ಸುಲ್ತಾನ್‍ಪುರ: ಅಯೋಧ್ಯೆಯಲ್ಲಿರಾಮಮಂದಿರ ನಿರ್ಮಾಣಕಾರ್ಯ ಮುಂದಿನ ವರ್ಷಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಶ್ರೀರಾಮ ಜನ್ಮ ಭೂಮಿತೀರ್ಥಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್‍ರೈ ಹೇಳಿದ್ದಾರೆ. ಶುಕ್ರವಾರರಕ್ಷಾ ಬಂಧನದ ಅಂಗವಾಗಿ ನಡೆದಕಾರ್ಯಕ್ರಮದಲ್ಲಿ ಮಾತನಾಡಿದರೈಅವರು, ಮುಂದಿನ ವರ್ಷಡಿಸೆಂಬರ್ ವೇಳೆಗೆ ರಾಮಮಂದಿರ ನಿರ್ಮಾಣಕಾರ್ಯ ಪೂರ್ಣಗೊಳ್ಳ ಲಿದೆ. ಆಗ ಭವ್ಯ ಮಂದಿರದಲ್ಲಿಜನರುರಾಮಲಲ್ಲಾನದರ್ಶನ ಪಡೆಯಬಹುದುಎಂದು ತಿಳಿಸಿದರು. “ಸುಲ್ತಾನ್‍ಪುರಅಯೋಧ್ಯೆಗೆ ಸಮೀಪದಲ್ಲಿರುವುದರಿಂದ, ಮುಂದಿನ ವರ್ಷಡಿಸೆಂಬರ್‍ನಲ್ಲಿ ಶ್ರೀರಾಮ ಲಲ್ಲಾನ ‘ದರ್ಶನ’ ಪಡೆಯಲು ನಾನು ಇಲ್ಲಿನಜನರಿಗೆಆಹ್ವಾನ ನೀಡುತ್ತಿದ್ದೇನೆ” ಎಂದುಅವರು ಹೇಳಿದರು. ನಿರ್ಮಾಣಕಾರ್ಯ ಭರದಿಂದ ಸಾಗುತ್ತಿದ್ದು, 2023ರ ಡಿಸೆಂಬರ್‍ನಲ್ಲಿ ಭಕ್ತಾದಿಗಳ ದರ್ಶನಕ್ಕೆದೇವಾಲಯ ಸಿದ್ಧವಾಗಲಿದೆ ಎಂದುರೈ ತಿಳಿಸಿದ್ದಾರೆ….
ನೆರೆ ನೀರು ಬಳಕೆಗೆ ನೂತನ ಜಲ ನೀತಿ
August 13, 2022ಬೆಂಗಳೂರು, ಆ. 12 (ಕೆಎಂಶಿ)- ನೆರೆ ಬಂದ ಸಂದರ್ಭದಲ್ಲಿ ಹರಿದು ಹೋಗುವ ನೀರನ್ನು ಹಿಡಿದಿಟ್ಟು ಮರು ಬಳಕೆ ಮಾಡಿ ಕೊಳ್ಳುವ ನೂತನ ಜಲ ನೀತಿಗೆ ರಾಜ್ಯ ಸಚಿವ ಸಂಪುಟ ಅನು ಮೋದನೆ ನೀಡಿರುವುದಲ್ಲದೆ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ನಿಗದಿಯಾಗಿದ್ದ ವಯೋಮಿತಿ ಸಡಿಲಿಸಿದೆ. ಸಭೆ ನಂತರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧು ಸ್ವಾಮಿ, ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಿ, ಅದನ್ನು ವ್ಯವಸ್ಥಿತವಾಗಿ ಹಾಗೂ ಮಿತವ್ಯಯ ದಲ್ಲಿ ಬಳಕೆ ಮಾಡಿಕೊಳ್ಳಲು ಯೋಜನೆ…
ಮೈಸೂರು, ಚಾಮರಾಜನಗರದಲ್ಲಿ ಜಪಾನಿನ ಸುಜುಕಿ, ಹಿಟಾಚಿ ಸೇರಿದಂತೆ ಹಲವು ಬೃಹತ್ ಕಂಪನಿ ಸ್ಥಾಪನೆ
