ಯೆಸ್ ಬ್ಯಾಂಕ್‍ನ ರಾಣಾಗೆ ಸಿಬಿಐ ಶಾಕ್: ಮುಂಬೈನ ಮನೆ, ಕಚೇರಿಗಳ ಮೇಲೆ ಸಿಬಿಐ ರೇಡ್
ಮೈಸೂರು

ಯೆಸ್ ಬ್ಯಾಂಕ್‍ನ ರಾಣಾಗೆ ಸಿಬಿಐ ಶಾಕ್: ಮುಂಬೈನ ಮನೆ, ಕಚೇರಿಗಳ ಮೇಲೆ ಸಿಬಿಐ ರೇಡ್

March 10, 2020

ಮುಂಬೈ,ಮಾ.9-ಯೆಸ್‍ಬ್ಯಾಂಕ್ ದಿವಾಳಿ ಎಬ್ಬಿಸಿದ ಸಂಸ್ಥಾಪಕ ರಾಣಾ ಕಪೂರ್‍ಗೆ ಸಿಬಿಐ ಶಾಕ್ ನೀಡಿದೆ. ಮುಂಬೈನಲ್ಲಿ ರಾಣಾ ಕಪೂರ್‍ಗೆ ಸೇರಿದ ಮನೆ ಹಾಗೂ ಕಚೇರಿಗಳು ಸೇರಿ ಒಟ್ಟು 7 ಸ್ಥಳಗಳಲ್ಲಿ ಸೋಮವಾರ ಸಿಬಿಐ ದಾಳಿ ನಡೆಸಿದೆ. ರಾಣಾ ಕಪೂರ್, ದಿವಾನ್ ಹೌಸಿಂಗ್ ಮತ್ತು ಫೈನಾನ್ಸ್ ಲಿಮಿಟೆಡ್ ಕಂಪನಿಯಿಂದ ಸುಮಾರು 600 ಕೋಟಿ ರೂಪಾಯಿ ಲಂಚ ಪಡೆದಿರುವ ಆರೋಪದ ಮೇಲೆ ಸಿಬಿಐ ಅಧಿ ಕಾರಿಗಳ ತಂಡ ದಾಳಿಮಾಡಿ ಶೋಧಿಸಿದೆ. ರಾಣಾ ಕಪೂರ್(62), ಡಿಹೆಚ್‍ಎಫ್‍ಎಲ್‍ನ ಪ್ರವರ್ತಕ ಕಪಿಲ್ ವಧಾವನ್ ಅವರ ಡಿಹೆಚ್ ಎಫ್‍ಎಲ್ ಕಂಪನಿಗೆ ಯೆಸ್ ಬ್ಯಾಂಕ್ ಮೂಲಕ ಅಕ್ರಮವಾಗಿ ಹಣಕಾಸಿನ ನೆರವು ನೀಡಿದ್ದರು. ಈ ಮೂಲಕ ಕ್ರಿಮಿನಲ್ ಪಿತೂರಿ ನಡೆಸಿ ರಾಣಾ ಮತ್ತು ಕುಟುಂಬದ ಸದಸ್ಯರು ವೈಯಕ್ತಿಕ ಲಾಭ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಬಿಐ ಎಫ್‍ಐಆರ್‍ನಲ್ಲಿ ತಿಳಿಸಿರುವಂತೆ ಈ ಹಗರಣ 2018ರ ಏಪ್ರಿಲ್ ಮತ್ತು ಜೂನ್ ತಿಂಗ ಳಲ್ಲಿ ನಡೆದಿದ್ದು, ಯೆಸ್ ಬ್ಯಾಂಕ್ ಸುಮಾರು 3,700 ಕೋಟಿಯಷ್ಟು ಸಾಲವನ್ನು ಡಿಎಚ್ ಎಫ್‍ಎಲ್ ಕಂಪನಿಗೆ ಅಲ್ಪಾವಧಿಗೆ ಡಿಬೆಂಚರ್ ಮೂಲಕ ನೀಡಿತ್ತು. ಇದಕ್ಕಾಗಿ ಕಪಿಲ್ ವಾಧ ವನ್ 600 ಕೋಟಿ ರೂಪಾಯಿಯನ್ನ ಕಿಕ್ ಬ್ಯಾಕ್ ರೂಪದಲ್ಲಿ ರಾಣಾ ಕಪೂರ್ ಮತ್ತು ಅವರ ಕುಟುಂಬ ಸದಸ್ಯರ ಒಡೆತನದ ಡುಇಟ್ ಅಬರ್ನ್ ವೆಂಚರ್ಸ್ (ಇಂಡಿಯಾ) ಪ್ರೈವೇಟ್ ಲಿಮಿ ಡೆಟ್‍ಗೆ ಸಂದಾಯ ಮಾಡಿದ್ದಾರೆ ಎಂದು ಆರೋ ಪಿಸಲಾಗಿದೆ. ಭಾನುವಾರ ಇಡಿ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ರಾಣಾ ಕಪೂರ್ ಅವರನ್ನ ಬಂಧಿಸಿತ್ತು. ರಾಣಾರನ್ನು ವಿಚಾರಣೆಗಾಗಿ ಮುಂಬೈ ಕೋರ್ಟ್ ಬುಧವಾರದ ವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ.

Translate »