ನರೇಗಾದಡಿ 35.50 ಲಕ್ಷ ಮಾನವ ದಿನಗಳ ಸೃಜನೆ
ಮೈಸೂರು

ನರೇಗಾದಡಿ 35.50 ಲಕ್ಷ ಮಾನವ ದಿನಗಳ ಸೃಜನೆ

June 26, 2019

ಮೈಸೂರು,ಜೂ.25(ಎಂಕೆ)-ಮೈಸೂರು ಜಿಲ್ಲೆಯಲ್ಲಿ 2019-20ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಯಡಿ 35.50 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಲು ಪರಿಷ್ಕರಿಸಿ, ಒಟ್ಟು 156.16 ಕೋಟಿ ಹಣದ ಮೊತ್ತ ವನ್ನು ಅಭಿವೃದ್ಧಿ ಕಾಮಗಾರಿಗೆ ನಿಗದಿಪಡಿಸಲಾಗಿದೆ.

ಕಳೆದ 2018-19ನೇ ಸಾಲಿನಲ್ಲಿದ್ದ 30 ಲಕ್ಷ ಮಾನವ ದಿನಗಳನ್ನು ಈ ಬಾರಿ ಬೇಡಿಕೆಯ ಆಧಾರದ ಮೇಲೆ, ಸ್ಥಳೀಯ ಸ್ಥಿತಿಗತಿಗಳಿಗೆ ಅನು ಗುಣವಾಗಿ ಮತ್ತು ಬರ ಪರಿಸ್ಥಿತಿಯನ್ನು ಆಧರಿಸಿ ಹೆಚ್ಚಿಸಲಾಗಿದೆ. ಇದರೊಂದಿಗೆÉ ತಾಲೂಕು ಮತ್ತು ಗ್ರಾಮ ಪಂಚಾಯತಿವಾರು ಪರಿಷ್ಕರಿಸಿದ ಮಾನವ ದಿನಗಳನ್ನು ವಿಂಗಡಣೆ ಮಾಡಲಾಗಿದೆ.

15 ಸಾವಿರ ಕಾಮಗಾರಿಗಳನ್ನು ಅನುಷ್ಠಾನಗೊಳಿ ಸಲು ಕ್ರಿಯಾ ಯೋಜನೆಯನ್ನು ರಚಿಸಲಾಗಿದ್ದು, 156.16 ಕೋಟಿಯಲ್ಲಿ ಹೆಗ್ಗಡದೇವನಕೋಟೆ ತಾಲೂಕಿಗೆ 32.84 ಕೋಟಿ, ಹುಣಸೂರು 20.20 ಕೋಟಿ, ಕೆ.ಆರ್.ನಗರ 16.84 ಕೋಟಿ, ಮೈಸೂರು 11.67 ಕೋಟಿ, ನಂಜನಗೂಡು 32.80 ಕೋಟಿ, ಪಿರಿಯಾಪಟ್ಟಣ 20.71 ಕೋಟಿ ಹಾಗೂ ಟಿ.ನರಸೀಪುರ ತಾಲೂಕಿಗೆ 21.06 ಕೋಟಿಗಳನ್ನು ವಿಂಗಡಣೆ ಮಾಡಲಾಗಿದ್ದು, ಅದರಂತೆ ಮಾನವ ದಿನ ಸೃಜನೆಯ ಗುರಿಯನ್ನು ನಿಗದಿಪಡಿಸಲಾಗಿದೆ.

ಪ್ರಸ್ತುತ ನರೇಗಾ ಯೋಜನೆಯಡಿಯಲ್ಲಿ ಉದ್ಯೋಗ ಪಡೆಯುವ ವ್ಯಕ್ತಿಯ ದಿನದ ಕೂಲಿ 249 ರೂ. ಆಗಿದ್ದು, ಸಾಮಗ್ರಿ ವೆಚ್ಚ 166 ರೂ. ಆಡಳಿತಾತ್ಮಕ ವೆಚ್ಚ 24.90 ರೂ. ಸೇರಿ ಒಟ್ಟು 439 ರೂ.ಗಳನ್ನು ಒಂದು ಮಾನವ ದಿನ ಎಂದು ಪರಿಗಣಿಸಲಾಗುತ್ತಿದೆ.

