ಆಫ್ಘಾನ್ ಬೆಳವಣಿಗೆಗಳಿಗೆ ಭಾರತ ಮಾನವೀಯ ರೀತಿ ಪ್ರತಿಕ್ರಿಯಿಸಬೇಕು
News

ಆಫ್ಘಾನ್ ಬೆಳವಣಿಗೆಗಳಿಗೆ ಭಾರತ ಮಾನವೀಯ ರೀತಿ ಪ್ರತಿಕ್ರಿಯಿಸಬೇಕು

August 18, 2021

ಬೆಂಗಳೂರು: ನಮ್ಮ ನೆರೆಹೊರೆಯಲ್ಲಿ ಸ್ನೇಹ ಮತ್ತು ಶಾಂತಿ ಸ್ಥಾಪಿಸುವ ಸ್ವತಂತ್ರ ನೀತಿಯನ್ನು ಅಭಿವೃದ್ಧಿಪಡಿಸುವುದರ ಜೊತೆಗೆ, ಅಫ್ಘಾನಿ ಸ್ತಾನದಲ್ಲಿನ ಬೆಳವಣಿಗೆಗಳಿಗೆ ಭಾರತ ಮಾನವೀಯ ರೀತಿ ಯಲ್ಲಿ ಪ್ರತಿಕ್ರಿಯಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮಂಗಳವಾರ ಹೇಳಿದ್ದಾರೆ.

ಆಫ್ಘಾನಿಸ್ತಾನದ ವರದಿಗಳು ಹೇಗೆ ಭಯ ಮತ್ತು ಅನಿಶ್ಚಿತತೆ ಆ ದೇಶವನ್ನು ಆವರಿಸಿದೆ ಎಂಬುದನ್ನು ತೋರಿಸುತ್ತದೆ. ಇದು ಭಾರತ ಮತ್ತು ಇಡೀ ಪ್ರದೇಶಕ್ಕೆ ಕಷ್ಟದ ಕ್ಷಣವಾಗಿದೆ. ನಾವು ನಮ್ಮ ನೆರೆಹೊರೆಯಲ್ಲಿ ಸ್ನೇಹ ಮತ್ತು ಶಾಂತಿಯನ್ನು ಸ್ಥಾಪಿಸುವ ಸ್ವತಂತ್ರ ನೀತಿಯನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಮಾನವೀಯ ರೀತಿಯಲ್ಲಿ ಪ್ರತಿಕ್ರಿಯಿಸಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರು ಟ್ವೀಟ್ ಮಾಡಿದ್ದಾರೆ.

ಅಫ್ಘಾನಿಸ್ತಾನದ ರಾಜಧಾನಿಯಲ್ಲಿ ಭದ್ರತಾ ಪರಿಸ್ಥಿತಿಯು ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ಕಾಬೂಲ್‍ನಲ್ಲಿರುವ ರಾಯಭಾರ ಕಚೇರಿಯಲ್ಲಿರುವ ಭಾರತೀಯ ರಾಯಭಾರಿ ಮತ್ತು ಸಿಬ್ಬಂದಿಯನ್ನು ಭಾರತ ಮಂಗಳವಾರ ತವರಿಗೆ ಕರೆತಂದಿದೆ.

ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಭಾನುವಾರ ಅಫ್ಘಾನಿಸ್ತಾನದಿಂದ ಪಲಾಯನ ಮಾಡಿದ ಕೆಲವು ಗಂಟೆಗಳ ನಂತರ, ತಾಲಿಬಾನ್ ಕಾಬೂಲ್ ಮೇಲೆ ಹಿಡಿತ ಸಾಧಿಸಿತು.

Translate »