ಬೆಂಗಳೂರು: ನಮ್ಮ ನೆರೆಹೊರೆಯಲ್ಲಿ ಸ್ನೇಹ ಮತ್ತು ಶಾಂತಿ ಸ್ಥಾಪಿಸುವ ಸ್ವತಂತ್ರ ನೀತಿಯನ್ನು ಅಭಿವೃದ್ಧಿಪಡಿಸುವುದರ ಜೊತೆಗೆ, ಅಫ್ಘಾನಿ ಸ್ತಾನದಲ್ಲಿನ ಬೆಳವಣಿಗೆಗಳಿಗೆ ಭಾರತ ಮಾನವೀಯ ರೀತಿ ಯಲ್ಲಿ ಪ್ರತಿಕ್ರಿಯಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮಂಗಳವಾರ ಹೇಳಿದ್ದಾರೆ. ಆಫ್ಘಾನಿಸ್ತಾನದ ವರದಿಗಳು ಹೇಗೆ ಭಯ ಮತ್ತು ಅನಿಶ್ಚಿತತೆ ಆ ದೇಶವನ್ನು ಆವರಿಸಿದೆ ಎಂಬುದನ್ನು ತೋರಿಸುತ್ತದೆ. ಇದು ಭಾರತ ಮತ್ತು ಇಡೀ ಪ್ರದೇಶಕ್ಕೆ ಕಷ್ಟದ ಕ್ಷಣವಾಗಿದೆ. ನಾವು ನಮ್ಮ ನೆರೆಹೊರೆಯಲ್ಲಿ ಸ್ನೇಹ ಮತ್ತು ಶಾಂತಿಯನ್ನು ಸ್ಥಾಪಿಸುವ ಸ್ವತಂತ್ರ ನೀತಿಯನ್ನು ಅಭಿವೃದ್ಧಿಪಡಿಸುವುದರ…
ಕೋವಿಡ್ ಮುಕ್ತರು ತಕ್ಷಣ ಕ್ಷಯ ಪರೀಕ್ಷೆ ಮಾಡಿಸಿ
August 18, 2021ಬೆಂಗಳೂರು, ಆ.17(ಕೆಎಂಶಿ)-ಕೋವಿಡ್ ಸೋಂಕಿನಿಂದ ಗುಣಮುಖರಾದವರು ತಕ್ಷಣವೇ ಕ್ಷಯರೋಗ ಪರೀಕ್ಷೆ ಮಾಡಿಸಿ ಕೊಳ್ಳಬೇಕೆಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‍ನಿಂದ ಶ್ವಾಸಕೋಶಕ್ಕೆ ಹೆಚ್ಚು ಹಾನಿ ಉಂಟು ಮಾಡುತ್ತದೆ. ಕ್ಷಯರೋಗವು ಇದಕ್ಕೆ ಸಂಬಂಧಪಟ್ಟಿದ್ದೇ ಆಗಿರುವುದರಿಂದ ಸೋಂಕಿತಕ್ಕೆ ಒಳಗಾದವರು ಮುನ್ನೆಚ್ಚರಿಕೆಯಾಗಿ ಪರೀಕ್ಷೆಗೆ ಒಳ ಪಡಿಸಿಕೊಂಡು ಮುಂದಾಗುವ ಅನಾಹುತ ತಪ್ಪಿಸಿ ಕೊಳ್ಳುವಂತೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಇದುವರೆಗೂ 28 ಲಕ್ಷ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರಲ್ಲಿ ಕೆಲವರಿಗೆ ಪರೀಕ್ಷೆ ಮಾಡಿದಾಗ ಶೇಕಡ 3.9ರಷ್ಟು ಮಂದಿಗೆ ಕ್ಷಯರೋಗ…
ಬೆಂಗಳೂರು ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಎರಡು ಐಷಾರಾಮಿ ಕಾರಿಗೆ ಬೆಂಕಿ: ಸಂಪೂರ್ಣ ಹಾನಿ