August 13, 2022ಬೆಂಗಳೂರು, ಆ.12(ಕೆಎಂಶಿ)-ಜಪಾನ್ ಮೂಲದ ಸುಜುಕಿ ಮೋಟಾರ್ಸ್, ಹಿಟಾಚಿ ಸೇರಿದಂತೆ ಬೃಹತ್ ಕಂಪನಿಗಳು ಮೈಸೂರು, ಚಾಮರಾಜನಗರದಲ್ಲಿ ಸ್ಥಾಪಿತಗೊಳ್ಳಲಿವೆ. ಈ ಸಂಸ್ಥೆಗಳಲ್ಲದೆ, ಜಪಾನಿನ 9 ಕಂಪನಿ ಗಳು, ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಸ್ಥಾಪನೆ ಆಗಲಿವೆ. ಸುಮಾರು 60 ರಿಂದ 80 ಸಾವಿರ ಕೋಟಿ ರೂ. ಬಂಡವಾಳ ಹೂಡಲಿದ್ದು, ಇವರಿಗೆ ಅಗತ್ಯವಾದ ಭೂಮಿ ಮತ್ತು ಇತರೆ ಮೂಲ ಸೌಕರ್ಯ ಕಲ್ಪಿಸಿಕೊಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಇಂದಿಲ್ಲಿ ತಿಳಿಸಿದ್ದಾರೆ. ನವೆಂಬರ್ 2 ರಿಂದ 4ರವರೆಗೆ ರಾಜಧಾನಿಯಲ್ಲಿ ನಡೆಯ…
ಎಸಿಬಿ ರದ್ದು
August 12, 2022ಬೆಂಗಳೂರು, ಆ.11-ಮಹತ್ವದ ಬೆಳವಣಿಗೆಯಲ್ಲಿ ಈ ಹಿಂದಿನ ಸಿದ್ದ ರಾಮಯ್ಯರ ಸರ್ಕಾರ 2016ರಲ್ಲಿ ರಚನೆ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು ಕರ್ನಾಟಕ ಹೈಕೋರ್ಟ್ ಗುರುವಾರ ರದ್ದುಗೊಳಿಸಿದ್ದು, ಎಸಿಬಿಗೆ ನೀಡಲಾಗಿದ್ದ ಪೆÇಲೀಸ್ ಠಾಣೆ ಸ್ಥಾನಮಾನವನ್ನು ಮರಳಿ ಲೋಕಾಯುಕ್ತ ಸಂಸ್ಥೆಗೆ ನೀಡಿದೆ. ಎಸಿಬಿ ರಚನೆ ಪ್ರಶ್ನಿಸಿ ಬೆಂಗಳೂರಿನ ವಕೀಲ ಚಿದಾನಂದ ಅರಸ್, ವಕೀಲರ ಸಂಘ ಮತ್ತು ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರಿದ್ದ ವಿಭಾಗೀಯ ಪೀಠವು ವಿಚಾರಣೆಗೆ…
ಮುಡಾಗೆ ಸೇರಿದ 13 ಸಾವಿರ ನಿವೇಶನ, 300 ಎಕರೆ ಭೂಮಿ ಖಾಲಿ ಬಿದ್ದಿವೆ
August 11, 2022ಬೆಂಗಳೂರು, ಆ.10(ಕೆಎಂಶಿ)-ಜನರಿಗೆ ಹಂಚಿಕೆಯಾಗದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಉಳಿದುಕೊಂಡಿದ್ದ 5000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಲಾ ಗಿದೆ ಎಂದು ನಗರಾಭಿ ವೃದ್ಧಿ ಸಚಿವ ಭೈರತಿ ಬಸವ ರಾಜ್ ಇಂದಿಲ್ಲಿ ಬಹಿರಂಗಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿನ ನಗರಾಭಿವೃದ್ಧಿ ಪ್ರಾಧಿ ಕಾರದ ವ್ಯಾಪ್ತಿಯಲ್ಲಿ ಜನರಿಗೆ ಹಂಚಿಕೆ ಯಾಗದೆ ಉಳಿದ ಹದಿಮೂರು ಸಾವಿರ ನಿವೇಶನಗಳು ಮತ್ತು 300 ಎಕರೆಗೂ ಹೆಚ್ಚಿನ ಭೂಮಿಯನ್ನು ಪತ್ತೆ ಹಚ್ಚಲಾ ಗಿದ್ದು,ಉಳಿದ ಅಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಹಂಚಿಕೆಯಾಗದೆ ಉಳಿದಿ ರುವ ಆಸ್ತಿಯ…
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಪೂರ್ಣಗೊಳ್ಳಲು ಇನ್ನೂ 6 ತಿಂಗಳು ಬೇಕು
