ಬೆಂಗಳೂರು,ಆ.22(ಕೆಎಂಶಿ)-ಸಂಪುಟ ವಿಸ್ತರಣೆಯ ನಂತರ ಪಕ್ಷದ ಶಾಸಕರಲ್ಲಿ ಅಸಮಾಧಾನ, ಬಂಡಾಯಕ್ಕೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಕಾರಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲಿಗರು ದೂರಿದ್ದಾರೆ. ಬಂಡಾಯದಿಂದ ಸರ್ಕಾರ ಪತನವಾದರೆ, ಅದಕ್ಕೆ ಸಂತೋಷ್ ಕಾರಣ. ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಆಕಾಂಕ್ಷಿಯಾಗಿ ಮಂತ್ರಿ ಸ್ಥಾನ ದೊರೆ ಯದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ತಮ್ಮ ಹೆಸರನ್ನು ಬಹಿರಂಗಪಡಿಸಲು ಇಚ್ಛಿ ಸದ ಅವರು, ನಾವು ಯಡಿಯೂರಪ್ಪ ಬೆಂಬಲಿಗರು ಎಂಬ ಕಾರಣಕ್ಕೆ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಸಿ.ಎಂ.ಉದಾಸಿ, ರೇಣುಕಾಚಾರ್ಯ, ರಾಜುಗೌಡ,…
ಜು.26ರಿಂದ ಆ.6ರವರೆಗೆ ನಡೆದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಸಮೀಕ್ಷೆ
August 23, 2019ಮೈಸೂರು, ಆ. 22(ಆರ್‍ಕೆ)- ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ 65 ವಾರ್ಡು ಗಳಲ್ಲಿ ಒಟ್ಟು 562 ಮಂದಿ ಮ್ಯಾನ್ಯು ಯಲ್ ಸ್ಕ್ಯಾವೆಂಜರ್‍ಗಳಿರುವುದಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ. ಮೈಸೂರು ಜಿಲ್ಲಾ ನಗರಾಭಿವೃದ್ಧಿ ಕೋಶ (District urban Development cell), ರಾಷ್ಟ್ರೀಯ ಸಫಾಯಿ ಕರ್ಮ ಚಾರಿಗಳ ಹಣಕಾಸು ಮತ್ತು ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯ ಘಟಕದ ವತಿಯಿಂದ ಜುಲೈ 26ರಿಂದ ಆಗಸ್ಟ್ 6ರವರೆಗೆ ಮೈಸೂರು ನಗರದ ಎಲ್ಲಾ 9 ಪಾಲಿಕೆ ವಲಯ ಕಚೇರಿಗಳಲ್ಲಿ ಕೈಯ್ಯಿಂದ ಮಲ…
ಸಂವಿಧಾನ ಒಂದು ಮಹಾಗ್ರಂಥ, ಒಂದಲ್ಲ ಹತ್ತು ಬಾರಿ ಅಭ್ಯಸಿಸಬೇಕು
