ಉಚಿತ ಎಲ್‍ಪಿಜಿ ಸಂಪರ್ಕ ನೀಡುವ ಉಜ್ವಲ ಯೋಜನೆ 2.0ಗೆ ಪ್ರಧಾನಿ ಮೋದಿ ಚಾಲನೆ
News

ಉಚಿತ ಎಲ್‍ಪಿಜಿ ಸಂಪರ್ಕ ನೀಡುವ ಉಜ್ವಲ ಯೋಜನೆ 2.0ಗೆ ಪ್ರಧಾನಿ ಮೋದಿ ಚಾಲನೆ

August 11, 2021

ಲಖನೌ: ಪ್ರಧಾನ ಮಂತ್ರಿ ಉಜ್ವಲ ಯೋಜನೆ(ಪಿಎಂಯುವೈ)ಯ ಎರಡನೇ ಹಂತವಾದ ಉಜ್ವಲ 2.0ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉತ್ತರ ಪ್ರದೇಶದ ಮಹೋಬದಲ್ಲಿ ಎಲ್‍ಪಿಜಿ ಸಂಪರ್ಕಗಳನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.

ಉದ್ಘಾಟನೆಯ ನಂತರ ಪ್ರಧಾನಿ ಮೋದಿ ಅವರು ವರ್ಚುವಲ್ ಮೂಲಕ 10 ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕಗಳನ್ನು ವಿತರಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ಪರವಾಗಿ ಮಹಿಳೆಯರಿಗೆ ದಾಖಲೆಗಳನ್ನು ನೀಡಿದರು.

2016 ರಲ್ಲಿ ಆರಂಭವಾದ ಉಜ್ವಲ 1.0 ಸಮಯದಲ್ಲಿ, ಬಿಪಿಎಲ್ ಕುಟುಂಬದ ಐದು ಕೋಟಿ ಮಹಿಳಾ ಸದಸ್ಯರಿಗೆ ಎಲ್‍ಪಿಜಿ ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಹೊಂದಲಾಗಿತ್ತು. ತರುವಾಯ ಈ ಯೋಜನೆಯನ್ನು 2018 ರ ಏಪ್ರಿಲ್ ನಲ್ಲಿ ಎಸ್‍ಸಿ ಮತ್ತು ಎಸ್‍ಟಿ ಸಮುದಾಯಗಳಿಗೆ ಹಾಗೂ ಅರಣ್ಯವಾಸಿಗಳಂತಹ ಇನ್ನೂ ಏಳು ವರ್ಗಗಳ ಮಹಿಳಾ ಫಲಾನುಭವಿಗಳಿಗೆ ವಿಸ್ತರಿಸಲಾಯಿತು. ಅಲ್ಲದೆ, ಗುರಿಯನ್ನು ಐದು ಕೋಟಿ ಬದಲು ಎಂಟು ಕೋಟಿ ಐPಉ ಸಂಪರ್ಕಗಳಿಗೆ ಪರಿಷ್ಕರಿಸಲಾಯಿತು ಮತ್ತು ನಿಗದಿತ ಸಮಯಕ್ಕಿಂತ ಏಳು ತಿಂಗಳು ಮುಂಚಿತ ವಾಗಿಯೇ ಆಗಸ್ಟ್ 2019 ರಲ್ಲಿ ಆ ಗುರಿ ಸಾಧಿಸಲಾಗಿದೆ. ಹಳ್ಳಿಗಳಲ್ಲಿ ಇನ್ನೂ ಮಹಿಳೆಯರು ಉರುವಲನ್ನೇ ಉಪಯೋಗಿಸಿ ಅಡುಗೆ ಮಾಡುತ್ತಿದ್ದಾರೆ. ಆ ಕಷ್ಟವನ್ನು ತಪ್ಪಿಸಿ, ಗ್ರಾಮೀಣ ಪ್ರದೇಶಗಳಿಗೂ ಎಲ್‍ಪಿಜಿ ಗ್ಯಾಸ್ ಕನೆಕ್ಷನ್ ಕೊಡುವ ಉದ್ದೇಶದೊಂದಿಗೆ, ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಈ ಉಜ್ವಲ ಯೋಜನೆಯನ್ನು ಪರಿಚಯಿಸಿತು.

 

Translate »