August 13, 2021ಬೆಂಗಳೂರು, ಆ.12-ಬೆಂಗಳೂರಿನ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಮನೆ ಮುಂದೆ ನಿಲ್ಲಿಸಿದ್ದ ಎರಡು ಐಷಾರಾಮಿ ಕಾರುಗಳಿಗೆ ಗುರುವಾರ ಮುಂಜಾನೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಮುಂಜಾನೆ 1.25ರಲ್ಲಿ ಮನೆಯ ಹಿಂಬದಿ ಕಾಂಪೌಂಡ್ ಹಾರಿ ಒಳ ಪ್ರವೇಶಿಸಿರುವ ಮೂವರು ದುಷ್ಕರ್ಮಿ ಗಳು, ಮನೆಯ ಗಾರ್ಡನ್‍ನ ಗಿಡಗಳ ಮಧ್ಯೆ ನುಸುಳಿ ಬಂದು ಎರಡೂ ಕಾರುಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿ ದ್ದಾರೆ. ಈ ಕೃತ್ಯವನ್ನು ಕೇವಲ 2 ನಿಮಿಷಗಳಲ್ಲಿ ಮುಗಿಸಲಾಗಿದೆ. ಕಾರುಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಟೈರ್‍ಗಳು…
1ರಿಂದ 8ನೇ ತರಗತಿ ಆರಂಭ ಸಂಬಂಧ ಆ.30ಕ್ಕೆ ನಿರ್ಧಾರ
August 13, 2021ಬೆಂಗಳೂರು, ಆ.12(ಕೆಎಂಶಿ)- ಒಂದರಿಂದ 8ನೇ ತರಗÀತಿಗಳನ್ನು ಪ್ರಾರಂಭಿಸುವ ಸಂಬಂಧ ಆ.30ರಂದು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಆ.30ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಆ ಸಭೆಯಲ್ಲಿ ಮಕ್ಕಳ ತಜ್ಞರು ಹಾಗೂ ತಜ್ಞರ ಸಲಹಾ ಸಮಿತಿಯ ಶಿಫಾರಸ್ಸುಗಳನ್ನು ಆಧರಿಸಿ, ಸೆಪ್ಟೆಂಬರ್ ಮೊದಲ ವಾರದಲ್ಲಿ ಶಾಲೆಗಳನ್ನು ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗು ವುದು. ಶಾಲೆಗಳನ್ನು ಆರಂಭಿಸುವಂತೆ ದಿನದಿಂದ…
ಜೆಡಿಎಸ್ ಟಾರ್ಗೆಟ್ ಮಿಷನ್-123
August 13, 2021ಬೆಂಗಳೂರು, ಆ.12- 2023ರಲ್ಲಿ ನಡೆಯ ಲಿರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‍ನ ಟಾರ್ಗೆಟ್ `ಮಿಷನ್-123’ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಆ ಗುರಿಯನ್ನು ಹೇಗೆ ಮುಟ್ಟು ತ್ತೇವೆ ಎಂಬುದನ್ನು ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದರು. ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕರ್ನಾ ಟಕದಲ್ಲಿ ಜೆಡಿಎಸ್ ಅನ್ನು ಮುಗಿಸೇ ಬಿಟ್ಟಿ ದ್ದೇವೆ ಎಂದವರು ಈಗ ಜೆಡಿಎಸ್ ನೆರಳಿ ನಲ್ಲೇ ರಾಜಕಾರಣ ಮಾಡಬೇಕಾದಂತಹ ಅನಿವಾರ್ಯ ಎದುರಾಗಿದೆ. ನಮ್ಮ ಪಕ್ಷವನ್ನು ನೋಡಿ ಕಾಂಗ್ರೆಸ್ ಮತ್ತು…
ಗಂಗಾ ಕಲ್ಯಾಣ ಪಂಪ್‍ಸೆಟ್‍ಗಳಿಗೆ ತಕ್ಷಣ ಕರೆಂಟ್ ಕೊಡಿ
