ಮೈಸೂರು,ಏ.4- ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ರಾಜ್ಯಾದ್ಯಂತ ಹೋಟೆಲ್ ಮಾಲೀ ಕರು ಊಟ, ತಿಂಡಿ ದರವನ್ನು ಹೆಚ್ಚಳ ಮಾಡಲು ತೀರ್ಮಾನ ಕೈಗೊಂಡಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಊಟ, ತಿಂಡಿ ಹಾಗೂ ಕಾಫಿ-ಟೀ ದರವನ್ನು ಶೇ.10ರಷ್ಟು ಹೆಚ್ಚಳ ಮಾಡಲು ತೀರ್ಮಾನ ಕೈಗೊಂಡಿರುವುದಾಗಿಯೂ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ. ಇತ್ತ ಮೈಸೂರಿನಲ್ಲಿ ಏಪ್ರಿಲ್ 10ರಿಂದ ಊಟ, ತಿಂಡಿ. ಹಾಗೂ ಕಾಫಿ-ಟೀ ದರವನ್ನು ಶೇ.5ರಷ್ಟು ಹೆಚ್ಚಿಸಲು ಹೋಟೆಲ್ ಮಾಲೀ ಕರ ಸಂಘ…
ಮುಡಾ ಆಸ್ತಿ ಕಬಳಿಕೆ ಪತ್ತೆಗೆ ಲ್ಯಾಂಡ್ ಆಡಿಟ್
April 5, 2022ಮೈಸೂರು, ಏ.4(ಆರ್‍ಕೆ)- ಕಬಳಿಕೆ ಯಾಗಿದೆ ಎನ್ನಲಾದ ಸಾವಿರಾರು ಕೋಟಿ ರೂ. ತನ್ನ ಆಸ್ತಿ ಪತ್ತೆ ಮಾಡಿ, ಅದನ್ನು ರಕ್ಷಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ವು ‘ಲ್ಯಾಂಡ್ ಆಡಿಟ್’ ನಡೆಸಲು ಮುಂದಾಗಿದೆ. ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್ ಲ್ಯಾಂಡ್ ಆಡಿಟ್ ನಡೆಸಿ ಕಬ ಳಿಕೆಯಾಗಿರುವ ಮುಡಾ ಭೂಮಿಯನ್ನು ವಶಕ್ಕೆ ಪಡೆಯಲು ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 1 ಕೋಟಿ ರೂ. ಅನುದಾನ ವನ್ನು ಮೀಸಲಿಡಲಾಗಿದೆ ಎಂದರು. ವಸತಿ ಬಡಾವಣೆ ಅಭಿವೃದ್ಧಿಪಡಿಸಲು…
ಲಾಟರಿ ಮೂಲಕ ವಿವಿಗಳ ಕುಲಪತಿ ಆಯ್ಕೆ ಕಾಲ ಬಂದರೂ ಬರಬಹುದು…!
