ಜಿಲ್ಲೆಯಲ್ಲಿ 7ನೇ ಆರ್ಥಿಕ ಗಣತಿ: ಶಶಿಕುಮಾರ್
ಮೈಸೂರು

ಜಿಲ್ಲೆಯಲ್ಲಿ 7ನೇ ಆರ್ಥಿಕ ಗಣತಿ: ಶಶಿಕುಮಾರ್

August 22, 2019

ಮೈಸೂರು, ಆ.21- ಗ್ರಾಮೀಣ ಮತ್ತು ನಗರ ಪ್ರದೇಶ ಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿರುವ ಸಂಘಟಿತ ಹಾಗೂ ಅಸಂಘಟಿತ ವಿಭಾಗಗಳಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಹೊಂದಿರುವ ಉದ್ಯಮಗಳ ಪಟ್ಟಿಯನ್ನು ತಯಾರಿಸಲು 7ನೇ ಆರ್ಥಿಕ ಗಣತಿಯನ್ನು ಮೈಸೂರು ನಗರದಲ್ಲಿ ಕೈಗೊಳ್ಳಲಾಗುವುದು ಎಂದು ನಗರಪಾಲಿಕೆ ಹೆಚ್ಚುವರಿ ಆಯುಕ್ತ ಶಶಿಕುಮಾರ್ ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆಯ ಕಚೇರಿ ಸಭಾಂ ಗಣದಲ್ಲಿ ಬುಧವಾರ ನಡೆದ ಮೈಸೂರು ವ್ಯಾಪ್ತಿಯ ಉಸ್ತು ವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದರು. ಈ ಬಾರಿ ಮೊಬೈಲ್ ಅಪ್ಲಿಕೇಷನ್ ಬಳಸಿ ಕೈಗೊಳ್ಳ ಲಾಗುವುದು ಎಂದರು. ಪ್ರಸ್ತುತ 7ನೇ ಆರ್ಥಿಕ ಗಣತಿ ಯನ್ನು ಕೇಂದ್ರ ಸರ್ಕಾರದ ಜನಪ್ರಿಯ ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಪ್ರಥಮ ಬಾರಿಗೆ ಮಾಡಲಾಗುತ್ತಿದ್ದು, ಸೆಪ್ಟೆಂಬರ್ 2019ರೊಳಗೆ ಮಾಡ ಬೇಕಾಗಿರುತ್ತದೆ. ಮೈಸೂರು ನಗರದಲ್ಲಿ ಸಮೀಕ್ಷೆಯನ್ನು ಇ-ಗವರ್‍ನೆನ್ಸ್ (ಇ-ಉoveಡಿಟಿಚಿಟಿಛಿe) ಕಾಮನ್ ಸರ್ವಿಸ್ ಸೆಂಟರ್ ಅವರು ನಡೆಸಲಿದ್ದಾರೆ. ಕಾಮನ್ ಸರ್ವಿಸ್ ಸೆಂಟರ್ ಸಮೀಕ್ಷೆ ನಡೆಸಲು ಗಣತಿದಾರರು ಹಾಗೂ ಮೇಲ್ವಿ ಚಾರಕರನ್ನು ನೇಮಕ ಮಾಡಿ ತರಬೇತಿ ಕಾರ್ಯ ಕೈಗೊಂಡಿರುತ್ತಾರೆ ಎಂದು ತಿಳಿಸಿದರು.

ಸಮೀಕ್ಷೆ ಕಾರ್ಯದಲ್ಲಿ ನಗರಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ಅಥವಾ ಕುಟುಂಬ ಕೈಬಿಟ್ಟು ಹೋಗ ಬಾರದು, ಒಂದೇ ಕುಟುಂಬ ಎರಡು ಬಾರಿ ಗಣತಿ ಆಗ ದಂತೆ ಗಣತಿದಾರರು ಎಚ್ಚರ ವಹಿಸಬೇಕು ಎಂದರು.

ಗಣತಿದಾರರಿಗೆ ಕಾಮನ್ ಸರ್ವಿಸ್ ಸೆಂಟರ್ ವತಿಯಿಂದ ಗುರುತಿನ ಚೀಟಿ ನೀಡುವಂತೆ ಹಾಗೂ ಸಾರ್ವಜನಿಕರು ಗಣತಿದಾರರು ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ನಿಖರವಾದ ಮಾಹಿತಿ ನೀಡಿ ಗಣತಿಗೆ ಸಹಕಾರ ನೀಡುವಂತೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕರಾದ ಹೊನ್ನೇ ಗೌಡ, ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳಾದ ಕೃಷ್ಣಮೂರ್ತಿ ಮತ್ತು ಕಾಮನ್ ಸರ್ವಿಸ್ ಸೆಂಟರ್‍ನ ಜಿಲ್ಲಾ ವ್ಯವ ಸ್ಥಾಪಕ ಉಮಾಶಂಕರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Translate »