August 10, 2022ಬೆಂಗಳೂರು, ಆ.9(ಕೆಎಂಶಿ)-ಬೆಂಗಳೂರು-ಮೈಸೂರು ನಡುವಿನ ವಿಶ್ವದರ್ಜೆ ಗುಣಮಟ್ಟದ ರಾಷ್ಟ್ರೀಯ ಹೆದ್ದಾ ರಿಯ ಕಾಮಗಾರಿ ದಸರಾ ವೇಳೆಗೆ ಪೂರ್ಣಗೊಳ್ಳದು. ಡಿಸೆಂಬರ್ ಇಲ್ಲವೇ ಜನವರಿ 2023ಕ್ಕೆ ಈ ರಸ್ತೆ ಪೂರ್ಣ ಗೊಂಡು, ರಾಷ್ಟ್ರಕ್ಕೆ ಸಮರ್ಪಣೆಯಾಗಲಿದೆ. ಮೊದಲು ಬೆಂಗಳೂರು-ಮದ್ದೂರಿನ ನಿಡಘಟ್ಟ 54 ಕಿಲೋ ಮೀಟರ್ ಉದ್ದದ ರಸ್ತೆ ಅಕ್ಟೋಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ, ವಿಶ್ವವಿಖ್ಯಾತ ಮೈಸೂರು ದಸರಾ ವೇಳೆಗೆ ಈ ರಸ್ತೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವುದಾಗಿ ಹೇಳಿಕೆ ನೀಡಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ಬೀಳು…
ವಿಘ್ನೇಶ್ವರನಿಗೆ ವಿಘ್ನನಿವಾರಣೆ!
August 9, 2022ಬೆಂಗಳೂರು, ಆ.8(ಕೆಎಂಶಿ)-ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಮುಕ್ತವಾಗಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಕೋವಿಡ್-19 ಕಾರಣಾಂತರದಿಂದ ಸಾರ್ವಜನಿಕವಾಗಿ ಗಣೇಶೋತ್ಸವ ಸೇರಿದಂತೆ ಇತರೆ ಸಮಾರಂಭಗಳ ಆಚರಣೆಗೆ ಇದ್ದ ನಿರ್ಬಂಧವನ್ನು ಸಂಪೂರ್ಣ ಹಿಂತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟದ ಹಿರಿಯ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳೊಟ್ಟಿಗೆ ಸಮಾಲೋಚನೆ ನಡೆಸಿದ ನಂತರ ಇಂತಹ ತೀರ್ಮಾನಕ್ಕೆ ಬಂದಿದ್ದಾರೆ. ಕೋವಿಡ್-19 ಕಾರಣದಿಂದ ಒಂದು ವರ್ಷ ಗಣೇಶೋ ತ್ಸವ ಹಾದಿ ಬೀದಿಯಲ್ಲಿ ಆಚರಿಸಲು ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ಕಳೆದ ವರ್ಷ…
ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಕೇಂದ್ರಗಳಿಗೆ ಬಾರದವರಿಗೆ `ಕಾಳಜಿ ಕಿಟ್’
