸಚಿವ, ಕೆ.ಆರ್.ನಗರ ಶಾಸಕ ಸಾ.ರಾ. ಮಹೇಶ್ ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ಹೆಚ್. ವಿಶ್ವನಾಥ್ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಸುಪ್ರೀಕೋರ್ಟ್‍ನಲ್ಲಿ ಅನರ್ಹತೆಯನ್ನು ಪ್ರಶ್ನಿಸಿ ಹಾಕಿರುವ ಅರ್ಜಿಯ ವಿಚಾರದ ಬಗ್ಗೆ ವಕೀಲರೊಂದಿಗೆ ಚರ್ಚಿಸಲು ಅವರು ದೆಹಲಿಗೆ ತೆರಳಿದ್ದಾರೆಂದು ಹೇಳಲಾಗಿದೆ. ವಿಶ್ವನಾಥ್ ಯಾವುದೇ ಆಮಿಷಕ್ಕೆ…

ಆ.23, 24 ರಾಜ್ಯ ಮಟ್ಟದ ವಿಚಾರ ಸಂಕಿರಣ
ಮೈಸೂರು

ಆ.23, 24 ರಾಜ್ಯ ಮಟ್ಟದ ವಿಚಾರ ಸಂಕಿರಣ

August 22, 2019

ಮೈಸೂರು, ಆ.21-ಮೈಸೂರು ವಿವಿಯ ಡಾ. ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಪೀಠದ ವತಿಯಿಂದ ಆ.23 ಮತ್ತು 24ರಂದು `ನೂರು ವರ್ಷಗಳ ಮೀಸಲಾತಿಯ ನಡಿಗೆ…ಒಂದು ಪರಿವೀಕ್ಷಣೆ’ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಮಾನಸಗಂಗೋತ್ರಿಯ ವಿಜ್ಞಾನ ಭವನ ಸಭಾಂಗಣದಲ್ಲಿ ಆ.23ರಂದು ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮೈಸೂರು ವಿವಿ ಕುಲಸಚಿವ ಪ್ರೊ. ಲಿಂಗರಾಜ ಗಾಂಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಬೆಂಗಳೂರು…

ಜಿಲ್ಲೆಯಲ್ಲಿ 7ನೇ ಆರ್ಥಿಕ ಗಣತಿ: ಶಶಿಕುಮಾರ್
ಮೈಸೂರು

ಜಿಲ್ಲೆಯಲ್ಲಿ 7ನೇ ಆರ್ಥಿಕ ಗಣತಿ: ಶಶಿಕುಮಾರ್

August 22, 2019

ಮೈಸೂರು, ಆ.21- ಗ್ರಾಮೀಣ ಮತ್ತು ನಗರ ಪ್ರದೇಶ ಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿರುವ ಸಂಘಟಿತ ಹಾಗೂ ಅಸಂಘಟಿತ ವಿಭಾಗಗಳಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಹೊಂದಿರುವ ಉದ್ಯಮಗಳ ಪಟ್ಟಿಯನ್ನು ತಯಾರಿಸಲು 7ನೇ ಆರ್ಥಿಕ ಗಣತಿಯನ್ನು ಮೈಸೂರು ನಗರದಲ್ಲಿ ಕೈಗೊಳ್ಳಲಾಗುವುದು ಎಂದು ನಗರಪಾಲಿಕೆ ಹೆಚ್ಚುವರಿ ಆಯುಕ್ತ ಶಶಿಕುಮಾರ್ ತಿಳಿಸಿದರು. ಮೈಸೂರು ಮಹಾನಗರ ಪಾಲಿಕೆಯ ಕಚೇರಿ ಸಭಾಂ ಗಣದಲ್ಲಿ ಬುಧವಾರ ನಡೆದ ಮೈಸೂರು ವ್ಯಾಪ್ತಿಯ ಉಸ್ತು ವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದರು. ಈ ಬಾರಿ ಮೊಬೈಲ್…

ಆ.24, ಹೆಚ್.ಡಿ.ಕೋಟೆಯಲ್ಲಿ ಬುಡಕಟ್ಟು ಜನರ ಹಕ್ಕೊತ್ತಾಯ ಕಾರ್ಯಾಗಾರ
ಮೈಸೂರು

ಆ.24, ಹೆಚ್.ಡಿ.ಕೋಟೆಯಲ್ಲಿ ಬುಡಕಟ್ಟು ಜನರ ಹಕ್ಕೊತ್ತಾಯ ಕಾರ್ಯಾಗಾರ

August 22, 2019

ಮೈಸೂರು,ಆ.21(ಆರ್‍ಕೆಬಿ)-ಹೆಚ್.ಡಿ.ಕೋಟೆ ಬುಡ ಕಟ್ಟು ಕೃಷಿಕರ ಸಂಘ ಹಾಗೂ ಸರಗೂರು ತಾಲೂಕು ಬುಡಕಟ್ಟು ಕೃಷಿಕರ ಸಂಘದ ಜಂಟಿ ಆಶ್ರಯದಲ್ಲಿ ಆ.24 ರಂದು ಬೆಳಿಗ್ಗೆ 11 ಗಂಟೆಗೆ ಹೆಚ್.ಡಿ.ಕೋಟೆ ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ 25ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ ಬುಡಕಟ್ಟು ಜನರ ಹಕ್ಕೊತ್ತಾಯ ಕಾರ್ಯಾಗಾರ ನಡೆಸಲಾಗುವುದು ಎಂದು ರಾಜ್ಯ ಮೂಲ ಆದಿವಾಸಿ ವೇದಿಕೆ ಅಧ್ಯಕ್ಷ ವಿಜಯಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಾ ಗಾರದಲ್ಲಿ ಒಂದು ಸಾವಿರ ಬುಡಕಟ್ಟು ವಾಸಿಗಳು ಭಾಗ…

