ಮನೆಯಲ್ಲೇ ಯೋಗ ಮಾಡಿ 6ನೇ ವಿಶ್ವ ಯೋಗ ದಿನ ಆಚರಿಸಿ ಸಂಭ್ರಮಿಸಿದ ಯೋಗಪಟುಗಳು
ಮೈಸೂರು

ಮನೆಯಲ್ಲೇ ಯೋಗ ಮಾಡಿ 6ನೇ ವಿಶ್ವ ಯೋಗ ದಿನ ಆಚರಿಸಿ ಸಂಭ್ರಮಿಸಿದ ಯೋಗಪಟುಗಳು

June 22, 2020

ಮೈಸೂರು, ಜೂ.21(ಎಂಟಿವೈ)- ಕೊರೊನಾ ಹಿನ್ನೆಲೆಯಲ್ಲಿ ಮೈಸೂರಲ್ಲಿ ಭಾನುವಾರ ಯೋಗ ಪಟು ಗಳು ತಮ್ಮ ಮನೆಯಲ್ಲಿಯೇ ವಿವಿಧ ಆಸನಗಳನ್ನು ಪ್ರದರ್ಶಿಸುವ ಮೂಲಕ ಆರನೇ `ವಿಶ್ವ ಯೋಗ ದಿನ’ವನ್ನು ಸಂಭ್ರಮದಿಂದ ಆಚರಿಸಿದರು.

ಜಿಲ್ಲಾಡಳಿತ, ಯೋಗ ಒಕ್ಕೂಟ ಸೇರಿದಂತೆ ವಿವಿಧ ಯೋಗ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಭಾನು ವಾರ ಬೆಳಗ್ಗೆ `ಮನೆಯಲ್ಲೇ ಮನೆಯವರೊಂದಿಗೆ ಯೋಗ’ ಶೀರ್ಷಿಕೆಯಲ್ಲಿ ನಡೆದ ಆರನೇ ವಿಶ್ವ ಯೋಗ ದಿನದಲ್ಲಿ ವಯಸ್ಸಿನ ಭೇದವಿಲ್ಲದೆ ಸಾವಿರಾರು ಮಂದಿ ಸಾಮಾಜಿಕ ಅಂತರ ಕಾಯ್ದುಕೊಂಡು ಯೋಗ ಪ್ರದರ್ಶನ ನೀಡಿದರು. ಕೊರೊನಾ ಸೋಂಕು ಹರ ಡುತ್ತಿರುವ ಹಿನ್ನೆಲೆಯಲ್ಲಿ ಸಾಮೂಹಿಕ ಯೋಗ ಪ್ರದರ್ಶನಕ್ಕೆ ಅವಕಾಶ ನಿರ್ಬಂಧಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಯೋಗ ಪಟುಗಳು ಹಾಗೂ ಯೋಗಾ ಭ್ಯಾಸ ಮಾಡುವ ಅಭ್ಯಾಸವುಳ್ಳವರು ಯೋಗ ಪ್ರೋಟೋ ಕಾಲ್‍ನಂತೆ ಯೋಗ ಪ್ರದರ್ಶನ ನೀಡಿದರು.

ಜಿಲ್ಲಾಡಳಿತದ ವತಿಯಿಂದ ಅರಮನೆ ಮುಂಭಾಗ ದಲ್ಲಿ 7 ಮಂದಿ ಯೋಗ ತರಬೇತಿದಾರರದಿಂದ ಯೋಗಾಸನ ಮಾಡುವುದನ್ನು ಹೇಳಿಕೊಡಲು ನಿಯೋ ಜಿಸಲಾಗಿತ್ತು. ಜಿಲ್ಲಾಡಳಿತ ಹಾಗೂ ವಾರ್ತಾ ಇಲಾಖೆ ಫೇಸ್‍ಬುಕ್ ಪೇಜ್‍ನಲ್ಲಿ ಲೈವ್ ಆಗಿ ಪ್ರಸಾರ ಮಾಡ ಲಾದ ಯೋಗ ತರಬೇತಿದಾರರು ಹೇಳಿಕೊಟ್ಟ ಯೋಗಾಸನದ ವಿವಿಧ ಭಂಗಿಯನ್ನು ಕಲಿತು ಕೆಲವರು ಯೋಗ ಪ್ರದರ್ಶಿಸಿದರು.

