ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಬೆಳವಾಡಿ ಸಿಲಿಕಾನ್ವ್ಯಾಲಿ ಬಡಾವಣೆ ನಿವಾಸಿಗಳ ಪ್ರತಿಭಟನೆ
ಮೈಸೂರು

ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಬೆಳವಾಡಿ ಸಿಲಿಕಾನ್ವ್ಯಾಲಿ ಬಡಾವಣೆ ನಿವಾಸಿಗಳ ಪ್ರತಿಭಟನೆ

August 23, 2019

ಮೈಸೂರು, ಆ.22(ಆರ್‍ಕೆಬಿ)- ತಮ್ಮ ಬಡಾವಣೆಯಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿ ದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಮೈಸೂರಿನ ಹುಣಸೂರು ರಸ್ತೆಯ ಬೆಳ ವಾಡಿ ಸಿಲಿಕಾನ್ ವ್ಯಾಲಿ ಬಡಾವಣೆಯ ನಿವಾಸಿಗಳು ಗುರುವಾರ ಮೈಸೂರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಿಲಿಕಾನ್ ವ್ಯಾಲಿ ಬಡಾವಣೆ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಬಡಾವಣೆ ನಿವಾಸಿಗಳು  ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ, ಘೋಷಣೆಗಳನ್ನು ಕೂಗಿದರು.

ಬಡಾವಣೆಯಲ್ಲಿ 3-4 ವರ್ಷಗಳಿಂದ ಕುಡಿಯುವ ನೀರು, ಬೀದಿ ದೀಪ, ಒಳ ಚರಂಡಿ ಇನ್ನಿತರ ಸೌಕರ್ಯಗಳನ್ನು ಕಲ್ಪಿಸು ವಂತೆ ಪಂಚಾಯಿತಿಗೆ ಅರ್ಜಿ ನೀಡಿ ಸಾಕಾ ಗಿದೆ. ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ, ಜಿಪಂ ಸಿಇಓ, ಬೆಳವಾಡಿ ಗ್ರಾಪಂ ಪಿಡಿಓ ಇನ್ನಿತರರಿಗೆ ಹಲವು ಬಾರಿ ಮನವಿ ನೀಡಿದ್ದೇವೆ. ಹೀಗಿದ್ದೂ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂದು ಆರೋಪಿಸಿದರು.

ಮನೆ ಕಟ್ಟಲು 11ಬಿ ಮತ್ತು ಮನೆ ನಿರ್ಮಾ ಣಕ್ಕೆ ಅನುಮತಿ ನೀಡಿದ ನಂತರ ತೆರಿಗೆ ಕಟ್ಟಿಸಿಕೊಂಡು ಯಾವುದೇ ಸೌಲಭ್ಯ ನೀಡು ತ್ತಿಲ್ಲ. ಈ ಬಗ್ಗೆ ಪಿಡಿಓ ಅವರ ಗಮನಕ್ಕೂ ತಂದಿದ್ದೇವೆ. ಆದರೆ ಪಿಡಿಓ ಬೇಜವಾ ಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಹೀಗಾಗಿ ನಿವಾಸಿಗಳಾದ ನಾವೇ ಒಂದು ಲಕ್ಷ ರೂ. ವೆಚ್ಚ ಮಾಡಿ ಬೀದಿ ದೀಪ ಹಾಕಿಸಿದ್ದೇವೆ. ಆದರೆ ಈಗ ಬೀದಿ ದೀಪಗಳ 12,000 ರೂ. ವಿದ್ಯುತ್ ಬಿಲ್ ಬಂದಿದೆ. ಅದನ್ನು ಪಾವತಿಸುವುದಿಲ್ಲವೆಂದು ಉಡಾಫೆÉಯಿಂದ ವರ್ತಿಸುತ್ತಿದ್ದಾರೆ. ಇದುವರೆಗೂ ವಿದ್ಯುತ್ ಬಿಲ್ ಕಟ್ಟಿಲ್ಲ ಎಂದು ದೂರಿದರು. ಜಿಲ್ಲಾ ಪಂಚಾಯಿತಿ ಸಿಇಓ ಅವರು ತಕ್ಷಣ ಬಡಾ ವಣೆಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ, ನಮ್ಮ ಮೂಲಭೂತ ಅಗತ್ಯಗಳನ್ನು ಒದಗಿಸಿ ಕೊಡುವಂತೆ ಪ್ರತಿಭಟನಾಕಾರರು ಆಗ್ರಹಿಸಿ ದರು. ಸಂಘದ ಅಧ್ಯಕ್ಷ ಕೆ.ಕೆ.ಅನಿತ್, ಪ್ರಧಾನ ಕಾರ್ಯದರ್ಶಿ ಪಿ.ಆರ್.ಮಂಜುನಾಥ್, ಸಿ.ಎಂ.ಶ್ರೀಧರ್, ಕೆ.ಟಿ.ಶ್ರೀನಿವಾಸ್, ಡಿ.ಎಸ್. ಕಿರಣ್, ಸಂದೀಪ್, ಹೆಚ್.ಪಿ.ದೀಪು ಇನ್ನಿ ತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

 

Translate »