April 5, 2022ಮೈಸೂರು, ಏ.4(ಎಸ್‍ಬಿಡಿ)- ವ್ಯವಸ್ಥೆ ಸರಿಹೋಗದಿದ್ದರೆ ಮುಂದಿನ ದಿನಗಳಲ್ಲಿ ಲಾಟರಿ ಮೂಲಕ ವಿಶ್ವವಿದ್ಯಾನಿಲಯ ಗಳಿಗೆ ಕುಲಪತಿಗಳ ಆಯ್ಕೆ ಮಾಡಬಹುದು ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ವಿಷಾದ ವ್ಯಕ್ತಪಡಿಸಿದರು. ಮೈಸೂರಿನ ಮಾನಸಗಂಗೋತ್ರಿ ಪರಿಸರ ಅಧ್ಯ ಯನ ವಿಭಾಗ ಅಧ್ಯಯನ ಮಂಡಳಿಯ ಅಧ್ಯ ಕ್ಷರೂ ಆದ ಎಂಟೆಕ್ ಇನ್ ಮೆಟಿರಿಯಲ್ಸ್ ಸೈನ್ಸ್ ಸಂಯೋಜಕ ಪ್ರೊ.ಎಸ್.ಶ್ರೀಕಂಠಸ್ವಾಮಿ ಅವರು ಲಂಡನ್‍ನ ಪ್ರತಿಷ್ಠಿತ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ(ಎಫ್‍ಆರ್‍ಎಸ್‍ಸಿ) ಫೆಲೋಗೆ ಭಾಜನರಾಗಿರುವ ಹಿನ್ನೆಲೆಯಲ್ಲಿ ವಿಜ್ಞಾನ ಭವನ ಸಭಾಂಗಣದಲ್ಲಿ ಸೋಮ ವಾರ ಆಯೋಜಿಸಿದ್ದ…
ಶಿವಕುಮಾರ ಸ್ವಾಮಿಗಳ ಮಾರ್ಗದಲ್ಲಿ ಮೋದಿ
April 3, 2022ಗೃಹ ಸಚಿವ ಅಮಿತ್ ಷಾ ಪ್ರತಿಪಾದನೆ ದೇಶಾದ್ಯಂತ ಶ್ರೀಗಳ ಸೇವಾ ಶ್ರೇಷ್ಠತೆಗಳಾದ ಅನ್ನ, ಅಕ್ಷರ, ವಸತಿ ವಿಸ್ತರಣೆಗೆ ನರೇಂದ್ರ ಮೋದಿ ಅವಿರತ ಪ್ರಯತ್ನ ಸಿದ್ದಗಂಗೆಯಲ್ಲಿ ಶ್ರೀಗಳ ಜಯಂತಿ ಕಾರ್ಯಕ್ರಮದಲ್ಲಿ ಮಹಾಚೇತನಕ್ಕೆ ಅಮಿತ್ ಷಾ ನಮನ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶುಕ್ರವಾರ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಗಳ ೧೧೫ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದರು. ತುಮಕೂರು, ಏ. ೧- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ…
ಅವಧಿಗೆ ಮುನ್ನ ಚುನಾವಣೆ ಇಲ್ಲ: ಅಮಿತ್ ಶಾ
April 3, 2022ಬೆಂಗಳೂರು, ಏ. ೧- ರಾಜ್ಯದ ಆಡಳಿತ ಪಕ್ಷ ಬಿಜೆಪಿ ಈಗಿನಿಂದಲೇ ಚುನಾವಣೆ ಕಾರ್ಯ ತಂತ್ರ ಆರಂಭಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ನಾಯಕರಿಗೆ ೨೦೨೩ ವಿಧಾನಸಭೆ ಚುನಾ ವಣೆಯಲ್ಲಿ ೧೫೦ ಸ್ಥಾನ ಗೆಲ್ಲಲು ಬೇಕಾದ ನೀಲ ನಕ್ಷೆಯನ್ನು ಏಪ್ರಿಲ್ ೧೬ ರೊಳಗೆ ಸಿದ್ಧಪಡಿ ಸುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮುಂಬರುವ ವಿಧಾನಸಭೆ ಚುನಾ ವಣೆಯ…