August 23, 2019ಮೈಸೂರು, ಆ.22(ಆರ್‍ಕೆಬಿ)- ಸಂವಿಧಾನ ಎಂಬುದು ಕಥೆ, ಕಾದಂಬರಿ, ಕಾವ್ಯವಲ್ಲ. ಅದೊಂದು ಮಹಾ ಗ್ರಂಥ. ಭಾರತೀಯರಾದ ನಾವು ಅದನ್ನು ಒಂದಲ್ಲ ಹತ್ತು ಬಾರಿಯಾದರೂ ಓದಿಕೊಳ್ಳಬೇಕು ಎಂದು ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಇಂದಿಲ್ಲಿ ತಿಳಿಸಿದರು. ಮೈಸೂರಿನ ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜಂಟಿಯಾಗಿ ಆಯೋಜಿಸಿದ್ದ ಯುವ ರೆಡ್‍ಕ್ರಾಸ್ ಘಟಕದ ಉದ್ಘಾಟನೆ ನೆರವೇರಿಸಿ, ಬಳಿಕ `ಸಂವಿಧಾನ ಓದು: ಸಂವಾದ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 70 ವರ್ಷದಲ್ಲಿ…
ಅದೆಷ್ಟೇ ದಾಳಿ ನಡೆದರೂ ಭಾರತದಪರಂಪರೆ ಮುಕ್ಕಾಗದು: ಸಚಿವ ಅಶೋಕ್
August 23, 2019ವೀರನಹೊಸಳ್ಳಿ,ಆ.22(ಎಂಟಿವೈ)- ಭಾರತದ ಮೇಲೆ ಡಚ್ಚರು, ಮೊಘಲರು, ಫ್ರೆಂಚರು, ಬ್ರಿಟಿಷರು ದಾಳಿ ನಡೆಸಿದರೂ ದಸರಾ ಸೇರಿದಂತೆ ನಮ್ಮ ಪರಂಪರೆ ಮತ್ತು ಆಚರಣೆಗಳಿಗೆ ಧಕ್ಕೆಯಾಗಿಲ್ಲ ಎಂದು ಸಚಿವ ಆರ್.ಅಶೋಕ್ ಹೇಳಿದರು. ಹುಣಸೂರು ತಾಲೂಕಿನ ವೀರನಹೊಸಳ್ಳಿ ಗೇಟ್ ಬಳಿ ಗುರುವಾರ ದಸರಾ ಆನೆಗಳ `ಗಜಪಯಣ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ಸಾಂಸ್ಕøತಿಕ, ಧಾರ್ಮಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸಂಪದ್ಭರಿತವಾಗಿದೆ. ನಮ್ಮ ದೇಶದ ಮೇಲೆ ಈ ಹಿಂದೆ ಡಚ್ಚರು, ಮೊಘಲರು, ಫ್ರೆಂಚರು, ಬ್ರಿಟಿಷರು ಸೇರಿದಂತೆ ಹಲವರು ದಾಳಿ ನಡೆಸಿ, ನಮ್ಮಲ್ಲಿನ ಸಂಪತ್ತನ್ನು…
ತೆರಿಗೆದಾರರಿಗೆ ಅಧಿಕಾರಿಗಳಿಂದ ಕಿರಿಕಿರಿ ತಪ್ಪಿಸಲುತಂತ್ರಜ್ಞಾನದ ಮೂಲಕ ಮಾಹಿತಿ ಸಂಗ್ರಹ, ವಿಚಾರಣೆ
August 23, 2019ಮೈಸೂರು, ಆ.22(ವೈಡಿಎಸ್)-ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೇಲಿನ ಒತ್ತಡ ಹಾಗೂ ತೆರಿಗೆದಾರರಿಗೆ ಉಂಟಾಗುತ್ತಿದ್ದ ಸಮಸ್ಯೆ ಬಗೆಹರಿಸುವ ನಿಟ್ಟಿ ನಲ್ಲಿ ಇಲಾಖೆಯಲ್ಲಿ ತೆರಿಗೆದಾರರೊಂದಿಗೆ ಮಾಹಿತಿ ವಿನಿಮಯ ಮತ್ತು ಪಾವತಿ ಬಾಕಿ ಬಗೆಗಿನ ವಿಚಾರಣೆಯನ್ನು ವಿಜಯದಶಮಿ ಯಿಂದಲೇ ಡಿಜಿಟಲೀಕರಣಗೊಳಿಸಲಾಗು ವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು. ಆದಾಯ ತೆರಿಗೆ ಇಲಾಖೆ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ಬಳಿಕ ಸರ್ಕಾರಿ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ತೆರಿಗೆದಾರರನ್ನು ಮುಖಾ ಮುಖಿಯಾಗಿ ಕರೆಸಿಕೊಂಡು ತೆರಿಗೆ ಪಾವತಿ…