ಮಂಚೇಗೌಡನ ಕೊಪ್ಪಲಿನಲ್ಲಿ ಮನೆಗಳ್ಳತನ
ಮೈಸೂರು

ಮಂಚೇಗೌಡನ ಕೊಪ್ಪಲಿನಲ್ಲಿ ಮನೆಗಳ್ಳತನ

August 22, 2019

ಮೈಸೂರು,ಆ.21(ಎಸ್‍ಪಿಎನ್)-ಕಿಟಕಿ ಮೂಲಕ ಮನೆ ಮುಂಬಾಗಿಲು ತೆರೆದು ಒಳ ನುಗ್ಗಿರುವ ಖದೀಮರು ಮನೆಯಲ್ಲಿದ್ದ ಮೊಬೈಲ್, ಲ್ಯಾಪ್‍ಟಾಪ್ ಸೇರಿದಂತೆ ಹಲವು ವಸ್ತುಗಳನ್ನು ಕಳವು ಮಾಡಿರುವ ಘಟನೆ ಮಂಚೇಗೌಡನಕೊಪ್ಪಲಿನಲ್ಲಿ ನಡೆದಿದೆ. ಇಲ್ಲಿನ ಪೂನಮ್ ಸನಾರ್ ಎಂಬು ವರ ಮನೆಯಲ್ಲಿ ಕಳ್ಳತನವಾಗಿದೆ. ಆ.19ರಂದು ಪೂನಮ್ ಸನಾರ್ ಕರ್ತವ್ಯ ಮುಗಿಸಿ ರಾತ್ರಿ ಮನೆಗೆ ಬಂದು ರೂಮ್‍ನಲ್ಲಿ ಮಲಗಿದ್ದಾರೆ. ತಡರಾತ್ರಿ ಒಳನುಗ್ಗಿರುವ ಖದೀಮ ಮನೆ ಯಲ್ಲಿದ್ದ ಮೊಬೈಲ್, ಲ್ಯಾಪ್‍ಟಾಪ್, ಪರ್ಸ್ ನಲ್ಲಿದ್ದ 5 ಸಾವಿರ ನಗದು ಹಾಗೂ ವಿವಿಧ ಬ್ಯಾಂಕ್‍ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್…

ಅಕ್ರಮ ಗ್ಯಾಸ್ ರೀಫಿಲ್ಲಿಂಗ್: ಓರ್ವನ ಬಂಧನ
ಮೈಸೂರು

ಅಕ್ರಮ ಗ್ಯಾಸ್ ರೀಫಿಲ್ಲಿಂಗ್: ಓರ್ವನ ಬಂಧನ

August 22, 2019

ಮೈಸೂರು, ಆ.21(ಎಸ್‍ಪಿಎನ್)-ಗೃಹ ಬಳಕೆ ಸಿಲಿಂಡರ್ ಬಳಸಿಕೊಂಡು ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಮಳಿಗೆ ಮೇಲೆ ದಾಳಿ ನಡೆಸಿ ಓರ್ವನನ್ನು ಬಂಧಿಸಿ ರುವ ಸಿಸಿಬಿ ಪೊಲೀಸರು, ಅಕ್ರಮಕ್ಕೆ ಬಳ ಸಿದ್ದ 20 ಸಿಲಿಂಡರ್ ಹಾಗೂ ಪರಿಕರ ಗಳನ್ನು ವಶಕ್ಕೆ ಪಡೆದಿದ್ದಾರೆ. ಮೈಸೂರಿನ ಕೆ.ಆರ್.ಮೊಹಲ್ಲಾದ ನಿವಾಸಿ ಗುಲ್ಷಾದ್ ಅಹಮದ್(49)ಬಂಧಿತ ಆರೋಪಿ. ಆ.21 ರಂದು ನಂಜು ಮಳಿಗೆ ಸರ್ಕಲ್ ಬಳಿಯ ಖಾದ್ರಿಯಾ ಮಸೀದಿ ಕಟ್ಟಡದಲ್ಲಿರುವ ಕೆಜಿಎನ್ ಗ್ಯಾಸ್ ಸ್ಟೌವ್ ಸೇಲ್ಸ್ & ಸರ್ವೀಸ್ ಅಂಗಡಿಯ ಮೇಲೆ ದಾಳಿ ಮಾಡಿದ ವೇಳೆ ಈ…

1 851 852 853 854 855 1,611
Translate »