ಮೈಸೂರು,ಜೂ.25(ಎಂಟಿವೈ)- ಮುಂಬರುವ ಚುನಾವಣೆಗಳಲ್ಲಿ ಮತ ಯಂತ್ರ ನಿಷೇಧಿಸಿ, ಬ್ಯಾಲೆಟ್ ಪೇಪರ್ ವ್ಯವಸ್ಥೆ ಜಾರಿಗೊಳಿಸುವಂತೆ ಒತ್ತಾಯಿಸಿ ಮೈಸೂರಿನಲ್ಲಿ ಮಂಗಳವಾರ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟ್ ಕಾರ್ಡ್ ಚಳುವಳಿ ನಡೆಸಿದರು. ಮೈಸೂರು ನಗರ ಪಾಲಿಕೆ ಕಚೇರಿ ಮುಂಭಾಗವಿರುವ ಅಂಚೆ ಪೆಟ್ಟಿಗೆಗೆ ಪೋಸ್ಟ್ ಕಾರ್ಡ್ ಹಾಕುವ ಮೂಲಕ ಮತ ಯಂತ್ರ ಬಳಸದಂತೆ ಒತ್ತಾಯಿಸಿದರು. ಈ ವೇಳೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಕಳೆದ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ವೇಳೆ ಮತಯಂತ್ರಗಳನ್ನು ಹ್ಯಾಕ್ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಇದಕ್ಕೆ ಪೂರಕವಾಗಿ…
ಹೀಗೂ ರಸ್ತೆ ಅಭಿವೃದ್ಧಿಪಡಿಸಬಹುದೇ… ಅಬ್ಬಾ ರಸ್ತೆಯ ಕಾಮಗಾರಿ ಬಗ್ಗೆ ಸಾರ್ವಜನಿಕರ ಆಕ್ರೋಶ
June 26, 2019ಮೈಸೂರು, ಜೂ.25(ಎಸ್‍ಬಿಡಿ)-ಮೈಸೂರಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿರುವುದರಿಂದ ರಸ್ತೆ ಅಗಲೀಕರಣ ಅಗತ್ಯ. ಆದರೆ ಕೋಟ್ಯಾಂತರ ರೂ. ವೆಚ್ಚದಲ್ಲಿ ನಗರ ಪಾಲಿಕೆ ವತಿಯಿಂದ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯೊಂದರ ಬಗ್ಗೆ ಸಾರ್ವಜನಿಕ ವಲಯ ದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯ ಹಣಕಾಸು ಆಯೋಗ(ಎಸ್‍ಎಫ್‍ಸಿ)ದ ಅನುದಾನದಲ್ಲಿ ನಗರ ಪಾಲಿಕೆ ವತಿಯಿಂದ ಫೈವ್ ಲೈಟ್ ವೃತ್ತದಿಂದ ಹೈದರಾಲಿ ರಸ್ತೆವರೆಗಿನ ಅಬ್ಬಾ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇದಕ್ಕಾಗಿ ಸರ್ಕಾರದ ಅನುಮತಿ ಯೊಂದಿಗೆ ಸರ್ಕಾರಿ ಅತಿಥಿ ಗೃಹದ ಜಾಗವನ್ನೂ ಬಳಸಿಕೊಂಡು ಕಾಮಗಾರಿ…
ಕೇಂದ್ರಕ್ಕೆ ರಾಜ್ಯದ ನೀರಿನ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ತಜ್ಞರ ಮನವಿ
