ಅಪಾರ ಜನಮನ್ನಣೆ ಗಳಿಸಿದ್ದ ಜಯಚಾಮರಾಜ ಒಡೆಯರ್
ಮೈಸೂರು

ಅಪಾರ ಜನಮನ್ನಣೆ ಗಳಿಸಿದ್ದ ಜಯಚಾಮರಾಜ ಒಡೆಯರ್

August 23, 2019

ಮೈಸೂರು, ಆ.22(ಎಂಕೆ)-ಕೇವಲ 7 ವರ್ಷ ಆಳ್ವಿಕೆ ನಡೆಸಿದರೂ ಅಪಾರ ಜನ ಮನ್ನಣೆ ಗಳಿಸುವಲ್ಲಿ ಜಯಚಾಮರಾಜ ಒಡೆಯರ್ ಯಶಸ್ವಿಯಾದರು ಎಂದು ದೆಹಲಿಯ ಐಸಿಎಚ್‍ಆರ್ ಸದಸ್ಯ ಪೆÇ್ರ. ಎಂ.ಕೊಟ್ರೇಶ್ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪೀಠ, ದಿ ಮಿಥಿಕ್ ಸೊಸೈಟಿ ವತಿಯಿಂದ ಆಯೋಜಿಸಿದ್ದ `ಶ್ರೀ ಜಯಚಾಮ ರಾಜ ಒಡೆಯರ್ ಅವರ ಜೀವನ ಮತ್ತು ಸಾಧನೆಗಳು’ ಕುರಿತ ರಾಷ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭ ದಲ್ಲಿ ಅವರು ಮಾತನಾಡಿದರು.

1940-47ರ ಅವಧಿಯಲ್ಲಿ ತುಂಬಾ ಸಂಕೀರ್ಣ ಪರಿಸ್ಥಿತಿ ಇತ್ತು. ಒಂದು ಕಡೆ ಸ್ವಾತಂತ್ರ್ಯ ಹೋರಾಟ ತೀವ್ರಗೊಂಡಿದ್ದರೆ, ಇನ್ನೊಂದೆಡೆ ರಾಜಾಧಿಕಾರ ಹೋಗುವ ಸ್ಥಿತಿಯಿತ್ತು. ಹೀಗಿದ್ದರೂ ಒಡೆಯರ್ ಎಲ್ಲರ ಶ್ರೇಯೋಭಿವೃದ್ಧಿಗಾಗಿ ಜನಪರ ಯೋಜನೆ ಗಳನ್ನು ಜಾರಿಗೊಳಿಸಿದರು ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರ್ಯ ಕ್ರಮಗಳನ್ನು ಮುಂದುವರೆಸಿದ ಕೀರ್ತಿ ಅವ ರಿಗೆ ಸಲ್ಲುತ್ತದೆ. ಅಪಾರ ವಿದ್ವತ್ ಹೊಂದಿದ್ದ ಅವರು, ಉತ್ತಮ ಸಮಾಜದ ನಿರ್ಮಾ ಣಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಆಧ್ಯಾತ್ಮದೊಂದಿಗೆ ರಾಜಪರಿಣತಿಯನ್ನು ಹೊಂದಿದ್ದ ಅವರು, ದೇವಾಲಯಗಳನ್ನು ಕಟ್ಟುವ ಮೂಲಕ ಧಾರ್ಮಿಕತೆಯನ್ನು ಗಟ್ಟಿ ಗೊಳಿಸಿದರು ಎಂದರು. ಕರಾಮುವಿ ಕುಲ ಸಚಿವ ಡಾ.ಬಿ.ರಮೇಶ್, ಇತಿಹಾಸ ಪ್ರಾಧ್ಯಾ ಪಕ ಡಾ.ಶೆಲ್ವಪಿಳ್ಳೆ ಅಯ್ಯಂಗಾರ್, ದಿ ಮಿಥಿಕ್ ಸೊಸೈಟಿಯ ಟ್ರಸ್ಟಿ ಪೆÇ್ರ. ಪ್ರಸನ್ನ ಇದ್ದರು.

 

 

Translate »