ಸಂತೋಷ್, ಆರ್‍ಎಸ್‍ಎಸ್ ವಿರುದ್ಧ ಸಚಿವ ಸ್ಥಾನ ವಂಚಿತರ ಆಕ್ರೋಶ
ಮೈಸೂರು

ಸಂತೋಷ್, ಆರ್‍ಎಸ್‍ಎಸ್ ವಿರುದ್ಧ ಸಚಿವ ಸ್ಥಾನ ವಂಚಿತರ ಆಕ್ರೋಶ

August 23, 2019

ಬೆಂಗಳೂರು,ಆ.22(ಕೆಎಂಶಿ)-ಸಂಪುಟ ವಿಸ್ತರಣೆಯ ನಂತರ ಪಕ್ಷದ ಶಾಸಕರಲ್ಲಿ ಅಸಮಾಧಾನ, ಬಂಡಾಯಕ್ಕೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಕಾರಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲಿಗರು ದೂರಿದ್ದಾರೆ.

ಬಂಡಾಯದಿಂದ ಸರ್ಕಾರ ಪತನವಾದರೆ, ಅದಕ್ಕೆ ಸಂತೋಷ್ ಕಾರಣ. ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಆಕಾಂಕ್ಷಿಯಾಗಿ ಮಂತ್ರಿ ಸ್ಥಾನ ದೊರೆ ಯದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ತಮ್ಮ ಹೆಸರನ್ನು ಬಹಿರಂಗಪಡಿಸಲು ಇಚ್ಛಿ ಸದ ಅವರು, ನಾವು ಯಡಿಯೂರಪ್ಪ ಬೆಂಬಲಿಗರು ಎಂಬ ಕಾರಣಕ್ಕೆ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಸಿ.ಎಂ.ಉದಾಸಿ, ರೇಣುಕಾಚಾರ್ಯ, ರಾಜುಗೌಡ, ಮುರುಗೇಶ್ ನಿರಾಣಿ ಸೇರಿದಂತೆ ಕೆಲವರು ಮಂತ್ರಿ ಯಾಗದಂತೆ ನೋಡಿಕೊಂಡಿದ್ದಾರೆ. ಸಂತೋಷ್ ನಿಲುವಿಗೆ ರಾಜ್ಯ ಆರ್‍ಎಸ್‍ಎಸ್ ಕೂಡ ಬೆಂಬಲವಾಗಿ ನಿಂತಿದೆ. ನಾವು ಲಿಂಗಾಯತ ವಿರೋಧಿ ಅಲ್ಲ ಎಂದು ತೋರಿಸಿಕೊಳ್ಳುವುದಕ್ಕೆ ಪ್ರಬಲರಲ್ಲದವರನ್ನು ಮಂತ್ರಿಗಳ ನ್ನಾಗಿ ಮಾಡಿದ್ದಾರೆ. ಸಂಘದ ಸವಾಲನ್ನು ನಾವು ಸ್ವೀಕ ರಿಸುತ್ತೇವೆ. ನಮ್ಮ ಹೋರಾಟ ಏನಿದ್ದರೂ ಸಂತೋಷ್ ವಿರುದ್ಧವೇ ಹೊರತು ಯಡಿಯೂರಪ್ಪನವರ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಂತೋಷ್ ಮತ್ತು ಸಂಘವೇ ಕರ್ನಾಟಕದಲ್ಲಿ ಮುಂದೆ ಬಿಜೆಪಿಯನ್ನು ಅಧಿಕಾರಕ್ಕೆ ತರಲಿ. ನೋಡೇ ಬಿಡೋಣ. ಯಡಿ ಯೂರಪ್ಪನವರಿಗೆ ಮಾನಸಿಕವಾಗಿ ಕಿರುಕುಳ ಮತ್ತು ಒತ್ತಡ ತಂದು ರಾಜಕೀಯವಾಗಿ ಮೂಲೆಗುಂಪು ಮಾಡಲು ಸಂತೋಷ್ ಹೊರಟಿದ್ದಾರೆ. ಯಡಿ ಯೂರಪ್ಪ ಅವರಿಲ್ಲದೆ, ಕರ್ನಾಟಕದಲ್ಲಿ ಬಿಜೆಪಿಯೇ ಇಲ್ಲ. ಅದನ್ನು ನಾವು ಮುಂದೆ ತೋರಿಸುತ್ತೇವೆ ಎಂದು ಆರ್‍ಎಸ್‍ಎಸ್‍ಗೆ ಸವಾಲು ಹಾಕಿದ್ದಾರೆ.

ನಾವು ಕಾಂಗ್ರೆಸ್ ಇಲ್ಲವೇ ಜೆಡಿಎಸ್‍ನ ಯಾವುದೇ ಮುಖಂಡರನ್ನು ಸಂಪರ್ಕಿಸಿಲ್ಲ. ಆದರೆ ನಮ್ಮಲ್ಲಿ ಕೆಲವರಿಗೆ ಸಚಿವ ಸ್ಥಾನ ನೀಡದಿದ್ದರೆ, ಮುಂದೆ ಆಗುವ ಅನಾಹುತಕ್ಕೆ ಸಂಘವೇ ಕಾರಣ ಎಂದು ಹೇಳಿದ್ದಾರೆ.