August 12, 2021ಬೆಂಗಳೂರು, ಆ.11(ಕೆಎಂಶಿ)- ವಿದ್ಯುತ್ ಕ್ಷೇತ್ರ ದಲ್ಲಿ ಸ್ವಾವಲಂಬಿ ಆಗುವುದರ ಜೊತೆಗೆ ದೂರದೃಷ್ಟಿ ಯನ್ನು ಇಟ್ಟುಕೊಂಡು ಸಮರ್ಥವಾಗಿ ವಿದ್ಯುತ್ ನಿರ್ವಹಣೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬುಧವಾರ ಸೂಚನೆ ನೀಡಿದರು. ಇಂಧನ ಇಲಾಖಾ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಮಾತನಾಡಿದ ಅವರು, ವಿದ್ಯುತ್ ಉತ್ಪಾ ದನೆ ಮತ್ತು ನಿರ್ವಹಣೆ ಇನ್ನೂ ಬಹಳ ವ್ಯವಸ್ಥಿತವಾಗಿ ಮಾಡಬೇಕು. ಮಾರು ಕಟ್ಟೆ ಸ್ಥಿತಿಗತಿಯನ್ನು ಆಧರಿಸಿ ಹೆಚ್ಚಿನ ದರಕ್ಕೆ ವಿದ್ಯುತ್ತನ್ನು ಮಾರಾಟ ಮಾಡುವಂತಾಗಬೇಕು. ಕರ್ನಾಟಕ ವಿದ್ಯುತ್ ನಿಗಮದಿಂದ ವಿದ್ಯುತ್ ಉತ್ಪಾದನೆ ಅತ್ಯಂತ ದಕ್ಷತೆ ಯಿಂದ…
ಆರ್ಭಟಿಸಿ ಹಾರಿ ಬಂದ ಆನಂದ್‍ಸಿಂಗ್ ಸಿಎಂ, ಮಾಜಿ ಸಿಎಂ ಭೇಟಿ ನಂತರ ಕೂಲ್…!
August 12, 2021ಬೆಂಗಳೂರು, ಆ.11- ತನಗೆ ಪ್ರಬಲವಾದ ಖಾತೆ ಕೊಡದಿದ್ದರೆ ರಾಜೀನಾಮೆ ನೀಡುವುದಾಗಿ ಪರೋಕ್ಷವಾಗಿ ಎಚ್ಚರಿಕೆ ನೀಡುವ ಮೂಲಕ ಬಂಡಾಯವೆದ್ದಿದ್ದ ಪ್ರವಾಸೋದ್ಯಮ ಸಚಿವ ಆನಂದ್‍ಸಿಂಗ್ ಅವರ ಕೋಪವನ್ನು ತಾತ್ಕಾಲಿಕ ವಾಗಿ ಶಮನ ಮಾಡುವಲ್ಲಿ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಬುಧವಾರ ರಾತ್ರಿ ಯಶಸ್ವಿಯಾದರು. ಮುಖ್ಯಮಂತ್ರಿ ಬದಲಾವಣೆಯಾಗಿ ಸಂಪುಟ ರಚನೆಯಾದಾಗ ತಮಗೆ ಪ್ರವಾಸೋದ್ಯಮ ಖಾತೆ ನೀಡಿದ್ದರಿಂದ ಅಸಮಾಧಾನ ಗೊಂಡಿದ್ದ ಆನಂದ್‍ಸಿಂಗ್ ಸಿಎಂ ಮತ್ತು ಪಕ್ಷದ ವರಿಷ್ಠರ ವಿರುದ್ಧ ಬಂಡಾಯವೆದ್ದಿದ್ದರು. ಇಂದು ಬೆಳಗ್ಗೆ ಹೊಸ ಪೇಟೆಯ ವೇಣುಗೋಪಾಲಸ್ವಾಮಿ ದೇವಸ್ಥಾನದ ಜೀರ್ಣೋ ದ್ಧಾರ ಕಾರ್ಯಕ್ರಮದಲ್ಲಿ…
ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ಕೇಂದ್ರಗಳಾಗಬಾರದು