June 26, 2019ಮೈಸೂರು,ಜೂ.25(ವೈಡಿಎಸ್)-ತುರ್ತಾಗಿ ರಾಜ್ಯದ ಎಲ್ಲಾ ಸಂಸದರನ್ನು ಒಳಗೊಂಡಂತೆ ರಾಜ್ಯ ಸರ್ಕಾರ, ಕೇಂದ್ರ ಜಲ ಸಂರಕ್ಷಣಾ ಸಚಿವರ ಬಳಿ ನಿಯೋಗ ಕರೆದೊಯ್ದು ಇಲ್ಲಿನ ವಾಸ್ತವ ಸ್ಥಿತಿಯನ್ನು ಮನದಟ್ಟು ಮಾಡಿಕೊಡ ಬೇಕೆಂದು ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್‍ನ ಕಾವೇರಿ ತಾಂತ್ರಿಕ ಸಲಹಾ ಸಮಿತಿ ಮನವಿ ಮಾಡಿದೆ. ಜೆಎಲ್‍ಬಿ ರಸ್ತೆಯ ಇಂಜಿನಿಯರುಗಳ ಸಂಸ್ಥೆಯಲ್ಲಿ ಮಂಗಳವಾರ ನಡೆದ ಕಾವೇರಿ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಪ್ರಮುಖ ಇಂಜಿನಿಯರುಗಳೊಂದಿಗೆ ಚರ್ಚಿಸಿ, ಮುಖ್ಯ ವಾಗಿ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಸಂಸ ದರನ್ನು ಒಳಗೊಂಡಂತೆ ನಿಯೋಗವನ್ನು ಕೇಂದ್ರ ಜಲಸಂರಕ್ಷಣಾ…
ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಗುಣಮಟ್ಟ, ಸುರಕ್ಷತೆಗೆ ಆದ್ಯತೆ ನೀಡಿ
June 26, 2019ಮೈಸೂರು,ಜೂ.25(ಆರ್‍ಕೆಬಿ)- ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತುಂಬಾ ಮುಖ್ಯ ವಾಗಿರುವ ಗುಣಮಟ್ಟ ಮತ್ತು ಸುರಕ್ಷತೆಗೆ ಗಾರೆ ಹಾಗೂ ಎಲೆಕ್ಟ್ರಿಕಲ್ ಕೆಲಸ ಮಾಡು ವವರು ಮೊದಲ ಆದ್ಯತೆ ನೀಡಬೇಕು ಎಂದು ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ಕೆ.ಜ್ಯೋತಿ ಇಂದಿಲ್ಲಿ ಸಲಹೆ ನೀಡಿದರು. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ, ಜಿಲ್ಲಾಡಳಿತ ಹಾಗೂ ನಿರ್ಮಿತಿ ಕೇಂದ್ರಗಳ ಸಹಯೋಗದಲ್ಲಿ ಮಂಗಳವಾರ ಮೈಸೂರಿನ ಬೋಗಾದಿ 2ನೇ ಹಂತದ ನಿರ್ಮಿತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ `ಶ್ರಮ ಸಾಮಥ್ರ್ಯ ಯೋಜನೆ’ಯ ನೋಂದಾಯಿತ…
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‍ಗೆ ಜನತೆ ಈಗ ಚಕ್ರಬಡ್ಡಿ ಸಹಿತ ಪ್ರತೀಕಾರ ತೀರಿಸಿಕೊಂಡಿದ್ದಾರೆ
June 26, 2019ಮೈಸೂರು,ಜೂ.25(ಪಿಎಂ)- ದೇಶ ದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದಕ್ಕೆ ಕಾಂಗ್ರೆಸ್‍ಗೆ ಜನತೆ ಇಂದು ಚಕ್ರಬಡ್ಡಿ ಸಮೇತ ಪ್ರತೀಕಾರ ತೀರಿಸಿಕೊಂಡಿದ್ದಾರೆ ಎಂದು ಮಾಜಿ ಕಾನೂನು ಸಚಿವ ಎಸ್. ಸುರೇಶ್‍ಕುಮಾರ್ ತಿಳಿಸಿದರು. ಮೈಸೂರಿನ ಹೆಬ್ಬಾಳು ರಿಂಗ್ ರಸ್ತೆಯ ಶೇಷಾದ್ರಿಪುರಂ ಕಾಲೇಜು ಸಭಾಂಗಣ ದಲ್ಲಿ ಕಾಲೇಜು