ಮೈಸೂರು ಜಿಲ್ಲೆಯಲ್ಲಿ ಗುರುವಾರ 12 ಮಂದಿಗಷ್ಟೇ ಕೊರೊನಾ ಸೋಂಕು
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಗುರುವಾರ 12 ಮಂದಿಗಷ್ಟೇ ಕೊರೊನಾ ಸೋಂಕು

February 5, 2021

ಮೈಸೂರು, ಫೆ.4(ವೈಡಿಎಸ್)- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಗುರುವಾರ ಹೊಸದಾಗಿ ಸೋಂಕಿಗೆ ಒಳಗಾದವ ರಿಗಿಂತ ಗುಣವಾದವರ ಸಂಖ್ಯೆಯೇ ಅಧಿಕವಿತ್ತು. ಇಂದು ಸೋಂಕಿನಿಂದ ಇಬ್ಬರು ಸಾವಿಗೀಡಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಗುರುವಾರ 12 ಮಂದಿಗೆ ಸೋಂಕು ತಗುಲಿದ್ದು, 16 ಮಂದಿ ಗುಣಕಂಡಿದ್ದಾರೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 53,498ಕ್ಕೆ ಏರಿಕೆಯಾಗಿದೆ. 52,279 ಮಂದಿಗೆ ಗುಣವಾಗಿದೆ. ಇನ್ನೂ 193 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಜಿಲ್ಲೆಯಲ್ಲಿ ಕೊರೊನಾದಿಂದ ಒಂದೂ ಸಾವು ಸಂಭವಿಸಿಲ್ಲ. ಈವರೆಗೆ ಕೊರೊನಾದಿಂದ ಒಟ್ಟು 1,026 ಮಂದಿ ಸಾವನ್ನಪ್ಪಿದ್ದಾರೆ. 193 ಸಕ್ರಿಯ ಪ್ರಕರಣಗಳಲ್ಲಿ 67 ಸೋಂಕಿತರು ಮನೆಯಲ್ಲಿಯೇ ಸುಧಾರಿಸಿ ಕೊಳ್ಳುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ ಹಾಗೂ ನಿಗಾ ಕೇಂದ್ರಗಳಲ್ಲಿ 26 ಮಂದಿ, ಖಾಸಗಿ ಆಸ್ಪತ್ರೆಗಳು ಹಾಗೂ ನಿಗಾ ಕೇಂದ್ರಗಳಲ್ಲಿ 100 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಲ್ಯಾಬ್‍ಗಳಲ್ಲಿ 61,842 ಮಂದಿ ಸೇರಿ, ಈವರೆಗೆ ಒಟ್ಟು 8,16,481 ಮಂದಿಗೆ ಕೋವಿಡ್ ಪರೀಕ್ಷೆ ಮಾಡಿದಂತಾಗಿದೆ.

ರಾಜ್ಯದ ವಿವರ: ಗದಗ, ಹಾವೇರಿ, ಕೊಪ್ಪಳ, ರಾಮನಗರ, ಯಾದಗಿರಿ ಜಿಲ್ಲೆಗಳಲ್ಲಿಂದು ಒಂದೂ ಕೊರೊನಾ ಪ್ರಕರಣ ವರದಿಯಾಗಿಲ್ಲ. ಬಾಗಲ ಕೋಟೆ 2, ಬಳ್ಳಾರಿ 6, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 9, ಬೆಂಗಳೂರು ನಗರ 263, ಬೀದರ್ 18, ಚಾಮರಾಜನಗರ 3, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 4, ಚಿತ್ರದುರ್ಗ 16, ದಕ್ಷಿಣ ಕನ್ನಡ 42, ದಾವಣಗೆರೆ 3, ಧಾರವಾಡ 11, ಹಾಸನ 14, ಕಲಬುರಗಿ 14, ಕೊಡಗು 6, ಕೋಲಾರ 5, ಮಂಡ್ಯ 1, ಮೈಸೂರು 12, ರಾಯಚೂರು 4, ಶಿವಮೊಗ್ಗ 5, ತುಮಕೂರು 9, ಉಡುಪಿ 9, ಉತ್ತರ ಕನ್ನಡ 4, ವಿಜಯಪುರ 4 ಮಂದಿ ಸೇರಿ ರಾಜ್ಯದಲ್ಲಿ ಗುರುವಾರ 474 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರೆ, 470 ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 9,41,070ಕ್ಕೆ ಏರಿಕೆಯಾಗಿದೆ. 9,22,907 ಸೋಂಕಿತರಿಗೆ ಗುಣವಾಗಿದೆ. 5,917 ಸಕ್ರಿಯ ಪ್ರಕರಣಗಳಿವೆ.
ಇಂದು 2 ಸಾವಿನ ಪ್ರಕರಣ ವರದಿಯಾಗಿದ್ದು, ಈವರೆಗೆ ರಾಜ್ಯದಲ್ಲಿ ಕೊರೊನಾದಿಂದ 12,227 ಮಂದಿ ಮೃತಪಟ್ಟಂತಾಗಿದೆ.

Translate »