ನಮಗೆ ಇದೇ ಖಾತೆ ಬೇಕು…
August 23, 2019ಬೆಂಗಳೂರು, ಆ.22(ಕೆಎಂಶಿ)-ವರಿಷ್ಠರ ಜೊತೆ ಚರ್ಚಿಸಿ ನೂತನ ಸಚಿ ವರಿಗೆ ಖಾತೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಮತ್ತಿತರರನ್ನು ಭೇಟಿಯಾ ಗುತ್ತೇನೆ. ಈ ವೇಳೆ ನೂತನ ಸಚಿವರಿಗೆ ಖಾತೆ ನೀಡುವ ಸಂಬಂಧ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದರು. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಚಿವರು ಪ್ರವಾಸ ನಡೆಸಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ್ದಾರೆ. ಅತಿವೃಷ್ಟಿಯಿಂದ ಹಾನಿಗೊಳ ಗಾಗಿರುವವರಿಗೆ ಸರ್ಕಾರ ಎಲ್ಲಾರೀತಿಯ…
ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಬೆಳವಾಡಿ ಸಿಲಿಕಾನ್ವ್ಯಾಲಿ ಬಡಾವಣೆ ನಿವಾಸಿಗಳ ಪ್ರತಿಭಟನೆ
August 23, 2019ಮೈಸೂರು, ಆ.22(ಆರ್‍ಕೆಬಿ)- ತಮ್ಮ ಬಡಾವಣೆಯಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿ ದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಮೈಸೂರಿನ ಹುಣಸೂರು ರಸ್ತೆಯ ಬೆಳ ವಾಡಿ ಸಿಲಿಕಾನ್ ವ್ಯಾಲಿ ಬಡಾವಣೆಯ ನಿವಾಸಿಗಳು ಗುರುವಾರ ಮೈಸೂರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಿಲಿಕಾನ್ ವ್ಯಾಲಿ ಬಡಾವಣೆ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಬಡಾವಣೆ ನಿವಾಸಿಗಳು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ, ಘೋಷಣೆಗಳನ್ನು ಕೂಗಿದರು. ಬಡಾವಣೆಯಲ್ಲಿ 3-4 ವರ್ಷಗಳಿಂದ ಕುಡಿಯುವ ನೀರು, ಬೀದಿ ದೀಪ, ಒಳ…
ಮೂಲ ಸೌಲಭ್ಯದಿಂದ ವಂಚಿತವಾಗಿರುವ ಗ್ರಂಥಾಲಯಗಳು
