ಆದಿತ್ಯ ಆಳ್ವ ಜೊತೆ ಒಡನಾಟ, ವಿಚಾರಣೆಗೆ ಸಹಕರಿಸದ ಹಿನ್ನೆಲೆ: ಮುತ್ತಪ್ಪ ರೈ ಪುತ್ರ ರಿಕ್ಕಿ ಸಿಸಿಬಿ ವಶಕ್ಕೆ
ಮೈಸೂರು

ಆದಿತ್ಯ ಆಳ್ವ ಜೊತೆ ಒಡನಾಟ, ವಿಚಾರಣೆಗೆ ಸಹಕರಿಸದ ಹಿನ್ನೆಲೆ: ಮುತ್ತಪ್ಪ ರೈ ಪುತ್ರ ರಿಕ್ಕಿ ಸಿಸಿಬಿ ವಶಕ್ಕೆ

October 7, 2020

ಬೆಂಗಳೂರು, ಅ.6- ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಂಬೆಳಗ್ಗೆ ದಿವಂಗತ ಮುತ್ತಪ್ಪ ರೈ ಮಗ ರಿಕ್ಕಿ ರೈ ಮನೆ ಮೇಲೆ ಸಿಸಿಬಿ ದಾಳಿ ಮಾಡಿತ್ತು. ಹೆಚ್ಚಿನ ವಿಚಾ ರಣೆ ಹಿನ್ನೆಲೆ ರಿಕ್ಕಿ ರೈಯನ್ನು ಸಿಸಿಬಿ ಪೆÇಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಯಾಂಡಲ್‍ವುಡ್ ಡ್ರಗ್ ಕೇಸ್‍ನಲ್ಲಿ ಬಂಧಿತ ರಾಗಿರುವ ಡ್ರಗ್ ಪೆಡ್ಲರ್‍ಗಳ ಜೊತೆ ಸಂಪರ್ಕ ಹೊಂದಿದ್ದ ಮತ್ತು ಡ್ರಗ್ ಕೇಸ್‍ನಲ್ಲಿ ತಲೆ ಮರೆಸಿ ಕೊಂಡಿರುವ ಆದಿತ್ಯ ಆಳ್ವ ಜೊತೆ ನಿಕಟ ಒಡನಾಟ ಹೊಂದಿದ್ದ ಆರೋಪದಲ್ಲಿ ಇಂದು ಮಾಜಿ ಡಾನ್ ಮುತ್ತಪ್ಪ ರೈ ಮಗನ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ದ್ದರು. ವಿಚಾರಣೆಗೆ ಸರಿಯಾಗಿ ಸ್ಪಂದಿಸದ ಮುತ್ತಪ್ಪ ರೈ ಅವರ ಮಗ ರಿಕ್ಕಿ ರೈಯನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.  ಆದಿತ್ಯ ಆಳ್ವ ಬಗ್ಗೆ ಪ್ರಶ್ನಿಸಿದರೆ ಗೊತ್ತಿಲ್ಲ ಎಂದು ಹಾರಿಕೆ ಉತ್ತರ ನೀಡಿದ ರಿಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

 

 

 

Translate »