ರೋಗನಿರೋಧಕ ಶಕ್ತಿ ವೃದ್ಧಿಯಾಗಲಿದೆ: ಜಿಎಸ್‍ಎಸ್ ಯೋಗಫೌಂಡೇಷನ್ ಸಂಸ್ಥಾಪಕ ಶ್ರೀಹರಿ ಮಾತನಾಡಿ, ಕಳೆದ ಐದು ವರ್ಷಗಳಿಂದ ಅರಮನೆಯ ಆವರಣದಲ್ಲಿ ಸಾವಿರಾರು ಯೋಗ ಪಟುಗಳೊಂದಿಗೆ ಯೋಗ ದಿನ ಆಚರಿಸುತ್ತಾ ಬಂದಿ z್ದÉೀವೆ. ಆದರೆ ಈ ಬಾರಿ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಮನೆ ಮನೆಗಳ¯್ಲÉೀ ಯೋಗ ದಿನ ಆಚರಿಸುವಂತೆ ಮನವಿ ಮಾಡಲಾಗಿತ್ತು. ಅದಕ್ಕೆ ಜನರು ಸ್ಪಂದಿಸಿದ್ದಾರೆ. ಮೈಸೂರು ನಗರ ಯೋಗಾಭ್ಯಾಸಕ್ಕೆ ಹೆಸರುವಾಸಿಯಾಗಿದೆ. ರಾಜರ ಕಾಲದಿಂದಲೂ ಯೋಗಕ್ಕೆ ವಿಶೇಷವಾದ ಸ್ಥಾನ ಮಾನ ನೀಡಲಾಗಿದೆ. ಆದರೆ ಇಂದಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಯೋಗಾಸಕ್ತರು ತಮ್ಮ ಮನೆಯಲ್ಲಿ ಯೋಗಾಭ್ಯಾಸ ಮಾಡಿ ದೇಹಕ್ಕೆ ಅವಶ್ಯಕವಿರುವ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ 6ನೇ ವಿಶ್ವ ಯೋಗ ದಿನದಲ್ಲಿ ಮೈಸೂ ರಿನ ಮನೆ ಮನೆಯಲ್ಲಿ ತಲಾ ಮೂವರು ಸದಸ್ಯ ರಂತೆ ಯೋಗ ಪ್ರದರ್ಶನ ಮಾಡಿದ್ದು, ಕಳೆದ ವರ್ಷ 70 ಸಾವಿರ ಯೋಗಪಟುಗಳು ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಈ ಬಾರಿ ಕಳೆದ ಬಾರಿಗಿಂತಲೂ ಹೆಚ್ಚು ಮಂದಿ ಯೋಗಾಸನ ಮಾಡಿ ದ್ದಾರೆ ಎಂದರು. ಈ ಸಂದರ್ಭದಲ್ಲಿ ಪತಂಜಲಿ ಯೋಗ ಶಿP್ಷÀಣ ಸಂಸ್ಥೆಯ ರವಿಶಂಕರ್, ಮೈಸೂರು ಯೋಗ ಸ್ಪೋಟ್ಸ್ ಫೌಂಡೇಷನ್‍ನ ಪಿ.ಗಣೇಶ್‍ಕುಮಾರ್, ಬಾಬಾ ರಾಮ್ ದೇವ್ ಪತಂಜಲಿ ಯೋಗ ಶಿP್ಷÀಣ ಸಮಿತಿಯ ಶಶಿಕುಮಾರ್, ಮೈಸೂರು ಯೋಗ ಒಕ್ಕೂಟದ ಬಿ.ಪಿ.ಮೂರ್ತಿ ಇತರರು ಭಾಗವಹಿಸಿದ್ದರು.

ಯೋಗ ಪ್ರದರ್ಶನದಲ್ಲಿ: ಯೋಗ ಪ್ರದರ್ಶನದಲ್ಲಿ ಒಂದು ನಿಮಿಷ ಪ್ರಾರ್ಥನೆ, ನಂತರ 4 ನಿಮಿಷಗಳ ಕಾಲ ಯೋಗಾಸನಕ್ಕೆ ಪೂರಕ ವಾದ 17 ಬಗೆಯ ವ್ಯಾಯಾಮ ಮಾಡಿಸಲಾಯಿತು. ನಂತರ 25 ನಿಮಿಷ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಖಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧ ಹಲಾಸನ, ಪವನಮುಕ್ತಾಸನ, ಶವಾಸನ ಸೇರಿದಂತೆ ಇನ್ನಿತರ 19 ಆಸನಗಳನ್ನು ಪ್ರದರ್ಶಿಸ ಲಾಯಿತು. ಬಳಿಕ 5 ನಿಮಿಷಗಳ ಕಾಲ ಕಪಾಲಭಾತಿ, ನಾಡಿಶೋಧನ ಪ್ರಾಣಯಾಮ, ಶೀತಲೀ ಪ್ರಾಣಾಯಾಮ, ಭ್ರಾಮರಿ ಪ್ರಾಣಾಯಾಮ ಹಾಗೂ ಧ್ಯಾನ ಮಾಡುವ ಮೂಲಕ ಈ ಬಾರಿಯ ವಿಶ್ವ ಯೋಗ ದಿನವನ್ನು ಸಮಾಪ್ತಿಗೊಳಿಸಲಾಯಿತು.

ಪ್ರಮಾಣ ಪತ್ರ: ಕೋವಿಡ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಯೋಗ ಪ್ರದರ್ಶನ ಮಾಡಿದವರು ಆಯುಷ್ ಇಲಾಖೆ ನೀಡಿದ್ದ ಮೇಲ್ ಐಡಿಗೆ ಫೋಟೋ ಕಳಿಸಿದ್ದವರಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ಇಂದು ವಿವಿಧ ಯೋಗ ಸಂಸ್ಥೆಗಳ ಮುಖ್ಯಸ್ಥರು ಒಂದು ಲಕ್ಷ ಯೋಗ ಪಟುಗಳು ಯೋಗ ಪ್ರದರ್ಶನ ಮಾಡಿರಬಹುದೆಂದು ಹೇಳುತ್ತಿದ್ದಾರಾದರೂ ನಿಖರ ಅಂಕಿ ಅಂಶ ಲಭ್ಯವಾಗಿಲ್ಲ. ನಾಳೆ ಆಯುಷ್ ಇಲಾಖೆಗೆ ಎಷ್ಟು ಫೋಟೊಗಳು ಬಂದಿವೆ ಎನ್ನುವುದನ್ನು ಲೆಕ್ಕ ಹಾಕಿದ ನಂತರವಷ್ಟೇ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವರ ನಿಖರ ಅಂಕಿ ಅಂಶ ತಿಳಿಯಲಿದೆ.

Translate »