ಮೂಲ ಸೌಲಭ್ಯದಿಂದ ವಂಚಿತವಾಗಿರುವ ಗ್ರಂಥಾಲಯಗಳು
ಮೈಸೂರು

ಮೂಲ ಸೌಲಭ್ಯದಿಂದ ವಂಚಿತವಾಗಿರುವ ಗ್ರಂಥಾಲಯಗಳು

August 23, 2019

ಮೈಸೂರು, ಆ.22(ಎಂಕೆ)- ದೇಶದಲ್ಲಿ ಬಹುತೇಕ ಗ್ರಂಥಾಲಯಗಳು ಮೂಲ ಭೂತ ಸೌಲಭ್ಯದಿಂದ ವಂಚಿತವಾಗಿವೆ ಎಂದು ಬ್ರಿಟಿಷ್ ಕೌನ್ಸಿಲ್ ಲೈಬ್ರರಿ ಮಾಜಿ ಮುಖ್ಯಸ್ಥ ಪಿ.ಜಯರಾಜನ್ ತಿಳಿಸಿದರು.

ನಗರದ ಮಾನಸಗಂಗೋತ್ರಿಯಲ್ಲಿರುವ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯ ಯನ ವಿಭಾಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಸಮಾರಂಭದಲ್ಲಿ ‘ಭಾರತ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ: ಭವಿಷ್ಯದ ಸಾಧ್ಯತೆ ಗಳು’ ಕುರಿತು ಅವರು ಮಾತನಾಡಿದರು.

ಇಂಟರ್‍ನ್ಯಾಷನಲ್ ಫೆಡರೇಷನ್ ಆಫ್ ಲೈಬ್ರರಿ ಅಸೋಸಿಯೇಷನ್ ಅಂಡ್ ಇನ್ ಸ್ಟಿಟ್ಯೂಷನ್‍ನ ಪ್ರಕಾರ ದೇಶದಲ್ಲಿ 1.46 ಲಕ್ಷ ಗ್ರಂಥಾಲಯಗಳಿವೆ. ಆದರೆ, ಇದು ತಪ್ಪಾ ಗಿದೆ. ನಾವೇ ಸರ್ವೇ ಮಾಡಿರುವ ಪ್ರಕಾರ ದೇಶದಲ್ಲಿ ಕೇವಲ 46 ಸಾವಿರ ಗ್ರಂಥಾ ಲಯಗಳಿವೆ.  ಈ ಲೆಕ್ಕ ತೆಗೆದುಕೊಂಡರೆ ಚೀನಾಗಿಂತ ಹೆಚ್ಚು ಗ್ರಂಥಾಲಯವನ್ನು ಭಾರತ ಹೊಂದಿದೆ ಎಂದರು.

ದೆಹಲಿ, ಬೆಂಗಳೂರು ಸೇರಿದಂತೆ ವಿವಿ ಧೆಡೆ ಉತ್ತಮ ಜಾಗದಲ್ಲಿ ಗ್ರಂಥಾಲಯ ಗಳು ಸ್ಥಾಪನೆಯಾಗಿವೆ. ಆದರೆ ಪ್ರಮುಖ ಸಮಸ್ಯೆಗಳೇನೆಂದರೆ ಮೂಲಭೂತ ಸೌಕರ್ಯ ಕೊರತೆ, ಪುಸ್ತಕಗಳು ಹಾಳಾಗಿ ಹೋಗಿರು ವುದು, ನಿರ್ವಹಣೆ ಕೊರತೆ ಇದೆ. ಗ್ರಂಥಾ ಲಯಗಳು ಸಂಗ್ರಹಿಸಿಟ್ಟಿರುವ ಡಾಟಾ (ದತ್ತಾಂಶ) ವಿಶ್ವಾಸಾರ್ಹತೆಯಿಂದ ಕೂಡಿಲ್ಲ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸರಿಯಾಗಿ ದತ್ತಾಂಶ ನಿರ್ವಹಿಸಿಲ್ಲ. ತಾಂತ್ರಿಕವಾಗಿ ತುಂಬಾ ಹಿಂದುಳಿದಿz್ದÉೀವೆ. ಅನುದಾನ ಕೊರತೆ ಇದೆ. ಗ್ರಂಥಾಲಯಕ್ಕಾಗಿಯೇ ರಾಷ್ಟ್ರೀಯ ನೀತಿಯಿಲ್ಲ. ಸುಮಾರು ಆಯೋಗಗಳು ಬಂದು ಹೋದರೂ ರಾಷ್ಟ್ರೀಯ ನೀತಿ ರಚನೆಯಾಗಿಲ್ಲ. ಗ್ರಂಥ ಪಾಲಕರಿಗೆ ವೇತನ ಎಷ್ಟಿರಬೇಕು, ಸಿಬ್ಬಂದಿ ನೇಮಕ ಹೇಗಿರಬೇಕು, ಆಡಳಿತ ಹಾಗೂ ನಿರ್ವಹಣೆ ಹೇಗಿರಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದಂತಾಗಿದೆ ಎಂದು ಹೇಳಿದರು.ವಿಶ್ರಾಂತ ಕುಲಪತಿ ಪೆÇ್ರ.ಪಿ.ವೆಂಕಟ ರಾಮಯ್ಯ ಮಾತನಾಡಿದರು.

ನಿವೃತ್ತ ಪ್ರಾಧ್ಯಾಪಕ ಕೆ.ಎಸ್.ರಾಘವನ್, ಮೈವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥೆ ಪೆÇ್ರ. ಕೈಸರ್ ಜಹಾನ್ ಬೇಗಂ, ಪೆÇ್ರ. ಚಂದ್ರಶೇಖರ್ ಸೇರಿದಂತೆ ಕಾರ್ಯಕ್ರಮ ದಲ್ಲಿ ಮತ್ತಿತರರು ಉಪಸ್ಥಿತರಿದ್ದರು.

Translate »