ಮೈಸೂರು, ಆ.22(ವೈಡಿಎಸ್)-ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೇಲಿನ ಒತ್ತಡ ಹಾಗೂ ತೆರಿಗೆದಾರರಿಗೆ ಉಂಟಾಗುತ್ತಿದ್ದ ಸಮಸ್ಯೆ ಬಗೆಹರಿಸುವ ನಿಟ್ಟಿ ನಲ್ಲಿ ಇಲಾಖೆಯಲ್ಲಿ ತೆರಿಗೆದಾರರೊಂದಿಗೆ ಮಾಹಿತಿ ವಿನಿಮಯ ಮತ್ತು ಪಾವತಿ ಬಾಕಿ ಬಗೆಗಿನ ವಿಚಾರಣೆಯನ್ನು ವಿಜಯದಶಮಿ ಯಿಂದಲೇ ಡಿಜಿಟಲೀಕರಣಗೊಳಿಸಲಾಗು ವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಆದಾಯ ತೆರಿಗೆ ಇಲಾಖೆ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ಬಳಿಕ ಸರ್ಕಾರಿ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ತೆರಿಗೆದಾರರನ್ನು ಮುಖಾ ಮುಖಿಯಾಗಿ ಕರೆಸಿಕೊಂಡು ತೆರಿಗೆ ಪಾವತಿ ಬಗ್ಗೆ ವಿಚಾರಣೆ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದ್ದು, ತಂತ್ರಜ್ಞಾನದ ಮೂಲ ಕವೇ ಮಾಹಿತಿ ವಿನಿಮಯ ಮತ್ತು ಪಾವತಿ ಬಾಕಿ ಬಗ್ಗೆ ವಿಚಾರಣೆ ಮಾಡಲಾಗುವುದು. ತೆರಿಗೆದಾರರು ಮುಖಾಮುಖಿಯಾಗುವು ದನ್ನು ತಪ್ಪಿಸಲು ಈ ಕ್ರಮಕೈಗೊಳ್ಳಲಾಗಿದ್ದು, ವಿಜಯದಶಮಿಯಿಂದ ವಾಟ್ಸಾಪ್, ಎಸ್‍ಎಂಎಸ್, ಇ-ಮೇಲ್ ತಂತ್ರಾಂಶ ವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಈಗಾಗಲೇ ಹೂಡಿಕೆದಾರರು, ಉದ್ಯಮಿ ಗಳು, ಸಣ್ಣ ವ್ಯಾಪಾರಿಗಳು, ಚಾರ್ಟೆಡ್ ಅಕೌಂಟೆಂಟ್‍ಗಳೊಂದಿಗೆ ಸಭೆ ನಡೆಸಿ, ತೆರಿಗೆದಾರರ ಮಾಹಿತಿ ಕಲೆಹಾಕಿ ಅವರ ಸಮಸ್ಯೆ ಬಗೆಹರಿಸಲು ಮುಂದಾಗಿz್ದÉೀವೆ. ಜತೆಗೆ ಆಯವ್ಯಯದಲ್ಲಿಯೂ ಆದಾಯ ಸಂಗ್ರಹಿಸಲು ನಿಗದಿಪಡಿಸಿದ್ದ ಗುರಿಯನ್ನು ಅಧಿಕಾರಿಗಳು ಮುಟ್ಟಿದ್ದಾರೆ ಎಂದರು.
ಗುಜರಾತ್‍ನ ಅಹಮದಾಬಾದ್, ವಾರ ಣಾಸಿಯಲ್ಲಿ ಸಭೆ ನಡೆಸಿದ್ದು, ಇಂದು ಮೈಸೂ ರಿನಲ್ಲಿ 3ನೇ ಸಭೆ ನಡೆಸಿz್ದÉೀನೆ. ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಎಸ್‍ಟಿ, ತೆರಿಗೆ ಪಾವತಿ ಮತ್ತಿತರೆ ವಿಷಯಗಳಲ್ಲಿ ನಾವು ಯಾರನ್ನೂ ಗುರಿಯಾಗಿಸಿಕೊಂಡು ವಿಚಾ ರಣೆ ನಡೆಸುವುದಿಲ್ಲ. ಬದಲಿಗೆ ರ್ಯಾಂಡಮ್ ಆಗಿ ವಿಚಾರಣೆ ನಡೆಸಲಾಗುವುದು ಎಂದರು.