ಆನೆ ದಂತ ಮಾರಲು ಯತ್ನ; ಮೂವರ ಬಂಧನ
April 3, 2022ಮಡಿಕೇರಿ, ಏ.೧- ಅಕ್ರಮವಾಗಿ ೨ ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ೩ ಮಂದಿ ಆರೋಪಿಗಳನ್ನು ಮಡಿಕೇರಿಯ ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸರು ಬಂಧಿಸಿದ್ದಾರೆ. ವುಜೈರ್ ಅಹಮದ್, ನಯಾಜುದ್ದೀನ್ ಖಾನ್ ಮತ್ತು ಅಶ್ರಫ್ ಎಂ.ಎ. ಬಂಧಿತ ಆರೋಪಿಗಳಾಗಿದ್ದಾರೆ. ಗುಡ್ಡೆಹೊಸೂರು ಹಾರಂಗಿ ರಸ್ತೆಯ ಬೊಳ್ಳೂರಿ ನಿಂದ ಮಾದಾಪಟ್ಟಣ ಕಡೆಗೆ ತೆರಳುವ ರಸ್ತೆಯ ಜಂಕ್ಷನ್ ಬಳಿ ೩ ಮಂದಿ ಆನೆ ದಂತವನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಮಡಿಕೇರಿಯ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ಘಟಕಕ್ಕೆ ಖಚಿತ ಮಾಹಿತಿ…
‘ಪರೀಕ್ಷಾ ಪೇ ಚರ್ಚಾ’ ಸಂವಾದ ವೀಕ್ಷಿಸಿದ ವಿದ್ಯಾರ್ಥಿಗಳು
April 3, 2022ಚಾಮರಾಜನಗರ, ಏ.೧- ನವದೆಹಲಿಯ ತಾಳ್ಕ ಟೋರ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿಯ ವರು ವಿದ್ಯಾರ್ಥಿಗಳೊಂದಿಗೆ ನಡೆಸಿದ ಪರೀಕ್ಷಾ ಪೇ ಚರ್ಚಾ ನೇರ ಸಂವಾದ ಪ್ರಸಾರ ಕಾರ್ಯಕ್ರಮವನ್ನು ಜಿಲ್ಲೆಯ ಹೊಂಡರಬಾಳುವಿನ ಜವಹಾರ್ ನವೋದಯ ವಿದ್ಯಾಲಯ, ಮಾದಾಪುರದ ಕೇಂದ್ರೀಯ ವಿದ್ಯಾಲಯ ಸೇರಿದಂತೆ ಇತರೆಡೆ ವಿದ್ಯಾರ್ಥಿಗಳು ವೀಕ್ಷಿಸಿದರು. ವಿದ್ಯಾರ್ಥಿಗಳಲ್ಲಿ ಕಲಿಕಾ ಭಯ ಹೋಗಲಾಡಿಸಲು ಹಾಗೂ ಪರೀಕ್ಷಾ ಆತಂಕ ದೂರ ಮಾಡಿ ಒತ್ತಡ ರಹಿತ ವಾತಾವರಣ ನಿರ್ಮಿಸಲು ಪೂರಕವಾದ ನೇರ ಸಂವಾದದ ಪ್ರಸಾರವನ್ನು ಹೊಂಡರಬಾಳುವಿನಲ್ಲಿರುವ ಜವಾಹರ್ ನವೋದಯ ವಿದ್ಯಾಲಯದ ಸಭಾಂಗಣದಲ್ಲಿ ವಿದ್ಯಾರ್ಥಿ ಗಳು…
ಕೊಳ್ಳೇಗಾಲ ಬಳಿ ಶೀಲ ಶಂಕಿಸಿ ಪತ್ನಿ ಹತ್ಯೆಗೈದ ಪತಿ
April 3, 2022ಕೊಳ್ಳೇಗಾಲ, ಏ.೧(ಎನ್.