August 23, 2019ಮೈಸೂರು, ಆ.22(ಎಂಕೆ)- ದೇಶದಲ್ಲಿ ಬಹುತೇಕ ಗ್ರಂಥಾಲಯಗಳು ಮೂಲ ಭೂತ ಸೌಲಭ್ಯದಿಂದ ವಂಚಿತವಾಗಿವೆ ಎಂದು ಬ್ರಿಟಿಷ್ ಕೌನ್ಸಿಲ್ ಲೈಬ್ರರಿ ಮಾಜಿ ಮುಖ್ಯಸ್ಥ ಪಿ.ಜಯರಾಜನ್ ತಿಳಿಸಿದರು. ನಗರದ ಮಾನಸಗಂಗೋತ್ರಿಯಲ್ಲಿರುವ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯ ಯನ ವಿಭಾಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಸಮಾರಂಭದಲ್ಲಿ ‘ಭಾರತ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ: ಭವಿಷ್ಯದ ಸಾಧ್ಯತೆ ಗಳು’ ಕುರಿತು ಅವರು ಮಾತನಾಡಿದರು. ಇಂಟರ್‍ನ್ಯಾಷನಲ್ ಫೆಡರೇಷನ್ ಆಫ್ ಲೈಬ್ರರಿ ಅಸೋಸಿಯೇಷನ್ ಅಂಡ್ ಇನ್ ಸ್ಟಿಟ್ಯೂಷನ್‍ನ ಪ್ರಕಾರ ದೇಶದಲ್ಲಿ 1.46 ಲಕ್ಷ ಗ್ರಂಥಾಲಯಗಳಿವೆ. ಆದರೆ,…
ಅಪಾರ ಜನಮನ್ನಣೆ ಗಳಿಸಿದ್ದ ಜಯಚಾಮರಾಜ ಒಡೆಯರ್
August 23, 2019ಮೈಸೂರು, ಆ.22(ಎಂಕೆ)-ಕೇವಲ 7 ವರ್ಷ ಆಳ್ವಿಕೆ ನಡೆಸಿದರೂ ಅಪಾರ ಜನ ಮನ್ನಣೆ ಗಳಿಸುವಲ್ಲಿ ಜಯಚಾಮರಾಜ ಒಡೆಯರ್ ಯಶಸ್ವಿಯಾದರು ಎಂದು ದೆಹಲಿಯ ಐಸಿಎಚ್‍ಆರ್ ಸದಸ್ಯ ಪೆÇ್ರ. ಎಂ.ಕೊಟ್ರೇಶ್ ತಿಳಿಸಿದರು. ಕರ್ನಾಟಕ ರಾಜ್ಯ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪೀಠ, ದಿ ಮಿಥಿಕ್ ಸೊಸೈಟಿ ವತಿಯಿಂದ ಆಯೋಜಿಸಿದ್ದ `ಶ್ರೀ ಜಯಚಾಮ ರಾಜ ಒಡೆಯರ್ ಅವರ ಜೀವನ ಮತ್ತು ಸಾಧನೆಗಳು’ ಕುರಿತ ರಾಷ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭ ದಲ್ಲಿ ಅವರು ಮಾತನಾಡಿದರು. 1940-47ರ ಅವಧಿಯಲ್ಲಿ…
INX ಮೀಡಿಯಾ ಹಗರಣ: ಹೈಡ್ರಾಮಾ ನಡುವೆ ಕೇಂದ್ರದ ಮಾಜಿ ಗೃಹ, ಹಣಕಾಸು ಸಚಿವ ಪಿ.ಚಿದಂಬರಂ ಬಂಧನ
August 22, 2019ನವದೆಹಲಿ,ಆ.21-ಕಳೆದ 27 ಗಂಟೆಯಿಂದ ತಲೆ ಮರೆಸಿಕೊಂಡಿದ್ದ ಐಎನ್‍ಎಕ್ಸ್ ಮೀಡಿಯಾ ಲಂಚ ಸ್ವೀಕಾರ ಪ್ರಕರಣದ ಆರೋಪಿಯಾದ ಮಾಜಿ ಹಣಕಾಸು ಹಾಗೂ ಗೃಹ ಸಚಿವ ಪಿ.ಚಿದಂಬರಂ ಅವರನ್ನು ಕೊನೆಗೂ ಇಂದು ರಾತ್ರಿ ದೆಹಲಿಯ ಜೋರ್‍ಬಾಗ್‍ನಲ್ಲಿರುವ ಅವರ ನಿವಾಸಕ್ಕೆ ನುಗ್ಗಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಚಿದಂಬರಂ ಅವರನ್ನು ಸಿಬಿಐ ಪ್ರಧಾನ ಕಚೇರಿ ಯಲ್ಲಿ ಸಿಬಿಐ ನಿರ್ದೇಶಕ ಆರ್.ಕೆ. ಶುಕ್ಲಾ ವಿಚಾ ರಣೆ ನಡೆಸುತ್ತಿದ್ದಾರೆ. ಇಡೀ ರಾತ್ರಿ ವಿಚಾರಣೆ ನಡೆಸಿ, ನಾಳೆ (ಗುರುವಾರ) ಸಿಬಿಐ ವಿಶೇಷ ನ್ಯಾಯಾ ಲಯಕ್ಕೆ ಹಾಜರುಪಡಿಸಿ, ಮತ್ತೆ ಚಿದಂಬರಂ…