ಬಿಜೆಪಿ ಕೈವಾಡದಿಂದ ಪಿ.ಚಿದಂಬರಂ ಬಂಧನ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನಾಯಕರ ಹೇಳಿಕೆಗಳು ಬೇಸರ ತರಿಸಿದೆ. 3-4 ದಶಕಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಏನು ಮಾಡಿತು? ಈಗ ಸಿಬಿಐ ದುರುಪಯೋಗದ ಬಗ್ಗೆ ಮಾತನಾಡು ತ್ತಿದೆ. ಕಾನೂನಿಗೆ ಕನಿಷ್ಠ ಗೌರವವನ್ನಾದರೂ ನೀಡಬೇಕು. ಆರೋಪಿಸುವುದೇ ಕಾಂಗ್ರೆಸ್‍ನ ಕೆಲಸವಾಗಿದೆ ಎಂದು ಗರಂ ಆದರು.
ಪ್ರವಾಹಕ್ಕೆ ಪರಿಹಾರ: ಕರ್ನಾಟಕ ಸೇರಿ ದಂತೆ ಹಲವು ರಾಜ್ಯಗಳಲ್ಲಿ ಪ್ರವಾಹ ಉಂಟಾ ಗಿದ್ದು, ನಾನು ಬಾಗಲಕೋಟೆ-ಬೆಳಗಾವಿ ಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಈ ಕುರಿತು ಕೇಂದ್ರಕ್ಕೆ ವರದಿಯನ್ನೂ ಕೊಟ್ಟಿ ದ್ದೇನೆ. ಆದರೆ, ಆ ವರದಿಯೇ ಅಂತಿಮವಲ್ಲ. ಕೇಂದ್ರದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವುದು ಮುಖ್ಯ. ಅಧಿಕಾರಿಗಳು ಜಿಲ್ಲೆಗಳಿಗೆ ಭೇಟಿ ನೀಡಿ ಯಾವ ಭಾಗದಲ್ಲಿ ಎಷ್ಟು ನಷ್ಟವಾಗಿದೆಂದು ಅಂದಾಜಿಸಿ, ಕೇಂದ್ರಕ್ಕೆ ವರದಿ ಸಲ್ಲಿಸುತ್ತಾರೆ. ನಂತರ ಈ ಕುರಿತು ಉನ್ನತಮಟ್ಟದ ಸಮಿತಿ ಯಲ್ಲಿ ಚರ್ಚಿಸಿ, ರಾಜ್ಯಕ್ಕೆ ಅಗತ್ಯವಿರುವ ಪರಿಹಾರ ಬಿಡುಗಡೆಗೊಳಿಸಲಾಗುತ್ತದೆ. ಇದಕ್ಕೆ ಸ್ವಲ್ಪ ಕಾಲಾವಕಾಶಬೇಕು. ಅಲ್ಲಿಯ ವರೆಗೆ ನೆರೆ ಸಂತ್ರಸ್ತರಿಗೆ ರಾಜ್ಯ ವಿಪತ್ತು ಪರಿ ಹಾರ ನಿಧಿಯಿಂದ ನೆರವು ನೀಡಲಾಗು ತ್ತದೆ ಎಂದರು. ಕೇಂದ್ರ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ, ಜಿಎಸ್‍ಟಿ ಆಯು ಕ್ತರು ಮತ್ತಿತರ ಅಧಿಕಾರಿಗಳು ಇದ್ದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೈಸೂರಿನ ರ್ಯಾಡಿಸನ್ ಬ್ಲೂ ಹೋಟೆಲ್ ಸಭಾಂಗಣದಲ್ಲಿ ಕೇಂದ್ರ ಅಬಕಾರಿ, ಸೀಮಾ ಸುಂಕ, ಆದಾಯ ತೆರಿಗೆ ಮತ್ತು ಜಿಎಸ್‍ಟಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಯನ್ನು ವಿಧಿಸುವ ಕಾಯ್ದೆ ವಿಧಾನಗಳು, ಸೀಮಾ ಸುಂಕ ಸಂಗ್ರಹದ ಪ್ರಗತಿ ಕುರಿತಂತೆ ಹಾಗೂ ಅಧಿಕಾರಿಗಳು ಅನುಸರಿಸಬೇಕಾದ ಕ್ರಮದ ಕುರಿತಂತೆ ನಿರ್ಮಲಾ ಸೀತಾರಾಮನ್ ಅವರು ಸುಮಾರು 20 ನಿಮಿಷಗಳ ಕಾಲ ಮಾತನಾಡಿದರು.