ಮತ್ತು ರಾಜ್ಯ ಶೈಕ್ಷಣಿಕ ದಿಕ್ಸೂಚಿ ಸುಧಾರಣಾ ಸಮಿತಿ ಜಂಟಿ ಆಶ್ರಯದಲ್ಲಿ ಮಂಗಳವಾರ `ತುರ್ತು ಪರಿಸ್ಥಿತಿ ಹೇರಿಕೆ, ಸ್ಥಿರತೆಗೆ ತಡೆ ಹಾಗೂ ಪ್ರಜಾ ಪ್ರಭುತ್ವದ ಅಭಿವೃದ್ಧಿ:ಒಂದು ಅವಲೋಕನ’ ಕುರಿತಂತೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯ ಕ್ರಮ ಉದ್ಘಾಟಿಸಿ ಅವರು…
ನರೇಗಾದಡಿ 35.50 ಲಕ್ಷ ಮಾನವ ದಿನಗಳ ಸೃಜನೆ
June 26, 2019ಮೈಸೂರು,ಜೂ.25(ಎಂಕೆ)-ಮೈಸೂರು ಜಿಲ್ಲೆಯಲ್ಲಿ 2019-20ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಯಡಿ 35.50 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಲು ಪರಿಷ್ಕರಿಸಿ, ಒಟ್ಟು 156.16 ಕೋಟಿ ಹಣದ ಮೊತ್ತ ವನ್ನು ಅಭಿವೃದ್ಧಿ ಕಾಮಗಾರಿಗೆ ನಿಗದಿಪಡಿಸಲಾಗಿದೆ. ಕಳೆದ 2018-19ನೇ ಸಾಲಿನಲ್ಲಿದ್ದ 30 ಲಕ್ಷ ಮಾನವ ದಿನಗಳನ್ನು ಈ ಬಾರಿ ಬೇಡಿಕೆಯ ಆಧಾರದ ಮೇಲೆ, ಸ್ಥಳೀಯ ಸ್ಥಿತಿಗತಿಗಳಿಗೆ ಅನು ಗುಣವಾಗಿ ಮತ್ತು ಬರ ಪರಿಸ್ಥಿತಿಯನ್ನು ಆಧರಿಸಿ ಹೆಚ್ಚಿಸಲಾಗಿದೆ. ಇದರೊಂದಿಗೆÉ ತಾಲೂಕು ಮತ್ತು ಗ್ರಾಮ ಪಂಚಾಯತಿವಾರು ಪರಿಷ್ಕರಿಸಿದ ಮಾನವ…
ಜೂ.26ರಿಂದ 30ರವರೆಗೆ ಮೈಸೂರು, ಚಾ.ನಗರದಲ್ಲಿ ತುಂತುರು, ಕೊಡಗು, ಮಂಡ್ಯ ಜಿಲ್ಲೆಯಲ್ಲಿ ಸಾಧಾರಣ ಮಳೆ ಸಾಧ್ಯತೆ
June 26, 2019ಮೈಸೂರು,ಜೂ.25(ಆರ್‍ಕೆಬಿ)-ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಜೂ.26ರಿಂದ 30ರವರೆಗೆ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ತುಂತುರು ಹಾಗೂ ಕೆಲವು ಜಿಲ್ಲೆಗಳಲ್ಲಿ ತುಂತುರು ವಿನಿಂದ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ ಎಂದು ಮೈಸೂರಿನ ನಾಗನಹಳ್ಳಿ ಕೃಷಿ ಹವಾಮಾನ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ತುಂತುರು ಮಳೆ, ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆ, ಮಂಡ್ಯ ಜಿಲ್ಲೆಯಲ್ಲಿ ತುಂತುರುವಿನಿಂದ ಸಾಧಾರಣ ಮಳೆ ಬೀಳಬಹು ದಾಗಿದೆ. ಮೈಸೂರು ಜಿಲ್ಲೆಯಲ್ಲಿ ಗರಿಷ್ಟ ತಾಪಮಾನ 31-32 ಡಿಗ್ರಿ ಸೆಲ್ಸಿ ಯಸ್,…