ಜಲಾಮೃತ ವಿಶೇಷ ಯೋಜನೆ: 2019-20ನೇ ಆರ್ಥಿಕ ವರ್ಷವನ್ನು ‘ಜಲವರ್ಷ’ ಎಂದು ಘೋಷಣೆ ಮಾಡಿರುವು ದರಿಂದ ಜಿಲ್ಲಾ ಪಂಚಾಯತಿ ವತಿಯಿಂದ ‘ಜಲಾಮೃತ’ ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಜಲಾಮೃತ ಯೋಜನೆಯಲ್ಲಿ 807 ಕಾಮಗಾರಿ ಗಳಿದ್ದು, ಅವುಗಳಲ್ಲಿ ಕೆರೆಗಳು, ಸಣ್ಣ ಕೆÀರೆಗಳು, ಕಲ್ಯಾಣಿ, ಕುಂಟೆ, ಗೋಕಟ್ಟೆ, ಚೆಕ್ ಡ್ಯಾಂ, ಇತ್ಯಾದಿ ನೀರಿನ ಮೂಲ ಗಳನ್ನು ಗುರುತಿಸಿ ಹೂಳೆತ್ತುವುದು. ಜತೆಗೆ ರೈತರಿಗೆ ಕೆರೆಯ ಹೂಳನ್ನು ತಮ್ಮ ಹೊಲ ಗದ್ದೆಗಳಿಗೆ ಸಾಗಿಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಆದರೆ, ರೈತರು ತಮ್ಮ ಸ್ವಂತ ಖರ್ಚಿನಿಂದ ಹೂಳನ್ನು ಕೆರೆಯಿಂದ ಸಾಗಿಸಿಕೊಳ್ಳಬೇಕಾಗಿದೆ.

ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೊಸಕೆರೆ, ಚೆಕ್ ಡ್ಯಾಂ, ಗೋಕಟ್ಟೆಗಳನ್ನು ನಿರ್ಮಿ ಸಲು ಮಾಹಿತಿ ಸಂಗ್ರಹಿಸುವುದು. ಹಾಗೂ ಹಸಿರೀಕರಣ ಪರಿಕಲ್ಪನೆಯಲ್ಲಿ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಟ್ಟಡಗಳ ಆವರಣದಲ್ಲಿ 40 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮತ್ತು ಸಂರಕ್ಷಣೆ ಮಾಡುವ ಯೋಜನೆ ಇದಾಗಿದೆ.

ಕುರಿ ಮತ್ತು ದನದ ದೊಡ್ಡಿ, ಆಟದ ಮೈದಾನ, ಸ್ಮಶಾನ ಅಭಿವೃದ್ಧಿ, ನಮ್ಮೂರ ಕೆರೆ, ನಮ್ಮ ಹೊಲ-ನಮ್ಮದಾರಿ, ಅಂಗನವಾಡಿ ಕೇಂದ್ರಗಳು, ರಾಜೀವ್ ಗಾಂಧಿ ಸೇವಾ ಕೇಂದ್ರ, ಗ್ರಾಮೀಣ ಉದ್ಯಾನವನ, ದನಕರುಗಳ ಕುಡಿಯುವ ನೀರಿನ ತೊಟ್ಟಿ, ಶಾಲಾ ಆವರಣ ಗೋಡೆ, ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಬಹು ಕಮಾನು ತಡೆಗೋಡೆ ನಿರ್ಮಾಣ(ಪಿಆರ್‍ಇಡಿ), ಕುಡಿಯುವ ನೀರಿನ ಮರುಪೂರಣಾ ಘಟಕ, ಕೃಷಿ ಹೊಂಡ ಕಾಮಗಾರಿ ಮತ್ತು ವಸತಿ ಒಗ್ಗೂಡಿಸುವಿಕೆ ಕಾಮಗಾರಿಯಗಳು ನರೇಗಾ ಯೋಜನೆ ವ್ಯಾಪ್ತಿಯಲ್ಲಿ ಬರಲಿವೆ. ಅಲ್ಲದೆ ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಇಲಾಖೆಯಲ್ಲಿಯೂ ವಿವಿಧ ಅಭಿವೃದ್ಧಿ ಕಾಮಗಾರಿ ಗಳನ್ನು ನರೇಗಾ ಯೋಜನೆಯೊಂದಿಗೆ ಒಗ್ಗೂಡಿಸು ವಿಕೆಯಿಂದ ಕೈಗೊಳ್ಳಲಾಗುತ್ತದೆ.

ಕಳೆದ ಸಾಲಿನಲ್ಲಿ ಕೈಗೊಂಡ ಸುಮಾರು 14 ಸಾವಿರ ಕಾಮಗಾರಿಗಳಲ್ಲಿ ಶೇ.94.56 ರಷ್ಟು ಪೂರ್ಣ ವಾಗಿದ್ದು, ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರಸಕ್ತ ಸಾಲಿನಲ್ಲಿ ರೂಪಿಸಿರುವ 15 ಸಾವಿರ ಕಾಮಗಾರಿಗಳನ್ನು ಪೂರ್ಣಗೊಳಿಸುವ ವಿಶ್ವಾಸವನ್ನು ಜಿಲ್ಲಾ ಪಂಚಾಯಿತಿ ವ್ಯಕ್ತಪಡಿಸಿದೆ.

Translate »