August 11, 2021ಬೆಂಗಳೂರು, ಆ.10(ಕೆಎಂಶಿ)-ಆರ್ಥಿಕ ಅಪರಾಧ, ಮಾದಕ ವಸ್ತು ಹಾಗೂ ಡಾರ್ಕ್ ವೆಬ್ ಗಳ ಮೇಲೆ ಹದ್ದಿನಕಣ್ಣಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪೊಲೀಸ್ ಠಾಣೆಗಳು ಜನಸ್ನೇಹಿ ಆಗಿರಬೇಕೇ ಹೊರತು ರಿಯಲ್ ಎಸ್ಟೇಟ್ ಕೇಂದ್ರಗಳಾಗಬಾ ರದು, ಸಮಾಜಕ್ಕೆ ಮಾರಕವಾಗುವ ಪ್ರಕರಣಗಳಲ್ಲಿ ಶಾಮೀಲಾಗುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕೆಲವು ಸವಾಲು ಗಳನ್ನು ಎದುರಿಸಬೇಕಾಗುತ್ತದೆ, ಅದಕ್ಕೆ ಈಗಿ ನಿಂದಲೇ ಸಿದ್ಧರಾಗಿ. ಜೂಜು,…
ಉಚಿತ ಎಲ್‍ಪಿಜಿ ಸಂಪರ್ಕ ನೀಡುವ ಉಜ್ವಲ ಯೋಜನೆ 2.0ಗೆ ಪ್ರಧಾನಿ ಮೋದಿ ಚಾಲನೆ
August 11, 2021ಲಖನೌ: ಪ್ರಧಾನ ಮಂತ್ರಿ ಉಜ್ವಲ ಯೋಜನೆ(ಪಿಎಂಯುವೈ)ಯ ಎರಡನೇ ಹಂತವಾದ ಉಜ್ವಲ 2.0ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉತ್ತರ ಪ್ರದೇಶದ ಮಹೋಬದಲ್ಲಿ ಎಲ್‍ಪಿಜಿ ಸಂಪರ್ಕಗಳನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಉದ್ಘಾಟನೆಯ ನಂತರ ಪ್ರಧಾನಿ ಮೋದಿ ಅವರು ವರ್ಚುವಲ್ ಮೂಲಕ 10 ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕಗಳನ್ನು ವಿತರಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ಪರವಾಗಿ ಮಹಿಳೆಯರಿಗೆ ದಾಖಲೆಗಳನ್ನು ನೀಡಿದರು. 2016 ರಲ್ಲಿ ಆರಂಭವಾದ ಉಜ್ವಲ 1.0 ಸಮಯದಲ್ಲಿ, ಬಿಪಿಎಲ್ ಕುಟುಂಬದ…
ಸಚಿವ ಈಶ್ವರಪ್ಪ ಆವಾಚ್ಯ ಪದ ಬಳಕೆ: ಕಾಂಗ್ರೆಸ್ ವಾಗ್ದಾಳಿ
August 11, 2021ಬೆಂಗಳೂರು, ಆ.10(ಕೆಎಂಶಿ)-ಕಾಂಗ್ರೆಸ್ ಮುಖಂಡರ ವಿರುದ್ಧ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಬಳಸಿದ ಪದ ಭಾರೀ ವಿವಾದ ಹುಟ್ಟುಹಾಕಿದೆ. ವಿಧಾನಸೌಧದ ಸಮೀಪ ಸುದ್ದಿಗಾರರೊಂದಿಗೆ ಮಾತನಾ ಡುತ್ತಾ, ಕಾಂಗ್ರೆಸ್‍ನವರ ಹೇಳಿಕೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ‘ಯಾರೋ..ಕುಡುಕ, ಸೂ… ಮಕ್ಳು.. ಹೇಳುತ್ತಾರೆ..’ ಎಂದು ಕಿಡಿಕಾರಿದರು. ತಕ್ಷಣವೇ ಮಾತಿನ ಭರದಲ್ಲಿ ಬಳಸಿದ ಅವಾಚ್ಯ ಶಬ್ದದಿಂದ ಎಚ್ಚೆತ್ತುಕೊಂಡು, ಅದು ಕೋಪದಲ್ಲಿ ಬಂತು, ಈ ಮಾತನ್ನು ವಾಪಸು ಪಡೆಯುತ್ತೇನೆ. ದಯವಿಟ್ಟು ಅದನ್ನು ಮುಂದುವರೆಸುವುದು ಬೇಡ ಎಂದರು. ಶಿವಮೊಗ್ಗದ ಬಿಜೆಪಿ ಕಾರ್ಯಕರ್ತರ ಸಭೆ ಯಲ್ಲಿ…