ಮೈಸೂರು, ಫೆ.4(ಆರ್‍ಕೆ)-25 ವರ್ಷ ಪೂರೈಸಿರುವ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಏSಔU)ವು ಬೆಳ್ಳಿಹಬ್ಬ ಆಚರಿಸಿಕೊಳ್ಳಲು ಸಜ್ಜಾಗಿದೆ.
ಉನ್ನತ ಶಿಕ್ಷಣ ಆಶೋತ್ತರ ಪೂರೈಸುವ ಸಲುವಾಗಿ 1996ರಲ್ಲಿ ಸ್ಥಾಪನೆಯಾದ ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ 2021 ಬೆಳ್ಳಿಹಬ್ಬದ ಸಂಭ್ರಮವಾಗಿದ್ದು, ಅರ್ಥಪೂರ್ಣ ಆಚರಣೆಗೆ ಸಿದ್ಧತೆಗಳು ಆರಂಭವಾಗಿವೆ. ಮೈಸೂರು ವಿಶ್ವವಿದ್ಯಾ ನಿಲಯದ ಮಾನಸ ಗಂಗೋತ್ರಿ ಆವರಣದ ಮುಕ್ತ ಗಂಗೋತ್ರಿಯಲ್ಲಿ ನಡೆಯುತ್ತಿರುವ ಈ ವಿಶ್ವವಿದ್ಯಾನಿಲಯದಲ್ಲಿ ಕೊರೊನಾ ನಿರ್ಬಂಧ ಸಡಿಲಗೊಂಡ ನಂತರ ಶೈಕ್ಷ ಣಿಕ ಚಟುವಟಿಕೆಗಳು ಗರಿಗೆದರಿವೆ.
ಹಸಿರು ಹುಲ್ಲಿನ ಹಾಸು: ಬೆಳ್ಳಿಹಬ್ಬದ ಅಂಗವಾಗಿ ವಿಶ್ವವಿದ್ಯಾನಿಲಯದ ಆಡಳಿತ ಕಚೇರಿ ಆವರಣ, ಸುತ್ತಲಿನ ಖಾಲಿ ಜಾಗ ದಲ್ಲಿ (ಹುಣಸೂರು ರಸ್ತೆ ಕಡೆ) ಹಸಿರು ಹುಲ್ಲಿನ ಹಾಸು (ಲಾನ್) ಹಾಸುವ ಕಾಮ ಗಾರಿ ಬಿರುಸಿನಿಂದ ನಡೆಯುತ್ತಿದೆ. ವಿಶ್ವ ವಿದ್ಯಾನಿಲಯವು, ಈ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಬೆಂಗಳೂರಿನ ಲಾಲ್‍ಬಾಗ್ ಉದ್ಯಾನ ನಿರ್ವಹಿಸುತ್ತಿರುವವರಿಗೆ ಲಾನ್ ನಿರ್ಮಿಸುವ ಕಾಮಗಾರಿಯನ್ನು ಒಪ್ಪಿಸಿದೆ.
ಪ್ರತೀ ದಿನ 15 ಸಿಬ್ಬಂದಿ ಆಡಳಿತ ಭವ ನದ ಸುತ್ತಲಿನ ಪ್ರದೇಶದಲ್ಲಿ ಹುಲ್ಲು ಹಾಸು ಹಾಕುವ ಕೆಲಸ ಮಾಡುತ್ತಿದ್ದು, ಕಚೇರಿ ಕಟ್ಟಡದ ಒಳಗೆ ವರಾಂಡಕ್ಕೂ ಹಸಿರು ಲಾನ್ ಹಾಕುತ್ತಿರುವುದರಿಂದ ಶ್ವೇತವರ್ಣದ ಕಟ್ಟಡವು ಇನ್ನು ಮುಂದೆ ಹಸಿರಿನಿಂದ ಕಂಗೊಳಿಸಲಿದೆ.
ಬಿಳಿ ಬಣ್ಣದ ಲೇಪನ: 25ನೇ ವರ್ಷಾ ಚರಣೆಗಾಗಿ ಇಡೀ ಮುಕ್ತ ವಿಶ್ವವಿದ್ಯಾನಿಲ ಯದ ಆವರಣದಲ್ಲಿರುವ ಎಲ್ಲಾ ಕಟ್ಟಡಗಳಿಗೂ ಬಿಳಿ ಬಣ್ಣ ಬಳಿಯಲು ನಿರ್ಧರಿಸಿದ್ದು, ಮೊದಲ ಹಂತದಲ್ಲಿ ಹುಣಸೂರು ರಸ್ತೆ ಕಡೆಯ ಭವ್ಯ ಸ್ವಾಗತ ಕಮಾನಿಗೆ ಪೇಂಟ್ ಮಾಡುವ ಕೆಲಸ ಆರಂಭವಾಗಿದೆ.
ಐಎಎಸ್ ಅಧಿಕಾರಿಗಳಿಗೆ ಸನ್ಮಾನ: ಮುಕ್ತ ವಿಶ್ವವಿದ್ಯಾನಿಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದು ಐಎಎಸ್ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ 20 ಮಂದಿಯನ್ನು ಬೆಳ್ಳಿಹಬ್ಬದ ಸಂದರ್ಭ ಸನ್ಮಾನಿಸಲು ಉದ್ದೇಶಿಸಲಾಗಿದ್ದು, ಅದೇ ರೀತಿ ಹಳೇ ವಿದ್ಯಾರ್ಥಿಗಳ ಪೈಕಿ ಖ್ಯಾತ ವಿಜ್ಞಾನಿಗಳಾಗಿರುವವರನ್ನೂ ಗುರ್ತಿಸಿ ಗೌರವಿಸಲು ಚಿಂತನೆ ನಡೆದಿದೆ.
