ನೆರೆ ನಿರಾಶ್ರಿತರು ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು ತಕ್ಷಣ 50 ಸಾವಿರ ನೆರವು
ಮೈಸೂರು

ನೆರೆ ನಿರಾಶ್ರಿತರು ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು ತಕ್ಷಣ 50 ಸಾವಿರ ನೆರವು

August 23, 2019

ಮೈಸೂರು, ಆ.22(ಎಸ್‍ಬಿಡಿ)- ನೆರೆಯಿಂದ ಸಂಪೂರ್ಣ ಮನೆ ಕಳೆದು ಕೊಂಡವರಿಗೆ ಮಾಸಿಕ ಬಾಡಿಗೆ ಬದಲಾಗಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು ಒಟ್ಟಿಗೆ 50 ಸಾವಿರ ರೂ. ನೆರವು ನೀಡು ವಂತೆ ಸಚಿವ ಆರ್.ಅಶೋಕ್ ಅಧಿ ಕಾರಿಗಳಿಗೆ ಸೂಚಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದ ಹಾನಿ ಹಾಗೂ ಕೈಗೊಂ ಡಿರುವ ಪರಿಹಾರ ಕ್ರಮಗಳ ಸಂಬಂಧ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತ ನಾಡಿದ ಅವರು, ನೆರೆ ಹಾವಳಿಯಿಂದ ಸಂಪೂರ್ಣವಾಗಿ ಮನೆ ಕಳೆದುಕೊಂಡವ ರಿಗೆ 10 ತಿಂಗಳ ಕಾಲ ಮಾಸಿಕ 5 ಸಾವಿರ ರೂ. ಬಾಡಿಗೆ ಹಣ ನೀಡಲು ಸರ್ಕಾರ ನಿರ್ಧರಿಸಿತ್ತು. ಆದರೆ ಎಲ್ಲಾ ಕಡೆಯಲ್ಲೂ ಬಾಡಿಗೆಗೆ ಮನೆ ಸಿಗದಿರಬಹುದು. ಹಾಗಾಗಿ ಮನೆ ಕಳೆದುಕೊಂಡವರು ತಮ್ಮ ಜಾಗ ದಲ್ಲೇ ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು ತಕ್ಷಣ ಒಟ್ಟಿಗೆ 50 ಸಾವಿರ ರೂ. ನೆರವು ನೀಡಲು ಸರ್ಕಾರ ಮುಂದಾಗಿದೆ. ಇದಕ್ಕೆ ಒಪ್ಪುವ ಸಂತ್ರಸ್ತರ ಪಟ್ಟಿಯನ್ನು ಇನ್ನೆರಡು ದಿನದಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇ ಕೆಂದು ಎಲ್ಲಾ ತಹಶೀಲ್ದಾರ್‍ಗಳಿಗೆ ಸೂಚನೆ ನೀಡಿದರು.

ಸಂತ್ರಸ್ತರಿಗೆ ಅಭಯ: ಸಂಪೂರ್ಣ ಮನೆ ಕಳೆದುಕೊಂಡವರಿಗೆ ಹೊಸದಾಗಿ ಮನೆ ಕಟ್ಟಿಕೊಳ್ಳಲು 5 ಲಕ್ಷ ರೂ. ಪರಿ ಹಾರ ನೀಡಲು ಈಗಾಗಲೇ ರಾಜ್ಯ ಸರ್ಕಾರ ಘೋಷಿಸಿದ್ದು, ಈ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭವಾಗಿದೆ. ಜೊತೆಗೆ ಕೇಂದ್ರದಿಂ ದಲೂ 2 ಲಕ್ಷ ರೂ. ಪರಿಹಾರ ಸಿಗುವ ನಿರೀಕ್ಷೆಯಿದೆ. ಇದರ ಹೊರತಾಗಿ ತಾತ್ಕಾ ಲಿಕ ಶೆಡ್ ನಿರ್ಮಾಣಕ್ಕೆ 50 ಸಾವಿರ ರೂ. ನೀಡಲಾಗುವುದು. ಇದರಿಂದ ತಮ್ಮ ಜಾಗ ದಲ್ಲೇ ತಾತ್ಕಾಲಿಕ ಶೆಡ್‍ನಲ್ಲಿ ಉಳಿದು ಕೊಂಡು ಹೊಸ ಮನೆ ನಿರ್ಮಾಣ ಮಾಡಿ ಕೊಳ್ಳಲು ಅನುಕೂಲವಾಗುತ್ತದೆ. ಇದಕ್ಕೆ ಇಚ್ಛಿಸುವ ಫಲಾನುಭವಿಗಳ ಪಟ್ಟಿ ಸಲ್ಲಿಸಿ ದರೆ, ಅವರಿಗೆ ತಕ್ಷಣ 50 ಸಾವಿರ ರೂ. ನೆರವು ನೀಡಲಾಗುವುದು ಎಂದರು.

