ಕೆ.ರಘುರಾಮ ವಾಜಪೇಯಿ ಅವರಿಗೆ ‘ಗಾಂಧಿಸ್ಮøತಿ’ ಪ್ರಶಸ್ತಿ ಪ್ರದಾನ
ಮೈಸೂರು

ಕೆ.ರಘುರಾಮ ವಾಜಪೇಯಿ ಅವರಿಗೆ ‘ಗಾಂಧಿಸ್ಮøತಿ’ ಪ್ರಶಸ್ತಿ ಪ್ರದಾನ

October 7, 2020

ಮೈಸೂರು,ಅ.6-ಮಹಾತ್ಮ ಗಾಂಧೀಜಿ 150ನೇ ಜಯಂತಿ ಅಂಗವಾಗಿ ಮೈಸೂರಿನ ಹಿರಿಯ ಸಮಾಜ ಸೇವಾ ಧುರೀಣ–ಗಾಂಧಿವಾದಿ ಡಾ.ಕೆ. ರಘುರಾಮ ವಾಜಪೇಯಿ ಅವರಿಗೆ ಬೆಂಗಳೂರಿನ ಅಮರ ಬಾಪು ಚಿಂತನ ವತಿಯಿಂದ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ‘ಗಾಂಧಿಸ್ಮøತಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿದೇರ್ಶಕ ಹೆಚ್.ಚೆನ್ನಪ್ಪ ಅವರು ಡಾ.ಕೆ.ರಘುರಾಮ್ ವಾಜಪೇಯಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಬಾಪು ಚಿಂತನದ ಗುರುರಾಜ ಪೋಶೆಟ್ಟಿಹಳ್ಳಿ ಮಾತನಾಡಿ, ಪ್ರಸ್ತುತದಲ್ಲಿ ಪ್ರಾಯೋಗಿಕವಾದ ಗಾಂಧಿವಾಣಿಯನ್ನು ತಲುಪಿಸುವ ಉದ್ದೇಶದಿಂದ ಈ ಕಾರ್ಯ ಆರಂಭಿಸಲಾಗಿದೆ ಎಂದರು. ಮೈಸೂರು ಜಿಲ್ಲಾ ಸರ್ವೋದಯ ಮಂಡಲಿ ಅಧ್ಯಕ್ಷೆ ಲೀಲಾ ಶಿವಕುಮಾರ್ ಮಾತನಾಡಿ, ಮಹಾತ್ಮರ ಚಿಂತನೆಗಳು ಭಾಷಣಕ್ಕಷ್ಟೇ ಸೀಮಿತ ವಾಗಿದೆ. 150ನೇ ಬಾಪು ಜಯಂತಿಯ ವರ್ಷದ ಸಮಾರೋಪದಲ್ಲಿ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯಿಂದ ಗಾಂಧಿ ಚಿಂತನೆ ಹಾಗೂ ರಚನಾತ್ಮಕ ಕೆಲಸ ಮಾಡುವ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ಘೋಷಣೆ ಮಾಡದಿರುವ ಕುರಿತು ವಿಷಾದ ವ್ಯಕ್ತಪಡಿಸಿದರು.

Translate »