August 9, 2022ಬೆಂಗಳೂರು, ಆ.8(ಕೆಎಂಶಿ)- ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಕೇಂದ್ರಗಳಲ್ಲಿ ಉಳಿದು ಕೊಳ್ಳದೇ ಇರುವವರಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆಯನ್ನು ಒಳಗೊಂಡ ಕಾಳಜಿ ಕಿಟ್‍ಗಳನ್ನು ವಿತರಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಹದ ಸಂದರ್ಭದಲ್ಲಿ ಸರ್ಕಾರ ಸ್ಥಾಪಿಸುವ ಪರಿಹಾರ ಕೇಂದ್ರಗಳಲ್ಲಿ ಉಳಿದುಕೊಳ್ಳುವ ಬದಲು ಹಲವರು ಸ್ನೇಹಿತರು, ಬಂಧುಗಳ ಮನೆಯಲ್ಲಿ ಆಶ್ರಯ ಪಡೆಯುತ್ತಾರೆ. ಹೀಗಾಗಿ ಅಂತಹವ ರಿಗೂ ಸಾವಿರ ರೂ ಮೌಲ್ಯದ ಕಾಳಜಿ ಕಿಟ್ ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು. ಪ್ರತಿ ಕಿಟ್‍ನಲ್ಲಿ ದಿನೋಪಯೋಗಿ ವಸ್ತುಗಳಿ…
ಕಾಮನ್‍ವೆಲ್ತ್-2022 ಕ್ರೀಡಾಕೂಟಕ್ಕೆ ವೈಭವದ ತೆರೆ 22 ಚಿನ್ನಸೇರಿ ಭಾರತಕ್ಕೆ61 ಪದಕ
August 9, 2022ಬರ್ಮಿಂಗ್‍ಹ್ಯಾಮ್, ಆ.8- ಇಲ್ಲಿನ ಅಲೆಗ್ಸಾಂಡರ್ ಕ್ರೀಡಾಂಗಣದಲ್ಲಿ ಕಳೆದ 11 ದಿನಗಳಿಂದ ನಡೆಯುತ್ತಿದ್ದ 22ನೇ ಆವೃತ್ತಿಯ ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ಸೋಮವಾರ ವರ್ಣರಂಜಿತ ತೆರೆಬಿದ್ದಿದೆ. ಕೊನೆಯ ದಿನ ಭಾರತ ವಿವಿಧ ವಿಭಾಗ ಗಳಲ್ಲಿ ಒಟ್ಟು 6 ಪದಕಗಳನ್ನು ಗೆಲ್ಲುವ ಮೂಲಕ 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕ ಸೇರಿದಂತೆ 61 ಪದಕಗಳನ್ನು ತನ್ನದಾಗಿಸಿಕೊಂಡು ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಸಿಂಧು ಚಿನ್ನದ ಬೇಟೆ: ಕೊನೆಯ ದಿನ ಬ್ಯಾಡ್ಮಿಂಟನ್ ಸಿಂಗಲ್ಸ್‍ನಲ್ಲಿ ಪಿವಿ ಸಿಂಧು ಕೆನಡಾದ ಎದುರಾಳಿಯ…
ಕಾನೂನು ಸುವ್ಯವಸ್ಥೆ ಸಂಬಂಧ ಸಿಎಂ, ಗೃಹ ಸಚಿವರಿಗೆ ಅಮಿತ್ ಷಾ ತರಾಟೆ
August 5, 2022ಬೆಂಗಳೂರು, ಆ.4(ಕೆಎಂಶಿ)- ಪಕ್ಷದ ಕಾರ್ಯಕರ್ತರೇ ತಿರುಗಿ ಬೀಳುವಷ್ಟು ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿ ರುವುದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯ ಸರ್ಕಾರ ವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದ ಅಮಿತ್ ಷಾ ತಾವು ತಂಗಿದ್ದ ಹೋಟೆಲ್‍ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಕರೆಸಿಕೊಂಡು ಇತ್ತೀಚಿನ ಸರಣಿ ಹತ್ಯೆಗೆ ಸಂಬಂಧಿಸಿದಂತೆ ಸಂಪೂರ್ಣ ವರದಿ ಪಡೆದರು. ರಾಜ್ಯ ಸರ್ಕಾರದ ಮಾಹಿತಿ…