ಶಾಲೆ, ಅಂಗನವಾಡಿ ಬಗ್ಗೆ ಎಚ್ಚರ: ಮಳೆ ಹಾಗೂ ಪ್ರವಾಹದಿಂದ ಹಾನಿಯಾಗಿ ರುವ ಅಂಗನವಾಡಿ ಹಾಗೂ ಶಾಲಾ ಕಟ್ಟಡಗಳ ಬಗ್ಗೆ ತಹಶೀಲ್ದಾರ್‍ಗಳಿಂದ ಮಾಹಿತಿ ಪಡೆದ ಸಚಿವ ಅಶೋಕ್, ನೆರೆ ತಾಲೂಕುಗಳಲ್ಲಿ  ಶಾಲೆಗಳು, ಅಂಗನ ವಾಡಿ ಕಟ್ಟಡಗಳು ಶಿಥಿಲವಾಗಿದ್ದಲ್ಲಿ ಅವು ಗಳನ್ನು ಗುರುತಿಸಿ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಿ. ಶಾಲೆ ಮತ್ತು ಅಂಗನ ವಾಡಿಗಳಲ್ಲಿ ಪುಟ್ಟ ಮಕ್ಕಳಿರುತ್ತಾರೆ. ಒಮ್ಮೆ ಯಲ್ಲ ನಾಲ್ಕೈದು ಬಾರಿ ಪರಿಶೀಲನೆ ನಡೆಸಿ. ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳ ಬೇಕು. ಏನಾದರೂ ವ್ಯತ್ಯಾಸವಾದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಯಾಗುತ್ತೀರಿ ಎಂದು ಎಚ್ಚರಿಸಿದರು.

ಜನರ ಸೇವೆಯಿಂದ ಪುಣ್ಯ: ಈ ರೀತಿ ಸಂಕಷ್ಟ ಎದುರಾದಾಗ ಸರ್ಕಾರದ ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮರೋಪಾದಿ ಯಲ್ಲಿ ಕೆಲಸ ಮಾಡಬೇಕು. ಇದು ಸೇವೆ ಯಲ್ಲ ನಮ್ಮ ಜವಾಬ್ದಾರಿ. ದೇವಾಲಯ ಗಳಿಗೆ ಹೋಗುವುದರಿಂದ ಪುಣ್ಯ ಬರು ವುದಿಲ್ಲ. ಜನರೊಂದಿಗಿದ್ದು ಕೆಲಸ ಮಾಡಿ ದರೆ ಎಲ್ಲಾ ಪುಣ್ಯವೂ ಬರುತ್ತದೆ. ಈ ಪರಿಸ್ಥಿತಿಯಲ್ಲಿ ನಿಮ್ಮ ಮೇಲೆ ಕೆಟ್ಟ ಅಭಿ ಪ್ರಾಯ ಮೂಡಿದರೆ ನಿಮ್ಮ ವೃತ್ತಿ ಜೀವ ನಕ್ಕೆ ಕಪ್ಪು ಚುಕ್ಕೆಯಾಗುತ್ತದೆ ಎಂದು ಕಿವಿ ಮಾತು ಹೇಳಿದ ಅಶೋಕ್, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಗಳು ಹರಡುವ ಭೀತಿ ಇದ್ದು, ಆರೋಗ್ಯ ಮತ್ತು ಕುಟುಂಬ ಇಲಾಖೆಯಿಂದ ವೈದ್ಯಾ ಧಿಕಾರಿಗಳ ನೇಮಿಸಿ ಅಗತ್ಯ ಕ್ರಮವಹಿಸ ಬೇಕು.

ನೆರೆಯಿಂದ ಕೆಲವು ರಸ್ತೆಗಳು, ಸಂಪರ್ಕ ಸೇತುವೆಗಳಿಗೆ ಹಾನಿಯಾಗಿದೆ. ರಸ್ತೆ, ಸೇತುವೆ ಹಾಗೂ ಶಾಲಾ ಕಟ್ಟಡಗಳ ರಿಪೇರಿಗೆ  ಅನುದಾನ ನಿಗದಿ ಮಾಡಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಶಾಶ್ವತ ಪರಿಹಾರಕ್ಕೆ ಮನವಿ: ಜಿಲ್ಲಾಧಿ ಕಾರಿ ಅಭಿರಾಂ ಜಿ. ಶಂಕರ್ ಮಾತ ನಾಡಿ, ನದಿ ತಟದಲ್ಲಿರುವ ನಂಜನಗೂಡು, ಹೆಚ್.ಡಿ.ಕೋಟೆ, ಸರಗೂರು, ತಿ.ನರಸೀ ಪುರ ನಗರ ಪ್ರದೇಶಗಳ ಕೆಲವು ಭಾಗಗಳಲ್ಲಿ ನೆರೆ ಉಂಟಾಗುತ್ತಿದೆ. ತಡೆಗೋಡೆ ನಿರ್ಮಾಣ, ಇದನ್ನೂ ಮೀರಿ ನೀರು ಹರಿ ದರೆ ಅದರ ಹರಿವಿಗೆ ಸ್ಥಳಾವಕಾಶ ಕಲ್ಪಿಸ ಬೇಕು. ಈ ಶಾಶ್ವತ ಪರಿಹಾರ ಸಂಬಂಧ ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆ ಸಮನ್ವಯದಿಂದ ಯೋಜನೆ ಸಿದ್ಧಪಡಿಸಬೇಕು. ಇನ್ನು ನಿರಂತರವಾಗಿ ನೆರೆಗೆ ತುತ್ತಾಗುತ್ತಿರುವ ನಿವಾಸಿಗಳನ್ನು ಸ್ಥಳಾಂತರಿಸಲು ಸರ್ಕಾರಿ ಭೂಮಿಯಿಲ್ಲದ ಕಡೆಗಳಲ್ಲಿ ಖಾಸಗಿ ಸ್ಥಳ ಖರೀದಿಸಬೇಕು. ಇದಕ್ಕಾಗಿ ಸರ್ಕಾರದಿಂದ ಅನುದಾನ ನೀಡ ಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಎಷ್ಟು ಬೇಕಿದ್ದರೂ ಮನೆ ನಿರ್ಮಾಣಕ್ಕೆ ಸರ್ಕಾರ ಸಿದ್ಧವಿದೆ. ಅಗತ್ಯವಿರುವ ಕಡೆ ಖಾಸಗಿ ಭೂಮಿ ಖರೀದಿಸಬೇಕು. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಗಳು ಗ್ರಾಮಕ್ಕೆ ಹೊಂದಿಕೊಂಡಂತಿರುವ ಜಮೀನು ಗುರುತಿಸಿ, ಮಾಲೀಕರನ್ನು ಮನ ವೊಲಿಸಬೇಕೆಂದು ಸಲಹೆ ನೀಡಿದರು.