ಸರ್ಕಾರ ರಚನೆಗಾಗಿ ಕಾಂಗ್ರೆಸ್-ಜೆಡಿಎಸ್‍ನಿಂದ ಬಂದು, ಸದಸ್ಯತ್ವ ಅನರ್ಹಗೊಂಡ ಶಾಸಕರನ್ನು ಇವರು ಕೈ ಹಿಡಿಯುತ್ತಿಲ್ಲ. ಮುಂದೆ ಒಂದು ವೇಳೆ ಇವರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದರೂ, ಅಲ್ಲಿ ಪ್ರಬಲರಾಗಿರುವ ಬಿಜೆಪಿ ನಾಯಕರು ಕಾಂಗ್ರೆಸ್ ಇಲ್ಲವೆ ಜೆಡಿಎಸ್ ಜೊತೆ ಕೈಜೋಡಿಸಿ, ಕಮಲದ ಅಭ್ಯರ್ಥಿಗಳನ್ನು ಸೋಲಿಸುತ್ತಾರೆ. ಇದರ ಅರಿವು ಉಂಟಾಗಿಯೇ ತಮ್ಮ ಪಕ್ಷ ತೊರೆದು ಬಿಜೆಪಿ ಸೇರಲು ಮುಂದಾಗುತ್ತಿದ್ದ, ಜಿಟಿ ದೇವೇಗೌಡ ಸೇರಿದಂತೆ ಜೆಡಿಎಸ್ ಮತ್ತು ಕಾಂಗ್ರೆಸ್‍ನ 17ಕ್ಕೂ ಹೆಚ್ಚು ಶಾಸಕರು ಒಂದು ಹೆಜ್ಜೆ ಹಿಂದೆ ಇಟ್ಟಿದ್ದಾರೆ. ಸಂಪುಟ ವಿಸ್ತರಣೆಯ ಹಿಂದಿನ ದಿನ ಅಂದರೆ ಸೋಮವಾರ ಮಧ್ಯರಾತ್ರಿಯವರೆಗೂ ಸಚಿವರಾಗುವವರ ಪಟ್ಟಿಯಲ್ಲಿ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಮುರುಗೇಶ್ ನಿರಾಣಿ, ದತ್ತಾತ್ರೇಯ ಪಾಟೀಲ್ ರೇವೂರ್ ಹಾಗೂ ಅಂಗಾರ ಅವರ ಹೆಸರುಗಳಿದ್ದವು.

ಆದರೆ ಮರುದಿನ ಬೆಳಿಗ್ಗೆ ನೋಡುವಷ್ಟರಲ್ಲಿ ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ ಸೇರಿದಂತೆ ಬೇರೆಯವರ ಹೆಸರುಗಳು ಪಟ್ಟಿಗೆ ಸೇರ್ಪಡೆ ಯಾಗಿದ್ದವು.

ತಮಗೆ ಆಪ್ತರಾಗಿದ್ದರೂ ಬಸವರಾಜ ಬೊಮ್ಮಾಯಿ ಅವರಿಗೆ ಸೂಚನೆ ನೀಡಿದ್ದ ಯಡಿಯೂರಪ್ಪ ಕೆಲ ದಿನಗಳ ಕಾಲ ಸಂಪುಟಕ್ಕೆ ಬರುವ ಕನಸು ಬೇಡ ಎಂದು ಹೇಳಿದ್ದರು ಮತ್ತು ಅದನ್ನು ಅವರೂ ಒಪ್ಪಿ ಕೊಂಡಿದ್ದರು. ಇದೇ ಕಾರಣಕ್ಕಾಗಿ ಸೋಮವಾರ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸಕ್ಕೆ ಬಂದಾಗ ಟೀಶರ್ಟ್ ಹಾಕಿಕೊಂಡು ಬಂದಿದ್ದ ಬಸವರಾಜ ಬೊಮ್ಮಾಯಿ ತಮ್ಮ ಬಳಿ ಮಾತನಾಡಿದ ಮಾಧ್ಯಮದ ಕೆಲವರ ಬಳಿ ಈ ಬಾರಿ ನಾನು ಯಾವ ಕಾರಣಕ್ಕೂ ಮಂತ್ರಿಯಾಗುವುದಿಲ್ಲ ಎಂದು ಹೇಳಿದ್ದರು. ಆದರೆ ಇದ್ದಕ್ಕಿದ್ದಂತೆ ಮಧ್ಯೆ ಪ್ರವೇಶಿಸಿದ ಸಂತೋಷ್ ಅವರು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವಾಗ ನಿನಗೆ ಮಂತ್ರಿಗಿರಿ ಕೊಡುವುದಿಲ್ಲ ಎಂದರೇನು ನಮ್ಮ ಪಟ್ಟಿಯಲ್ಲಿ ನೀವಿದ್ದೀರಿ ಎಂದು ಹೇಳಿದ್ದರೆನ್ನಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ ಕೂಡ ಇದೇ ಮಾದರಿಯಲ್ಲಿ ಸಚಿವ ಸಂಪುಟದ ಪಟ್ಟಿಗೆ ಸೇರ್ಪಡೆಯಾದರು ಎಂದಿದ್ದಾರೆ.

 

 

Translate »