ನಾಗೇಂದ್ರ ಸ್ವಾಮಿ)- ಪತಿಯೋರ್ವ ಪತ್ನಿ ಶೀಲ ಶಂಕಿಸಿ ಆಕೆ ಮಲಗಿದ್ದ ವೇಳೆ ಮಕ್ಕಳ ಎದುರೇ ಆಕೆಯನ್ನು ಉಸಿರುಗಟ್ಟಿಸಿ ಹತೈಗೈದಿರುವ ಘಟನೆ ತಾಲೂಕಿನ ಮುಡಿಗುಂಡ ಗ್ರಾಮದ ನಾಯಕರ ಬೀದಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ಗ್ರಾಮದ ನಿವಾಸಿ ಕುಮಾರ ಎಂಬಾತನೇ ತನ್ನ ಪತ್ನಿ ಚಿನ್ನಮ್ಮ(೩೦) ಎಂಬಾಕೆಯನ್ನು ಹತ್ಯೆಗೈದವನಾಗಿದ್ದು, ಆತನನ್ನೂ ಬಂಧಿಸಿದ್ದಾರೆ. ಮುಳ್ಳೂರು ಗ್ರಾಮದ ಚಿನ್ನಮ್ಮ ಅವರನ್ನು ಕಳೆದ ೧೦ ವರ್ಷಗಳ ಹಿಂದೆ ಮುಡಿಗುಂಡ ಗ್ರಾಮದ ನಿವಾಸಿ ಕೊಪ್ಪಾಳಿ ನಾಯಕ ಅವರ ಪುತ್ರ ಕುಮಾರ ಎಂಬಾತನೊAದಿಗೆ ವಿವಾಹ ಮಾಡಿಕೊಡಲಾಗಿತ್ತು. ಈ…
ಜಿಂಕೆ ಬೇಟೆಯಾಡಿದ ಇಬ್ಬರ ಬಂಧನ
April 3, 2022ಕುಶಾಲನಗರ, ಏ.೧- ಉತ್ತರ ಕೊಡಗಿನ ಸೋಮವಾರಪೇಟೆ ವಲಯದ ಜೇನುಕೊಲ್ಲು ಬೆಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿದ ಇಬ್ಬರು ಆರೋಪಿಗಳನ್ನು ಗುರುವಾರ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ತಾಲೂಕಿನ ಹೊಸಹಳ್ಳಿ ಗ್ರಾಮದ ಕಾವೇರಪ್ಪ ಆಲಿಯಾಸ್ ತಮ್ಮು, ಎಂ.ಟಿ.ಹರೀಶ್ ಬಂಧಿತರಾಗಿದ್ದು, ಇವರಿಂದ ಜಿಂಕೆ ಚರ್ಮ, ಹತ್ತು ಕೆಜಿ ಮಾಂಸ, ಎರಡು ಒಂಟಿನಳಿಕೆ ಕೋವಿ ಹಾಗೂ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬAಧಿಸಿದ ಡಿ.ಇ.ಪ್ರವೀಣ್, ಕೆ.ಆರ್.ಕೃಷ್ಣಪ್ಪ, ಪ್ರೀತು ಆಲಿಯಾಸ್ ಪ್ರೇಮನಾಥ್, ಮೋನಿಸ್ ಆಲಿಯಾಸ್ ಮೋನಿ ಸೇರಿದಂತೆ ನಾಲ್ವರು ಆರೋಪಿ ಗಳು…
ಪ್ರಸಕ್ತ ಸಾಲಿಗೆ ಮುಡಾದಿಂದ 129.76 ಕೋಟಿ ಉಳಿತಾಯ ಬಜೆಟ್ ಮಂಡನೆ
April 1, 2022ಮುಡಾ ಕಚೇರಿ ಸಭಾಂಗಣದಲ್ಲಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯುಕ್ತ ಡಾ.ಡಿ.ಬಿ.ನಟೇಶ್ 56 ಪುಟಗಳ 2022-23ನೇ ಸಾಲಿನ ಆಯ-ವ್ಯಯವನ್ನು ಮಂಡಿಸಿದರು. ಮೈಸೂರು, ಮಾ.31 (ಆರ್‍ಕೆ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವು ಪ್ರಸಕ್ತ ಸಾಲಿ ನಲ್ಲಿ 129.76 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದೆ. ಮುಡಾ ಕಚೇರಿ ಸಭಾಂಗಣದಲ್ಲಿ ಪ್ರಾಧಿ ಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಆಯುಕ್ತ ಡಾ.ಡಿ.ಬಿ. ನಟೇಶ್ ಇಂದು 56 ಪುಟಗಳ 2022-23ನೇ ಸಾಲಿನ ಆಯ-ವ್ಯಯವನ್ನು ಮಂಡಿಸಿದರು….