ನಂತರ ಅವರು ಇಲಾಖಾ ಅಧಿಕಾರಿಗಳೊಂದಿಗೆ ಪ್ರಸ್ತುತ ಜಿಎಸ್‍ಟಿ ಅನುಷ್ಠಾನದ ಸವಾಲುಗಳು, ಪ್ರಯೋಜನಗಳ ಕುರಿತಂತೆ ಸಚಿವರು ಸಂವಾದ ನಡೆಸಿದರು.
ಈ ಸಂದರ್ಭ ಸಿಬಿಸಿಐ ಅಧ್ಯಕ್ಷ ಪ್ರಣಬ್‍ಕುಮಾರ್ ದಾಸ್, ಪ್ರಧಾನ ಮುಖ್ಯ ಆಯುಕ್ತ ಡಿ.ಪಿ.ನಾಗೇಂದ್ರಕುಮಾರ್, ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ, ಸಿಬಿಡಿಟಿ ಅಧ್ಯಕ್ಷ ಪ್ರಮೋದ್ ಚಂದ್ರ, ಕರ್ನಾಟಕ ಮತ್ತು ಗೋವಾ ವಲಯದ ಪ್ರಿನ್ಸಿಪಾಲ್ ಸಿಸಿಪಿಟಿ ಎನ್.ಶಂಕರನ್ ಹಾಗೂ ಆದಾಯ ತೆರಿಗೆ ಕೇಂದ್ರ ಅಬಕಾರಿ ಮತ್ತು ಸೀಮಾ ಸುಂಕದ ಇತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಂವಾದ ಕಾರ್ಯಕ್ರಮಕ್ಕೆ ಇಲಾಖಾ ಅಧಿಕಾರಿಗಳನ್ನೊರತುಪಡಿಸಿ ಬೇರೆ ಯಾರಿಗೂ ಪ್ರವೇಶ ನಿರ್ಬಂಧಿಸಲಾಗಿತ್ತಲ್ಲದೆ, ಸಭಾಂಗಣದ ಪ್ರವೇಶ ದ್ವಾರದಲ್ಲಿ ಮೆಟಲ್ ಫ್ರೇಮ್ ಡಿಟೆಕ್ಟರ್ ಅಳವಡಿಸಿ ಪೊಲೀಸರು ತಪಾಸಣೆ ಮಾಡುತ್ತಿದ್ದರು.
ದೇವರಾಜ ಉಪವಿಭಾಗದ ಎಸಿಪಿ ಎಸ್.ಜಿ.ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ನಜರ್‍ಬಾದ್ ಠಾಣೆ ಇನ್‍ಸ್ಪೆಕ್ಟರ್ ಮಹದೇವಸ್ವಾಮಿ ಸೇರಿದಂತೆ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿ ಕಾರ್ಯಕ್ರಮಕ್ಕೆ ವ್ಯಾಪಕ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಕಾರಿನಲ್ಲಿ ಇಂದು ಮಧ್ಯಾಹ್ನ 12.40 ಗಂಟೆ ವೇಳೆ ಮೈಸೂರಿಗೆ ಆಗಮಿಸಿದ ನಿರ್ಮಲಾ ಸೀತಾರಾಮನ್ ಅವರನ್ನು ಪಿ.ಕೆ.ದಾಸ್ ಅವರು ಸರ್ಕಾರಿ ಅತಿಥಿ ಗೃಹದ ಬಳಿ ಪುಷ್ಪಗುಚ್ಛ ನೀಡಿ, ಆತ್ಮೀಯವಾಗಿ ಬರಮಾಡಿಕೊಂಡರು. ಸಂಜೆ ಸರ್ಕಾರಿ ಅತಿಥಿ ಗೃಹದಲ್ಲಿ ವಾಣಿಜ್ಯ ಮತ್ತು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸಚಿವರು ಬೆಂಗಳೂರಿಗೆ ವಾಪಸಾದರು.