ಹೆಚ್ಚುವರಿ 10 ಲಕ್ಷ ರೈತರಿಗೆ ತಲಾ 30 ಸಾವಿರ ರೂ. ಬೆಳೆ ಸಾಲ
June 25, 2019ಬೆಂಗಳೂರು: ಕನಿಷ್ಠ 30,000 ರೂ.ನಂತೆ 10 ಲಕ್ಷ ರೈತರಿಗೆ ಹೊಸ ದಾಗಿ ಬೆಳೆ ಸಾಲ ನೀಡಲು 3,000 ಕೋಟಿ ರೂ. ಹೆಚ್ಚುವರಿ ನೀಡುವುದಾಗಿ ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿ ಬ್ಯಾಂಕ್‍ಗಳು ಇದುವರೆಗೆ 22 ಲಕ್ಷ ರೈತ ರಿಗೆ 10,000 ಕೋಟಿ ರೂ. ಬೆಳೆ ಸಾಲ ನೀಡುತ್ತಿವೆ. ಇದುವರೆಗೂ ಸಾಲ ಪಡೆದ ರೈತರೇ ಈ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಹೊಸಬರಿಗೆ ಅವಕಾಶವೇ ದೊರೆಯು ತ್ತಿಲ್ಲ. ಇದರ ಬದಲಾವಣೆಗೆ ಸರ್ಕಾರ ಚಿಂತನೆ ನಡೆಸಿದೆ. ಸಹಕಾರಿ…
ಕೆಆರ್‍ಎಸ್ ಜಲಾಶಯದ 143 ಕ್ರೆಸ್ಟ್ ಗೇಟ್ ಬದಲಿಸುವ ಕಾಮಗಾರಿಗೆ ಆರ್ಥಿಕ ಬಿಡ್ ಅಂತಿಮ
June 25, 2019– ಎಸ್.ಟಿ. ರವಿಕುಮಾರ್ ಮೈಸೂರು: ವಿಶ್ವ ಪ್ರಸಿದ್ಧ ಕೃಷ್ಣರಾಜ ಸಾಗರ ಅಣೆಕಟ್ಟೆಯ ಅತೀ ಹಳೆಯ 143 ಕ್ರೆಸ್ಟ್ ಗೇಟ್‍ಗಳನ್ನು ಬದಲಿ ಸುವ ಕಾಲ ಸನ್ನಿಹಿತವಾಗಿದೆ. ಕಾವೇರಿ ನೀರಾವರಿ ನಿಗಮ (ಅಓಓ)ವು, ಕೆಆರ್‍ಎಸ್ ಅಣೆಕಟ್ಟೆ ನಿರ್ಮಾಣ ಸಂದರ್ಭ 80 ವರ್ಷಗಳ ಹಿಂದೆ ಅಳವಡಿಸಿದ್ದ 173 ಗೇಟುಗಳ ಪೈಕಿ ಕಾವೇರಿ ನದಿಗೆ ನೀರು ಹರಿಸುವ 143 ಗೇಟ್ (ಸ್ಲೂಸ್ ಗೇಟ್)ಗಳನ್ನು ಬದಲಾಯಿಸಲು ಯೋಜನೆ ರೂಪಿಸಿತ್ತು. 68 ಕೋಟಿ ರೂ. ವೆಚ್ಚದ ಈ ಮಹತ್ತರ ಯೋಜನೆಗೆ ಹಣಕಾಸಿನ ನೆರವು ನೀಡಲು ವಿಶ್ವ…
ಸುತ್ತೂರಲ್ಲಿ ಸೈನ್ಸ್ ಸಿಟಿ
June 25, 2019ಮೈಸೂರು: ಮೂಲ ವಿಜ್ಞಾನದ ಅಭಿರುಚಿ ಬೆಳೆಸಿ ವೈಜ್ಞಾನಿಕ ಚಿಂತನೆಗೆ ಹಚ್ಚುವ ಹಾಗೂ ವಿಜ್ಞಾನದ ವಿಸ್ಮಯ ಲೋಕ ಅನಾವರಣಗೊಳಿಸುವ ಸೈನ್ಸ್ ಸಿಟಿಯನ್ನು (ವಿಜ್ಞಾನ ನಗರ) ಮೈಸೂರಿನಿಂದ 25 ಕಿ.ಮೀ. ದೂರದ ಸುತ್ತೂರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಬೃಹತ್ ಯೋಜನೆಗೆ ರಾಜ್ಯ ವಿಜ್ಞಾನ ಮತ್ತು ತಂತ್ರ ಜ್ಞಾನ ಇಲಾಖೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದ್ದು, ಎಲ್ಲವೂ ಅಂದುಕೊಂಡಂತೆ ಆದಲ್ಲಿ ದಕ್ಷಿಣ ಭಾರತದ ಮೊಟ್ಟ ಮೊದಲ ಸೈನ್ಸ್ ಸಿಟಿಯಾಗಿ ಇದು ಹೊರ ಹೊಮ್ಮಲಿದೆ….