ನೆರೆ ಹಾನಿ: ಸಚಿವರು ನೆರೆಗೆ ಒಳಗಾದ ತಾಲ್ಲೂಕುಗಳ ಬಗ್ಗೆ ತಾಲೂಕುವಾರು ತಹಶೀಲ್ದಾರ್ ಹಾಗೂ ಶಾಸಕರಿಂದ ಮಾಹಿತಿ ಪಡೆದ ಸಚಿವರು, ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯಿಂದ 5 ಜನ ಮರಣ ಹೊಂದಿದ್ದು, 4018 ಮನೆಗಳು ಶಿಥಿಲ ಗೊಂಡಿವೆ. 450 ಶಾಲೆಗಳು, 259 ಅಂಗನ ವಾಡಿ, 53 ಸೇತುವೆ, 247 ಕಿ.ಲೋ. ಮೀಟರ್ ರಸ್ತೆ ಸೇರಿದಂತೆ ಸುಮಾರು 109 ಕೋಟಿ ರೂ. ನಷ್ಟವಾಗಿದೆ. ಸಾವಿರಾರು ಹೆಕ್ಟೇರ್ ಬೆಳೆ ನಾಶವಾಗಿದೆ ಎಂದರು. ಇದೇ ವೇಳೆ ನೆರೆಯಿಂದ ಹಾನಿಯಾಗಿದ್ದ ಮನೆಯಲ್ಲಿ ರೈತರೊಬ್ಬರು ವಿದ್ಯುತ್ ಸ್ಪರ್ಶ ದಿಂದ ಮೃತಪಟ್ಟಿದ್ದು, ಚೆಸ್ಕಾಂ ಅಧಿಕಾರಿ ಗಳು ಪರಿಹಾರ ನೀಡಲು ಸಾಧ್ಯವಿಲ್ಲ ಎನ್ನು ತ್ತಿದ್ದಾರೆ ಎಂದು ಶಾಸಕ ಅನಿಲ್ ಚಿಕ್ಕಮಾದು, ಸಚಿವ ಅಶೋಕ್ ಅವರ ಗಮನಕ್ಕೆ ತಂದರು. ಇದರಿಂದ ಸಿಟ್ಟ್ಟುಗೊಂಡ ಅವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಕೊಡದಿದ್ದರೆ ನಿಮ್ಮನ್ನು ಮನೆಗೆ ಕಳುಹಿಸ್ತೀನಿ ಎಂದು ಚೆಸ್ಕಾಂ ಅಧಿಕಾರಿ ಗಳಿಗೆ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಶಾಸಕರಾದ ಎಲ್.ನಾಗೇಂದ್ರ, ಹರ್ಷ ವರ್ಧನ್, ಕೆ.ಮಹದೇವ್, ಅನಿಲ್ ಚಿಕ್ಕ ಮಾದು, ಮೇಯರ್ ಪುಷ್ಪಲತಾ ಜಗ್ನ ನಾಥ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳ ಶಾಮ್, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ನಗರ ಪೆÇಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಅಪರ ಜಿಲ್ಲಾಧಿ ಕಾರಿ ಪೂರ್ಣಿಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಜ್ಯೋತಿ, ಉಪವಿಭಾಗಾಧಿಕಾರಿ ಶಿವೇ ಗೌಡ, ಹುಣಸೂರು ಉಪವಿಭಾಗಾಧಿಕಾರಿ ವೀಣಾ ಇನ್ನಿತರ ಅಧಿಕಾರಿಗಳು ಇದ್ದರು.

 

Translate »