3 ಕಟ್ಟಡ ನಿರ್ಮಾಣ: ಬಾಡಿಗೆ ಕಟ್ಟಡ ದಲ್ಲಿ ನಡೆಯುತ್ತಿರುವ ಉತ್ತರ ಕರ್ನಾಟಕ ಭಾಗದ ಗುಲ್ಬರ್ಗಾ, ಧಾರವಾಡ ಹಾಗೂ ಕರಾವಳಿಯ ಮಂಗಳೂರು ನಗರದ ಕಾಲೇಜು ಕಟ್ಟಡ ನಿರ್ಮಿಸಲು ಮುಕ್ತ ವಿಶ್ವ ವಿದ್ಯಾನಿಲಯವು ಮುಂದಾಗಿದೆ. ಈ ಮೂರೂ ನಗರಗಳಲ್ಲಿ ವಿಶ್ವವಿದ್ಯಾನಿಲಯವು ಸ್ವಂತ ಜಾಗ ಹೊಂದಿದ್ದು, ಇದೀಗ ಬೆಳ್ಳಿಹಬ್ಬದ ನೆನಪಿಗಾಗಿ ಅಧ್ಯಯನ ವಿಭಾಗದ ಕಟ್ಟಡ ನಿರ್ಮಿಸಲು ಸಕಲ ಸಿದ್ಧತೆ ನಡೆಸಿದ್ದು, ಟೆಂಡರ್ ಪ್ರಕ್ರಿಯೆ ಆರಂಭಿಸಿದೆ.
ವಿಚಾರ ಸಂಕಿರಣಗಳು: ವರ್ಷ ಪೂರ್ತಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಉಪನ್ಯಾಸ ಗಳನ್ನು ಏರ್ಪಡಿಸಿ, ನೋಬೆಲ್ ಪ್ರಶಸ್ತಿ ವಿಜೇತರನ್ನು ಆಹ್ವಾನಿಸಿ ಸನ್ಮಾನಿಸಲು ವಿಶ್ವ ವಿದ್ಯಾನಿಲಯವು ತಯಾರಿ ನಡೆಸುತ್ತಿದೆ.
ಉನ್ನತ ಮಟ್ಟದ ಸಮಿತಿ: ಬೆಳ್ಳಿಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮ ಆಯೋ ಜಿಸಿ, ನಿರ್ವಹಣೆಗೆ ವಿಶ್ವವಿದ್ಯಾನಿಲಯವು ಉನ್ನತ ಮಟ್ಟದ ಸಮಿತಿ (ಊigh Poತಿeಡಿ ಅommiಣಣee) ರಚಿಸಲು ನಿರ್ವಹಣಾ ಮಂಡಳಿ ತೀರ್ಮಾನಿಸಿದೆ.
51 ಕೋರ್ಸ್‍ಗಳಲ್ಲಿ 40,000 ವಿದ್ಯಾರ್ಥಿ ಗಳು: ದೂರ ಶಿಕ್ಷಣ ನೀಡಲು ಅನುಮತಿ ಪಡೆದಿರುವ ಏಕೈಕ ವಿಶ್ವವಿದ್ಯಾನಿಲಯವಾಗಿ ರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯವು 31 ಪದವಿ, ಸ್ನಾತಕೋತ್ತರ ಪದವಿ ಹಾಗೂ 20 ಸರ್ಟಿಫಿಕೇಟ್ ಕೋರ್ಸು ಸೇರಿ 51 ಕೋರ್ಸ್‍ಗಳನ್ನು ನಡೆಸುತ್ತಿದ್ದು, ಪ್ರಸ್ತುತ 40,000 ವಿದ್ಯಾರ್ಥಿಗಳನ್ನು ಹೊಂದಿದೆ. ಎಂಬಿಎ ಒಂದರಲ್ಲೇ 1,293 ವಿದ್ಯಾರ್ಥಿ ಗಳು ಪ್ರವೇಶಾತಿ ಪಡೆದಿದ್ದು, 5,000 ವಿದ್ಯಾರ್ಥಿಗಳಿಗೂ ಶಿಕ್ಷಣ ನೀಡಲು ಅವಶ್ಯ ವಾದ ಎಲ್ಲಾ ಮೂಲಭೂತ ಸೌಕರ್ಯಗಳು ವಿಶ್ವವಿದ್ಯಾನಿಲಯದಲ್ಲಿವೆ. ಪ್ರಸ್ತುತ 76 ಮಂದಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹೊಂದಿರುವ ಈ ಸಂಸ್ಥೆಯು, ಶೈಕ್ಷಣಿಕ ಹಾಗೂ ಸಂಶೋಧನಾ ಕಾರ್ಯಕ್ರಮಗಳು ಹೆಚ್ಚಾದಂತೆಲ್ಲಾ, ಮತ್ತಷ್ಟು ಸಿಬ್ಬಂದಿ ಅಗತ್ಯವಿದೆ.